ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ. ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ …
Read More »ತಂದೆ ತಾಯಿ ಕಳೆದುಕೊಂಡ ಮಕ್ಕಳ ಜೊತೆ ನಾವಿದ್ದೇವೆ: ಶಶಿಕಲಾ ಜೊಲ್ಲೆ
ಬೆಂಗಳೂರು: ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಕೋವಿಡ್-19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವೀಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು …
Read More »ಕೆಎಸ್‌ಆರ್‌ಟಿಸಿ’ ಕೇರಳ ಪಾಲು : 7 ವರ್ಷಗಳ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲು
ಹೊಸದಿಲ್ಲಿ: “ಕೆಎಸ್‌ಆರ್‌ಟಿಸಿ’ ಪದ ಬಳಕೆಗೆ ಸಂಬಂಧಿಸಿ 7 ವರ್ಷ ನಡೆದ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲಾಗಿದೆ. “ಕೆಎಸ್‌ಆರ್‌ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತು ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ತೀರ್ಪು ನೀಡಿದೆ. ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆಧಾರದಲ್ಲಿ ಇದನ್ನು ಕೇರಳಕ್ಕೆ ಬಿಟ್ಟುಕೊಡಬೇಕೆಂದು ರಿಜಿಸ್ಟ್ರಿ ತೀರ್ಪಿತ್ತಿದೆ. ಈ ಸಂಬಂಧ 2013ರಲ್ಲೇ ಕಾನೂನು ಸಮರ ಆರಂಭವಾಗಿತ್ತು. “ವಿಚಾರ ಗಮನಕ್ಕೆ ಬಂದಿದ್ದು, ಅಧಿಕೃತ ನೋಟಿಸ್, ತೀರ್ಪಿನ ಪ್ರತಿ ಸಿಕ್ಕಿಲ್ಲ. ಅದು ದೊರೆತ ಬಳಿಕ …
Read More »ಬಿಎಸ್ವೈ ನಾಯಕತ್ವ ಬದಲಾವಣೆ ಇಲ್ಲ; ಸಂಪುಟದ ಶೇ.50 ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ!
ಕೊರೋನಾ ಕಾಲದಲ್ಲಿ ಅತಿದೊಡ್ಡ ರಾಜಕೀಯ ಬೆಳವಣಿಗೆ ನಡೆದಿದ್ದು, ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲಾಗುವುದು ಎನ್ನಲಾಗಿದೆ. ಸ್ವತಃ ಅಖಾಡಕ್ಕಿಳಿದಿರುವ ಬಿಜೆಪಿ ಹೈಕಮಾಂಡ್ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿದೆ. ಸಂಪುಟ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಕೈಹಾಕಿದ್ದು, ಬಹುತೇಕ ಸಚಿವರಿಗೆ ಗೇಟ್ ಫಾಸ್ ನೀಡುವ ಸಾಧ್ಯತೆ ಇದೆ. ಹಿರಿಯ ಸಚಿವರಿಗೆ ಪಕ್ಷದ ಹೊಣೆಗಾರಿಕೆ ವಹಿಸಲಾಗುವುದು. ಎರಡನೇ ತಲೆಮಾರಿನ ನಾಯಕರಿಗೆ …
Read More »ಸೀಡಿ ಪ್ರಕರಣ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ S.I.T.
ಬೆಂಗಳೂರು,: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಇಬ್ಬರು ಶಂಕಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಎಸ್‍ಐಟಿ ಪೊಲೀಸರು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್‍ಗೆ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಜತೆಗೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಅಶ್ಲೀಲ ಸೀಡಿ ಬೆಳಕಿಗೆ ಬಂದ ಬೆನ್ನಲ್ಲೇ ಪರಾರಿಯಾಗಿರುವ ಶಂಕಿತ ಆರೋಪಿಗಳಾದ ನರೇಶ್‍ಗೌಡ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ …
Read More »ಕೊರೊನಾ ಮುಕ್ತ ಗ್ರಾಮ’ ಸ್ಪರ್ಧೆ- ಗೆದ್ದ ಗ್ರಾಮಗಳಿಗೆ 50 ಲಕ್ಷ ಬಹುಮಾನ
ಮುಂಬೈ: ದೇಶಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇನ್ನೂ ಭಯಾನಕ ವಿಚಾರ ಎಂಬಂತೆ ಹಳ್ಳಿಗಳಿಗೂ ಸಹ ಮಹಾಮಾರಿ ಆವರಿಸುತ್ತಿದೆ. ಹೀಗಾಗಿ ಹಳ್ಳಿಗಳಿಗೆ ಕೊರೊನಾ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ‘ಕೊರೊನಾ ಮುಕ್ತ ಗ್ರಾಮ’ ಸ್ಪರ್ಧೆಯ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಸ್ಥಳೀಯ ಆಡಳಿತವನ್ನು ಪ್ರೋತ್ಸಾಹಿಸುವುದು ಹಾಗೂ ಹಳ್ಳಿಗಳಿಗೆ ಕೊರೊನಾ ವ್ಯಾಪಿಸದಂತೆ ತಡೆಯುವುದು, ಈ ಮೂಲಕ ಕೊರೊನಾ ಮುಕ್ತ ರಾಜ್ಯವನ್ನಾಗಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. ಹೀಗಾಗಿ …
Read More »ಸಿನಿಮೀಯ ರೀತಿ ಚಿರತೆಯಿಂದ ಪ್ರಾಣ ಉಳಿಸಿಕೊಂಡ ಮಹಿಳೆ.. ಆಕೆ ಹೋರಾಡಿದ್ದೇ ರೋಚಕ
ಚಿತ್ರದುರ್ಗ: ಮನೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಆ ಮಹಿಳೆ ಚಿರತೆಯೊಂದಿಗೆ ಕಾದಾಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಈ ರೋಚಕ ಘಟನೆ ಬಗ್ಗೆ ಗೊತ್ತಾದ ಬಳಿಕ ಗ್ರಾಮದ ಜನರು ಮಹಿಳೆಯ ಚಾಣಾಕ್ಷತನ ಮತ್ತು ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಗಿದ್ದೇನು? ಲಕ್ಷ್ಮೀಬಾಯಿ(45) ಚಿರತೆಯೊಂದಿಗೆ ಕಾದಾಡಿ ಗಾಯಗೊಂಡ ಮಹಿಳೆ. ನಿನ್ನೆ ಬೆಳಗಿನ ಜಾವ ನಡೆದಿರುವ ಘಟನೆ ಇಂದು …
Read More »ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನ್ ಕೇಂದ್ರ ನಿರ್ಮಿಸಿದ ಯಲ್ಲಾಪುರದ ಉದ್ಯಮಿ
ಕಾರವಾರ (ಜೂನ್ 2): ಕೋವಿಡ್ ಸಂಕಷ್ಟ ಕಾಲಕ್ಕೆ ಅದೆಷ್ಟೋ ಮಾನವೀಯ ವ್ಯಕ್ತಿಗಳು ಬೆಳಕಿಗೆ ಬರುತ್ತಿದ್ದಾರೆ. ವಿವಿಧ ರೂಪದಲ್ಲಿ ಬಡವರಿಗೆ ದಾರಿ ದೀಪವಾಗುತ್ತಿದ್ದಾರೆ. ಸರಕಾರ ಮಾಡಬೇಕಾದ ಕೆಲಸವನ್ನ ದಾನಿಗಳು ಮಾಡಿ ಸರಕಾರವನ್ನು ನಾಚಿಸುವಂತೆ ಮಾಡುತ್ತಿದ್ದಾರೆ. ಹೀಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಉದ್ಯಮಿ ಬಾಲಕೃಷ್ಣ ನಾಯ್ಕ್ ಸ್ವಂತ ಖರ್ಚಿನಲ್ಲಿ ಕೋವಿಡ್ ವ್ಯಾಕ್ಸಿನ್ ಕೇಂದ್ರವನ್ನೇ ತೆರೆದಿದ್ದಾರೆ. ವ್ಯಾಕ್ಸಿನ್ ಪಡೆಯುವವರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ನಿವಾಸಿಯಾದ …
Read More »ಲಾಕ್ಡೌನ್ ಮುಗಿದ ನಂತರ ಆರಂಭವಾಗುವ ಸಾರಿಗೆ ಸೇವೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಆದ್ಯತೆ: ಡಿಸಿಎಂ ಲಕ್ಷ್ಮಣ ಸವದಿ
ಬೆಂಗಳೂರು: ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ಡೌನ್ ಮುಗಿದ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡನೇ ಸುತ್ತಿನ ಕೊವಿಡ್ ಲಸಿಕೆ ಪಡೆದಂತಹ ಚಾಲಕರು ಮತ್ತು ನಿರ್ವಾಹಕರನ್ನೇ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದರು. ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆಶ್ರಯದಲ್ಲಿ ಇಂದು (ಜೂನ್ 1) ಸಾರಿಗೆ ಸಿಬ್ಬಂದಿಗಳಿಗೆ ಎರಡನೆಯ ಹಂತದಲ್ಲಿ ಕೊವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಆಂದೋಲನಕ್ಕೆ ಸಾರಿಗೆ ಸಚಿವರು ಹಾಗೂ …
Read More »ಮಾವಾ ತಯಾರಿಕೆ ಅಡ್ಡೆ ಮೇಲೆ ದಾಳಿ : ಮೂವರ ಬಂಧನ, 2.50 ಲಕ್ಷ ರೂ. ಮೌಲ್ಯದ ಸೊತ್ತು ವಶ
ವಿಜಯಪುರ : ರಾಜ್ಯದಲ್ಲಿ ನಿಷೇಧಿತವಾಗಿರುವ ತಂಬಾಕು ಉತ್ಪನ್ನವಾದ ಮಾವಾ ತಯಾರಿಕೆಯ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಮೂವರನ್ನು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಸಿಪಿಐ ಎಸ್.ಬಿ.ಪಾಲಭಾವಿ ಅವರು ತಿಕೋಟ ಪಟ್ಟಣದಲ್ಲಿ ಅಲ್ಲಿನ ಎಸೈ ಎಸ್.ಕೆ.ಲಂಗೋಟೆ ಅವರೊಂದಿಗೆ ಪೆಟ್ರೋಲಿಂಗ್‍ನಲ್ಲಿ ತೊಡಗಿದ್ದಾಗ ಅಕ್ರಮವಾಗಿ ಗುಟ್ಕಾ ತಯಾರಿಸುವ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಆಧರಿಸಿ ಬಡಕಲ್ ಓಣಿ ಹಾಗೂ ಗೌಡರ ಓಣಿಗಳಲ್ಲಿ ಸ್ಥಳೀಯ ಠಾಣೆ …
Read More »
Laxmi News 24×7