Breaking News

ರಾಜಕೀಯ

ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ

ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ ಗುಮ್ಮಟನಗರಿಗೆ ಮತ್ತೊಂದು ಐಷಾರಾಮಿ ಹೋಟೆಲ್ ನ ಪ್ರವೇಶವಾಗಿದೆ. ಇದರಿಂದಾಗಿ ಬಸವನಾಡಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಲಿದೆ.   ಸ್ವತಂತ್ರ ಕಾಲೊನಿಯ ವಿಜಯಪುರ – ಅಥಣಿ ರಸ್ತೆಯಲ್ಲಿನ ‘ಪ್ರವಾಸಾ’ ಹೆಸರಿನ ಹೋಟೆಲ್ ನಿಜಕ್ಕೂ ಇಲ್ಲಿಗೆ ಬರಲಿರುವ ಪ್ರವಾಸಿಗರಿಗೆ ಅನುಕೂಲಕರ ವಸತಿ ಹಾಗೂ ಆತಿಥ್ಯವನ್ನು ಒದಗಿಸಲಿದೆ. ಶನಿವಾರ ಹೋಟೆಲ್ ಉದ್ಘಾಟಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿತೇಂದ್ರಕುಮಾರ್ ಜೈನ್ ಹಾಗೂ ಅವರ ತಂಡಕ್ಕೆ ಶುಭಹಾರೈಸಿದೆ. ಆತಿಥ್ಯ …

Read More »

ಶಾಸಕರಾದ ಶ್ರೀ ಆಸಿಫ್ ಸೇಠ್ ಅವರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ್ ವಿಜಯೋತ್ಸವ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಸಕರಾದ ಶ್ರೀ ಆಸಿಫ್ ಸೇಠ್ ಅವರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ್ ವಿಜಯೋತ್ಸವ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಗಿಲ್ ವೀರರು ಮತ್ತು ಅವರ ಕುಟುಂಬಗಳು, ಹಿರಿಯ ಮಾಜಿ ಸೈನಿಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಅಂಗವಿಕಲರು ಮತ್ತು ಅನಾಥ ಮಕ್ಕಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಮಾಜಿ ಸೈನಿಕರು ಮತ್ತು ಸ್ಥಳೀಯ ನಾಯಕರು …

Read More »

ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ

ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ ಬೆಂಗಳೂರು : ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳು 42 ರಾಜ್ಯ ಟೇಕ್ವಾಂಡೋ ಚಾಂಪಿಯನ್ಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ ಮಾಡಿದರು.   ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ರಂಗನಾಥ ಸ ನಾವಿ, ಅನುಷ್ಕಾ ಮೇತ್ರಿ, ಉತ್ತಮ ಕಾಟೋಜಿ, ಸತೀಶ್ ಮೇತ್ರಿ, ಸುಪ್ರೀತ ನಾಯಕ, ಸುಶ್ಮಿತಾ ಮೇತ್ರಿ, ಶಿವಂ ಕುಲಗೋಡ, …

Read More »

ಸಂಗನಕೇರಿ ಮತ್ತು ಸುತ್ತಮುತ್ತಲಿನ ಬಡ ಜನತೆಗೆ ಉತ್ತಮವಾದ ಆರೋಗ್ಯ ಸೇವೆಯನ್ನು ದೊರಕಿಸಿಕೊಡಲು ಸಂಗನಕೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು

ಮೂಡಲಗಿ- ಸಂಗನಕೇರಿ ಮತ್ತು ಸುತ್ತಮುತ್ತಲಿನ ಬಡ ಜನತೆಗೆ ಉತ್ತಮವಾದ ಆರೋಗ್ಯ ಸೇವೆಯನ್ನು ದೊರಕಿಸಿಕೊಡಲು ಸಂಗನಕೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು. ಶನಿವಾರದಂದು ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಂಗನಕೇರಿ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸರ್ಕಾರಿ ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. …

Read More »

ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ

ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ ಕಾರ್ಗಿಲ್ ವಿಜಯದ 26ನೇ ವರ್ಷಾಚರಣೆಯ ಅಂಗವಾಗಿ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಗಿಲ್ ವಿಜಯದಿವಸ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಂಡು ಮಾತನಾಡಿದರು. “ನಾವೆಲ್ಲರೂ ಪಟ್ಟಣಗಳಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರೆ ಗಡಿಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರೇ ಕಾರಣ. ನಮ್ಮ ದೇಶದ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …

Read More »

ಉಡುಪಿಯಲ್ಲಿ ಭಕ್ತಿ, ಜ್ಞಾನ, ಸೇವೆ ಮೂರೂ ಸಮ್ಮಿಳಿತವಾಗಿದೆ: ರಾಜ್ಯಪಾಲ ಗೆಹ್ಲೋಟ್

ಉಡುಪಿ: ದೇಶದಲ್ಲಿ ಅಸಹಿಷ್ಣುತೆ, ಸಮಾಜದಲ್ಲಿ ಆತ್ಮ ವಿಸ್ಮೃತಿ ಭಾವನೆ ಹೆಚ್ಚುತ್ತಿದ್ದು ಯುವಜನತೆ ಭಕ್ತಿ, ಕರ್ತವ್ಯಪರತೆಯ ನೆಲೆಯಲ್ಲಿ ನಿರ್ಭಯ, ವಿವೇಕಶೀಲ ಕರ್ಮ ಯೋಗಿಗಳಾಗಬೇಕು ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.1ರಿಂದ ಸೆ.17ರ ತನಕ ನಡೆಯುವ ಶ್ರೀಕೃಷ್ಣ ಮಂಡಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀಕೃಷ್ಣ ಗೀತೆಯಲ್ಲಿ ಬೋಧಿಸಿದ ಜ್ಞಾನ, ಕರ್ಮ, ಭಕ್ತಿಯೋಗದಿಂದ ನಿಷ್ಕಾಮ ಭಾವ ಹೊಂದಿ ಫಲರಹಿತ ಚಿಂತನೆಯಿಂದ ಯಾವುದೇ ಕಾರ್ಯದಲ್ಲಿ ತೊಡಗಬೇಕು. ಆತ್ಮೋನ್ನತಿಗಾಗಿ ಜೀವನದ ಉದ್ದೇಶ …

Read More »

ಮಳೆ ಅಬ್ಬರ: ಇಂದು ಶಿವಮೊಗ್ಗ ಜಿಲ್ಲಾದ್ಯಂತ, ಚಿಕ್ಕಮಗಳೂರಿನ ಕೆಲ ತಾಲೂಕುಗಳಲ್ಲಿ ಶಾಲೆಗೆ ರಜೆ

ಮಳೆ ಅಬ್ಬರ: ಇಂದು ಶಿವಮೊಗ್ಗ ಜಿಲ್ಲಾದ್ಯಂತ, ಚಿಕ್ಕಮಗಳೂರಿನ ಕೆಲ ತಾಲೂಕುಗಳಲ್ಲಿ ಶಾಲೆಗೆ ರಜೆ ಶಿವಮೊಗ್ಗ: ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಶನಿವಾರ (ಇಂದು) ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಅರೆಂಜ್ ಅಲರ್ಟ್ ಘೋಷಿಸಿದೆ. ಇದರಿಂದ, ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ …

Read More »

ಕಾಲ್ತುಳಿತ ಪ್ರಕರಣ: ಅಧಿಕಾರಿಗಳ ಅಮಾನತು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಜನರ ಗುಂಪು ಸೇರುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ಐದು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆೆ ತಿಳಿಸಿದೆ. ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ, ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ತೆಗೆದು ಹಾಕುವಂತೆ ಕೋರಿರುವ ಆರ್‌ಸಿಬಿ …

Read More »

‘ನನ್ನ ಬೆಳಗಾವಿಗಾಗಿ ನನ್ನ ಸಲಹೆ’: ಹೊಸ ಅಭಿಯಾನ ಆರಂಭಿಸಿದ ಪೊಲೀಸ್ ಕಮಿಷನರ್

ಬೆಳಗಾವಿ: ಉತ್ತಮ, ಸುರಕ್ಷಿತ ಬೆಳಗಾವಿ ನಗರ ನಿರ್ಮಾಣಕ್ಕೆ ಪೊಲೀಸ್ ಕಮಿಷನರ್ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಪೊಲೀಸ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗಾಗಿಯೇ ಒಂದು ಪೇಜ್ ತೆರೆದಿದ್ದಾರೆ. “ನನ್ನ ಬೆಳಗಾವಿಗಾಗಿ ನನ್ನ ಸಲಹೆ” ಎಂಬ ಘೋಷವಾಕ್ಯದಡಿ ಸಾರ್ವಜನಿಕರಿಗೆ ಸಲಹೆ ನೀಡುವಂತೆ ಕೋರಿದ್ದಾರೆ. ಇದರಿಂದ ಬೆಳಗಾವಿ ಪೊಲೀಸರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೌದು, ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಭೂಷಣ ಗುಲಾಬರಾವ್ ಬೊರಸೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹೊಚ್ಚ …

Read More »