Breaking News

ನವದೆಹಲಿ

ಎಲ್ಲ ರಾಜ್ಯಗಳನ್ನು ಕೇಂದ್ರ ಸರ್ಕಾರ ಏಕ ರೂಪದಲ್ಲಿ ನೋಡಲಿದ್ದು ಕೊರೊನಾ ಸಂಕಷ್ಟದಿಂದ ಶೀಘ್ರ ಹೊರ ಬರಲು ಪ್ರಯತ್ನಿಸೋಣ

ನವದೆಹಲಿ: ದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಹೇರಲಾಗಿರುವ ಲಾಕ್‍ಡೌನ್‍ನಿಂದ ಸಾವಿರಾರು ಜೀವಗಳನ್ನು ರಕ್ಷಿಸಲಾಗಿದೆ ಆದರೆ ಕೊರೊನಾ ವೈರಸ್ ಮುಂದಿನಗಳಲ್ಲೂ ಕಂಡು ಬರುವ ಸಾಧ್ಯತೆಯಿದ್ದು, ಮಾಸ್ಕ್ ಜೀವನದ ಒಂದು ಭಾಗವಾಗಿರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆ ವೇಳೆ ಪ್ರಧಾನಿ ಮೋದಿ ಮಾಸ್ಕ್ ಬಳಕೆಯನ್ನು ಒತ್ತಿ ಹೇಳಿದ್ದಾರೆ.ಸಭೆಯಲ್ಲಿ ಎಲ್ಲ ರಾಜ್ಯದ ಸಿಎಂಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿರುವ ಪ್ರಧಾನಿ …

Read More »

ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖ

ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಒಂದು ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣವಾಗಿದೆ. ದೆಹಲಿಯ 49 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಏಪ್ರಿಲ್ 4ರಂದು ದೃಢಪಟ್ಟಿತ್ತು. ರೋಗಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರಿಗೆ ಉಸಿರಾಡಲು ಸಹಾಯವಾಗಲಿ ಎಂದು ವೆಂಟಿಲೇಟರ್ ಅಳವಡಿಸಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ …

Read More »

ಭಾರತದಲ್ಲಿ ಲಾಕ್‍ಡೌನ್ 3.0 ಫಿಕ್ಸ್..! ವಿಸ್ತರಣೆಗೆ ಕೆಲವು ರಾಜ್ಯಗಳಿಂದ ಇಂಗಿತ …………

ನವದೆಹಲಿ-ಮುಂಬೈ, ಏ.24-ಲಾಕ್‍ಡೌನ್ ವಿಸ್ತರಣೆಯ ಎರಡನೇ ಹಂತದಲ್ಲೂ ಕೊರೊನಾ ಹಾವಳಿ ಕಳವಳಕಾರಿ ಮಟ್ಟದಲ್ಲಿ ಮುಂದುವರಿದಿದೆ. ಕೋವಿಡ್-19 ವೈರಸ್‍ನನ್ನು ನಿಯಂತ್ರಿಸಲು ಮತ್ತೆ ಲಾಕ್‍ಡೌನ್ ವಿಸ್ತರಿಸಬೇಕೆಂಬ ಇಂಗಿತವನ್ನು ಕೆಲವು ರಾಜ್ಯಗಳು ವ್ಯಕ್ತಪಡಿಸಿವೆ. ಆದರೆ ಕೆಲವು ರಾಜ್ಯಗಳು ವಿಸ್ತರಣೆ ಬಗ್ಗೆ ಭಿನ್ನ ನಿಲುವು ಹೊಂದಿವೆ. ಈ ಬೆಳವಣಿಗೆಯಿಂದಾಗಿ ಮೇ 3ರ ನಂತರವೂ ಲಾಕ್‍ಡೌನ್ ವಿಸ್ತರಣೆ ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ …

Read More »

ಭಾರತದಲ್ಲಿ ಕೊರೋನಾಗೆ 825 ಮಂದಿ ಸಾವು, 26,496 ಸೋಂಕಿತರು..!

ನವದೆಹಲಿ/ಮುಂಬೈ,ಏ.26-ಕೊರೊನಾ ವೈರಸ್ ರಣಕೇಕೆ ಭಾರತದಲ್ಲಿ ಅವ್ಯಾಹತವಾಗಿ ಮುಂದುವರಿದಿದೆ. ಲಾಕ್‍ಡೌನ್ ನಡುವೆಯೂ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಳೆದ 24 ತಾಸುಗಳ ಅವಧಿಯಲ್ಲಿ ದೇಶದ ವಿವಿಧೆಡೆ ಒಟ್ಟು 49 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಇದೇ ಅವಧಿಯಲ್ಲಿ 1,990 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಭಾರತದಲ್ಲಿ ಮೃತರ ಸಂಖ್ಯೆ 900 ತಲುಪುತ್ತಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆ 27,000 ಸನಿಹದಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ …

Read More »

ಮಹಾರಾಷ್ಟ್ರದಲ್ಲಿ ಕೊರೋನಾಗೆ ಒಂದೇ ದಿನ 22 ಮಂದಿ ಸಾವು..!

ಮುಂಬೈ, ಏ.26- ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿನ ಸಾವು ಮತ್ತು ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ದಿನೇ ದಿನೇ ಶೋಚನೀಯವಾಗುತ್ತದೆ. ರಾಜ್ಯದ ವಿವಿಧೆಡೆ ಕೊರೊನಾ ಹೆಮ್ಮಾರಿಯ ಅಟ್ಟಹಾಸ ಮುಂದುವರಿದಿದ್ದು, ಶನಿವಾರ ಒಂದೇ ದಿನ ಅವಧಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈ ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಲ್ಲಿ 5000ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಅಲ್ಲಿ ಪ್ರತಿದಿನ ಹೊಸ ಸೋಂಕು ಪ್ರಕರಣಗಳು ದೃಢಪಡುತ್ತಲೇ ಇವೆ. ಮಹಾರಾಷ್ಟ್ರದಲ್ಲಿ …

Read More »

ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್…..

ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ …

Read More »

ದೇಶದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಯುದ್ಧದಲ್ಲಿ ಸೈನಿಕ: ಮೋದಿ….

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು 64ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ ಪ್ರತಿಯೋರ್ವ ನಾಗರಿಕನೂ ಕೊರೊನಾ ವೈರಸ್ ತೊಲಗಿಸಲು ದೇಶ ಸಾರಿರುವ ಯುದ್ಧದಲ್ಲಿ ಸೈನಿಕ ಎಂದು ಹೇಳಿದ್ದಾರೆ. ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾ ವೈರಸ್ ವಿರುದ್ಧ ದೇಶದ ಜನರು ಹೋರಾಡುತ್ತಿರುವುದಕ್ಕೆ ಮೋದಿ ಶ್ಲಾಘಿಸಿದರು. ಸರ್ಕಾರದ ಜೊತೆ ಕೈಜೋಡಿಸಿ ದೇಶದ …

Read More »

ಇಂದು ಪ್ರಧಾನಿ ಮೋದಿ ಮನ್ ಕೀ ಬಾತ್-ದೇಶದ ಜನರಿಗೆ ಲಾಕ್‍ಡೌನ್ ಸಿಹಿಯೋ? ಕಹಿಯೋ?

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಇಡೀ ದೇಶವನ್ನುದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಲಿದ್ದಾರೆ. ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಲಾಕ್‍ಡೌನ್ ಹೇರಿಕೆ ಕ್ಷಮೆ ಕೇಳಿದ್ದ ಅವರು ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಕಟ್ಟುನಿಟ್ಟಿನ ಲಾಕ್‍ಡೌನ್ ನಡುವೆಯೂ ಮಾರಕ ಕೊರೊನಾ ವೈರಸ್ ಆರ್ಭಟ ಭಾರತದಲ್ಲಿ ಮುಂದುವರಿದಿದೆ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಮೇ 3ರವರೆಗೂ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಡುವೆ ಆಗ್ಗಾಗ …

Read More »

ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ: ಅಖ್ತರ್‌ನನ್ನ ಕುಟುಕಿದ ಕಪಿಲ್ ದೇವ್

ನವದೆಹಲಿ: ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಿಲುವನ್ನು ಪುನರುಚ್ಚರಿಸಿದ್ದಾರೆ. ಇಂಡೋ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಉಭಯ ದೇಶಗಳ ನಡುವಿನ ರಾಜಕೀಯ, ಗಡಿ ಸಂಬಂಧದಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಆಡುವ ಯಾವುದೇ ಅವಕಾಶವಿಲ್ಲ. ಹಾಗಿದ್ದರೂ ಅಭಿಮಾನಿಗಳು ಐಸಿಸಿ ನಡೆಸುವ ಏಕದಿನ, ಟಿ20 ಎರಡೂ ಮಾದರಿಯ ವಿಶ್ವಕಪ್ ಹಾಗೂ ಏಷ್ಯಾಕಪ್ …

Read More »

ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನವದೆಹಲಿ: ಮಹಾಮಾರಿ ಕೊರೊನಾ ವೈರಸ್‌ ನಿಂದಾಗಿ ಖಾಸಗಿ ಸಂಸ್ಥೆಗಳು ತಮ್ಮ ನೌಕರರನ್ನು ಯಾವುದೇ ಕಾರಣ ನೀಡದೆ ಸಾಮೂಹಿಕವಾಗಿ ಕೆಲಸದಿಂದ ವಜಾ ಮಾಡುವ ಆರೋಪ ಕೇಳಿಬಂದಿದೆ. ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಜೀವನಾಧಾರವಾಗಿ ಕನಿಷ್ಠ ವೇತನ ನೀಡಬೇಕು. ತಮ್ಮ ವ್ಯವಹಾರವನ್ನು ನಿಲ್ಲಿಸಿದರೆ, ಕೆಲಸ ಕಳೆದುಕೊಂಡ ನೌಕರರಿಗೆ ಹಣಕಾಸಿನ ನೆರವು ನೀಡಬೇಕೆಂದು ಸರ್ಕಾರ …

Read More »