Breaking News

ಬೆಳಗಾವಿ

ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ನಾಲ್ಕು ಮಾದರಿಗಳ ಪೈಕಿ ಮೂರು ವರದಿಗಳು ನೆಗೆಟಿವ್: ಡಾ.ಎಸ್. ಬಿ.ಬೊಮ್ಮನಹಳ್ಳಿ

ಬೆಳಗಾವಿ: ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ನಾಲ್ಕು ಮಾದರಿಗಳ ಪೈಕಿ ಮೂರು ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಲ್ಕು ಮಾದರಿಗಳ ಪೈಕಿ ಇನ್ನೊಂದು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು‌ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕಳಿಸಲಾಗಿದ್ದ ಹತ್ತು ಮಾದರಿಗಳು ಕೂಡ ನೆಗೆಟಿವ್ ಬಂದಿರುತ್ತವೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟಾರೆ ಹದಿನೈದು ಮಾದರಿಗಳ ಪೈಕಿ …

Read More »

ಲಾಠಿ ಏಟು ತಪ್ಪಿಸಿಕೊಳ್ಳಲು ಬೆಳಗಾವಿಯ ಬೈಕ್ ಸವಾರರು ಹೊಸ ಪ್ಯಾನ್

ಬೆಳಗಾವಿ: ಪೊಲೀಸರ ಲಾಠಿ ಏಟು ತಪ್ಪಿಸಿಕೊಳ್ಳಲು ಬೆಳಗಾವಿಯ ಬೈಕ್ ಸವಾರರು ಹೊಸ ಪ್ಯಾನ್ ಮಾಡಿದ್ದಾರೆ. ನಾಯಿ ಕಚ್ಚಿದೆ ದಾರಿ ಬಿಡಿ ಎಂದು ಬೋಗಾರ್‌ವೇಸ್‌ ಬಳಿ ಬೋರ್ಡ್ ಹಿಡಿದುಕೊಂಡು ಬಂದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೊಲೀಸರು ಜನರು ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ತಿರುಗಾಡುತ್ತಿರುವ ಜನರಿಗೆ ಪೊಲೀಸರು ಲಾಠಿ ಬಿಸಿ ತೋರಿಸುತ್ತಿದ್ದಾರೆ. ಇದೇ ವೇಳೆ ಪೊಲೀಸರು ಹೊಡೆಯಲು ಹೊದ ಸಂದರ್ಭದಲ್ಲಿ ದ್ವಿಚಕ್ರದ ಸವಾರರಿಬ್ಬರು …

Read More »

ನಿಪ್ಪಾಣಿ “ಜನರು ಆತಂಕಪಡಬಾರದು, ಸರ್ಕಾರ ನಿಮ್ಮೊಂದಿಗಿದೆ”

ನಿಪ್ಪಾಣಿ “ಜನರು ಆತಂಕಪಡಬಾರದು, ಸರ್ಕಾರ ನಿಮ್ಮೊಂದಿಗಿದೆ” ನಿಪ್ಪಾಣಿ ನಗರ ಸಭೆಯಲ್ಲಿ ಕೊರೋನಾ ವೈರಸ್ ಕುರಿತು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಸಭೆ ಉದ್ದೇಶಿಸಿ ಮಾತನಾಡಿದರು. …

Read More »

ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಮಾರುಕಟ್ಟೆಗೆ ತರುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತಿದೆ.

ಜಿಲ್ಲೆಯ ರೈತರು ತರಕಾರಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಮಾರುಕಟ್ಟೆಗೆ ತರುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತಿದೆ. ಆದಕಾರಣ ರೈತರು ಆಯಾ ತಾಲ್ಲೂಕಿನ ಎಪಿಎಂಸಿ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್-೧೯ ಹರಡದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ರೈತರು ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಜಿಲ್ಲಾ …

Read More »

ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ವಾಹನಗಳು ಸಿದ್ಧವಾಗಿವೆ

ಬೆಳಗಾವಿ: ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಮಾಡಲಾಗಿದ್ದು, ತಮ್ಮ ಕೆಲಸ ನಿರ್ವಹಿಸಲು ವಾಹನಗಳು ಸಿದ್ಧವಾಗಿವೆ. ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಿಸುವ ಮೂಲಕ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಸಾರ್ವಜನಿಕರು ಸಹ ಅಗತ್ಯ ಸಾಮಗ್ರಿಗಳ ಖರೀದಿ ನೆಪದಲ್ಲಿ ಸಂಚರಿಸುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇದ್ದರಿಂದ ಜಿಲ್ಲಾಡಳಿತ …

Read More »

ಏನು ಮಾಡ್ತೀರೋ ಗೊತ್ತಿಲ್ಲ…. ಒಂದೇ ಒಂದು ಕಾಲು ಹೊರಗೆ ಕಾಣಬಾರದು….” :ಡಿಸಿಪಿ ಸೀಮಾ ಲಾಟ್ಕರ್

ಲಾಕ್ ಡೌನ್ ಘೋಷಣೆಯಾದರೂ ಬೆಳಗಾವಿಯಲ್ಲಿ ಜನರು ರಸ್ತೆ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತಲೆ ಕೆಡಿಸಿಕೊಂಡಿದ್ದಾರೆ. “ನಾವು ಕೆಲಸ ಮಾಡಿದರೂ ಹೇಳಿಸಿಕೊಳ್ಳಬೇಕಾಗಿದೆ… ಏನು ಮಾಡ್ತೀರೋ ಗೊತ್ತಿಲ್ಲ…. ನಾಳೆಯಿಂದ ಒಂದೇ ಒಂದು ಕಾಲು ಹೊರಗೆ ಕಾಣಬಾರದು….” ಎಂದು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಸರಿಯಾಗಿ ಲಾಕ್ ಡೌನ್ ಆಗುತ್ತಿಲ್ಲ ಎಂದು ಯಡಿಯೂರಪ್ಪ ಗುರುವಾರ ಸಂಜೆ ವೀಡಿಯೋ ಕಾನ್ಫರೆನ್ಸ್ …

Read More »

ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್

ಗೋಕಾಕ:ಕೊರೋನಾ‌ ವೈರಸ್ ಹರಡುವ ಭಿತಿಗೆ ಕ್ಯಾರೆ ಎನ್ನದೆ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ ಗೋಕಾಕ್ ನಗರದ ಮಸೀದಿಯೊಂದರಲ್ಲಿ ನಡೆದಿದೆ..   https://youtu.be/Y7NWh8zD7EA ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ. ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು …

Read More »

ಅನಗತ್ಯ ಮನೆಯಿಂದ ಹೊರ ಬರದಿರಿ: ಹೆಗ್ಗನಾಯಕ

ಮೂಡಲಗಿ: ಕೊರೊನಾ ವೈರಸ್ ದೇಶವನ್ನೇ ಬೆಚ್ಚಿ ಬಿಳಿಸಿದೆ. ಪ್ರತಿಯೊಬ್ಬರು ತಮ್ಮ ಜೀವ ಉಳಿಸಿಕೊಳ್ಳಬೇಕಾದರೆ ಸಾಮಾಜಿಕ ಅಂತರದ ಕಾಯ್ದುಕೊಳ್ಳಬೇಕು. ಅನಗತ್ಯ ಮನೆಯಿಂದ ಹೊರಗೆ ತಿರಗಾಡದಿರಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ತಾಲ್ಲೂಕಿನ ಸುಣಧೋಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರ್ದೇಶನದಂತೆ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ದೇಶಕ್ಕೆ ದೇಶವೇ ಈ ಮಾರಕ ವೈರಲ್ ವೈರಸ್‍ದಿಂದಾಗಿ ಮನುಕುಲ ಅಪಾಯದ ಅಂಚಿನಲ್ಲಿದೆ. ಈ ಮಾರಕ ರೋಗ …

Read More »

ಳಗ್ಗೆ  6 ಗಂಟೆಯಿಂದ 9 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಹಣ್ಣು ಮತ್ತು ತರಕಾರಿ ಮಾರುವವರು ಜನರ ಮನೆ ಹತ್ತಿರವೇ ಬರುತ್ತಾರೆ.

ಚಿಕ್ಕೋಡಿ :  ಪಟ್ಟಣದ  23 ವಾರ್ಡುಗಳಿಗೆ ದೈನಂದಿನ ಅವಶ್ಯಕ ತರಕಾರಿ, ಹಣ್ಣು ಮತ್ತು ದಿನಸಿ ವಸ್ತುಗಳನ್ನು  ಜನರ ಮನೆ ಬಾಗೀಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.  ಅನಾವಶ್ಯಕವಾಗಿ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮನವಿ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ  6 ಗಂಟೆಯಿಂದ 9 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಹಣ್ಣು ಮತ್ತು ತರಕಾರಿ ಮಾರುವವರು ಜನರ …

Read More »

ಬೆಳಗಾವಿ : ಗಂಟಲು ಮಾದರಿ ತಪಾಸಣಾ ಪ್ರಯೋಗಾಲಯ ಸ್ಥಾಪನೆ: ಜಗದೀಶ್ ಶೆಟ್ಟರ್

ಬೆಳಗಾವಿ : ಗಂಟಲು ಮಾದರಿ ತಪಾಸಣಾ ಪ್ರಯೋಗಾಲಯ ಸ್ಥಾಪನೆ ಕುರಿತು ವೈದ್ಯಕೀಯ ಸಚಿವ ಸುಧಾಕರ್ ಜತೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ   ತಿಳಿಸಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ಗುರುವಾರ ಕೊರೊನಾ ನಿಯಂತ್ರಣ ಕುರಿತು ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಜನರಿಗೆ ಸರಿಯಾಗಿ ತಲುಪಿಸಿದರೆ ಜನಸಂದಣಿ ನಿಯಂತ್ರಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಈ …

Read More »