ಮೂಡಲಗಿ: ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಿ ಖರೀದಿಸುವ ಸಲುವಾಗಿ, ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿ ಸರ್ಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದರ ಮೂಲಕ ಸಂಭವಿಸಬಹುದಾದ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರವು ಲಾಕ್ಡೌನ್ ಜಾರಿಗೆ ಮಾಡಿದೆ. ಜಿಲ್ಲೆಯ …
Read More »ಉದ್ದೇಶಪೂರ್ವಕವಾಗಿ ಲಾಠಿ ಬೀಸಬಾರದು: ಮಹಾಂತೇಶ ಕವಟಗಿಮಠ
ಚಿಕ್ಕೋಡಿ : ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಎಲ್ಲ ಜನರಿಗೂ ಮಾಸ್ಕ ವಿತರಿಸುವ ಮೂಲಕ ಸಾಮಾಜಿಕ ಅಂತರಕಾಯ್ದುಕೊಳ್ಳುವಂತೆ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ವಿಧಾನಪರಿಷತ್ನ ಸರಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳಸಭೆಯಲ್ಲಿ ಮಾತನಾಡಿದ ಅವರು, ತರಕಾರಿ ಮಾರಾಟಕ್ಕೆ ಹೋಗುವವರು ಹಾಗೂ ಅಟೋದವರು ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು …
Read More »ಯಮಕನಮರಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಇಂದೂ ಕೂಡ ಠಿಕಾಣಿ ಹೂಡಿದ್ದಾರೆಶಾಸಕ ಸತೀಶ ಜಾರಕಿಹೊಳಿ
ಯಮಕನಮರಡಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಮಾರಣಾಂತಿಕ ಸೊಂಕು ಹರಡದಂತೆ ಭಾರೀ ಮುನ್ನೆಚ್ಚರಿಕೆ ಕ್ರಮ ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶಾಸಕ ಸತೀಶ ಜಾರಕಿಹೊಳಿ ಇಂದೂ ಕೂಡ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಇಲ್ಲಿನ ಪಾಶ್ಚಾಪೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಾದ್ಯಂತ ಇಂದು ಸಂಚರಿಸಿ ಮಾಸ್ಕ ವಿತರಣೆ ಮಾಡಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಜನರಿಗೆ ದಿನನಿತ್ಯದ ಸರಕುಗಳ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ …
Read More »21 ರ ಪೈಕಿ 18 ವರದಿಗಳು ನೆಗಟಿವ್: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ : ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು 8 ಮಾದರಿಗಳ ಪೈಕಿ, 5 ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟಾರೆ ೨೧ ಮಾದರಿಗಳ ಪೈಕಿ ಇದೀಗ ಒಟ್ಟಾರೆ ೧೮ ನೆಗೆಟಿವ್ …
Read More ». ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಇದೊಂದು ಸುಳ್ಳು ಸುದ್ದಿ:
ಬೆಳಗಾವಿ: ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವಿಚಾರವಾಗಿ ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಸೇನಾಪಡೆ ಆಗಮಿಸಲಿದೆ ಎಂಬುವುದನ್ನು ಅಲ್ಲಗೆಳೆದ ಅವರು, ಇದೊಂದು ಸುಳ್ಳು ಸುದ್ದಿ, ಬೆಳಗಾವಿ ಪೊಲೀಸರೆ ಇಲ್ಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಸೇನೆ ಬಂದಿಲ್ಲ, ಬರೋದು ಇಲ್ಲ ಎಂದು ಹೇಳಿದ್ರು. ಬೆಳಗಾವಿ ಜನತೆ ವದಂತಿಗಳಿಗೆ ಕಿವಿಗೊಡಬೇಡಿ. ಜಿಲ್ಲೆಗೆ ಸಮಂಧಿಸಿದ ಕೊರೊನಾ ಶಂಕಿತರ ರಿಪೋರ್ಟ್ ಗಳು …
Read More »ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ
ಗೋಕಾಕ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ದಿನಸಿ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಕೆಲವು ಅಂಗಡಿಗಳಲ್ಲಿ ತಾತ್ಕಾಲಿಕ ಕೊರತೆ ಸೃಷ್ಟಿಸುತ್ತಿರುವ ಬಗ್ಗೆ ಮತ್ತು ಅನಗತ್ಯವಾಗಿ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ತರಹ ಪರಿಸ್ಥಿತಿಯ ಲಾಭ ಪಡೆದು ಗ್ರಾಹಕರನ್ನು ವಂಚಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಅಂಗಡಿಕಾರರು ಯಾವುದೇ ರೀತಿ ತಾತ್ಕಾಲಿಕ ಕೊರತೆ ಸೃಷ್ಟಿಸುವುದಾಗಲಿ ಅಥವಾ ಅನಗತ್ಯವಾಗಿ …
Read More »ಕೌಜಲಗಿಯಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಜಾಥಾ
ಸಮೀಪದ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗರನಾಳ, ಬಿಲಕುಂದಿ, ಗೋಸಬಾಳ ಗ್ರಾಮಗಳಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆ ಜಾಥಾ ಬಿಲಕುಂದಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿತು. ಗೋಸಬಾಳ ಗ್ರಾ.ಪಂ. ಅಧ್ಯಕ್ಷ ಶಿವಲಿಂಗ ಬಳಿಗಾರ ಜಾಥಾದ ನೇತೃತ್ವ ವಹಿಸಿ ಮಾತನಾಡಿ ಕೊರೊನಾ ಮಹಾಮಾರಕವಾಗಿದೆ. ಕೊರೊನಾ ಸೊಂಕು ನಮ್ಮ ನಮ್ಮ ಗ್ರಾಮಗಳಲ್ಲಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಮಾಸ್ಕ ಧರಿಸಬೇಕೆಂದು ಹೇಳಿದರು. ಊರಿನ ಪ್ರತಿಯೊಂದು ಮನೆ ಮನೆಗೆ ತೆರಳಿ ಗ್ರಾಮಸ್ಥರಿಗೆ ಮಾಸ್ಕ ವಿತರಿಸಲಾಯಿತು. ಜಾಥಾದಲ್ಲಿ …
Read More »ಅಥಣಿ-ಅನಗತ್ಯ ಓಡಾಡುವವರ ಬೈಕ್ ಗಳನ್ನು ವಶಪಡಿಸಿಕೊಂಡು ಲಾಕ್ ಮಾಡಿದ್ದಾರೆ.
ಅಥಣಿ- ಅಥಣಿ ನಗರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ತಿರುಗಾಡುವವರಿಗೆ ಲಾಠಿ ಬಿಸುವ ಬದಲು ಪೊಲೀಸರು ಹೊಸ ಪಾಠ ಕಲಿಸುತ್ತಿದ್ದಾರೆ. ಅನಗತ್ಯ ಓಡಾಡುವವರ ಬೈಕ್ ಗಳನ್ನು ವಶಪಡಿಸಿಕೊಂಡು ಲಾಕ್ ಮಾಡಿದ್ದಾರೆ. ಸುಮ್ಮನೆ ವ್ಯರ್ಥವಾಗಿ ದ್ವಿಚಕ್ರ ವಾಹನದ ಮೇಲೆ ತಿರುಗಾಡುವವರಿಗೆ ಪಾಠ ಕಲಿಸಲು ನಗರ ಪೊಲೀಸರು ಅವರ ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಬೈಕ್ ಗಳನ್ನು ಲಾಕ್ಡೌನ್ ಮುಗಿಯುವರೆಗೆ ಅವರಿಗೆ ಹಸ್ತಾಂತರಿಸದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಸುಮಾರು 40ಕ್ಕಿಂತಲೂ ಅಧಿಕ …
Read More »ಜನರ ಮುಂದೆ ಏಕಾಏಕಿ ಇಂತಹ ಸ್ಥಿತಿ ಬಂದಿದೆ ಒಂದು ಸಲ ಬಿಟ್ಟು ಮೂರು ಬಾರಿ ತಿಳಿ ಹೇಳಿ:ಗೋಕಾಕ ಪೊಲೀಸರಿಗೆ ಸತೀಶ ಜಾರಕಿಹೊಳಿ ಸಲಹೆ
ಗೋಕಾಕ: ಒಂದು ಸಲ ಬಿಟ್ಟು ಮೂರು ಬಾರಿ ತಿಳಿಸಿ ಹೇಳಿ. ಹೊಡೆಯುವದರಲ್ಲಿ ಏನೂ ಅರ್ಥವಿಲ್ಲ ಅದರಿಂದ ಪರಿಹಾರವೂ ಇಲ್ಲ. ಜನರಿಗೆ ತಿಳುವಳಿಕೆ ಹೇಳುವುದು ಮೊದಲು ಅಗತ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಂದು ನಗರದಲ್ಲಿ ಮಾತನಾಡಿ ಜನರು ಕೂಡ ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಿ, ಬಡೆಯುವಂತ ಅವಕಶ್ಯಕತೆಯಿಲ್ಲ. ಜನರು ನೀರು ಮತ್ತು ದಿನನಿತ್ಯದ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಏಕಾಏಕಿ ಬಂದ ಇಂತಹ ಸ್ಥಿತಿ ಇದೇ ಮೊದಲ …
Read More »ಆರೋಗ್ಯಇಲಾಖೆ ಸಿಬ್ಬಂದಿಯ ಮೇಲೆ ಪೋಲೀಸರ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
ಬೆಳಗಾವಿ ಆರೋಗ್ಯಇಲಾಖೆ ಸಿಬ್ಬಂದಿಯ ಮೇಲೆ ಪೋಲೀಸರ ಹಲ್ಲೆ ಖಂಡಿಸಿ ಆರೋಗ್ಯ ಮೇಲ್ವಿಚಾರಕರು ಹಾಗೂ ಆರೋಗ್ಯ ಸಹಾಯಕರ ಜಿಲ್ಲಾ ಸಂಘದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಪೋಲೀಸ್ ಆಯುಕ್ತರಿಗೆ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
Read More »