Breaking News

ಬೆಳಗಾವಿ

ತಂಗಡಿ ಗ್ರಾಮದಲ್ಲಿ ದಲಿತರ ಮೇಲೆ ದಬ್ಬಾಳಿಕೆ.?

ತಂಗಡಿ ಗ್ರಾಮದಲ್ಲಿ ದಲಿತರ ಮೇಲೆ ದಬ್ಬಾಳಿಕೆ ಅಥಣಿ ತಾಲೂಕಿನ ತಂಗಡಿ ಗ್ರಾಮದಲ್ಲಿ ದಲಿತರು ತಮ್ಮ ಮಾಲ್ಕಿ ಜಮೀನಿನಲ್ಲಿ ತಮಗೆ ಅನುಕೂಲ ಆಗುವ ಗೋಸ್ಕರ ರಸ್ತೆಯನ್ನು ಮಾಡಿಕೊಳ್ಳುವುದಕ್ಕೆ ಹೋದರೆ ಗ್ರಾಮದ ಬೇರೆ ಜಾತಿಯ ಪ್ರಭಾವಿ ವ್ಯಕ್ತಿಗಳು ತಮ್ಮ ತಮ್ಮ ಪ್ರಭಾವ ಬೀರಿ ರಸ್ತೆ ನಿರ್ಮಾಣಕ್ಕೆ ತಡೆ ಒಡ್ಡುತ್ತಿದ್ದಾರೆ   ಇದೇ ಸಂದರ್ಭದಲ್ಲಿ ಗ್ರಾಮದ ದಲಿತ ಯುವಕರು ಮಾತನಾಡಿ ಹಲವಾರು ವರ್ಷದಿಂದ ರಸ್ತೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರು ಇಲ್ಲಿ ದಲಿತರ ಜಮೀನು …

Read More »

ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

ಬೆಳಗಾವಿ: ಬೈಲಹೊಂಗಲ-ಬೆಳಗಾವಿ ರಾಜ್ಯ ಹೆದ್ದಾರಿಯ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬೈಲಹೊಂಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ಪಾತೇಶಾ ನಗರದ ಜಮಾಲಸಾಬ್ ಸತ್ತರಖಾನ ಪಠಾಣ, ದಿಲಾವರಖಾನ ಸತ್ತಾರಖಾನ ಪಠಾಣ ಹಾಗೂ ಪಡಿತರ ಅಕ್ಕಿಯ ಮಾಲೀಕ ಹುಬ್ಬಳ್ಳಿಯ ಬಿಡನಾಳನ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ ಎಂಬವರನ್ನು ಬಂಧಿಸಲಾಗಿದೆ. ಲಾರಿಯಲ್ಲಿ ಅಕ್ರಮವಾಗಿ 5 ಲಕ್ಷ ರೂ. ಮೌಲ್ಯದ 50 ಕೆ.ಜಿ. ತೂಕದ 500 ಪಡಿತರ …

Read More »

ಎಸ್‌ಜಿಬಿಐಟಿ: ಎಂಜಿನಿಯರ್‌ಗಳ ದಿನಾಚರಣೆ

ಬೆಳಗಾವಿ: ಇಲ್ಲಿನ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರ್‌ಗಳ ದಿನ ಆಚರಿಸಲಾಯಿತು. ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಎಸ್.ಜಿ. ಬಾಳೇಕುಂದ್ರಿ ಅವರ ಫೋಟೊಗಳಿಗೆ ಪೂಜೆ ಸಲ್ಲಿಸಲಾಯಿತು. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ವಿಶ್ವೇಶ್ವರಯ್ಯ ಹಾಗೂ ಬಾಳೇಕುಂದ್ರಿ ಅವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಬಳಿಕ ವೆಬಿನಾರ್‌ ಆಯೋಜಿಸಲಾಗಿತ್ತು. ಸೆಲ್ಕೊ ಸಂಸ್ಥೆಯ ಸಂಸ್ಥಾಪಕ ಡಾ.ಹರೀಶ ಹಂದೆ ಉಪನ್ಯಾಸ ನೀಡಿದರು. ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮ ಪ್ರಭು …

Read More »

ಬೆಳಗಾವಿ: ಸಾಂಬ್ರಾವರೆಗೂ ಹಿಗ್ಗಲಿದೆ ಬುಡಾ ವ್ಯಾಪ್ತಿ

ಬೆಳಗಾವಿ: ನಗರದ ಸುತ್ತಮುತ್ತಲಿರುವ ವಿವಿಧ 28 ಹಳ್ಳಿಗಳನ್ನು ವ್ಯಾಪ್ತಿಗೆ ಸೇರಿಸುವಂತೆ ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತಲ್ಲಿ ಪ್ರಾಧಿಕಾರದ ವ್ಯಾಪ್ತಿ ಹಿಗ್ಗಲಿದೆ. ಒಂದೆಡೆ ಸಾಂಬ್ರಾವರೆಗೆ, ಇನ್ನೊಂದೆಡೆ ಯಳ್ಳೂರು, ನಾವಗೆ, ಕಲ್ಲೇಹೊಳ ಹಾಗೂ ಕಡೋಲಿಯವರೆಗೆ ಪ್ರಾಧಿಕಾರದ ವ್ಯಾಪ್ತಿಯು ವಿಸ್ತರಣೆಗೊಳ್ಳಲಿದೆ. ಈ ಮೂಲಕ ಹೆಚ್ಚು ಹೆಚ್ಚು ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಜಿಸಲಾಗಿದೆ. ಪ್ರಸ್ತುತ ಪ್ರಾಧಿಕಾರವು ಕಾಕತಿ ಭಾಗಶಃ, ಕಂಗ್ರಾಳಿ ಬಿ.ಕೆ. ಮತ್ತು ಕಂಗ್ರಾಳಿ ಕೆ.ಎಚ್‌., ಸಾಂವಗಾಂವ, ಮಂಡೋಳ್ಳಿ ಹಾಗೂ …

Read More »

ವಿಪತ್ತು ನಿರ್ವಹಣೆ: ಸ್ವಯಂ ಸೇವಕರಿಗೆ ತರಬೇತಿ

ಅಥಣಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಇಲ್ಲಿನ ಶಾಖೆಯಿಂದ ವಿಪತ್ತು ನಿರ್ವಹಣೆ ಕುರಿತು ತಾಲ್ಲೂಕಿನ ಮುರುಗುಂಡಿ ಮುರಸಿದ್ದೇಶ್ವರ ದೇವಾಲಯದಲ್ಲಿ ಸ್ವಯಂ ಸೇವಕರಿಗೆ ತರಬೇತಿ ಶಿಬಿರ ನಡೆಸಲಾಯಿತು.   ತಹಶೀಲ್ದಾರ್ ದುಂಡಪ್ಪ ಕೋಮಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸ್ವಯಂಸೇವಕರ ಮೂಲಕ ಕೈ ಜೋಡಿಸಿದರೆ ವಿಪತ್ತನ್ನು ಸುಲಭವಾಗಿ ನಿರ್ವಹಿಸಬಹುದು’ ಎಂದರು. ‘ತಾಲ್ಲೂಕಿನಲ್ಲಿ ಪ್ರತಿ ವರ್ಷ ನೆರೆ ಹಾವಳಿ ಕಾಡುತ್ತಿರುತ್ತದೆ. ಆಗ ಎನ್‌ಡಿಆರ್‌ಎಫ್‌, ಪೊಲೀಸರು, ಸೈನ್ಯದವರು ಬಂದು ತಲುಪವರಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಹಾಪೂರ …

Read More »

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಲು ಕನ್ನಡಪರ ಹೋರಾಟಗಾರರ ಆಗ್ರಹ

ಬೆಳಗಾವಿ : ಹುಬ್ಬಳ್ಳಿ ರೈಲು ನಿಲ್ದಾಣ ಇನ್ನೂ ಮುಂದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣವಾಗಲಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣವೆಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ಹೆಸರಿಡಬೇಕು. ಜೊತೆಗೆ ರೈಲು ನಿಲ್ದಾಣಕ್ಕೆ ಬೆಳವಡಿ ರಾಣಿ ಮಲ್ಲಮ್ಮ ಹೆಸರು ಇಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. …

Read More »

ಬೀದಿ ನಾಟಕ ಕಲಾವಿದರು ಯಾವುದೆ  ಕಾಯ೯ಕ್ರಮಗಳು ಇಲ್ಲದೆ  ಪರದಾಡುವ ಪರಿಸ್ಥಿತಿ

ಬೆಳಗಾವಿ : ಕನಾ೯ಟಕ  ರಾಜ್ಯ ಬೀದಿ ನಾಟಕ ಕಲಾವಿದರ ಒಕ್ಕೂಟ ಬೆಳಗಾವಿ ಘಟಕದಿಂದ ಕಳೆದ  ಆರು ತಿಂಗಳಿಂದ ಬೀದಿ ನಾಟಕ ಕಲಾವಿದರು ಯಾವುದೆ  ಕಾಯ೯ಕ್ರಮಗಳು ಇಲ್ಲದೆ  ಪರದಾಡುವ ಪರಿಸ್ಥಿತಿ ಎದುರಾಗಿದ್ದು . ಬೀದಿ ನಾಟಕ ಕಲಾವಿದರು ಎಲ್ಲ ಇಲಾಖೆಗಳ ಯೋಜನೆಗಳನ್ನು   ಜನಸಾಮಾನ್ಯರಿಗೆ  ಬೀದಿ ನಾಟಕದ   ಮೂಲಕ  ತಿಳುವಳಿಕೆ  ಕೊಟ್ಟು  ಸಕಾ೯ರ  ಮತ್ತು ಇಲಾಖೆಯ  ನಡುವೀನ  ಕೊಂಡಿಗಳಂತ್ತೆ  ಕೆಲಸವನ್ನು ಕಳೆದ  ಸುಮಾರು  40 ಕ್ಕೂ  ಹೆಚ್ಚು ವಷ೯ಗಳಿಂದ  ಕಾಯ೯ಕ್ರಮಗಳನ್ನು  ಮಾಡಿಕೊಂಡು …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (16-09-2020-ಬುಧವಾರ)

ಗುರುವಿನ ಸ್ಥಾನ ಅತ್ಯಂತ ಮಹತ್ವವೂ, ಜವಾಬ್ದಾರಿಯುತವೂ, ಕ್ಲಿಷ್ಟವೂ, ಜಟಿಲವೂ ಆದುದು. ಸಮಾಜ ಗುರುವಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ಗುರು ದಾರಿ ತಪ್ಪಿದರೆ ಸಮಾಜ ನಾಶದತ್ತ ಸಾಗಿದಂತೆ. # ಪಂಚಾಂಗ : ಬುಧವಾರ, 16.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19 ಚಂದ್ರ ಉದಯ ರಾ.05.51 / ಚಂದ್ರ ಅಸ್ತ ಸಂ.05.44 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ …

Read More »

ಜೇವರ್ಗಿ ಸಂಕೇಶ್ವರ ರಾಜ್ಯ ಹೆದ್ದಾರಿ ಸಂcಪೂರ್ಣ ಹಾಳಾಗಿದ್ದು: ವಾಹನ ಸವಾರರು ಆಕ್ರೋಶ.

  ಅಥಣಿ: ಅಥಣಿ ಪಟ್ಟಣದಿಂದ ಐಗಳಿ ಕ್ರಾಸ್ ವರೆಗೆ ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದ್ದು ರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಥಣಿ ಇಂದ ವಿಜಯಪುರ ಅಂತಾರಾಜ್ಯ ರಸ್ತೆ ಸಂಚಾರಕ್ಕೆ ಅಪಾಯ ಮಟ್ಟಕ್ಕೆ ಹೋಗಿದ್ದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಏರ್ಪಟ್ಟಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಿಂದ ಪಕ್ಕದ ಮಹಾರಾಷ್ಟ್ರ, ಹಾಗೂ ತೆಲಂಗಾಣ ರಾಜ್ಯಕ್ಕೆ ಅಥಣಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ …

Read More »

ಎಸ್‌ಡಿಪಿಐ ರೀತಿ ತರಬೇತಿ ಕೊಡುತ್ತಾರಂತಾ?: ಕಾಂಗ್ರೆಸ್‌ಗೆ ಬಿ.ಸಿ.ಪಾಟೀಲ ಪ್ರಶ್ನೆ

ಬೆಳಗಾವಿ: ‘ಎಸ್‌ಡಿಪಿಐ ರೀತಿ ತರಬೇತಿ ಕೊಡುತ್ತಾರಂತಾ?’ ‘ಆರ್‌ಎಸ್‌ಎಸ್ ರೀತಿ ನಮ್ಮ ಶತ್ರುಗಳನ್ನೂ ತಯಾರಿಸುವುದಿಲ್ಲ’ ಎಂಬ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದ್ದು ಹೀಗೆ. ‘ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಗಲಾಟೆ ಮಾಡಿದವರ‍್ಯಾರು? ಶತ್ರುಗಳನ್ನು ತಯಾರಿಸುತ್ತಿರುವವರು ಅವರೇ. ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ. ಕೋಮು ಗಲಭೆಗೆ ಪ್ರಚೋದಿಸುತ್ತಾರೆ’ ಎಂದು ದೂರಿದರು. ‘ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಪ್ರಶ್ನಿಸುವ ಯೋಗ್ಯತೆ ಕಾಂಗ್ರೆಸ್‌ನವರಿಗೆ …

Read More »