Breaking News

ಬೈಲ್ ಹೊಂಗಲ್

ಬೈಲಹೊಂಗಲ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ವ್ಯಕ್ತಿಯ ಕೊಲೆ

ಬೈಲಹೊಂಗಲ: ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ಕಾಡಪ್ಪ ರುದ್ರಪ್ಪ ಶಿರಸಂಗಿ(42) ಕೊಲೆಯಾದ ವ್ಯಕ್ತಿ. ಮಬನೂರ ಗ್ರಾಮದ ಲಕ್ಷ್ಮಣ ದೇವೇಂದ್ರಪ್ಪ ಹೂಲಿ(21), ಜೀವಾಪುರ ಗ್ರಾಮದ ಸತೀಶ ಯಮನಪ್ಪ ಅರಿಬೆಚ್ಚಿ(28) ಬಂಧಿತ ಆರೋಪಿಗಳು. ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Read More »

0 ಪಂಪ್‌ಸೆಟ್ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ

ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನ 10 ಪಂಪ್‌ಸೆಟ್ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಮಾಳಾಪೂರ ಖಾದ್ರಿ ಗಲ್ಲಿ ನಿವಾಸಿಗಳಾದ ಮೊಹಮ್ಮದನದೀಮ ಮಹಮ್ಮದಹನೀಫ ಹೆಬ್ಬಳ್ಳಿ (33), ರಿಯಾಜ ರಫೀಕ ಕಾರಿಗಾರ (28), ಸಮೀರ ನಜೀರ ಹೆಬ್ಬಳ್ಳಿ (21), ಜಾಕೀರಹುಸೇನ ನೂರಹ್ಮದ ಮಾಲದಾರ (25) ಬಂಧಿತರು. ಬಂಧಿತರಿಂದ ₹2 ಲಕ್ಷ ಮೌಲ್ಯದ 10 ಪಂಪ್‌ಸೆಟ್‍ಗಳನ್ನು ಹಾಗೂ ಅಪಾರಧಕ್ಕೆ ಬಳಸಿದ್ದ …

Read More »

ಬೈಲಹೊಂಗಲ | ಮೊಹರಂ ಸಿದ್ಧತೆ: ಚಿನಕೋಲು, ಹುಲಿ‌ಕುಣಿತದ ಸದ್ದು

ಬೈಲಹೊಂಗಲ: ಸರ್ವಧರ್ಮ ಸಮನ್ವಯದ ಸಂದೇಶ ಸಾರುವ ಮೊಹರಂ ಹಬ್ಬದ ಸಂಭ್ರಮದ ಆಚರಣೆಗಾಗಿ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಈಗಾಗಲೇ ತಯಾರಿ ಶುರುವಾಗಿದೆ. ವಾಲ್ಮೀಕಿ ಸಮಾಜದ ಯುವ ಪಡೆ ಹಾಗೂ ಎಲ್ಲ ಸಮಾಜದವರು ಸೇರಿಕೊಂಡು ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಚಿನಕೋಲು, ಹುಲಿಕುಣಿತದ ತಯಾರಿ: ವಾಲ್ಮೀಕಿ ಸಮಾಜದ ಯುವ ಪಡೆಯ 20ಕ್ಕೂ ಹೆಚ್ಚಿನ ಜನ ಸದಸ್ಯರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಿರಿಯರ ಮಾರ್ಗದರ್ಶನದಂತೆ ಮೊಹರಂ ಗೀತೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ವಕ್ಕುಂದದ ಸುತ್ತಲಿನ …

Read More »

ಚನ್ನಮ್ಮನ ಸ್ಮಾರಕ ಬಾವಿ ಅಭಿವೃದ್ಧಿಗೆ ₹ 50 ಲಕ್ಷ: ಪ್ರಭಾವತಿ

ಬೈಲಹೊಂಗಲ: ಪಟ್ಟಣದ ಹುಡೇದ ಗಲ್ಲಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಬಾವಿ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಕ್ರೀಯಾಯೋಜನೆ ರೂಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹೇಳಿದರು. ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯ ಸ್ಥಳ ಹಾಗೂ ಹುಡೇದ ಗಲ್ಲಿ ಹತ್ತಿರ ಇರುವ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಭಾವಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ‘ಕಿತ್ತೂರು ಚನ್ನಮ್ಮ ಸ್ಮಾರಕ ಬಾವಿ ಅಭಿವೃದ್ದಿಗೆ …

Read More »

ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

ಬೈಲಹೊಂಗಲ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಎಂಟು ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ನಯಾನಗರ ಗ್ರಾಮದ ಸಮೀಪ ಸೋಮವಾರ ನಡೆದಿದೆ. ನಯಾನಗರ ಗ್ರಾಮದ ಮಲಪ್ರಭಾ ನದಿ ಹತ್ತಿರದ ದಾಬಾ ದಾಟಿ ಸಂಚರಿಸುತ್ತಿದ್ದ ಮಾರುತಿ 800 ಮತ್ತು ಅಲ್ಟೋ ಕಾರು ಪರಸ್ಪರ ಡಿಕ್ಕಿ ಹೊಡಿದಿವೆ. ಅಪಘಾತದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂಗೊಂಡು ನುಜ್ಜುಗುಜ್ಜಾಗಿವೆ. ಚಾಲಕರಾದ ಲಿಂಗದಳ್ಳಿ ಗ್ರಾಮದ ಕಿರಣ ಅಡಿವೆಪ್ಪ ಪೂಜೇರ, ಆನಿಗೋಳದ ಮಹಾಂತೇಶ ರಾಮನಿಂಗಪ್ಪ ಕುರಿ ಸೇರಿದಂತೆ ಎಂಟು …

Read More »

ಬೆಳಗಾವಿ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಬೈಲಹೊಂಗಲ: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮಳೆ ಬಿದ್ದು, ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಯಂತೆ ಕಂಡವು. ಕಾರ್‌, ಬೈಕ್‌ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು. ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜೆ. ಹೌಸಿಂಗ್ …

Read More »

ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

ಸಂಗೊಳ್ಳಿ (ಬೈಲಹೊಂಗಲ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳಕಾಲ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ-2024ಕ್ಕೆ ಗುರುವಾರ ವೈಭವದ ತೆರೆ ಬಿದ್ದಿತು. ಎರಡನೇ ದಿನ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಗಳನ್ನು ಕಂಡು ಜನ ರೋಮಾಂಚನಗೊಂಡರು.   ರಾಯಣ್ಣ ವೇದಿಕೆಯಲ್ಲಿ ಇಡೀ ದಿನ ನಡೆದ ಸಂಗೀತ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಮನಸೋಲದವರೇ ಇಲ್ಲ. ಬೆಳಿಗ್ಗೆ ಅಶೋಕ ಎಮ್ಮಿ ಅವರ ತಂಡ ಭಜನಾ ಪದಗಳನ್ನು ಪ್ರಸ್ತುತಪಡಿಸಿ …

Read More »

ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 70 ಮಂದಿ ಬಂಧನ

ಬೈಲಹೊಂಗಲ ಪಟ್ಟದ ಲಾಡ್ಜ್​ವೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಬಂಧಿಸುವಲ್ಲಿ ಬೆಳಗಾವಿಯ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.   ಬೆಳಗಾವಿ: ಜಿಲ್ಲಾ ಸಿಇಎನ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 70 ಮಂದಿಯನ್ನು ಬಂಧಿಸಲಾಗಿದೆ. ಬೈಲಹೊಂಗಲ ಪಟ್ಟಣದ ಸಂಸ್ಕೃತ ಬಾರ್ ಆಂಡ್ ಲಾಡ್ಜ್​ನಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಿನ್ನೆ (ಭಾನುವಾರ) ರಾತ್ರಿ ದಾಳಿ ಮಾಡಿದ ಸಿಇಎನ್ ಇನ್ಸ್​ಪೆಕ್ಟರ್​​ ಬಿ.ಆರ್.ಗಡ್ಡೇಕರ …

Read More »

ಉದ್ಯೋಗ ಅರಸಿ ವಲಸೆ ಹೋಗುವವರ ಸಮಸ್ಯೆ ನೀಗಿಸುರುವರೇ ಶಾಸಕ ಮಹಾಂತೇಶ ಕೌಜಲಗಿ?

ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹೆಸರಲ್ಲೇ ಒಂದು ಐತಿಹಾಸಿಕ, ಕ್ರಾಂತಿಕಾರಕ ಶಕ್ತಿ ಅಡಗಿದೆ. ಎರಡನೇ ಬಾರಿ ಆಯ್ಕೆಯಾದ ಶಾಸಕ ಮಹಾಂತೇಶ ಕೌಜಲಗಿ ಅವರು ಹಳೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ಕ್ಷೇತ್ರದ ಜನರ ಹೊಸ ನಿರೀಕ್ಷೆಗಳನ್ನು ಈಡೇರಿಸುವ ಸವಾಲು ಎದುರಿಸಬೇಕಾಗಿದೆ.‌ ಈ ಕ್ಷೇತ್ರದಲ್ಲಿ ಅವರ ಎರಡೂ ಗೆಲುವುಗಳಿಗೆ ಅವರಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರ ಒಳಜಗಳವೇ ಕಾರಣ ಎಂಬುದು ಈಗ ಜನಜನಿತ. ಈ ಅವಕಾಶವು ಮಹಾಂತೇಶ ಅವರಿಗೆ ಎರಡು ಬಾರಿ ಒಲಿದಿದೆ. ಆದರೆ, ಇದು …

Read More »

SSLC ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ?

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹಣಬರಹಟ್ಟಿಯ ಸರ್ಕಾರಿ ಪ್ರೌಢಶಾಲೆ ಕೇಂದ್ರದಿಂದ ಸೋರಿಕೆಯಾಗಿದೆ ಎನ್ನಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ, ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎನ್.ಪ್ಯಾಟಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿಕ್ಷಕರಿಂದ ಮಾಹಿತಿ ಕಲೆಹಾಕಿದರು. ಈ ಕೇಂದ್ರದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಿತು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 191 ವಿದ್ಯಾರ್ಥಿಗಳ ಪೈಕಿ 175 ವಿದ್ಯಾರ್ಥಿಗಳು …

Read More »