ಘಟಪ್ರಭಾ :ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರದಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ನಿನ್ನೆ ಪೂರ್ವ ಬೆಂಬಲ ವ್ಯಕ್ತವಾಗಿದೆ ಬೆಳಗಾವಿ ಜಿಲ್ಲೆಯ ಗೋಕಾಕ ಸೇರಿದಂತೆ ಘಟಪ್ರಭಾ,ಕೊಣ್ಣೂರ ಪಟ್ಟಣ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಗೋಕಾಕ ತಾಲೂಕಿನ ಜನತೆ ಪ್ರದಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ. ಘಟಪ್ರಭಾ, …
Read More »ಜನತಾ ಕರ್ಪ್ಯೂ ಬೆಂಬಲಿಸಿದ ರಾಜ್ಯದ ಜನತೆಗೆ ಸಚಿವ ರಮೇಶ ಜಾರಕಿಹೊಳಿ ಅಭಿನಂದನೆ
ಗೋಕಾಕ : ಮಾನವ ಕುಲಕ್ಕೇ ಮಹಾಮಾರಿಯಾಗಿ ರೂಪಿತವಾಗಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಜನತಾ ಕರ್ಫ್ಯೂಗೆ ಜನತೆ ಬೆಂಬಲಿಸಿದ ಹಿನ್ನೆಲೆ ಮಾತಾನಾಡಿದ ಅವರು,ಕೊರೊನಾ ವೈರಸ್ ಸೋಂಕು ಸಾಮುದಾಯಿಕವಾಗಿ ಹರಡದಂತೆ ಇನ್ನು ಕೆಲ ವಾರಗಳ ಕಾಲ ಸ್ವಯಂ ಕರ್ಫ್ಯೂ ಆಚರಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಿದ್ದು ಈ ಸೋಂಕನ್ನು ಎದುರಿಸಿ ಸ್ವಸ್ಥ ಭಾರತವನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ …
Read More »ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ತಡೆಗಟ್ಟಲು ಭಾನುವಾರದಂದು ಕರೆ ನೀಡಿದ ಜನತಾ ಕರ್ಫ್ಯೂವನ್ನು ಎಲ್ಲರೂ ಪಾಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ತಡೆಗಟ್ಟಲು ಭಾನುವಾರದಂದು ಕರೆ ನೀಡಿದ ಜನತಾ ಕರ್ಫ್ಯೂವನ್ನು ಎಲ್ಲರೂ ಪಾಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಶನಿವಾರದರಂದು ನಗರದ ಸಚಿವರ ಕಾರ್ಯಾಲಯದ ಮುಂದೆ ತಾಲೂಕಾ ಆಡಳಿತ, ಸಾರ್ವಜನಿಕ ಆಸ್ಪತ್ರೆ, ನಗರಸಭೆ, ಪೊಲೀಸ ಇಲಾಖೆ, ರೋಟರಿ ಸಂಸ್ಥೆ , ಇನ್ನರವ್ಹೀಲ ಸಂಸ್ಥೆ ಹಾಗೂ ರೋಟರಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೊರೋನ ಸೋಂಕು ಕುರಿತು ಜಾಗೃತ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು …
Read More »ಭಾನುವಾರದ ಜನತಾ ಕಫ್ರ್ಯೂ ಯಶಸ್ವಿಗೊಳಿಸಿ, ಕೋರೋನಾ ವೈರಸ್ ತಡೆಗಟ್ಟಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಜನತೆಯಲ್ಲಿ ಮನವಿ…
ಗೋಕಾಕ: ವಿಶ್ವದಾದ್ಯಂತ ಇಡೀ ಮಾನವ ಕುಲವನ್ನೇ ಸಂಕಷ್ಟಕ್ಕೆ ತಳ್ಳಿರುವ ಕೊರೋನಾ ವೈರಸ್ ಬಗ್ಗೆ ದೇಶದ ನಾಗರೀಕರಿಗೆ ಭಾನುವಾರದ ಜನತಾ ಕಫ್ರ್ಯೂ ಯಶಸ್ವಿಗೊಳಿಸಿ, ಕೋರೋನಾ ವೈರಸ್ ತಡೆಗಟ್ಟಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಜನತೆಯಲ್ಲಿ ಮನವಿ ನರೇಂದ್ರ ಮೋದಿ ಅವರು ಸಂದೇಶ ನೀಡಿದಂತೆ ಭಾನುವಾರ ಜನತಾ ಕಫ್ರ್ಯೂಗೆ ತಮ್ಮ ಸಹಕಾರ ನೀಡಿ ಅದನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. …
Read More »“ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ ಗ್ರಾಮಸ್ಥರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ”
ಗೋಕಾಕ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಕಾಮಗಾರಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ರಸ್ತೆ ಸುಧಾರಣೆಗೆ ಅನುದಾನ ಬಿಡುಗಡೆಗೊಂಡಿದೆ ಎಂದು ನ್ಯಾಯವಾದಿ ಎಮ್ ಕೆ ಕುಳ್ಳೂರ ಹೇಳಿದರು. ಅವರು, ಇಲ್ಲಿಗೆ ಸಮೀಪದ ಲೋಳಸೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಡಿ ಮಂಜೂರಾದ 3.20ಕೋಟಿ ರೂಗಳ ವೆಚ್ಚದ ಲೋಳಸೂರ-ಬಳೋಬಾಳ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ಕಾಮಗಾರಿಗೆ ಅನುದಾನ ತಂದಿರುವ ಶಾಸಕ ಬಾಲಚಂದ್ರ …
Read More »ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ಸನ್ಮಾನ
ಗೋಕಾಕ: ಕೆಪಿಸಿಸಿಗೆ ಕಾರ್ಯಾಧ್ಯಕ್ಷರಾಗಿ ನೇಮಕರಾದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ ನಗರಸಭೆ ಮತ್ತು ಎಪಿಎಂಸಿ ಸದಸ್ಯರು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂತನ ಕಾರ್ಯಾಧ್ಯಕ್ಷರನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಭಗವಂತ ಹುಳ್ಳಿ, ಕುತುಬುದ್ದೀನ್ ಗೋಕಾಕ, ಬಸವರಾಜ ದೇಶನೂರ, ವಿವೇಕ ಜತ್ತಿ, ಬಸವರಾಜ ದೇಶನೂರ, ಅನಿಲ ಮುರಾರಿ, ಸಂತೋಷ ಮಂತ್ರಣ್ಣವರ ಸೇರಿ ಹಲವು ನಗರ …
Read More »ಅಲಮಟ್ಟಿ ಎತ್ತರ ಹೆಚ್ಚಿಸಲು ನಾಳೆ ಜಲಸಂಪನ್ಮೂಲ ಸಚಿವರ ದೆಹಲಿ ಚಲೋ….!!!
ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆಯ ಕಾನೂನು ತೊಡಕುಕುಗಳು ನಿವಾರಣೆಯಾದ ಬಳಿಕ ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಅಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು ಏರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ದಿ. 17.03.2020 ಮಂಗಳವಾರ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ ರಮೇಶ್ ಜಾರಕಿಹೊಳಿಯವರು ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು …
Read More »ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ
ಗೋಕಾಕ:ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ …
Read More »ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ್ರು.
ಬೆಳಗಾವಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ್ರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಗೆ ನಮ್ಮನ್ನು ಪರಿಗಣಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಅದರಂತೆ ಹೈಕಮಾಂಡ್ ನಮಗೆ ಒಳ್ಳೆಯ ಜವಾಬ್ದಾರಿ ವಹಿಸಿದೆ. ಈ ಹಿನ್ನಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ದಾರಿಯಲ್ಲಿ …
Read More »ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ
ಬೆಂಗಳೂರು: ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಶಾಸಕಾಂಗ ನಾಯಕನ ಹುದ್ದೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಮುಂದುವರೆಯಲಿದ್ದಾರೆ. ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ನೇಮಕ ಮಾಡುವುದರ ಮೂಲಕ ಪಕ್ಷ ಬಲವರ್ಧನೆಯ ಮಹತ್ವದ ಜವಾಬ್ದಾರಿ ಎಐಸಿಸಿ ಎಲ್ಲರ ಮೇಲೂ ಹಾಕಿದೆ, ಈ ಕುರಿತು ಇಂದು ಅಧಿಕೃತ ಪ್ರಕಟಣೆ ಬಿಡುಗಡೆಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಕೊನೆಗೂ ಕೆಪಿಸಿಸಿಗೆ …
Read More »
Laxmi News 24×7