ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್ಮೆಂಟ್ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ ಸಿಲಿಕಾನ್ ಸಿಟಿ ಜನರನ್ನೇ ಶಾಕ್ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? …
Read More »‘ಮೋದಿ ಅಲೆ ಭ್ರಮೆ’ ಬಗ್ಗೆ ಬಿಎಸ್‌ವೈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ
ಬೆಂಗಳೂರು, ಸೆಪ್ಟೆಂಬರ್ 20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಯ ವಿಚಾರವಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಯು ಹಲವಾರು ಕರ್ನಾಟಕ ಬಿಜೆಪಿ ನಾಯಕರು ಹಾಗೂ ಕೇಂದ್ರ ಬಿಜೆಪಿ ನಾಯಕರು ಅಸಮಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಯಾವ ರೀತಿಯಲ್ಲಿ ಗಟ್ಟಿಗೊಳಿಸುವುದು …
Read More »ಸರ್ಕಾರಿ ಕಚೇರಿಗೆ ನುಗ್ಗಿ ಹಿರಿಯ ಕೆಎಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಆರೋಪ
ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಅವರ ಮೇಲೆ ಕೊಲೆ ಬೆದರಿಕೆ ಕೇಳಿ ಬಂದಿದ್ದು ಸರ್ಕಾರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ಭೋವಿ ಪಾಳ್ಯದಲ್ಲಿರುವ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಹಣ ಮಂಜೂರಾತಿ ಮಾಡುವಂತೆ ಧಮ್ಕಿ ಹಾಕಿರೋ ಆರೋಪಿಗಳು. ನಾವು ಹೇಳಿದ ವ್ಯಕ್ತಿಗಳಿಗೆ ಹಣ ಮಂಜೂರು ಮಾಡಬೇಕು. ಇಲ್ಲದಿದ್ದರೆ ಸರ್ಕಾರಿ ಕಚೇರಿಯಲ್ಲಿ …
Read More »ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ
ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ವಿಭಾಗದ ಅಧಿಕಾರಿಗಳ ಜಂಟಿ ಕಾರ್ಯಾಚಾರಣೆಯಲ್ಲಿ ವಿದೇಶಿ ಏಜೆನ್ಸಿಗಳಿಗೆ ಭಾರತದ ರಕ್ಷಣಾ ಮಾಹಿತಿ ನೀಡುತ್ತಿದ್ದ ಯುವಕನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಈತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಎನ್ನಲಾಗಿದೆ. ಆರೋಪಿಯು ರಾಜಸ್ಥಾನದ ಬೆರ್ಮರ್ ಮೂಲದವನು. ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ. ಸೇನೆಯ ಕಮಾಂಡೋ ಸಮವಸ್ತ್ರ ಧರಿಸಿ ಬಾರ್ಮರ್ ನ ಮಿಲಿಟರಿ ಸ್ಟೇಶನ್ ಮಾಹಿತಿ, ಸೇನಾ ವಾಹನಗಳ ಓಡಾಟದ ಮಾಹಿತಿಯನ್ನು …
Read More »ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯ ಫಲಿತಾಂಶ ಪ್ರಕಟವಾಗಿದೆ. ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆಗಳು ನಡೆದಿತ್ತು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಮೇಘನ್ ಎಚ್.ಕೆ. ಅವರು ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂಜಿನಿಯರಿಂಗ್, ಬಿ-ಫಾರ್ಮಾ, ಕೃಷಿ …
Read More »ಕುಡಿದು ವಾಹನ ಚಾಲನೆ ಮಾಡಿದ್ರೆ ಹುಷಾರ್. ಪೊಲೀಸರಿಂದ ಸ್ಟ್ರಿಕ್ಟ್ ತಪಾಸಣೆ!
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಸಾವು-ನೋವುಗಳಾಗಿವೆ. ಇದರಿಂದ ಎಚ್ಚೆತ್ತ ಟ್ರಾಫಿಕ್ ಪೊಲೀಸರು ಟಫ್ ರೂಲ್ಸ್‌ಗೆ ಮುಂದಾಗಿದ್ದು, ಸ್ಟ್ರಿಕ್ಟ್ ಆಗಿ ತಪಾಸಣೆ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಬಳಿಕ ಮತ್ತೆ ಪೊಲೀಸರು, ಕುಡಿದು ವಾಹನ ಚಲಾಯಿಸುವವರ ಪರೀಕ್ಷೆ ಆರಂಭಿಸಿದ್ದಾರೆ. ವಾರದಲ್ಲಿ ಮೂರು ದಿನ ಡ್ರಂಕ್ ಅಂಡ್ ಡ್ರೈವ್ ಚೆಕ್ ಮಾಡುವಂತೆ ಆದೇಶಿಸಲಾಗಿದೆ. ವೀಕೆಂಡ್‌ನಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಕುಡಿದು ಕಾರಲ್ಲಿ ಮೋಜು-ಮಸ್ತಿ ಮಾಡಿಕೊಂಡು …
Read More »ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆ: ಖದೀಮರ ಬಂಧನ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು, ವಂಚಿಸುತ್ತಿದ್ದ ಮೂವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಮುಜಾಹಿದ್, ಇಕ್ಬಾಲ್ ಮತ್ತು ಆಸಿಫ್ ಬಂಧಿತರಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಾಲತಾಣಗಳಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ಮಾತಾಡಿ, ಅವರ ಬೆತ್ತಲೆ ವಿಡಿಯೋವನ್ನು ಸೆರೆಹಿಡಿದು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಸೈಬರ್ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಸೋಗಿನಲ್ಲಿ …
Read More »ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ
ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ನಲ್ಲಿ ಅತೀದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಡ್ರಗ್ಸ್ ಪೆಡ್ಲರ್ಗಳನ್ನ ಮತ್ತು ಡೀಲರ್ಗಳನ್ನ ಮಾತ್ರ ಬಂಧಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯನ್ನ ಪತ್ತೆ ಮಾಡಿದ್ದಾರೆ. ವಿದೇಶಗಳಿಗೂ ಮಾರಾಟ..! ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯವಾಗಿದೆ. ಇದುವರೆಗೆ ವಿದೇಶದಲ್ಲಿ ತಯಾರಾಗ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರಾಗುತ್ತಿದೆ ಅನ್ನೋದು ಬಯಲಾಗಿದೆ. ನಗರದ ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು …
Read More »ನಮ್ಮಲ್ಲಿ ಚಿರತೆಯನ್ನೇ ಕೊಂದು ಒಬ್ಬರು ಹೀರೋ ಆಗಿದ್ದಾರೆ -ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಲೇವಡಿ
ಬೆಂಗಳೂರು: ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ರಾಜ್ಯ ಸರ್ಕಾರವನ್ನ ಲೇವಡಿ ಮಾಡಿದರು. ನಮ್ಮಲ್ಲಿ ಚಿರತೆಯನ್ನೇ ಕೊಂದು ಒಬ್ಬ ಹೀರೋ ಆಗಿದ್ದಾರೆ. ಕಾಡು ಪ್ರಾಣಿಗಳನ್ನ ನೀವು ಸರಿಯಾಗಿ ಸಾಕ್ತಿಲ್ಲ. ಅದಕ್ಕೆ ಅವುಗಳು ಊರಿಗೆ ಬರ್ತಿವೆ. ಇದರಿಂದ ಸಾಕು ಪ್ರಾಣಿಗಳು ಉಳಿಯಲ್ಲ. ಕಾಡು ಪ್ರಾಣಿಗಳಿಗೆ, ಆಹಾರ, ನೀರು ಒದಗಿಸಿ ಎಂದು ಆಗ್ರಹಿಸಿದರು. ಶಿವಲಿಂಗೇಗೌಡರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರಿಸಿ, ಹಾಸನ …
Read More »ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ
ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …
Read More »