Breaking News

ಬಾಗಲಕೋಟೆ

ಸಿದ್ದರಾಮಯ್ಯ ಜನ್ಮ ದಿನ: 325 ಬಸ್‌ ಬುಕಿಂಗ್‌, ಸಾರಿಗೆ ಸಂಸ್ಥೆಗೆ ₹39 ಲಕ್ಷ ಆದಾಯ

ಬಾಗಲಕೋಟೆ: ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನ ಕಾರ್ಯಕ್ರಮಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 325 ಹೆಚ್ಚು ಬಸ್‌ಗಳನ್ನು ಬುಕಿಂಗ್‌ ಮಾಡಲಾಗಿದೆ. ಇನ್ನು ನೂರಾರು ಬಸ್‌ಗಳು ಬುಕಿಂಗ್‌ ಆಗುವ ನಿರೀಕ್ಷೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 50 ಬಸ್‌ಗಳು ಬುಕಿಂಗ್‌ ಆಗಿವೆ. ಹಾವೇರಿಯಲ್ಲಿ 90, ಗದುಗಿನಲ್ಲಿ 85 ಹಾಗೂ ಧಾರವಾಡ ಜಿಲ್ಲೆಯಲ್ಲಿ 90 ಬಸ್‌ಗಳು ಬುಕಿಂಗ್‌ ಆಗಿವೆ. ಇದರಿಂದ …

Read More »

ಮತದಾರರ ಪಟ್ಟಿಗೆ ಆಧಾರ ಜೋಡಣೆ: ರಾಜಕೀಯ ಮುಖಂಡರ ಸಭೆ

ರಬಕವಿ-ಬನಹಟ್ಟಿ: ಮತದಾರರ ಪಟ್ಟಿಗೆ ಆಧಾರ ಜೋಡಣೆಯ ಕಾರ್ಯಕ್ರಮ ಅಗಸ್ಟ್ 1 ರಿಂದ ನಡೆಯಲಿದ್ದು, ಈ ನಿಟ್ಟಿನಲ್ಲಿ ಮತದಾರರು ತಾವೇ ಖುದ್ದಾಗಿ ಮೊಬೈಲ್ ಆಯಪ್ ಮೂಲಕ ಮಾಡಿಕೊಳ್ಳಬಹುದು ಇಲ್ಲವೆ ತಮ್ಮ ಮನೆಗಳಿಗೆ ಬರುವ ಬಿಎಲ್‌ಓಗಳಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ಮತದಾರರ ಪಟ್ಟಿಗೆ ಆಧಾರ ಜೋಡಣಿಗೆ ಸಹಕರಿಸಬೇಕು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.   ಅವರು ಶುಕ್ರವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ …

Read More »

ಬಿಜೆಪಿಯಲ್ಲಿ ಗೆಲ್ಲುವಂತವರಿದ್ದರೆ 80 ವರ್ಷದ ಮುದುಕನಿಗೂ, ಸೋನಿಯಾ ಗಾಂಧಿಗೂ ಟಿಕೆಟ್ ಕೊಡ್ತಾರೆ

ಬಾಗಲಕೋಟೆ: ಶ್ರೀರಾಮ ಸೇನೆ ಮತ್ತು ಬಿಜೆಪಿಗೆ ಏನು ಸಂಬಂಧ ಇಲ್ಲ ಎಂದು ಕಟೀಲ್​​ ಹೇಳಿದ್ದಾರೆ. ನಾನೂ ಕೂಡ ಹೇಳಿದ್ದೇನೆ. ನಾನೇನು ಬಿಜೆಪಿ ಸದಸ್ಯನಲ್ಲ. ಯಾವ ಪಕ್ಷದ ಸಂಬಂಧವೂ ನಮ್ಮ ಸಂಘಟನೆಗೆ ಇಲ್ಲ. ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಅವರು ತಮ್ಮ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್ ಪ್ರತಿಕ್ರಿಯಿಸಿದರು. ​​ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇನು …

Read More »

ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ಬಿತ್ತು ವಿಂಡ್​ ಪವರ್​ ಫ್ಯಾನ್

ಬಾಗಲಕೋಟೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಏಕಾಏಕಿ ವಿಂಡ್​ ಪವರ್​ ಫ್ಯಾನ್​ ಬಿದ್ದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೆಲಸಗಾರರು ಪಾರಾಗಿದ್ದಾರೆ. ಹಿರೇಓತಗೇರಿ ಗ್ರಾಮದಲ್ಲಿ ಹೊಲಗಳಿಗೆ ಅಳವಡಿಸಲಾಗಿರುವ ವಿಂಡ್ ಪವರ್ ಫ್ಯಾನ್​ ಬಿದ್ದಿದ್ದು, ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.   ಇಳಕಲ್ ತಾಲೂಕಿನ‌ ಹಿರೇಓತಗೇರಿ ಗ್ರಾಮದಲ್ಲಿ ಕೆಲವೆಡೆ ವಿಂಡ್​ ಪವರ್ ಫ್ಯಾನ್​ ಅಳವಡಿಕೆ ಮಾಡಲಾಗಿದೆ. ಆದರೆ ಭಾನುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ತುಂಡಾಗಿ ಬಿದ್ದಿದ್ದು, ಇಲ್ಲಿನ ಜನರಿಗೆ ಆತಂಕ …

Read More »

ರಾಜ್ಯದ ನಿಯೋಗಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪಿಯುಷ್ ಗೋಯಲ್

ರಬಕವಿ-ಬನಹಟ್ಟಿ: ಕೇಂದ್ರ ಸರ್ಕಾರದ ನಿಯಮದಂತೆ ಪವರ್ ಲೂಮ್ ಮಗ್ಗಗಳ ಮೇಲೆ ಕೇವಲ ಬಿಳಿ ಬಟ್ಟೆಯನ್ನು ಮಾತ್ರ ಉತ್ಪಾದನೆ ಮಾಡಬೇಕು. ಕರಿ ಮತ್ತು ರೇಷ್ಮೆ ಬಟ್ಟೆಯನ್ನು ಕೈಮಗ್ಗದ ಮೇಲೆ ಉತ್ಪಾದನೆ ಮಾಡಬೇಕು. ಈ ನಿಮಿತ್ತವಾಗಿ ಕೇಂದ್ರದ ತಂಡವೊಂದು ರಾಜ್ಯಕ್ಕೆ ಭೇಟಿ ನೀಡಿ ಪವರ್ ಲೂಮ್ ಮಗ್ಗಗಳ ಮೇಲೆ ಕರಿ ಬಟ್ಟೆಯನ್ನು ಉತ್ಪಾದನೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಜ್ಜಾಗಿತ್ತು.   ಆದ್ದರಿಂದ ಕೇಂದ್ರ ಸಚಿವೆ ಪ್ರಹ್ಲಾದ್ ಜೋಶಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, …

Read More »

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿತ

ಬಾಗಲಕೋಟೆ, ಜುಲೈ 6: ನೂಪುರ್‌ ಶರ್ಮಾ ವಿರುದ್ಧ ಪೋಸ್ಟ್ ವಿಚಾರವಾಗಿ ಎರಡು ಕೋಮು ಗುಂಪುಗಳ ಮಧ್ಯೆ ಭೀಕರ ಗಲಾಟೆ ನಡೆದು ಮೂವರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿಯಾಗಿದೆ, ಓರ್ವನ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಕೆರುರೂ ಪಟ್ಟಣದಲ್ಲಿ ಬುಧವಾರ ಸಾಯಂಕಾಲ ಸಮಯ ಈ ಘಟನೆ ನಡೆದಿದ್ದು, ಇದರಿಂದ ಇಡೀ ಪಟ್ಟಣ ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಹಿಂದೂ ಜಾಗರಣ …

Read More »

ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

ಬಾಗಲಕೋಟೆ: ತಂದೆಯೊಬ್ಬರು ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಇಬ್ಬರು ಮಕ್ಕಳ ಹೆಸರಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಆ ಮಕ್ಕಳು ತಂದೆಯ ಜೀವನಕ್ಕೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿರಲಿಲ್ಲ. ತನ್ನ ಕೊನೇಗಾಲದಲ್ಲಿ ಮಕ್ಕಳು ಆಸರೆ ನೀಡುತ್ತಿಲ್ಲ ಎಂದು ನೊಂದ ತಂದೆ, ನನ್ನ ಸಾವಿನ ನಂತರ ಮಡದಿಯ ಜೀವನಕ್ಕೂ ಮಕ್ಕಳು ಸಹಾಯ ಕೊಡುತ್ತಾರೆ ಎಂಬ ಭರವಸೆ ಇಲ್ಲ. ನಾನೇನು ಮಾಡಲಿ? ಇರೋ ಆಸ್ತಿಯನ್ನೂ ಮಕ್ಕಳಿಗೆ ಕೊಟ್ಟಿರುವೆ ಎಂದು ಕಣ್ಣೀರು ಹಾಕುತ್ತಿದ್ದರು. ಇವರ ಕಷ್ಟಕ್ಕೆ ಮರುಗಿದ …

Read More »

ಭಾರತೀಯ ಸೇನೆ ಸೇರಿದ ಬಾಗಲಕೋಟೆ ಗ್ರಾಮೀಣ ಯುವತಿ

ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರು ಮನೆಯಿಂದ ಹೊರಬರುವುದೇ ಕಡಿಮೆ ಎನ್ನುವಂಥ ಪರಿಸ್ಥಿತಿ ಇತ್ತು. ಆದರೆ ಕಾಲ ಬದಲಾಗಿದೆ. ಇದೀಗ ಈ ಭಾಗದ ಯುವತಿಯೋರ್ವಳು ಭಾರತೀಯ ಸೇನೆ ಸೇರುವ ಮೂಲಕ ಮಾದರಿಯಾಗಿದ್ದಾಳೆ. ವಿಜಯಾ ಹದ್ಲಿ, ಬಾಗಲಕೋಟೆ ತಾಲೂಕಿನ ಯಡಹಳ್ಳಿ ಗ್ರಾಮದ ನಿವಾಸಿ. ಮೊದಲ ಪ್ರಯತ್ನದಲ್ಲಿ ದೇಶ ಸೇವೆ ಮಾಡುವ ಅವಕಾಶ ಪಡೆದಿದ್ದಾರೆ. ದೈಹಿಕ ಶಿಕ್ಷಕಿ ಆಗಬೇಕು ಎಂದುಕೊಂಡಿದ್ದರಂತೆ. ಆದರೆ, ಸಿಆರ್​ಪಿಎಫ್ ಯೋಧೆಯಾಗಿ ದೇಶ ಸೇವೆಗೆ ಹೊರಟಿದ್ದಾರೆ. 2021ರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ನಡೆದ …

Read More »

ಇಡ್ಲಿ ಮಾರುವವನ ಮಗಳಿಗೆ ವೈದ್ಯೆಯಾಗುವಾಸೆ: ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ರಬಕವಿ–ಬನಹಟ್ಟಿ: ಬಡತನದಲ್ಲಿಯೇ ಹುಟ್ಟಿ ಬೆಳೆದು, ನಿರಂತರ ಅಧ್ಯಯನ, ಕಠಿಣ ಪರಿಶ್ರಮದ ಮೂಲಕ ಇಡ್ಲಿ ಮಾರಿ ಜೀವನ ನಡೆಸಿತ್ತಿರುವ ವ್ಯಾಪಾರಿಯ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಶೇ. 97.5 ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ. ಇದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸಿಗೆ ರೆಕ್ಕೆ ಕಟ್ಟಿದ್ದಾಳೆ. ರಬಕವಿಯ ಬ್ರಹ್ಮಾನಂದ ಆಶ್ರಮ ಹತ್ತಿರ ಬಾಡಿಗೆ ಶೆಡ್‌ನಲ್ಲಿ ವಾಸ ಹೊಂದಿರುವ ಪ್ರಕಾಶ ಹನಗಂಡಿಯವರ ಮಗಳು ದಾನೇಶ್ವರಿ ಈ …

Read More »

(KRDIL) ಅಧಿಕಾರಿಗಳು ನಿರ್ಮಿಸಿದ್ದ ಕಟ್ಟಡದ ಗೇಟ್ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(KRDIL) ಅಧಿಕಾರಿಗಳು ನಿರ್ಮಿಸಿದ್ದ ಕಟ್ಟಡದ ಗೇಟ್ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಲಕ ರಂಜಿತ್ ಸೂರಗೊಂಡ(8) ಮೈ ಮೇಲೆ ಗೇಟ್ ಬಿದ್ದು ಮೃತಪಟ್ಟಿದ್ದಾನೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಸ್ತುತ ವೀಡಿಯೋ ವೈರಲ್ ಆಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಡೆದಿದ್ದೇನು? ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸವೇಶ್ವರ ಸಮುದಾಯ ಭವನದ ಮುಂದೆ ಗೇಟ್ ಅಳವಡಿಸಲಾಗಿತ್ತು. ಮೇ 31 …

Read More »