Breaking News

ದಕ್ಷಿಣ ಕನ್ನಡ

ಭಾರತದ ಹೆಬ್ಬುಲಿಗಳ ಅಟ್ಟಹಾಸಕ್ಕೆ ಪತರುಗುಟ್ಟಿದ ಪಾಕಿಸ್ತಾನ ಕಾರ್ಗಿಲ್ ಬಿಟ್ಟು ಓಡಿಹೋಗಿ 21 ವರ್ಷಗಳು ಕಳೆದಿವೆ.

ಮಂಗಳೂರು: ಭಾರತದ ಹೆಬ್ಬುಲಿಗಳ ಅಟ್ಟಹಾಸಕ್ಕೆ ಪತರುಗುಟ್ಟಿದ ಪಾಕಿಸ್ತಾನ ಕಾರ್ಗಿಲ್ ಬಿಟ್ಟು ಓಡಿಹೋಗಿ 21 ವರ್ಷಗಳು ಕಳೆದಿವೆ. ಭಾರತೀಯ ಯೋಧರ ಧೈರ್ಯ, ಸಾಹಸ, ದೇಶಪ್ರೇಮದ ಪ್ರತೀಕವಾಗಿ ಕಾರ್ಗಿಲ್ ಭಾರತದಲ್ಲೇ ಉಳಿದಿದೆ. ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಕಥೆಯೇ ರೋಮಾಂಚನಕಾರಿ ಯಾದರೆ, ಯುದ್ಧದಲ್ಲಿ ಗೆದ್ದು, ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿಗಳ ಹೋರಾಟ ಅದೊಂದು ಇತಿಹಾಸ. ಇಂತಹ ವೀರ ಸೇನಾನಿಗಳ ಪೈಕಿ ಕರಾವಳಿಯಲ್ಲಿ ಹೆಮ್ಮೆಯ ಯೋಧ ಪ್ರವೀಣ್ …

Read More »

ನಾಗರಪಂಚಮಿ ದಿನವೇ ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್

ಮಂಗಳೂರು: ನಾಡಿನೆಲ್ಲೆಡೆ ನಾಗರಪಂಚಮಿ. ಆದರೆ ಈ ಕೊರೊನಾ ನಾಗರಪಂಚಮಿ ಆಚರಣೆಗೂ ಅಡ್ಡಿಯಾಗಿದೆ. ನಾಗರಪಂಚಮಿ ದಿನವೇ ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಆಗಿದೆ. ಇಂದು ನಡೆಯುತ್ತಿರುವ ನಾಗರಪಂಚಮಿ ಪೂಜೆಗೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ. ಸಾಮಾಜಿಕ ಅಂತರ ಕಾಪಾಡಲು ಕಷ್ಟಕರವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಾಗರಪಂಚಮಿಗೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆಯಾಗುತ್ತಿತ್ತು. ಆದರೆ ಈ ಬಾರಿ ಅರ್ಚಕರಿಂದ ಮಾತ್ರ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನ ಲಾಕ್‍ಡೌನ್?…………..

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಕಳೆದ ಜುಲೈ 16 ರಿಂದ ಜಿಲ್ಲಾದ್ಯಂತ ಲಾಕ್‍ಡೌನ್ ಆರಂಭವಾಗಿದ್ದು ನಾಳೆಗೆ ಅಂತ್ಯವಾಗಲಿದೆ. ಆದರೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಜಿಲ್ಲೆಯಲ್ಲಿ ಪ್ರತಿದಿನ 10-200 ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳು ಮತ್ತೆ ಲಾಕ್ ಡೌನ್ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿ …

Read More »

ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢ……….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡಿನ ಕಾರ್ಪೊರೇಟರ್ ಸುಮಂಗಲಾ ರಾವ್ ಅವರಿಗೆ ಇಂದು ಪಾಸಿಟಿವ್ ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಸುಂಮಗಲಾ ರಾವ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಿದ್ದು, ತಮ್ಮ ಪತಿಗೂ ಪಾಸಿಟಿವ್ ಆಗಿದ್ದು ಗುಣಮುಖರಾಗುತ್ತಿದ್ದೇವೆ ಎಂದಿದ್ದಾರೆ. https://youtu.be/ZwocKpMtUVY ಕಳೆದ ಕೆಲ ದಿನದ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 147 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಹೇಗೆ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸೋಂಕಿನ ಸಂಖ್ಯೆಯ ಪ್ರಮಾಣ ಅಧಿಕವಾಗಿದೆ. ಪ್ರತಿನಿತ್ಯ ರಾಜ್ಯದ ಹೆಲ್ತ್ ಬುಲೆಟಿನ್ ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲೇ ಹೆಚ್ಚಿನ ಪ್ರಕರಣಗಳನ್ನು ವರದಿ ಆಗುತ್ತಿವೆ. ಇನ್ನು ಇಂದು ಒಂದೇ ದಿನ 147 ಜನರಿಗೆ ಸೋಂಕು ಹಬ್ಬಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 147 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು …

Read More »

ಮಾನವೀಯತೆ ಮೆರೆದ ಶಾಸಕ ಯು.ಟಿ ಖಾದರ್

ಮಂಗಳೂರು: ಅಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಶಾಸಕ ಯು.ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ. ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದು ನಂತರ ಜಿಲ್ಲಾಡಳಿತ ಅನುಮತಿ ಇರದ ಕಾರಣ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಹೀಗಾಗಿ ಕೋವಿಡ್-19 ಸೋಂಕಿತ ಕರೆತಂದ ಆಂಬ್ಯುಲೆನ್ಸ್‍ನಲ್ಲೇ ಅರ್ಧ ಗಂಟೆಯಿಂದ ಬಾಕಿಯಾಗಿದ್ದ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಮಾಜಿ …

Read More »

ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆ- ರಸ್ತೆ ತುಂಬೆಲ್ಲಾ ನೀರು

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಆಗ್ಗಾಗೆ ಬರುತ್ತಿದ್ದ ಮಳೆ ಇಂದು ಬಿಟ್ಟು ಬಿಡದೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಪರಿಣಾಮ ನದಿ, ಹೊಳೆಗಳೆಲ್ಲಾ ಮೈತುಂಬಿ ಹರಿಯುತ್ತಿದೆ. ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆದರೂ ಈ ಬಾರಿ ಮಳೆ ಮಾತ್ರ ಬಿರುಸಾಗಿರಲಿಲ್ಲ. ಆದರೆ ಇಂದಿನಿಂದ ಮುಂಗಾರು ಅಬ್ಬರಿಸುತ್ತಿದೆ. ಮಂಗಳೂರು ನಗರದಲ್ಲೂ …

Read More »

ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತ,ಮಂಗಳೂರಿನ ಯುವಕನ ಮೃತದೇಹ ತವರೂರಿಗೆ

ಮಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಇಯ ಕನ್ನಡಿಗರು ನಡೆಸಿದ್ದು. ಅಬುಧಾಬಿಯಲ್ಲಿ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಇ ಸರ್ಕಾರದ ಎಲ್ಲಾ ನಿಯಮ ಪಾಲಿಸಿ ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು. ಈ ಯಶಸ್ವಿಯ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ. ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್ …

Read More »

ದ.ಕ. ಜಿಲ್ಲೆಯಲ್ಲಿ ಇಂದು ಯಲ್ಲೋ ಅಲರ್ಟ್…………..

ಮಂಗಳೂರು: ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶನಿವಾರ (13) ಮತ್ತು ಭಾನುವಾರ (14) ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.   ಹವಾಮಾನ ಇಲಾಖೆ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು …

Read More »

ಎರಡೂವರೆ ತಿಂಗಳ ಬಳಿಕ ಬಹುತೇಕ ದೇವಾಲಯಗಳು ಓಪನ್

ಮಂಗಳೂರು/ಉಡುಪಿ: ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ದೇವಾಲಯಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಎರಡೂವರೆ ತಿಂಗಳ ಬಳಿಕ ಬಹುತೇಕ ದೇವಾಲಯಗಳು ಇಂದು ಮುಂಜಾನೆಯಿಂದಲೇ ಓಪನ್ ಆಗಿವೆ. ಮಂಗಳೂರಿನಾದ್ಯಂತ ಇಂದು ದೇವಸ್ಥಾನಗಳು ಓಪನ್ ಆಗಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಗಣಪತಿ ದೇವಸ್ಥಾನ ಮತ್ತು ಮಂಗಳಾದೇವಿ ದೇವಸ್ಥಾನ ಓಪನ್ ಆಗಿವೆ. ಬೆಳಗ್ಗೆ 6 ಗಂಟೆಯಿಂದ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಧರ್ಮಸ್ಥಳ …

Read More »