ಹುಬ್ಬಳ್ಳಿ : ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಿಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಪುಲ್ ಡ್ರೀಲ್ ನಡೆದಿದೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಒಂದೊದೇ ಸತ್ಯವನ್ನು ಬಾಯಿ ಬಿಡುತ್ತಿದ್ದಾರೆ. ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞಚಂದ್ರಶೇಖರ ಗುರೂಜಿಅಂತ್ಯಕ್ರಿಯೆ ನಡೆದಿದೆ. ಅವರ ಕುಟುಂಬಸ್ಥರು, ಅನುಯಾಯಿಯಿಗಳು ಗುರೂಜಿಯನ್ನು ಕಳೆದು ಕೊಂಡ ನೋವಿನಿಂದ ಹೊರ ಬಂದಿಲ್ಲ. ಈ ನಡುವೆ ಪ್ರಕರಣದ ಆರೋಪಿಗಳಾದ ಮಹಾಂತೇಶ ಶಿರೂರ, ಮತ್ತು ಮಂಜುನಾಥ ಮರೆವಾಡ …
Read More »ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..
ಹುಬ್ಬಳ್ಳಿ(ಜು.07): ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..! ಇದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರು ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಚಂದ್ರಶೇಖರ ಗುರೂಜಿ ಕೊಲೆ ಬಳಿಕ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಅರೆಸ್ಟ್ ಮಾಡಿ ಕರೆದುಕೊಂಡು ಬಂದ ಮೇಲೆ ಬರೋಬ್ಬರಿ 20 ಗಂಟೆಗೂ …
Read More »ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್ ಪತ್ನಿ
ಹುಬ್ಬಳ್ಳಿ: ನಮ್ಮ ಮತ್ತು ಗುರೂಜಿ ನಡುವೆ ಒಳ್ಳೆಯ ಸಂಬಂಧ ಇತ್ತು. ನಮ್ಮ ಮನೆಯವರು ಈ ರೀತಿ ಮಾಡಿದ್ದು ತಪ್ಪು ಎಂದು ಕೊಲೆ ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಹೇಳಿಕೆ ನೀಡಿದ್ದಾರೆ. ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ಸಂಬಂಧ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ವನಜಾಕ್ಷಿ, ಗುರೂಜಿ ನಮ್ಮ ತಂದೆಯಂತೆ ಇದ್ದರು. ನನಗೆ ಬೇಸರ ಆದಾಗ ಗುರೂಜಿ ಜತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ …
Read More »ಚಂದ್ರಶೇಖರ ಗುರೂಜಿ ಕಗ್ಗೊಲೆ: ಬಾಗಲಕೋಟೆ ಮೂಲದವರಾದ್ರೂ ಮುಂಬೈನಲ್ಲೇ ಇರುತ್ತಿದ್ದ ಇವರ ಹಿನ್ನೆಲೆ ಹೀಗಿದೆ.
ಹುಬ್ಬಳ್ಳಿ: ನಗರದ ಹೋಟೆಲ್ವೊಂದರಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ದುಷ್ಕರ್ಮಿಗಳಿಬ್ಬರು ಇಂದು ಮಧ್ಯಾಹ್ನ ಹಾಡಹಗಲೇ ಭೀಕರವಾಗಿ ಕೊಲೆ ಮಾಡಿದ್ದು, ಹುಬ್ಬಳ್ಳಿ ಜನತೆ ಬೆಚ್ಚಿಬಿದ್ದಿದ್ದಾರೆ. ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ. ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ …
Read More »ನಾಳೆ ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಗುರೂಜಿ ಆತ್ಮೀಯ ಮೋಹನ ಲಿಂಬಿಕಾಯಿ ಹೇಳಿಕೆ ನೀಡಿದ್ದಾರೆ. ಹೌದು ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಹತ್ಯೆ ಆಗಿರುವ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮೋಹನ ಲಿಂಬಿಕಾಯಿ ಗೂರೂಜಿಯವರಿಗೆ ಬಹಳಷ್ಟು ಅನುಯಾಯಿಗಳು ಇದ್ದಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ಕುಟುಂಬದವರೊಂದಿಗೆ ಚರ್ಚಿಸಿದ್ದೇವೆ. ನಾಳೆ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ. ಹುಬ್ಬಳ್ಳಿಯ …
Read More »ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ
ಧಾರವಾಡ : ಇಂದಿರಮ್ಮನ ಕೆರೆ ಧಾರವಾಡ ಜಿಲ್ಲೆಯ ಬೃಹತ್ ಕೆರೆಗಳಲ್ಲಿ (Dharwad Lakes) ಒಂದಾಗಿರುವ ಕೆರೆ. ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ (Hulikere Village) ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕೆರೆಯ ತಡೆ ಗೋಡೆ ಒಡೆದಿತ್ತು. ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. …
Read More »ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ
ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ, ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿ ಉಣಕಲ್ ನಲ್ಲಿರುವ ಖಾಸಗಿ ಹೊಟೆಲ್‌ನಲ್ಲಿ ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದು ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.
Read More »ಯುವತಿ ಅಪಹರಣ ಪ್ರಕರಣದಲ್ಲಿ ಹು-ಧಾ ಪಾಲಿಕೆ ಕಾರ್ಪೊರೇಟರ್ ಕೊನೆಗೂ ಅರೆಸ್ಟ್
ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ (Love Marriage) ಯುವತಿಯನ್ನು (Girl) ಅಪಹರಿಸಿದ ಪ್ರಕರಣಕ್ಕೆ (Kidnap Case) ಸಂಬಂಧಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ (Hubballi Dharwad Corporation) ಕಾರ್ಪೋರೆಟರ್ ನನ್ನು (Corporator) ಕೊನೆಗೂ ಬಂಧಿಸಲಾಗಿದೆ. ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ನನ್ನು ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ (Gokul Road Station) ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ಯುವತಿಯ ತಂದೆ ಶಿವು ಹಿರೇಕೆರೂರ ಹಾಗೂ ತಾಯಿ ಜಯಲಕ್ಷ್ಮಿ ಎಂಬುವರನ್ನು ಕೂಡ …
Read More »ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ
ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ ನಡೆದಿದೆ. ಮೇಯರ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸಭಾಭವನದಲ್ಲಿ ಮೇಯರ್ ಭಾಷಣ ಮುಕ್ತಾಯಗೊಂಡಿದ್ದು, ಸರ್ವ ಸದಸ್ಯರು ಮೇಯರ್ ಭಾಷಣದ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಧ್ವನಿ ಎತ್ತಿದ ಸುವರ್ಣ ಕಲಕುಂಟ್ಲ ಅವರು, ಭಾಷಣ ಬೇಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತೊಣ್ಣ ಎಂದು ಸಮಸ್ಯೆ ಪ್ರಸ್ತುತ ಪಡಿಸಲು ಮುಂದಾದ …
Read More »ಧಾರವಾಡ: ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್‌ನಲ್ಲಿದ್ದ ಓರ್ವ ಸಾವು
ಧಾರವಾಡ: ಡೀಸೆಲ್ ( Diesel ) ಟ್ಯಾಂಕರ್ ( Tanker ) ಪಲ್ಟಿಯಾಗಿ ಟ್ಯಾಂಕರ್ ಹೊತ್ತಿ ಉರಿದಿರುವ ಘಟನೆ ಧಾರವಾಡ ( Dharwad ) ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ( National Highway 4 ) ರಲ್ಲಿ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್‌ನಲ್ಲಿದ್ದ ಓರ್ವ ಸಾವನ್ನಪ್ಪಿದ್ದಾನೆ. ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸೋ ಕಾರ್ಯ ನಡೆಯುತ್ತಿದೆ. ಅಪಘಾತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್ ಹೊತ್ತಿ …
Read More »
Laxmi News 24×7