Breaking News

ಹುಬ್ಬಳ್ಳಿ

ಧಾರವಾಡದಲ್ಲಿ ಶುರುವಾಯ್ತು ಹತ್ತಿ ವ್ಯಾಪಾರಿಗಳ ವಿರುದ್ಧ ರೈತರ ಹೋರಾಟ

ಧಾರವಾಡ: ಹತ್ತಿ ಬೆಳೆಗಾರರ ಜೊತೆ ವ್ಯಾಪಾರಿಗಳು ಚೆಲ್ಲಾಟವಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು ವ್ಯಾಪಾರಿಗಳು ಮಾಡಿದ್ದೇ ರೇಟು, ಆಡಿದ್ದೇ ಆಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವ್ಯಾಪಾರಿಗಳ ಚೆಲ್ಲಾಟದಿಂದ ರೈತರು ರೋಸಿ ಹೋಗಿದ್ದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಏಕಾಏಕಿ ಹತ್ತಿ ಬೆಲೆ ಕುಸಿತಗೊಂಡಿದೆ. ಆರಂಭದಲ್ಲಿ ಕ್ವಿಂಟಾಲ್ ಹತ್ತಿಗೆ 10 ಸಾವಿರದ ಮೇಲೆ ದರ ಇತ್ತು. ಆದರೆ ಇತ್ತೀಚೆಗೆ ದಿಢೀರ ವ್ಯಾಪಾರಿಗಳು ದರ ಕಡಿಮೆ ಮಾಡಿದ್ದಾರೆ. ಈಗ ಪ್ರತೀ ಕ್ವಿಂಟಾಲ್​ಗೆ 8500ರೂ. ವರೆಗೆ …

Read More »

26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟ

ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟವಾಗಿದೆ. ಜಾನಪದ ಹಾಡು ಸ್ಪರ್ಧೆಯಲ್ಲಿ ಕರ್ನಾಟಕ ಮೂರನೇ ಬಹುಮಾನ ಪಡೆದಿದೆ. ಜಾನಪದ ನೃತ್ಯ ಸ್ಪರ್ಧೆ 3ನೇ ಬಹುಮಾನ = ಕೇರಳ- ₹75ಸಾವಿರ 2ನೇ ಬಹುಮಾನ-ಗುಜರಾತ್ ₹1 ಲಕ್ಷ 1ನೇ ಬಹುಮಾನ- ಪಂಜಾಬ್‌- ₹1.5ಲಕ್ಷ ಜಾನಪದ ಹಾಡು ಸ್ಪರ್ಧೆ 3ನೇ ಬಹುಮಾನ- ಕರ್ನಾಟಕ- ₹75ಸಾವಿರ 2ನೇ ಬಹುಮಾನ – ಅಸ್ಸಾಂ- ₹1ಲಕ್ಷ 1ನೇ ಬಹುಮಾನ- ಉತ್ತರ ಪ್ರದೇಶ- ₹1.5ಲಕ್ಷ

Read More »

ದಶಕಗಳ ಜಲ ಸಂಕಟಕ್ಕೆ ಮುಕ್ತಿ

ಹುಬ್ಬಳ್ಳಿ: ‘ನಮ್ಮೂರಿನ ನೀರಿನ ಬವಣೆ ಕೊನೆಗೂ ನೀಗಿತು. ಯಾವಾಗ ಕೆರೆ ನಿರ್ಮಾಣವಾಗುತ್ತೊ, ನಿತ್ಯ ನೀರು ಬರುತ್ತೊ, ಬಿಂದಿಗೆಗಳಲ್ಲಿ ದೂರದಿಂದ ನೀರು ತರುವುದು ತಪ್ಪುತ್ತದೊ ಎಂಬ ಪ್ರಾರ್ಥನೆ ಆ ದೇವರಿಗೆ ಮುಟ್ಟಿದೆ…’ – ಅಣ್ಣಿಗೇರಿ ಪಟ್ಟಣಕ್ಕೆ ದಿನದ 24X7 ನೀರು ಪೂರೈಸುವುದಕ್ಕಾಗಿ ತಾಲ್ಲೂಕಿನ ಬಸಾಪುರದ ಬಳಿ ನಿರ್ಮಿಸಿರುವ ನೂತನ ಕೆರೆಯ ಲೋಕಾರ್ಪಣೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯರ ಮಾತುಗಳಿವು. ‘ಮೂರು ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಪಟ್ಟಣದಲ್ಲಿ, ಇತ್ತೀಚಿನ …

Read More »

ಹುಬ್ಬಳ್ಳಿ-ಧಾರವಾಡಕ್ಕೆ ಎನ್‌ಎಫ್‌ಎಸ್‌ ವಿವಿ ಮಂಜೂರು: ಪ್ರಹ್ಲಾದ ಜೋಷಿ

ಹುಬ್ಬಳ್ಳಿ: ಕರ್ನಾಟಕಕ್ಕೆ ಬಹು ಅತ್ಯಾವಶ್ಯಕ ಎನಿಸಿದ್ದ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿಶ್ವವಿದ್ಯಾಲಯದ ಕ್ಯಾಂಪಸ್‌ (National Forensic Science University) ಅನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ.   ಕೇಂದ್ರ ಗೃಹ ಇಲಾಖೆಯಿಂದ ಮಂಜೂರಾತಿ ಪ್ರತಿ ರಾಜ್ಯ ಸರಕಾರಕ್ಕೆ ಬಂದಿದ್ದು, ಒಂದು ಪ್ರತಿ ನನಗೂ ತಲುಪಿದೆ. ಕಳೆದ 2-3 ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ …

Read More »

ಸ್ವಾಮಿ ವಿವೇಕಾನಂದರ ಸ್ಫೂರ್ತಿಯಿಂದ ದೇಶ ಮುಂದಕ್ಕೆ ಕೊಂಡೊಯ್ಯಬೇಕು: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದು ತಮ್ಮ ಪ್ರಯತ್ನ ಮತ್ತು ಜವಾಬ್ದಾರಿಗಳ ಮೂಲಕ ಅಮೃತ ಕಾಲದ ಸಮಯದಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ಯುವುದು ಭಾರತೀಯ ಯುವಕರ ಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.   26 ನೇ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ ನಡೆಸಿ ಮಾತನಾಡಿ, 2023 ರ ರಾಷ್ಟ್ರೀಯ ಯುವ ದಿನದ ಈ ದಿನ ಬಹಳ ವಿಶೇಷವಾಗಿದೆ. ಒಂದೆಡೆ ಈ ಶಕ್ತಿ ಹಬ್ಬ ಮತ್ತೊಂದೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ. ಏಳಿ …

Read More »

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ಇಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದಲ್ಲಿ ವರದಿಗಳಾಗಿದ್ದು, ಈ ಕುರಿತು ಮಾಹಿತಿ ಇಲ್ಲ. ಆದರೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಕ್ತ ಕ್ರಮ ತೆಗೆದುಕೊಳ್ಳತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುದರು.   ನಗರದ ರೈಲ್ವೆ ನಿಲ್ದಾಣದ ಬಳಿಯಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೂ ಸಹ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ ರಂಗು; ಪ್ರಧಾನಿ ಆಗಮನಕ್ಕೆ ವಾಣಿಜ್ಯನಗರಿ ಪುಳಕ

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆ, ಕಲೆ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಲೋಕದ ಅನಾವರಣ, ವಿವಿಧತೆಯಲ್ಲಿ ಏಕತೆ ಭಾವದ ಯುವಶಕ್ತಿ ಸಂಗಮ, ದೇಶದ ಸಾಂಸ್ಕೃತಿಕ ರಾಯಭಾರಿಗಳಂತಿರುವ ಯುವ ಪ್ರತಿಭೆಗಳ ದಿಗ್ದರ್ಶನಕ್ಕೆ ವೇದಿಕೆಯಾಗಲು ಹಾಗೂ ಪ್ರೀತಿಯ ಆತಿಥ್ಯ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜಾಗಿದೆ.   ರಾಷ್ಟ್ರೀಯ ಯುವಜನೋತ್ಸವ ಸಂಭ್ರಮ ಒಂದು ಕಡೆಯಾದರೆ, ಉತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆ ಮಹಾನಗರವನ್ನು ಪುಳಕಿತಗೊಳ್ಳುವಂತೆ ಮಾಡಿದೆ. ದೇಶದ ಯುವ ಸಾಂಸ್ಕೃತಿಕ ಜಗತ್ತು ಹುಬ್ಬಳ್ಳಿ-ಧಾರವಾಡದಲ್ಲಿ …

Read More »

ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ಬಜೆಟ್‌ನಲ್ಲೇ ಘೋಷಿಸಲಾಗುವುದು.

ಹುಬ್ಬಳ್ಳಿ: ಫೆ. 17ರಂದು ರಾಜ್ಯದ 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡುತ್ತೇನೆ. ಉತ್ತರ ಕರ್ನಾಟಕಕ್ಕೆ ಕೊಡುಗೆ ಏನೆಂಬುದನ್ನು ಕಾಯ್ದು ನೋಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ಆಯವ್ಯಯ ಮಂಡನೆಗೆ ಸಿದ್ಧತೆ ನಡೆದಿದೆ.   ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆಯನ್ನು ಬಜೆಟ್‌ನಲ್ಲೇ ಘೋಷಿಸಲಾಗುವುದು. ಜ.16ರಂದು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದೇನೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವುದಿಲ್ಲ ಎಂದರು

Read More »

ಫೆ.17 ರಂದು ರಾಜ್ಯ ಬಜೆಟ್ ಮಂಡನೆ : ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ

ಹುಬ್ಬಳ್ಳಿ : ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಂದಿನ ತಿಂಗಳ 3 ನೇ ವಾರ ಬಜೆಟ್ ಮಂಡಿಸಲಾಗುವುದು. ಈಗಾಗಲೇ ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಏಪ್ರಿಲ್,ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ …

Read More »

ಫೆ. 17ರಂದು ರಾಜ್ಯ ಬಜೆಟ್‌: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಫೆ. 17ರಂದು ರಾಜ್ಯದ 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡುತ್ತೇನೆ. ಉತ್ತರ ಕರ್ನಾಟಕಕ್ಕೆ ಕೊಡುಗೆ ಏನೆಂಬುದನ್ನು ಕಾಯ್ದು ನೋಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ಆಯವ್ಯಯ ಮಂಡನೆಗೆ ಸಿದ್ಧತೆ ನಡೆದಿದೆ.   ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆಯನ್ನು ಬಜೆಟ್‌ನಲ್ಲೇ ಘೋಷಿಸಲಾಗುವುದು. ಜ.16ರಂದು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದೇನೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವುದಿಲ್ಲ ಎಂದರು.

Read More »