ಹುಬ್ಬಳ್ಳಿ: ಬಹುನಿರೀಕ್ಷೆಯ ಧಾರವಾಡ – ಬೆಂಗಳೂರು ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದಾರೆ. “ರೈಲು ಸಂಚಾರ ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ರೈಲ್ವೆ …
Read More »ಜಗದೀಶ ಶೆಟ್ಟರ್ ಜೊತೆ ಕಾಂಗ್ರೆಸ್ ಪಕ್ಷ ಇರಲಿದೆ
ಹುಬ್ಬಳ್ಳಿ: ‘ಕಷ್ಟ ಕಾಲದಲ್ಲಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಜೊತೆಯಿದ್ದು, ರಾಜ್ಯದಲ್ಲಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಇರಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಪ್ರಕಲ್ಪ ನಿವಾಸದಲ್ಲಿ ಬುಧವಾರ ಶೆಟ್ಟರ್ ಜೊತೆ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಶೆಟ್ಟರ್, ಸವದಿ, ಪುಟ್ಟಣ್ಣ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ, ಬಾಬುರಾವ್ ಚಿಂಚನಸೂರು ಅವರು ಪಕ್ಷ ಸೇರ್ಪಡೆಯಾಗಿದ್ದರಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡು …
Read More »ಆರ್‌ಟಿಇ: 235 ಮಕ್ಕಳಿಗಷ್ಟೇ ಪ್ರವೇಶ
ಹುಬ್ಬಳ್ಳಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 732 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದರೂ, 235 ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. 1,456 ವಿದ್ಯಾರ್ಥಿಗಳು, ತಾವು ವಾಸಿಸುತ್ತಿರುವ ಜಾಗದಿಂದ ಒಂದು ಕಿ.ಮೀ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಆರ್‌ಟಿಇ ಅಡಿ ಅರ್ಜಿ ಸಲ್ಲಿಸಿದ್ದರು. ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 406 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಪ್ರವೇಶ ದಿನಾಂಕ …
Read More »ಕಾಂಗ್ರೆಸ್ ಗ್ಯಾರಂಟಿ | ಶೀಘ್ರದಲ್ಲೇ ಒಳ್ಳೆಯ ಸುದ್ದಿ: ಸಂತೋಷ್ ಲಾಡ್
ಹುಬ್ಬಳ್ಳಿ: ‘ಜೂನ್ 1ರಂದು ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶೀಘ್ರದಲ್ಲೇ ರಾಜ್ಯದ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಸಚಿವರಾದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಮಂಗಳವಾರ ಭೇಟಿ ನೀಡಿದ ಅವರು, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕಳೆದ ಬಾರಿ ಕಾರ್ಮಿಕ ಸಚಿವ ಸ್ಥಾನ ನೀಡಿದ್ದಾಗ ನನಗೆ ಕಡಿಮೆ …
Read More »ಕೆರೆಯಲ್ಲಿ ಶವ ಪತ್ತೆ ಹಿನ್ನೆಲೆ: ನೀರಿಗಾಗಿ ಪರದಾಡುವ ಸಂದರ್ಭದಲ್ಲೂ ಕೆರೆ ಖಾಲಿ ಮಾಡಿಸಿದ ಗ್ರಾಮಸ್ಥರು
ಹುಬ್ಬಳ್ಳಿ: ಕೆರೆಯಲ್ಲಿಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಕಾರಣ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರು ಕೆರೆ ನೀರು ಕುಡಿಯಲು ಜನರು ಹಿಂದೇಟು ಹಾಕಿದ್ದರು. ಹೀಗಾಗಿ ಗ್ರಾಮಸ್ಥರ ಪಟ್ಟಿಗೆ ಮಣಿದ ಜಿಲ್ಲಾಡಳಿತ ಕೆರೆಯ ನೀರನ್ನು ಪಂಪಸೆಟ್ಗಳ ಮುಖಾಂತರ ಕೆರೆ ನೀರನ್ನು ಹೊರ ಹಾಕಲಾಗುತ್ತಿದೆ. ಆದರೆ, ಈಗ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಎರಡು ಕೊಡ ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯಲ್ಲಿ ಪತ್ತೆಯಾದ ಮೃತದೇಹ ಮೂರ್‍ನಾಲ್ಕು ದಿನಗಳ ಕಾಲ ಕೆರೆಯಲಿದ್ದು, …
Read More »ಧಾರವಾಡದಲ್ಲಿ ರಾತ್ರೋರಾತ್ರಿ ಡಬಲ್ ಮರ್ಡರ್: ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ
ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ನಗರದ ಕಮಲಾಪುರ ಹೊರವಲಯದಲ್ಲಿ ಕಳೆದ ರಾತ್ರಿ ನಡೆದಿದೆ. ಮಹಮ್ಮದ್ ಕುಡಚಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಇವರ ಕುಡಚಿ ಮನೆ ಎದುರು ಘಟನೆ ನಡೆದಿದೆ. ರಾತ್ರಿ 10 ರಿಂದ 11 ಗಂಟೆಯ ಸುಮಾರಿಗೆ ಮನೆ ಎದುರು ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಸ್ಥಳಕ್ಕೆ ಧಾವಿಸಿ ಬಂದು ಏಕಾಏಕಿ ದಾಳಿ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. …
Read More »ಪಾಲಿಕೆ ಸ್ಮಾರ್ಟ್ ಸಿಟಿ ನಡುವೆ ಹಗ್ಗಜಗ್ಗಾಟ: ಕಾಮಗಾರಿ ಮುಗಿದರೂ ಇನ್ನೂ ಹಸ್ತಾಂತರವಾಗದೇ ಉಳಿದ ಪ್ರಾಜೆಕ್ಟ್ಗಳು
ಹುಬ್ಬಳ್ಳಿ: ಅದು ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಹತ್ವದ ಯೋಜನೆ. ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆ ಕಾಮಗಾರಿ ವಿಳಂಬ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಪೂರ್ಣಗೊಂಡಿದ್ದರೂ ಪಾಲಿಕೆಗೆ ಹಸ್ತಾಂತರ ಮಾಡಿಲ್ಲ. ಇದು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. 2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಹಸ್ತಾಂತರ ವಿಚಾರ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಮಧ್ಯೆ ಮುಸುಕಿನ …
Read More »ಬಿಜೆಪಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ,: ಜೋಶಿ
ಹುಬ್ಬಳ್ಳಿ: ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ. ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿದ್ದಾರೆ. ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರಿದರು. ಇಂದು ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಒಂದನೇ ಸಂಪುಟದಲ್ಲಿ ಭರವಸೆ ಈಡೇರಿಸಲಾಗುವುದು ಎಂದಿದ್ದರು. ಆದರೆ ಈಗ ಏನು ಹೇಳುತ್ತಿದ್ದೀರಿ?. ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ. ಇದೇನಾ ಜನರಿಗೆ ನೀಡಿದ ಭರವಸೆ ಈಡೇರಿಸುವುದು?. ಇನ್ ಪ್ರಿನ್ಸಿಪಲ್ ಚುನಾವಣಾ …
Read More »ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು: ಯಾರಿಗೆ ಸಿಗಲಿದೆ ಸಚಿವ ಸ್ಥಾನದ ಪಟ್ಟ?
ಹುಬ್ಬಳ್ಳಿ : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಧಾರವಾಡ ಜಿಲ್ಲೆ ಕಾಂಗ್ರೆಸ್ಸಿಗೆ ಬಹುದೊಡ್ಡ ಗೆಲುವಿನ ಕೊಡುಗೆ ಕೊಟ್ಟಿದೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರದಲ್ಲಿ ಕೈ ಬಾವುಟ ಹಾರಿದ್ದು, ಇದೀಗ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಎಂಬ ಕುತೂಹಲ ಮೂಡಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹು-ಧಾ ಪೂರ್ವ, ಧಾರವಾಡ ಗ್ರಾಮೀಣ, ಕಲಘಟಗಿ ಹಾಗೂ ನವಲಗುಂದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕುಂದಗೋಳ, ಹು-ಧಾ ಪಶ್ಚಿಮ ಹಾಗೂ ಸೆಂಟ್ರಲ್ ಕ್ಷೇತ್ರದಲ್ಲಿ …
Read More »ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಡಿಸಿಎಂ ಸ್ಥಾನ ನೀಡಬೇಕು: ಮಲ್ಲಿಕಾರ್ಜುನ ಶ್ರೀಗಳ ಆಗ್ರಹ
ಧಾರವಾಡ: ಜಿಲ್ಲೆಯಿಂದ ಹೊರಗಿದ್ದುಕೊಂಡು ಐತಿಹಾಸಿಕ ಜಯ ಸಾಧಿಸಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಒತ್ತಾಯಿಸಿದರು. ಮುರುಘಾ ಮಠದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ನಾಯಕನಾಗಿರುವ ವಿನಯ್ ಕುಲಕರ್ಣಿ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟು ಗೌರವ ನೀಡಬೇಕು ಎಂದು ಆಗ್ರಹಿಸಿದರು. ಇದು ನಮ್ಮ ಸ್ವಂತದ ವಿಚಾರ, ಅವರು ಡಿಸಿಎಂ …
Read More »