ಹುಬ್ಬಳ್ಳಿ: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಇನ್ನಿಲ್ಲದಂತೆ ಹರಡುತ್ತಿದೆ. ಈ ಮಧ್ಯೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸಹ ಕೊರೊನಾ ಬೆನ್ನು ಬಿಡದೇ ಕಾಡ್ತಾ ಇದೆ. ಹೀಗಾಗಿ ನೂರಾರು ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡುತ್ತಿರುವ ಪರಿಣಾಮ ವೈದ್ಯರು ಸಹ ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡುವಂತಾಗಿದೆ. ರಾಜ್ಯದಲ್ಲಿ ಕಿಲ್ಲರ್ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲೂ ಸಹ …
Read More »ಕೆಐಎಡಿಬಿ ಕಾರ್ಯದರ್ಶಿಯ ಆಸ್ತಿ ನೋಡಿ ದಂಗಾದ ಎಸಿಬಿ
ಹುಬ್ಬಳ್ಳಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕಾರ್ಯದರ್ಶಿ ಹರೀಶ್ ಹಳಪೇಟ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಧಾರವಾಡದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಕಾರ್ಯದರ್ಶಿಯ ಅಪಾರ ಪ್ರಮಾಣದ ಆಸ್ತಿಯನ್ನ ಪತ್ತೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಐಎಡಿಬಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಹಳಪೇಟ ಮನೆಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಪತ್ತೆಯಾದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪಟ್ಟಿಯನ್ನ …
Read More »ಬಿಜೆಪಿ ನಾಯಕರು ಕಚ್ಚಾಡಿಕೊಂಡು ಸರ್ಕಾರ ಬಿದ್ರೆ, ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ: ಸಿದ್ದರಾಮಯ್ಯ
ಹುಬ್ಬಳ್ಳಿ: ಬಿಜೆಪಿ ನಾಯಕರು ಕಚ್ಚಾಡಿಕೊಂಡು ಸರ್ಕಾರ ಬಿದ್ರೆ, ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯ ಅಭ್ಯರ್ಥಿಯನ್ನು ಒಂದು ವರ್ಷದ ಮೊದಲ ಆಯ್ಕೆ ಮಾಡಿದ್ದೇವೆ. ಈ ಮೊದಲು ಪದವೀಧರರ ಚುನಾವಣೆಯನ್ನ ನಾವು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಈ ಬಾರಿ ಚುನಾವಣೆಗಳನ್ನ ಕಾಂಗ್ರೆಸ್ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು. ಕರ್ನಾಟಕದ ಎರಡು ಪದವೀಧರರ ಕ್ಷೇತ್ರಕ್ಕೆ ಚುನಾವಣೆ …
Read More »ಕಾಂಗ್ರೆಸ್ ಬಿಟ್ಟು ಬಿ ಜೆ ಪಿ ಗೆ ಸೇರಿದ ಮಾಜಿ ಸಚಿವರು
ಹುಬ್ಬಳ್ಳಿ : ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ್ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಬಿಜೆಪಿಗೆ ಯಾವುದೇ ರಾಜಕೀಯ ಅಸ್ಪೃಶ್ಯತೆ ಇಲ್ಲ, ಪಕ್ಷಕ್ಕೆ ಹೊರೆಯಾಗದಿದ್ದರೆ ಹಾಗೂ ಸಿದ್ಧಾಂತ ಒಪ್ಪಿದರೆ ಯಾರನ್ನಾದರೂ ಸೇರಿಸಿಕೊಳ್ಳುತ್ತೇವೆ ಎಂದರು. 3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ! … ಸುದ್ದಿಗೋಷ್ಠಿಯಲ್ಲಿ ಮಾತನಾಡಿ, …
Read More »ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ
ಹುಬ್ಬಳ್ಳಿ : ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ. ಹುಬ್ಬಳ್ಳಿಯ ನವನಗರದ ನಿವಾಸಿ ಗುತ್ತಿಗೆದಾರ ಪ್ರಮೋದ್ ಕುಲಕರ್ಣಿ ಮೋಸ ಹೋಗಿದ್ದು ಈಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಧು ಹುಡುಕಾಟದಲ್ಲಿದ್ದ ಪ್ರಮೋದ್‌ಗೆ ‘ಸಂಗಮ’ ಹೆಸರಿನ ಮ್ಯಾಟ್ರಿಮೋನಿಯಲ್ಲಿ ಲಂಡನ್ ಮೂಲದ ಯುವತಿ ಅನ್ನಾ ಮೊಹಮ್ಮದ್ ಪರಿಚಯವಾಗಿದ್ದಾಳೆ. ಮೊದ ಮೊದಲು ವಾಟ್ಸಪ್‌ನಲ್ಲಿ ಮೆಸೇಜ್ ಮಾಡುತ್ತಿದ್ದ ಯುವತಿ ಬಳಿಕ ಪ್ರತಿನಿತ್ಯ ಚಾಟ್ …
Read More »ಪದವೀಧರ ಕ್ಷೇತ್ರಗಳಿಗೆ ಚುನಾವಣೆ: 118 ಬಂದೂಕು, ಪಿಸ್ತೂಲ್ ಪೊಲೀಸರ ವಶಕ್ಕೆ
ಹುಬ್ಬಳ್ಳಿ: ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಹಿನ್ನೆಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ವ್ಯಾಪ್ತಿಯಲ್ಲಿ ಲೈಸನ್ಸ್ ಹೊಂದಿರುವ ಸಾರ್ವಜನಿಕರ ಬಂದೂಕು ಮತ್ತು ಪಿಸ್ತೂಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 118 ಬಂದೂಕು ಮತ್ತು ಪಿಸ್ತೂಲ್ಗಳನ್ನು ಮಾಲೀಕರು ಪೊಲೀಸರ ವಶಕ್ಕೆ ನೀಡಿದ್ದಾರೆ. ಚುನಾವಣೆ ಫಲುತಾಂಶದ ಬಳಿಕ ಮಾಲೀಕರುಗಳಿಗೆ ಅದನ್ನು ಮರಳಿ ಹಸ್ತಾಂತರ ಮಾಡಲಾಗುತ್ತದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ …
Read More »ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಪೊಲೀಸರಿಂದ ಜಾಗೃತಿ
ಹುಬ್ಬಳ್ಳಿ: ಮಾಸ್ಕ್ ಧರಿಸದೆ ಕೊರೊನಾ ತಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಲು ಸ್ವತಃ ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಪಿಎಸ್‍ಐ ಶರಣ್ ದೇಸಾಯಿ ಹಾಗೂ ಸಿಬ್ಬಂದಿ ಬೆಳಗ್ಗೆ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರುಕೋವಿಡ್-19 ಕುರಿತು ಅರಿವು ಕಾರ್ಯಕ್ರಮ ಏರ್ಪಡಿಸಿ, ಮಾಸ್ಕ್ ವಿತರಿಸುವ ಮೂಲಕ ಶರಣ್ ದೇಸಾಯಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ದಂಡ ಹಾಕುವುದು ನಿಮ್ಮನ್ನು ಎಚ್ಚರಿಸಲು. ಇದರ ಹೊರತು ಬೇರೆ ಉದ್ದೇಶವಿಲ್ಲ. ನಿಮ್ಮ ಆರೋಗ್ಯದ …
Read More »ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ
ಧಾರವಾಡ: ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆ ಬಾಗಲಕೋಟೆಯ ಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ. ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣ ನಡೆದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡುವ ವೇಳೆ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ ಅವರು, ಪೊಲೀಸರು ಬಂಧಿಸೋದು, ಜಾಮೀನು ಕೊಡವುದು ಆಗಬಾರದು. ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವ ಕಾನೂನು ಬರಬೇಕು ಎಂದರು ಈ ರೀತಿ ಮಾಡಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ ಎಂದ ಅವರು, ಹೆಣ್ಣು …
Read More »ವಿವಾದದಿಂದಲೇ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆ,ಹೃದಯಾಘಾತದಿಂದ ವೃದ್ಧ ಸಾವು
ಹುಬ್ಬಳ್ಳಿ: ವಿವಾದದಿಂದಲೇ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಇದೀಗ ಕಿಮ್ಸ್ ಆರೋಗ್ಯ ಅಧಿಕಾರಿಗಳು ಮಾಡಿದ ಕೆಲಸದಿಂದ ಮನೆಯ ಹಿರಿಯನ ಮುಖವನ್ನು ನೋಡದೇ ಅಂತ್ಯಕ್ರಿಯೆ ಮಾಡುವಂತ ಪರಿಸ್ಥಿತಿ ತಂದಿಟ್ಟಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಳ್ಳ ಗ್ರಾಮದ 72 ವರ್ಷದ ವೃದ್ಧ ಬಸಪ್ಪ ಹುಬ್ಬಳ್ಳಿ ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಅವರನ್ನು ಕೋವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಕೋವಿಡ್ ಇದೆ …
Read More »ಕಾರ್ಯಕರ್ತರನ್ನ ಕೇಳದೇ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.ಸ್ಪಷ್ಟನೆ ನೀಡಿದ ವಿನಯ್ ಕುಲಕರ್ಣಿ
ಧಾರವಾಡ: ಬಿಜೆಪಿ ಸೇರ್ಪಡೆ ಸುದ್ದಿಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ, ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿಯಾಗಿಲ್ಲ. ಬಿಜೆಪಿ ಸೇರುವ ಯಾವುದೇ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಉಹಾಪೋಹ. ನಾನು ಬೆಳೆದ ಬಂದ ದಾರಿಯೇ ಬೇರೆ ಎಂದು ಹೇಳಿದರು. ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದು, ಹೀಗಾಗಿ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ …
Read More »