Breaking News

ಸಿನೆಮಾ

ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಡಿಕೇರಿ: ಕೊಡಗಿನ ಬೆಡಗಿ, ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. 3 ವಾಹನಗಳಲ್ಲಿ ಬಂದ 10 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ರಶ್ಮಿಕಾ ಮಂದಣ್ಣ 2016ರಲ್ಲಿ ಕನ್ನಡದ ’ಕಿರಿಕ್ ಪಾರ್ಟಿ’ ಚಿತ್ರದ …

Read More »

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟಾಣಿ ಅಭಿಮಾನಿಯೊಬ್ಬರ ಆಸೆಯನ್ನು ನಟ ದರ್ಶನ್ ಈಡೇರಿಸಿದ್ದಾರೆ.

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟಾಣಿ ಅಭಿಮಾನಿಯೊಬ್ಬರ ಆಸೆಯನ್ನು ನಟ ದರ್ಶನ್ ಈಡೇರಿಸಿದ್ದಾರೆ. ಪುಟಾಣಿಯ ಹೆಸರು ರತನ್​. ಚಿತ್ರನಟ ದರ್ಶನ್ ಅವರನ್ನು ನೋಡಬೇಕು ಎಂಬುದು ರತನ್ ಆಸೆಯಾಗಿತ್ತು. ಇದನ್ನು ಅರಿತ ದರ್ಶನ್, ಆ ಪುಟಾಣಿಯನ್ನು ಮನೆಗೆ ಕರೆಯಿಸಿಕೊಂಡು ಮಾತನಾಡಿಸಿದ್ದಾರೆ. ಆತನ ಜತೆಗೆ ಫೊಟೋ ತೆಗೆಯಿಸಿಕೊಂಡು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಕಳುಹಿಸಿದ್ದಾರೆ. ಈ ಫೋಟೋಗಳನ್ನು ಅವರು ಡಿ ಕಂಪನಿ ಆಫೀಸಿಷಿಯಲ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ

Read More »

ರಾಬರ್ಟ್‘ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ’ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದೆ. ಸಂಕ್ರಾಂತಿ ಹಬ್ಬದಂದು ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಈ ನಡುವೆ ರಾಬರ್ಟ್ ಚಿತ್ರದಲ್ಲಿ ದರ್ಶನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಅಭಿಮಾನಿಗಳ ಕಾತರವನ್ನು ಇಮ್ಮಡಿಗೊಳಿಸಿದೆ. ಈಗಾಗಲೇ ರಾಬರ್ಟ್ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇಲ್ಲಿಯವರೆಗೆ ‘ರಾಬರ್ಟ್‘ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ …

Read More »

ನಮ್ಮ ಸಮಾಜದ ಇನ್ನೊಂದು ಆ್ಯಂಗಲ್ ಗೆ ಕನ್ನಡಿ ಹಿಡಿಯುತ್ತದೆ.. ಎಲ್ರಿಗೂ ಗೊತ್ತಿದೆ ಇದು ಆಸಿಡ್ ದಾಳಿಗೊಳಗಾದ ಹೆಣ್ಣೊಬ್ಬಳ ಕತೆ ಅಂ

ಹೃದಯವಿದ್ರಾವಕ ಟ್ರಾಜಿಡಿ ಡ್ರಾಮ ಸಿನೆಮಾ ಅಲ್ಲ ಅದು.. ಒಂದು ಹೆಣ್ಣಿನ ಬದುಕಿನ ದುರಂತವಿದೆ, ಹೋರಾಟವಿದೆ, ಲವಲವಿಕೆ ಇದೆ, ನಗುವಿದೆ, ಭಾವುಕರನ್ನಾಗಿಸುತ್ತದೆ, ನಮ್ಮ ಸಮಾಜದ ಇನ್ನೊಂದು ಆ್ಯಂಗಲ್ ಗೆ ಕನ್ನಡಿ ಹಿಡಿಯುತ್ತದೆ.. ಎಲ್ರಿಗೂ ಗೊತ್ತಿದೆ ಇದು ಆಸಿಡ್ ದಾಳಿಗೊಳಗಾದ ಹೆಣ್ಣೊಬ್ಬಳ ಕತೆ ಅಂತ. ಆ ಹೆಣ್ಣು ಸಹಜವಾಗಿ ಬದುಕಲು ಹೋರಾಡುವ ಕತೆ, ಸಮಾಜದೊಳಗೆ ತನ್ನ ಅಸ್ಥಿತ್ವವನ್ನು ಗಟ್ಟಿ ಮಾಡ್ಕೊಂಡು ಬದುಕುವ ಕತೆ. ನಮ್ಮ ಸುತ್ತಮುತ್ತಲಿನ ಸಮಾಜದಲ್ಲೇ ಆ್ಯಸಿಡ್ ದಾಳಿಗೆ ತುತ್ತಾಗಿ ಅಥವ …

Read More »

ಹುಟ್ಟು ಹಬ್ಬದ ಹಿನ್ನಲ್ಲೆಯಲ್ಲಿಗಾನ ಗಂಧರ್ವ ಕೆ.ಜೆ ಯೇಸುದಾಸ್ ಮೂಕಾಂಬಿಕಾ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ

ಗಾನ ಗಂಧರ್ವ ಕೆ.ಜೆ ಯೇಸುದಾಸ್ ಅವರು ತಮ್ಮ ಹುಟ್ಟು ಹಬ್ಬದ ಹಿನ್ನಲ್ಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ 80ನೇ ವರ್ಷದ ಹುಟ್ಟುಹಬ್ಬವನ್ನು ಯೇಸುದಾಸ್ ಅವರು ಧಾರ್ಮಿಕವಾಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಯೇಸುದಾಸ್ ಅವರು ತನ್ನ ಹುಟ್ಟುಹಬ್ಬದ ದಿನದಂದು ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಆಗಮಿಸುತ್ತಾರೆ. ಅಂತಯೇ ಈ ವರ್ಷ ಕೂಡ ತಾಯಿ ಮೂಕಾಂಬಿಕೆಯ ದರ್ಶನ ಮಾಡಿದ ಅವರು, ಕುಟುಂಬ ಸಮೇತರಾಗಿ ಚಂಡಿಕಾ ಹೋಮ ಹಾಗೂ ವಿಶೇಷ …

Read More »

ರಾತ್ರಿ ಕಿಚ್ಚನ ಮನೆಗೆ ಬಂದು BMW M5 ಕಾರ್ ಉಡುಗೊರೆ ಕೊಟ್ಟ ಸಲ್ಮಾನ್ ಖಾನ್‌.‌.. ಕಾರ್ ಬೆಲೆ ಎಷ್ಟು ಕೋಟಿ ಗೊತ್ತಾ?

ರಾತ್ರೋ ರಾತ್ರಿ ಕಿಚ್ಚನ ಮನೆಗೆ ಬಂದು BMW M5 ಕಾರ್ ಉಡುಗೊರೆ ಕೊಟ್ಟ ಸಲ್ಮಾನ್ ಖಾನ್‌.‌.. ಕಾರ್ ಬೆಲೆ ಎಷ್ಟು ಕೋಟಿ ಗೊತ್ತಾ? ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲದೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಅವರಿಗೂ ಬಿ ಟೌನ್ ನಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.. ಈ ಸಿನಿಮಾದ ಮೂಲಕ ಕಿಚ್ಚ ಹಾಗೂ ಸಲ್ಮಾನ್ ಖಾನ್ ಬಹಳ …

Read More »

ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರೀಕ್ಷೆಯಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ಕಾತರದಿಂದ ಕಾಯುತ್ತ, ನಿರೀಕ್ಷೆಯಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಯಶ್ ಹುಟ್ಟುಹಬ್ಬದ ದಿನದಂದು ಟೀಸರ್ ಬದಲು ಚಿತ್ರದ ಎರಡನೇ ಫೋಸ್ಟರ್ ಬಿಡಿಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಹೀಗಾಗಿ ಈ ದನದಂದು ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಗಿಫ್ಟ್ ನೀಡಲಿದೆ ಎಂಬ ಸುದ್ದಿಯಾಗಿತ್ತು. ಆದರೆ …

Read More »

ಬೆಳಗಾವಿ ಎಪಿಎಂಸಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಸಿಎಂ ಪಾಲಿಟಿಕ್ಸ ಸಕ್ರೇಟರಿ ಎಂಟ್ರಿ….!!!

ಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು ಬೆಳಗಾವಿ- ಇಂದು ಬೆಳಿಗ್ಗೆಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು …

Read More »

ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ

ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯೆಕ್ತಿ 30 ರಿಂದ 35 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಅಂದಾಜಿಸಲಾಗಿದ್ದು ರೇಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಸಮೀಪದ ಮಜಗಾವಿ ಬಳಿ ಅಪರಿಚಿತ ವ್ಯೆಕ್ತಯೊಬ್ಬ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ …

Read More »

ಇಂದು ರಮೇಶ್ ಜಾರಕಿಹೊಳಿ,ಮಹೇಶ್ ಕುಮಟೊಳ್ಳಿ,ಶ್ರೀಮಂತ ಪಾಟೀಲರಿಂದ ಪ್ರಮಾಣ ವಚನ

ಬ ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು ಭಾನುವಾರ ನಡೆಯಲಿದೆ. ಬ ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು ಭಾನುವಾರ ನಡೆಯಲಿದೆ. ಬೆಳಗಾವಿ ಜಿಲ್ಲೆಯ ರಮೇಶ್ ಜಾರಕಿಹೊಳಿ ಮಹೇಶ್ ಕುಮಟೊಳ್ಳಿ ,ಶ್ರೀಮಂತ ಪಾಟೀಲ ಸೇರಿದಂತೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರುವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ …

Read More »