Breaking News

ರಾಷ್ಟ್ರೀಯ

ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ: H.D.K.

ಬೆಂಗಳೂರು, ಮೇ 28: ಜಿಂದಾಲ್‌ಗೆ ಭೂಮಿ ಮಾರಾಟ ಹಿಂದಕ್ಕೆ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಡಿದ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಎಚ್‌ಡಿಕೆ, “”ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ” ಎಂದಿದ್ದಾರೆ. ರಾಜಕೀಯ …

Read More »

ಗ್ರಾಮಸ್ಥರೊಂದಿಗೆ ವೈಮನಸ್ಯ; ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

ರಾಂಚಿ : ಮೃತಪಟ್ಟ ಮಹಿಳೆಯ ಶವವನ್ನು ಹೊರಲು ಪುರುಷರು ನಿರಾಕರಿಸಿದ ಕಾರಣಕ್ಕೆ ಮಹಿಳೆಯರೇ ಶವಸಂಸ್ಕಾರ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗ್ರಾಮ ಒಂದರಲ್ಲೇ ನಡೆದಿದೆ. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಖಂಡ್ವಾ ಗ್ರಾಮದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಮೃತಪಟ್ಟ ಮಹಿಳೆಯ ಶವ ಹೊರಲು ಪುರುಷರು ಮುಂದಾಗದ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳೇ ಶವಸಂಸ್ಕಾರ ಮಾಡಿದ್ದಾರೆ. ಮೃತರಾಗಿರುವ ಮಹಿಳೆ ಕುಂತೀದೇವಿ ನಾಲ್ಕು ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು . ಆದ್ದರಿಂದ ಅವರನ್ನು ಗ್ರಾಮದ ಮುಖಂಡರು ತಮ್ಮ …

Read More »

ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯ…

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯರಾಗಿದ್ದಾರೆ. ಶರಣಮ್ಮನವರಿಗೆ ಸುಮಾರು 105 ವರ್ಷ ವಯಸ್ಸಾಗಿತ್ತು. ಹೀಗಾಗಿ ವಯೋಸಹಜ ಖಾಯಿಲೆಯಿಂದ ಶಿವಾನಂದ ಮಠದ ಶರಣಮ್ಮನವರು ಶುಕ್ರವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಕಳೆದ 65 ವರ್ಷಗಳ ಹಿಂದೆಯೇ ಸಂಸಾರ ತ್ಯಜಿಸಿ, ಗದಗ ಶಿವಾನಂದ ಮಠದ ಜಗದ್ಗುರುಗಳಿಂದ ಧೀಕ್ಷೆ ಪಡೆದಿದ್ದ ಅಮ್ಮನವರು, ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಇಚ್ಚಂಗಿ …

Read More »

ಶಾರುಖ್ ಖಾನ್ ಮಗಳ ಪೂಲ್ ಪಾರ್ಟಿ ಚಿತ್ರಗಳು ವೈರಲ್

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾಗಳಲ್ಲಿ ನಟಿಸದಿದ್ದರೂ ಬಾಲಿವುಡ್‌ನ ಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸುಹಾನಾಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರಾಗಿದ್ದಾರೆ ಸುಹಾನಾ. ಇವರ ಒಂದೊಂದು ಪೋಸ್ಟ್‌ಗಳು ಲಕ್ಷಾಂತರ ವೀವ್ಸ್ ಪಡೆಯುತ್ತವೆ. ಗ್ಲಾಮರಸ್‌ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ಸುಹಾನಾ ಚಿತ್ರಗಳು ವೈರಲ್ ಆಗುವುದು ಸಾಮಾನ್ಯ. ಅಮೆರಿಕದಲ್ಲಿ ನೆಲೆಸಿರುವ ಸುಹಾನಾ ಇತ್ತೀಚೆಗಷ್ಟೆ ತಮ್ಮ ಗೆಳತಿಯರೊಂದಿಗೆ ಪಾರ್ಟಿ ಮಾಡಿದ್ದು ಆ ಚಿತ್ರಗಳು ಸಖತ್ ವೈರಲ್ ಆಗಿವೆ. ಪೂಲ್ ಪಾರ್ಟಿ ಮಾಡಿರುವ …

Read More »

ಕರೆನ್ಸಿ ಮೌಲ್ಯ, ಪ್ರಮಾಣ ಹೆಚ್ಚಳ

ಹೊಸದಿಲ್ಲಿ: ದೇಶದಲ್ಲಿ ಕರೆನ್ಸಿಯ ಮೌಲ್ಯ ಮತ್ತು ಪ್ರಮಾಣ 2020-21ನೇ ಸಾಲಿನಲ್ಲಿ ಕ್ರಮವಾಗಿ ಶೇ.16.8 ಹಾಗೂ ಶೇ.7.2ಕ್ಕೆ ಏರಿಕೆಯಾಗಿದೆ. 500 ರೂ., 2 ಸಾವಿರ ರೂ. ನೋಟುಗಳ ಮೌಲ್ಯ ಜತೆ ಸೇರಿ ಶೇ.85.7 ಆಗಿದೆ. 2020ರ ಮಾ.31ರಂದು ಅದರ ಪ್ರಮಾಣ ಶೇ.83.4ರಷ್ಟು ಆಗಿತ್ತು. ಗುರುವಾರ ಬಿಡುಗಡೆಯಾಗಿರುವ ಆರ್‌ಬಿಐ ವಾರ್ಷಿಕ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಬ್ಯಾಂಕ್‌ ನೋಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ. ಎಲ್ಲಾ ರೀತಿಯ ಮೌಲ್ಯಗಳ ಬ್ಯಾಂಕ್‌ ನೋಟುಗಳು …

Read More »

ಬೆಳಗಾವಿಯಿಂದ ಕಡಿಮೆ ಸರಬರಾಜು: ಗೋವಾದಲ್ಲಿ ತರಕಾರಿಗೆ ಹಾಹಾಕಾರ

ಪಣಜಿ: ಗೋವಾ ತೋಟಗಾರಿಕಾ ನಿಗಮಕ್ಕೆ ಬೆಳಗಾವಿಯಿಂದ ಸದ್ಯ ವಾರದಲ್ಲಿ ಮೂರು ದಿನಗಳ ಕಾಲ ತರಕಾರಿ ಪೂರೈಕೆಯಾಗುತ್ತಿದೆ, ಇದರಿಂದಾಗಿ ಅಲ್ಲಿರುವ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ. ಕೋವಿಡ್ ನಿರ್ಬಂಧದಿಂದಾಗಿ ಬೆಳಗಾವಿ ತರಕಾರಿ ಮಾರುಕಟ್ಟೆ ಬಂದ್ ಆಗಿದೆ. ಗೋವಾ ರಾಜ್ಯಾದ್ಯಂತ ನಿಗಮದ ಸುಮಾರು 1400 ತರಕಾರಿ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ಸರ್ಕಾರವು ರಾಜ್ಯದಲ್ಲಿ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ಮಾರಾಟ ಮಾಡುತ್ತದೆ. ಆದರೆ ಬೆಳಗಾವಿಯಿಂದ ಪ್ರತಿದಿನ ತರಕಾರಿ …

Read More »

ಸ್ನೇಹಿತರ ಸಹಾಯ; ಧಾರವಾಡಕ್ಕೆ ಬಂತು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್

ಧಾರವಾಡ, ಮೇ 27; ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಮ್ಮ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’ ತಂಡದಿಂದ ಪಡೆದ ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದರು. ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಕಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ, ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್ ಕಾನ್ಸನ್‍ಟ್ರೇಟರ್ …

Read More »

BSY ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಿ: ಎಂ.ಪಿ. ಕುಮಾರಸ್ವಾಮಿ

ಚಿಕ್ಕಮಗಳೂರು: ಬಿ.ಎಸ್. ಯಡಿಯೂರಪ್ಪ ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ. ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ. ಈ ಕುರಿತು ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ತಯಾರಿದ್ದೇವೆ. ನಾಯಕತ್ವ ಬದಲಾವಣೆ ಮಾಡದಂತೆ …

Read More »

ಜನ್ಮದಿನಕ್ಕೆ ಬಟ್ಟೆ ಕೊಡಿಸಲಿಲ್ಲ ಅಂತ ನವವಿವಾಹಿತೆ ಆತ್ಮಹತ್ಯೆ: ಕೊಲೆ ಕೇಸು ದಾಖಲು!

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸದೇ ಗಂಡ ರೇಗಾಡಿದ್ದರಿಂದ ನೊಂದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಗ್ರಾಮದಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ರಾಜು ಅವರ ಪುತ್ರಿ ಮಮತಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಯುವಕ ಮಹದೇವ ಅಲಿಯಾಸ್ ಮಣಿಕಂಠ ಮೂರು ತಿಂಗಳ ಅಪ್ರಾಪ್ತೆಯಾಗಿದ್ದ ಮಮತಾಳನ್ನು ಅಪಹರಿಸಿ ಮದುವೆಯಾಗಿದ್ದ. ಜನ್ಮದಿನವಾದ ಇಂದು ಹೊಸಬಟ್ಟೆ ಕೊಡಿಸುವಂತೆ ಗಂಡ ಮಣಿಕಂಠನಿಗೆ ಕೇಳಿದ್ದಾಳೆ. …

Read More »

ನಾಯಕತ್ವ ಬದಲಾವಣೆ ವಿಚಾರ; ವಿರೋಧಿ ಬಣಕ್ಕೆ ಟಾಂಗ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಾ, ದೆಹಲಿಯಲ್ಲಿ ಬೀಡು ಬಿಟ್ಟಿದ್ದ ನಾಯಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಸಿ ಮುಟ್ಟಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಶಾಸಕಾಂಗ ಸಭೆ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರಣ ಮಾತ್ರ. ಜನರ ಹಿತ ಕಾಯುವುದು ನನ್ನ ಮೊದಲ ಆದ್ಯತೆ. ಯಾರು ದೆಹಲಿಗೆ ಹೋಗಿ ಬಂದಿದ್ದಾರೋ ಅವರಿಗೆ ಅಲ್ಲಿಯೇ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳುವ …

Read More »