ಮಂಗಳೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಸೂಚಿಸಿದರೂ ಊರಿನ ಬಹು ಜನೋಪಯೋಗಿ ಬೇಡಿಕೆಯೊಂದು ಈಡೇರಿಲ್ಲ! ಆದರೆ ತಮ್ಮ ಗುರಿಯಿಂದ ವಿಮುಖರಾಗದ ಗ್ರಾಮಸ್ಥರು ತಾವೇ, ಸ್ವಂತ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಬಳಿಯ ಜನ ಇಂತಹ ವಿಪರ್ಯಾಸ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ. ಇದು ಸಚಿವ ಎಸ್ ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ! ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ …
Read More »ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ
ರಬಕವಿ-ಬನಹಟ್ಟಿ: ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹ ಮಾಡಿದ್ದ ಗೋದಾಮಿನ ಮೇಲೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 64,650 ರು ಮೌಲ್ಯದ 4310 ಕಿಲೋ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬನಹಟ್ಟಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕುಲಹಳ್ಳಿ ಗ್ರಾಮದ ಖಾಸಿಂಸಾಬ್ ಸಂತಿ ಎಂಬಾತನ ಜಮೀನಿನ ಪತ್ರಾಸ್ ಶೆಡ್‌ನಲ್ಲಿ ಶೇಖರಿಸಿಟ್ಟ 4310 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರಲ್ಲದೇ ಖಾಸೀಂಸಾಬ ಸಂತಿ ಹಾಗೂ ಮುಬಾರಕ ಬಾರಿಗಡ್ಡಿ ಅವರನ್ನು ಅಕ್ರಮ ಅಕ್ಕಿ …
Read More »ಬಿಜೆಪಿ ಸೇರಲು ₹10 ಲಕ್ಷ ಪಾವತಿ: ಕಲೈ ಅರಸಿ ಆರೋಪ
ಹಾಸನ: ‘ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ತಮಗೆ ₹ 25 ಲಕ್ಷ ಆಮಿಷವೊಡ್ಡಿ, ಮುಂಗಡವಾಗಿ ₹10 ಲಕ್ಷ ನಗದು ನೀಡಿದ್ದಾರೆ’ ಎಂದು ಅರಸೀಕೆರೆ ನಗರಸಭೆ ಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ಆರೋಪಿಸಿದರು. ಹತ್ತು ಲಕ್ಷ ರೂಪಾಯಿ ಹಣದ ಬಂಡಲ್‌ನೊಂದಿಗೆ ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ ಜತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರುವಂತೆ ಒಂದು ವಾರದಿಂದ ಒತ್ತಡ ಇತ್ತು. ಶುಕ್ರವಾರ ರಾತ್ರಿ …
Read More »ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು
ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಮತ್ತೊಂದು ಕಾರು ರಸ್ತೆಯಿಂದ ಐದು ಮೀಟರ್ ದೂರದಲ್ಲಿರುವ ಮನೆಯೊಂದರ ಛಾವಣಿ ಮೇಲೆ ಹೋಗಿ ಕುಳಿತಿತ್ತು. ಬುಧವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ಧರಂಪುರದಿಂದ ನೆರ್ಚೌಕ್‌ನತ್ತ ಸಾಗುತ್ತಿದ್ದ ಆಲ್ಟೋ ಕಾರೊಂದು ಹೀಗೆ ತಡೆ ಗೋಡೆ ಮೇಲೆ ಹೋಗಿ ಕುಳಿತುಬಿಟ್ಟಿದೆ. …
Read More »ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದವಳು ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿದ್ದಾಳೆ!
ದೇಶಕ್ಕಾಗಿ ಹೋರಾಡುವುದು, ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದು ಅನ್ನೋದೆ ಹೆಮ್ಮೆಯ ಸಂಗತಿ. ಎಲ್ಲರಿಗೂ ಈ ಸೇವೆಯ ಮಾಡುವ ಭಾಗ್ಯ ದೊರಕುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ದೇಶ ಪ್ರೇಮ ಇದ್ದವರಿಗೆ ಮಾತ್ರ ಇದು ಸಾಧ್ಯ. ಅದರೆ ಇಲ್ಲೊಂದು ಘಟನೆ ಮನಸ್ಸನ್ನೇ ಕರಗಿಸುತ್ತೆ. ಕಾರಣ ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಮಹಿಳೊಬ್ಬರು ಸದ್ಯದ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ!. ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಬಗ್ಗೆ ಕೇಳಿರುತ್ತೀರಿ. …
Read More »ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ದೆಹಲಿಗೆ ತೆರಳಿದ್ದಾರೆ. ಅವರ ದಿಢೀರ್ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆಕಾರಣವಾಗಿದೆ. ಇತ್ತೀಚೆಗೆ ನಾಯಕತ್ವ ಬದಲಾವಣೆಯ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೇ ಬೆಳವಣಿಗೆಗಳ ಕುರಿತು ಸಿಎಂ ಯಡಿಯೂರಪ್ಪ …
Read More »ಮುಂದಿನ ಸಿಎಂ ಸಿದ್ದರಾಮಯ್ಯ : ಎತ್ತಿನ ಮೇಲೂ ಬಲು ಜೋರು ಬರವಣಿಗೆ
ಗದಗ : ಸದ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಮೊದಲಿದ್ದ ಬೆಂಬಲ, ಪ್ರೀತಿ, ವಿಶ್ವಾಸ ಅಷ್ಟಾಗೇನು ಕಾಣ್ತಾ ಇಲ್ಲ. ಇನ್ನೆರಡು ವರ್ಷವಷ್ಟೆ ಎಲೆಕ್ಷನ್ ಗೆ ದಿನಗಳು ಬಾಕಿ ಉಳಿದಿರೋದು. ಈ ನಡುವೆ ಬಿಜೆಪಿಯ ಒಳಮುನಿಸ್ಸನ್ನ ವಿಪಕ್ಷಗಳು ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಸಿಎಂ ಕ್ರೇಜ್ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಕೂಗು ಆಗಾಗ ಕೇಳುತ್ತಲೆ ಇರುತ್ತೆ. ಆದ್ರೆ ಈ ಬಾರಿ ಅದು ಎತ್ತುಗಳ ಮೇಲೂ ರಾರಾಜಿಸುತ್ತಿದೆ. …
Read More »ನಾಳೆ ದಿ: 26 ಹಾಗೂ 27 ಜೂನ್ 2021 ರಂದು ಸರ್ಕಾರದ ನಿರ್ದೇಶನದಂತೆ ಭಾಗಶಃ ಲಾಕ್ ಡೌನ್ ಜಾರಿಯಾಗಲಿದ್ದು ,
ಮಹಾನಿಯರೆ, ನಾಳೆ ದಿ: 26 ಹಾಗೂ 27 ಜೂನ್ 2021 ರಂದು ಸರ್ಕಾರದ ನಿರ್ದೇಶನದಂತೆ ಭಾಗಶಃ ಲಾಕ್ ಡೌನ್ ಜಾರಿಯಾಗಲಿದ್ದು , ಆದ್ದರಿಂದ ಗೋಕಾಕ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ • ಬೆಳಿಗ್ಗೆ 6.00 ರಿಂದ ಮದ್ಯಾಹ್ನ 2.00 ಗಂಟೆವರೆಗೂ ಕಿರಾಣಿ, ದಿನಸಿ, ಬೇಕರಿ, ಹಾಲು ಮಾರಾಟ, ತರಕಾರಿ, ಮೀನು ಮತ್ತು ಮಾಂಸ ಮಾರಾಟ, ರೇಷನ್ ಅಂಗಡಿ ಗಳಿಗೆ ಮಾತ್ರ ಅನುಮತಿ ಇರುತ್ತದೆ ಅಲ್ಲದೇ ಲಿಕರ್ ಶಾಪ್ ಗಳಲ್ಲಿ ಪಾರ್ಸೆಲ್ …
Read More »ಕೇಂದ್ರದೊಂದಿಗೆ ಕಣಿವೆ ನಾಡಿನ ನಾಯಕರ ಸಭೆ: ಮಹತ್ವದ ಬೆಳವಣಿಗೆ ಬಗ್ಗೆ ದೇವೇಗೌಡರು ಹೇಳಿದ್ದೇನು..?
ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಜಮ್ಮು ಕಾಶ್ಮೀರದ ರಾಜಕೀಯ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಗೃಹಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚೆಗಳನ್ನು ನಡೆಸಿದ್ರು. ಸಭೆಯಲ್ಲಿ ಜಮ್ಮು ಕಾಶ್ಮೀರದ ನಾಯಕರು ಮತ್ತು ಪ್ರಧಾನಿ ನಡುವೆ ಮುಕ್ತ ಮಾತುಕತೆ ನಡೆದಿದ್ದು ಹಲವು ಧನಾತ್ಮಕ ನಿರ್ಧಾರಗಳಿಗೆ ಮುನ್ನುಡಿ ಬರೆದಂತಾಗಿದೆ. ಪ್ರಮುಖವಾಗಿ ಜಮ್ಮು ಕಾಶ್ಮೀರಗಳಿಗೆ ರಾಜ್ಯತ್ವ ನೀಡುವುದು.. ಸುರಕ್ಷಿತ, ಭದ್ರತೆಯ ವಾತಾವರಣ ನಿರ್ಮಿಸುವುದು.. ಚುನಾವಣೆಗಳನ್ನ ನಡೆಸುವುದು.. …
Read More »ಆಸ್ಪತ್ರೆ ಕಪಾಟು ಒಳಗಡೆ ಹೆಬ್ಬಾವು…..
ಬೆಳ್ತಂಗಡಿ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಸ್ಥಳದಲ್ಲಿ ಕೆಲಕಾಲ ಸಾರ್ವಜನಿಕರು ಹಾಗೂ ಆಸ್ಪತ್ರೆ ಮಂದಿಯನ್ನು ಆತಂಕಕ್ಕೀಡು ಮಾಡಿದ ಘಟನೆ ಗುರುವಾರ ನಡೆದಿದೆ. ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕಪಾಟಿನಲ್ಲಿ ಹೆಬ್ಬಾವು ಅವಿತುಕೊಂಡಿದ್ದು, ಕಪಾಟು ಬಾಗಿಲು ತೆರೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಯಿತು. ಸಿಬ್ಬಂದಿ, ಸಾರ್ವಜನಿಕರು ಆತಂಕಗೊಂಡರು. ಕೂಡಲೇ ಹಾವು ಸೆರೆ ಹಿಡಿಯುವ ಸ್ನೇಕ್ …
Read More »
Laxmi News 24×7