ಮುಂಬೈ:ಮಹಾರಾಷ್ಟ್ರವು ಶನಿವಾರ ಒಮಿಕ್ರಾನ್‌ನ ಇನ್ನೂ ಮೂರು ಪ್ರಕರಣಗಳನ್ನು ವರದಿ ಮಾಡಿದೆ. ಹೊಸ ಕೊವೀಡ್-19 ರೂಪಾಂತರ ಸೋಂಕುಗಳ ಒಟ್ಟು ಸಂಖ್ಯೆ 43 ಕ್ಕೆ ಏರಿದೆ.ಭಾರತದಲ್ಲಿ ಅತಿ ಹೆಚ್ಚು ಕೊವೀಡ್-19 ಪೀಡಿತ ರಾಜ್ಯವಾದ ಮಹಾರಾಷ್ಟ್ರವು ನಿನ್ನೆ ಒಮಿಕ್ರಾನ್ ನ ಎಂಟು ಪ್ರಕರಣಗಳನ್ನು ದಾಖಲಿಸಿತ್ತು ಹೊಸ ಪ್ರಕರಣಗಳು ಸತಾರಾದ ಫಾಲ್ಟನ್‌ನಲ್ಲಿ ದಾಖಲಾಗಿವೆ ಮತ್ತು ಎಲ್ಲಾ ರೋಗಿಗಳು ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ.. ಎಂಟು ಸೋಂಕುಗಳಲ್ಲಿ, ಆರು ಪುಣೆಯಿಂದ ಮತ್ತು ತಲಾ ಒಬ್ಬರು ಮುಂಬೈ …
Read More »ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದು, ಹಾನಿ ಕುರಿತು ಪರಿಶೀಲನೆ
ಹುಬ್ಬಳ್ಳಿ(ಧಾರವಾಡ): ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದು, ಹಾನಿ ಕುರಿತು ಪರಿಶೀಲನೆ ನಡೆಸಲಿದೆಕಳೆದ ನವೆಂಬರ್ ತಿಂಗಳಿನ ಕೊನೆಯಲ್ಲಿ ಸುರಿದ ಮಳೆಗೆ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಹೀಗಾಗಿ, ಧಾರವಾಡ ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದೆ. ನವೆಂಬರ್‌ನಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ಪರಿಶೀಲಿಸಲಿದೆ. ಬೆಳೆ, ಮನೆ ಮತ್ತು ರಸ್ತೆ ಹಾನಿಯನ್ನು ವೀಕ್ಷಣೆ ಮಾಡಲಿದೆ. ಪರಿಶೀಲನೆಗೆೆಂದು ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕುಗಳಿಗೆ ಭೇಟಿ …
Read More »ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಶೋಕ ನಾಯಿಕ ಅವರು ಮಾತನಾಡುತ್ತಿರುವುದು.
ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್ ಪ್ರಸಕ್ತ ಸಾಲಿನಲ್ಲಿ 39.17 ಕೋಟಿ ರೂಗಳ ವಹಿವಾಟು ನಡೆಸಿ 60.53 ಲಕ್ಷ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು. ಗುರುವಾರದಂದು ನಗರದ ಸಂಘದ ಸಭಾ ಭವನದಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಇನ್ನೂ ಮುಂದೆಯೂ ಸಂಘದ ಹಿತೈಸಿಗಳು …
Read More »ಕನ್ನಡ ದ್ವಜ ಸುಟ್ಟು ಹಾಕಿದ ಎಂ.ಇ.ಎಸ್ ಪುಂಡರ ವಿರುದ್ಧ ಸೂಕ್ತ ಕ್ರಮಕ್ಕೆ ಕನ್ನಡಪರ ಸಂಘಟನೆಗಳ ವತಿಯಿಂದ ಆಗ್ರಹ*
ಘಟಪ್ರಭಾ; ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇದಿಸುವಂತೆ ಹಾಗೂ ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ನಾಡ ದ್ರೋಹಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ನಾಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ …
Read More »ಕೇಂದ್ರ ಸರ್ಕಾರ ಯೋಜನೆಗಾಗಿ ಒಂದು ಕಿಮೀಗೆ ಸುಮಾರು 25 ಕೋಟಿ ರೂಪಾಯಿ ವ್ಯಯ ಮಾಡಲಿದೆ.
ಹುಬ್ಬಳ್ಳಿ: ರಾಯಚೂರಿನ ಸಿಂದಗಿ ಹಾಗೂ ಕಲಬುರಗಿಯ ಬಡದಲ್ ಹಳ್ಳಿಯ ನಡುವೆ 177 ಕಿಮೀ ಉದ್ಧದ ಗ್ರೀನ್ಫೀಲ್ಡ್ ಹೆದ್ದಾರಿ ನಿರ್ಮಾಣವಾಗಲಿದ್ದು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭಾರತ್ ಮಾಲಾ ಯೋಜನೆಯ ಪರಿಯೋಜನೆಯಡಿ ಆರು ಪಥದ ಹೆದ್ದಾರಿ ನಿರ್ಮಾಣ ಆಗಲಿದೆ. ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗಲಿರುವ ಮೊದಲ ಆರು ಪಥದ ರಾಷ್ಟ್ರೀಯ ಹೆದ್ದಾರಿ ಆಗಲಿದ್ದು, ಕೇಂದ್ರ ಸರ್ಕಾರ ಯೋಜನೆಗಾಗಿ ಒಂದು ಕಿಮೀಗೆ ಸುಮಾರು 25 ಕೋಟಿ ರೂಪಾಯಿ ವ್ಯಯ ಮಾಡಲಿದೆ. ರಾಷ್ಟ್ರೀಯ ಮಾಧ್ಯಮದ ವರದಿಯ …
Read More »ಬಿಜೆಪಿಗೆ ಧಮ್ ಇಲ್ಲ; ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ : ಸಿದ್ದರಾಮಯ್ಯ
ಬೆಂಗಳೂರು: ಪರಿಷತ್ ಫಲಿತಾಂಶದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಚಿಕ್ಕಮಗಳೂರಿನಲ್ಲಿ ನಮ್ಮ ಅಭ್ಯರ್ಥಿ 6 ಮತಗಳ ಅಂತರದಿಂದ ಸೋತರು. ಅಲ್ಲಿ ಹತ್ತು ಮಂದಿ ನಾಮಿನೇಟೆಡ್ ಮೆಂಬರ್ ಇದ್ದರು. ವೋಟ್ ಹಾಕಿಲ್ಲ. ಉಳಿದೆಡೆ ನಾವು ಉತ್ತಮ ಹೋರಾಟ ಮಾಡಿದ್ದೇವೆ. ಜನಪ್ರತಿನಿಧಿಗಳ ತೀರ್ಪು ನಮ್ಮ …
Read More »ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಕ್ಷಣಗಣನೆ
91 ಅಭ್ಯರ್ಥಿಗಳ ಭವಿಷ್ಯ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಜೆಡಿಎಸ್ ಕೇವಲ ಆರು ಪರಿಷತ್ ಕ್ಷೇತ್ರಗಳಲ್ಲಿ ಸ್ಪರ್ಧೆ ಕೆಲವು ಕಡೆಗಳಲ್ಲಿ ಮೂರೂ ಪಕ್ಷಗಳಿಂದ ತೀವ್ರ ಪೈಪೋಟಿ 91 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ 96 ಸಾವಿರ ಮತದಾರರು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಕ್ಷಣಗಣನೆ ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ರೀತಿಯ …
Read More »ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆಮೊದಲ ಬಲಿ:
ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆ ಇಂಗ್ಲೆಂಡ್‍ನಲ್ಲಿ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್‍ನಲ್ಲಿ ಕೊವಿಡ್ ಲಸಿಕಾ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಆರಂಭದಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಇದೀಗ ರೂಪಾಂತರಿ ವೈರಸ್‍ಗಳ ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್‍ನಿಂದ ಮತ್ತೆ ಲಾಕ್‍ಡೌನ್ ಉಂಟಾಗಬಹುದು ಎಂಬ ಭೀತಿ …
Read More »ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಪೂರ್ವಭಾವಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಇದೇ ತಿಂಗಳ 27 ರಂದು …
Read More »ಮೂರು ವರ್ಷಗಳ ನಂತರ ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಚಾಲನೆ ದೊರೆಯಲಿದೆ.
ಬಸವರಾಜ ಬೊಮ್ಮಾಯಿ ಸರ್ಕಾರವು ಮತಾಂತರ ವಿರೋಧಿ ಕಾಯ್ದೆಗೆ ಹೆಚ್ಚು ಕಠಿಣವಾದ ನಿಬಂಧನೆಗಳನ್ನು ಪರಿಚಯಿಸಲು ಯೋಜಿಸುತ್ತಿರುವುದರಿಂದ ಅಧಿವೇಶನದಲ್ಲಿ ಪ್ರಕ್ಷುಬ್ಧವಾದ ವಾತಾವರಣ ಸೃಷ್ಠಿ ಸಾಧ್ಯತೆ ಇದೆ.ಇದು ಈಗಾಗಲೇ ಅಲ್ಪಸಂಖ್ಯಾತ ಗುಂಪುಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿದೆ.ವಿಪಕ್ಷಗಳು ಬಿಟ್‌ಕಾಯಿನ್ ಹಗರಣದ ಆರೋಪ,ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬದ ಬಗ್ಗೆ, ಕಿಕ್‌ಬ್ಯಾಕ್ ಬಗ್ಗೆ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಗುತ್ತಿಗೆದಾರರ ದೂರುಗಳ ಕುರಿತು ಸರ್ಕಾರವನ್ನು ಟೀಕಿಸಲು ನೋಡುತ್ತಿವೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಿದ ನಂತರ ಅವುಗಳನ್ನು …
Read More »
Laxmi News 24×7