Breaking News

ರಾಷ್ಟ್ರೀಯ

ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ವಿರೋಧಿಸಿ

ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ ಮೂಡಲಗಿ : ತಾಲೂಕಿನ ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್‍ನಿಂದ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮಂಗಳವಾರದಂದು ವಡೇರಹಟ್ಟಿ ಗ್ರಾಮದ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಇಂದು ತಹಶೀಲ್ದಾರ ಕಛೇರಿಗೆ ಆಗಮಿಸಿ ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು …

Read More »

ಗೋಕಾಕ ಕಾಂಗ್ರೆಸ್ ಪಕ್ಷದ ತವರು ಮನೆ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.

ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿಗಳು ಬರ್ತಾರೆ ವ್ಯಕ್ತಿಗಳು ಹೋಗ್ತಾರೆ. ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿಗಳು ಅಲ್ಲ ಪಕ್ಷ ದೊಡ್ಡದು. ಗೋಕಾಕ ಕಾಂಗ್ರೆಸ್ ಪಕ್ಷದ ತವರು ಮನೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಅಧಿಕೃತವಾಗಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಅಶೋಕ ಪೂಜಾರಿ ಕುಟುಂಬ ಒಟ್ಟು ಆರು …

Read More »

ಮತಾಂತರ ನಿಷೇಧ ಕಾಯ್ದೆಗೆ ಪರಿಷತ್, ವಿಧಾನಸಭೆ ಎರಡರಲ್ಲಿಯೂ ಜೆಡಿಎಸ್ ಬೆಂಬಲಿಸುವುದಿಲ್ಲ:H.D.K.

ಯಾವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ್ದೇವೆ. ಅಧಿವೇಶನ ಆರಂಭ ಮಾಡಿದ್ದೇವೆ. ಅದರ ಸಂಪೂರ್ಣ ಉಪಯೋಗ ಆಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ವೀರರಾಣಿ ಕಿತ್ತೂರು ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಇನ್ನಿತರು ಜೆಡಿಎಸ್ ನಾಯಕರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು. ಇದೇ ವೇಳೆ …

Read More »

ಶೋಭಾ ಕರಂದ್ಲಾಜೆಗೆ ಕರ್ನಾಟಕದಲ್ಲಿ ‘ದೊಡ್ಡ ಹುದ್ದೆ’ಯ ಮುನ್ಸೂಚನೆ ಕೊಟ್ಟ ಹೈಕಮಾಂಡ್!

ಬೆಂಗಳೂರು, ಡಿ.20: ಕರ್ನಾಟಕ ಬಜೆಪಿಯ ಪ್ರಮುಖ ಮಹಿಳಾ ನಾಯಕಿ, ಪ್ರಸ್ತುತ ಕೇಂದ್ರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ವಿವಾದಗಳಿಂದ ದೂರ ಉಳಿಯುತ್ತಿರುವುದು ಹಾಗೂ ಎಲ್ಲದ್ದಕ್ಕೂ ಪ್ರತಿಕ್ರಿಯಿಸದಿರುವುದರ ಹಿಂದೆ ಬಿಜೆಪಿ ಹೈಕಮಾಂಡ್‌ನ ವಿಶೇಷ ಸೂಚನೆಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.   ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಕೆಲವು ತಿಂಗಳಿಂದ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು, …

Read More »

ಜನೇವರಿ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

    ಗೋಕಾಕ : ಕೌಜಲಗಿ ಭಾಗದ ರೈತರ ಜೀವನಾಡಿಯಾಗಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜನೇವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ತಾಲೂಕಿನ ಕೌಜಲಗಿ ಅರ್ಬನ್ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌಜಲಗಿ ಮತ್ತು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ …

Read More »

ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ಲಖನ ಜಾರಕಿಹೊಳಿ

ಗೋಕಾಕ: ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ಲಖನ ಜಾರಕಿಹೊಳಿ ಅವರನ್ನು ಇಲ್ಲಿಯ ಶ್ರೀ ಶಿವ ಶರಣ ಹಡಪದ ಅಪ್ಪಣ್ಣ ಸೇವಾ ಸಂಘದ ಪದಾಧಿಕಾರಿಗಳು ಸತ್ಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು-ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಇದ್ದರು. ಕಲಾವಿದರಿಗೆ ಬೆನ್ನೆಲುಬಾಗಿ ನಿತ್ತ : ಸತೀಶ ಜಾರಕಿಹೊಳಿ….  

Read More »

ಬೆಳಗಾವಿ ನಗರ ಹಾಗೂ ಬೆಳಗಾವಿ, ತಾಲೂಕಾ ವ್ಯಾಪ್ತಿಯಲ್ಲಿ ಕಲಂ 144ಡಿಸೆಂಬರ್ 22ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಜಾರಿಯಾಲ್ಲಿದ್ದ ನಿಷೇಧಾಜ್ಞೆಯನ್ನು ಡಿಸೆಂಬರ್ 22ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಅವಮಾನಪಡಿಸಿದ ಘಟನೆಗೆ ಪ್ರತಿರೋಧವಾಗಿ ಕೆಲವು ಸಂಘಟಣಿಗಳು ಡಿಸೆಂಬರ್ 17ರ ರಾತ್ರಿ ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಹಲವೆಡೆ ಕಡೆ ಕಲ್ಲು ತೂರಾಟ ಹಾಗೂ ಅನಗೋಳದಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಗಳು ನಡೆದಿದ್ದವು. ಎಂಇಎಸ್ ಪುಂಡಾಟ, …

Read More »

ನನಗೆ ಗೃಹ ಖಾತೆ ಕೊಟ್ಟು ನೋಡಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ: ಯತ್ನಾಳ್

ವಿಜಯಪುರ: ರಾಜ್ಯದಲ್ಲಿ ಕೋಮು ಗಲಭೆಗೆ ಸಂಪೂರ್ಣ ಕಡಿವಾಣ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಭಾವಿತ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ ಎಂದರು. ರಾಜ್ಯದಲ್ಲಿ ಪದೇ ಪದೇ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಮತೀಯ …

Read More »

ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರವು (State Government) ಬಿಗ್ ಶಾಕ್ ನೀಡಿದ್ದು, ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.   ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಿ 2018-19 ನೇ ಸಾಲಿನಲ್ಲಿ ಮೈತ್ರಿ ಸರ್ಕಾರ ಘೋಷಣೆ ಹೊರಡಿಸಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ಸರ್ಕಾರ ಯೋಜನೆಯನ್ನೇ ರದ್ದು ಮಾಡಿದೆ ಈ ಮೂಲಕ ಮನೆ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಬಿಗ್ …

Read More »

ಡಿ. 24 ರಿಂದ ಜ. 1 ರವರೆಗೆ ಚಳಿಗಾಲದ ರಜೆ ಘೋಷಣೆ: ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶದ ಅನುಸಾರ ನ್ಯಾಯಾಂಗ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್ ನೋಟಿಫಿಕೇಶನ್ ಹೊರಡಿಸಿದ್ದಾರೆ. ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ಚಳಿಗಾಲದ ರಜೆ ಇರುತ್ತದೆ. ರಜೆ ಅವಧಿಯಲ್ಲಿ ದೈನಂದಿನ ಕಲಾಪಗಳು ನಡೆಯುವುದಿಲ್ಲ. …

Read More »