ಮೈಸೂರು: ಗೋಹತ್ಯೆ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕಾನೂನು ಜಾರಿಗೆ ತಂದಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ಕಾನೂನು ರದ್ದುಗೊಳಿಸುವ ನಿರ್ಧಾರ ಮಾಡಿದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಏಕೆಂದರೆ, ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನ ನಾಯಕರು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನುಗಳನ್ನು ಪುನರ್ ಪರಿಶೀಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದೀಗ ನೂತನ ಪಶು ಸಂಗೋಪನ ಸಚಿವರು ಸಹ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. “ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ …
Read More »ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ
ನವದೆಹಲಿ: ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ಮಾಹಿತಿ ಹೊರಬಿದ್ದಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್‌ಗೆ ಪ್ರವೇಶಿಸಿ ಬಹಾನಗರ್ ಬಜಾರ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳು ಚದುರಿ ಪಕ್ಕದ ಹಳಿ ಮೇಲೆ ಬಿದ್ದಿವೆ. ಆ ಬೋಗಿಗಳಿಗೆ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ ಎಂದು ಪ್ರಾಥಮಿಕ …
Read More »ಬಾಗಲಕೋಟೆಯಲ್ಲಿ ವರುಣನ ಆರ್ಭಟ: ನೇಕಾರರ ಮನೆಗಳಿಗೆ ಹಾನಿ.
ಬಾಗಲಕೋಟೆ: ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವು ನೇಕಾರರ ಮನೆಗಳಿಗೆ ಹಾನಿ ಉಂಟಾಗಿರುವ ಘಟನೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣ ಸೇರಿದಂತೆ ವಿವಿಧೆಡೆ ನಡೆದಿದೆ. ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ನೇಕಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೆಂಗೇರಿ ಮಡ್ಡಿ ಸೇರಿದಂತೆ ಇತರ ಪ್ರದೇಶದಲ್ಲಿ ಬೃಹದಾಕಾರದ ಮರಗಳು ನೇಕಾರರ ಮನೆಗಳ ಮೇಲೆ ಉರುಳಿ ಬಿದಿದ್ದರಿಂದ, ಮನೆ ಮತ್ತು ಆಸ್ತಿ- ಪಾಸ್ತಿಗೆ …
Read More »ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ
ಬೆಳಗಾವಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಸವ್ವ ಹಣಮಂತ ಹಿಡಕಲ್(30) ಕೊಲೆಯಾದ ದುರ್ದೈವಿ. ಹಣಮಂತ ಸಿದ್ದಪ್ಪ ಹಿಡಕಲ್( 35) ಕೊಲೆ ಆರೋಪಿ. ಪ್ರಕರಣದ ವಿವರ: ಪತಿ ಹಣಮಂತ ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿದ್ದನಂತೆ. ಪತ್ನಿ ಬಸವ್ವ ಕೂಲಿ ಕೆಲಸ ಮಾಡಿ ಸಂಸಾರದ ಬಂಡಿ ಸಾಗಿಸುತ್ತಿದ್ದರು. ಪತಿ ಹಣಮಂತನಿಗೆ ನೀನು ಕೆಲಸ ಮಾಡುತ್ತಿಲ್ಲ …
Read More »ಬೆಳಗಾವಿಯಲ್ಲಿ ವಾರ್ಡ್ ಸಮಿತಿ ರಚನೆ ವಿಳಂಬ: ನಾಗರಿಕರ ಅಸಮಾಧಾನ
ಬೆಳಗಾವಿ: ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗಳಲ್ಲಿ ರಚನಾತ್ಮಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕಾಗಿ ‘ನಾಗರಿಕ ವಾರ್ಡ್ ಸಮಿತಿ’ ರಚಿಸಬೇಕೆಂಬ ಕಾನೂನಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು ಆಯ್ಕೆಯಾಗಿ 2 ವರ್ಷ ಕಳೆಯುತ್ತಾ ಬಂದರೂ ವಾರ್ಡ್ ಸಮಿತಿ ರಚನೆ ಆಗದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ‘ನಾಗರಿಕ ವಾರ್ಡ್ ಸಮಿತಿ’ ರಚಿಸಬೇಕು ಎಂಬ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ …
Read More »ಬದುಕು ಕೊಟ್ಟ ಕಾಲೇಜಿಗೆ ಬಂದು ಕಸ ಗುಡಿಸಿ, ಬೆಲ್ ಬಾರಿಸಿದ ಶಾಸಕ ದೇವೇಂದ್ರಪ್ಪ- ವಿಡಿಯೋ
ದಾವಣಗೆರೆ: ಜಗಳೂರು ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಜವಾನ ವೃತ್ತಿಯಿಂದ ಜೀವನ ಆರಂಭಿಸಿದವರು. ಇದೀಗ ಶಾಸಕ ವೃತ್ತಿ ಅಲಂಕರಿಸದ ಬಳಿಕ ತಾವು ಕೆಲಸ ಮಾಡ್ತಿದ್ದ ಕಾಲೇಜಿಗೆ ಆಗಮಿಸಿ, ಕೆಲಕಾಲ ಜವಾನ ವೃತ್ತಿಯನ್ನೇ ನಿಭಾಯಿಸಿ ಖುಷಿ ಪಟ್ಟರು. ಇಲ್ಲಿಯ ಅಮರ ಭಾರತಿ ವಿದ್ಯಾಕೇಂದ್ರದಲ್ಲಿ ದೇವೇಂದ್ರಪ್ಪ ಬದುಕು ಕಟ್ಟಿಕೊಂಡವರು. 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿರುವ ಇವರು ಇಡೀ ಜಗಳೂರು ತಾಲೂಕಿಗೆ ಚಿರಪರಿಚಿತರು. ಜವಾನ ಕೆಲಸದಿಂದ …
Read More »ಕಟೀಲ್ಗೂ ಫ್ರೀ, ಬೊಮ್ಮಾಯಿಗೂ ಫ್ರೀ, ಶೋಭಾ ಕರಂದ್ಲಾಜೆಗೂ ಫ್ರೀ: ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್
ಬೆಂಗಳೂರು: ಪಂಚ ಗ್ಯಾರಂಟಿಗಳು ಜಾರಿ ಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ. ಟ್ವೀಟ್ ಮೂಲಕ ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ. ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ, ಶೋಭಾ ಕರಂದ್ಲಾಜೆ ಅವರೇ ನಿಮಗೂ ಪ್ರಯಾಣ ಫ್ರೀ ಎಂದು ವ್ಯಂಗ್ಯವಾಡಿದೆ. ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ). ಇದು …
Read More »ಗ್ಯಾರಂಟಿಯಲ್ಲಿ ದೋಖಾ; ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ : ಮಾಜಿ ಸಿಎಂ ಬೊಮ್ಮಾಯಿ
ಬೆಂಗಳೂರು : ಐದು ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಕೊಟ್ಟ ಮಾತನ್ನು ಸಂಪೂರ್ಣವಾಗಿ ನಡೆಸಿಲ್ಲ. ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ. ಹಾಗಾಗಿ ನಾಳೆ ಗ್ಯಾರಂಟಿಗಳ ಜಾರಿ ಬಗ್ಗೆ ಸರ್ಕಾರದ ಆದೇಶ ಬರುತ್ತದೆ. ಆ ಆದೇಶವನ್ನು ಸ್ಟಡಿ ಮಾಡಿ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುವ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ …
Read More »ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಮೇಯರ್ ಉಪಮೇಯರ್ ಭೇಟಿ
ತಾಲೂಕಿನ ತುರಮುರಿಯಲ್ಲಿರುವ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪ್ರವೀಣ ಪಾಟೀಲ ಕಾರ್ಪೋರೇಟರ್ ಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪ್ರವೀಣ ಪಾಟೀಲ ಭೇಟಿ ನೀಡಿ, ಯೋಜನೆಯ ಕಾಮಗಾರಿ ಕುರಿತು ತಾಂತ್ರಿಕ ಮಾಹಿತಿ ಪಡೆದರು. . ಈ ಸಂದರ್ಭದಲ್ಲಿ ಮಹಾಪೌರ ಹಾಗೂ ಉಪ ಮೇಯರ್ ಹಾಗೂ ಆರೋಗ್ಯ ಇಲಾಖೆ …
Read More »ರಕ್ತದಾನ ಶಿಬಿರದಲ್ಲಿ ತಾವೇ ರಕ್ತದಾನ ಮಾಡಿದ ಸ್ವಾಮೀಜಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಆಶ್ರಮದಲ್ಲಿ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಅವರ 39 ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು. ಜನ್ಮದಿನದ ಪ್ರಯುಕ್ತ ಬೆಳವಡಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಶ್ರೀಗಳು ಖುದ್ದು ತಾವೂ ಸಹ ರಕ್ತದಾನ ಮಾಡಿದರು. ಜೊತೆಗೆ ಮಠಕ್ಕೆ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡು, ರಕ್ತದಾನ ಮಾಡಿದರು.ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ …
Read More »
Laxmi News 24×7