ಚಾಮರಾಜನಗರ: ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನ ಗುಳ್ಯದ ಬಯಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಹಾದೇವಿ(28) ಕೊಲೆಯಾದವರು. ಭದ್ರ ಕೊಲೆ ಮಾಡಿದ ಪತಿ. ಹನೂರು ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹಾವು ಕಚ್ಚಿ ವ್ಯಕ್ತಿ ಸಾವು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ. ಹಸಗೂಲಿ ಗ್ರಾಮದ …
Read More »ರೈಲ್ವೆ ಅಪಘಾತದಲ್ಲಿ ಮೃತರಾದವರ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ ಎಂಬ ಕಾರಣದ ನೀಡಿ ಪರಿಹಾರ ನಿರಾಕರಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು: ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣ ನೀಡಿ ಆತನ ಅವಲಂಬಿತರಿಗೆ ಪರಿಹಾರ ನೀಡುವಂತಿಲ್ಲ ಎಂಬ ವಾದವನ್ನು ನಿರಾಕರಿಸಿರುವ ಹೈಕೋರ್ಟ್, ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರು.ಗಳ ಪರಿಹಾರ ನೀಡುವಂತೆ ಇಂದು ಆದೇಶಿಸಿದೆ. ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಜೇಬಿನಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣ …
Read More »ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ ನಿರ್ಮಿಸಲು ಅವಕಾಶವಿಲ್ಲ: ಸಿಎಂ
ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ ನಿರ್ಮಿಸಲು ಅವಕಾಶವಿಲ್ಲ: ಸಿಎಂ ಬೆಂಗಳೂರು: ತಗ್ಗು ಪ್ರದೇಶದಲ್ಲಿ ಬೇಸ್ಮೆಂಟ್ ನಿರ್ಮಾಣ ಮಾಡಲು ಅವಕಾಶ ನೀಡದಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬುಧವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಕಾವೇರಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಲೋ ಲೈಯಿಂಗ್ ಪ್ರದೇಶದಲ್ಲಿ ಇನ್ನು ಮುಂದೆ ಬೇಸ್ಮೆಂಟ್ ಮಾಡಲು ಅವಕಾಶ ಇರುವುದಿಲ್ಲ. ಅಲ್ಲಿ ಸ್ಟಿಲ್ಟ್ ಫ್ಲೋರ್ ಮಾಡಲು ಅವಕಾಶ ನೀಡಲಾಗುತ್ತದೆ. ಬೇಸ್ ಮೆಂಟ್ಗೆ …
Read More »ರಾಜ್ಯದಲ್ಲಿ ಹೆಚ್ಚುತ್ತಿವೆ ಚಿಕೂನ್ಗುನ್ಯಾ ಪ್ರಕರಣಗಳು
ಬೆಂಗಳೂರು: ರಾಜ್ಯದಲ್ಲಿ ಚಿಕೂನ್ಗುನ್ಯಾ ಹಾಗೂ, ಡೆಂಗ್ಯೂ ಸೋಂಕಿನ ಪ್ರಕರಣಗಳು ಏರಿಕೆ ಕಂಡಿದ್ದು ಇದು ಸೋಂಕಿನ ನಿಯಂತ್ರಣ ವೈಫಲ್ಯವೂ ಸಾರ್ವಜನಿಕರಿಗೆ ಆರೋಗ್ಯ ಸವಾಲಿನ ಬೆದರಿಕೆ ಒಡ್ಡುತ್ತಿದೆ. ರಾಜ್ಯದಲ್ಲಿ ಚಿಕೂನ್ಗುನ್ಯಾ ಹೆಚ್ಚಳವಾಗಿರುವ ಕುರಿತು ಎನ್ವಿಬಿಡಿಎಸ್ಪಿ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಮಾಹಿತಿ ಇಲ್ಲಿದೆ. 2018ರಿಂದ 2025ರ ವರೆಗೆ ರಾಜ್ಯದಲ್ಲಿನ ಚಿಕೂನ್ಗುನ್ಯಾ ಪ್ರಕರಣಗಳು ವರ್ಷ ಶಂಕಿತ ಚಿಕೂನ್ಗುನ್ಯಾ ಪ್ರಕರಣ ದೃಢ ಚಿಕೂನ್ಗುನ್ಯಾ ಪ್ರಕರಣ 2018 20411 2546 2019 43698 3664 2020 16111 1326 …
Read More »ಸೂಟ್ಕೇಸ್ನಲ್ಲಿ ಯುವತಿ ಶವ
ಆನೇಕಲ್ (ಬೆಂಗಳೂರು): ತಾಲೂಕಿನ ಚಂದಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ರೈಲ್ವೆ ಬ್ರಿಡ್ಜ್ ಸಮೀಪ ನೀಲಿ ಬಣ್ಣದ ಸೂಟ್ ಕೇಸ್ ಕಂಡಿದ್ದು, ಪರಿಶೀಲನೆ ವೇಳೆ ಸಾರ್ವಜನಿಕರು ಶಾಕ್ ಆಗಿದ್ದಾರೆ. ಹೊಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 18 ವರ್ಷ ವಯಸ್ಸಿನ ಯುವತಿ ಶವ ಸೂಟ್ ಕೇಸ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಯುವತಿ ಗುಲಾಬಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ …
Read More »ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆ ಅನಾಹುತ ಎದುರಾಗಿದೆ: ಡಿ.ಕೆ. ಶಿ
ಬೆಂಗಳೂರು: ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆ ಅನಾಹುತ ಸಮಸ್ಯೆ ಎದುರಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆರೋಪಿಸಿದರು. ಬುಧವಾರ ನಗರ ಪ್ರದಕ್ಷಿಣೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ. ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಇಂತಹ ಸಮಸ್ಯೆ ಎದುರಾಗಿದೆ ಎಂದರು. ಮಳೆಯಿಂದ …
Read More »ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ (Rohit Sharma) ಇನ್ನು ಮುಂದೆ ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ (IPL 2025) ಮುಂಬೈ ಇಂಡಿಯನ್ಸ್ ಪರ ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ರೋಹಿತ್ ಕಳೆದ ಐದು ವರ್ಷಗಳಿಂದ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ನಂತರ …
Read More »ಸದ್ಯದಲ್ಲೇ ರಾಮ ಮಂದಿರ ನಿರ್ಮಾಣ ಪೂರ್ಣ; ಜೂನ್ 5ರಂದು ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ
ಅಯೋಧ್ಯೆ, ಮೇ 21: ಅಯೋಧ್ಯೆಯಲ್ಲಿನ ಐತಿಹಾಸಿಕ ರಾಮ ಮಂದಿರದ (Ram Temple) ನಿರ್ಮಾಣ ಕಾರ್ಯ ಜೂನ್ 5ರೊಳಗೆ ಪೂರ್ಣಗೊಳ್ಳಲಿದ್ದು, ಜೂನ್ 3ರಿಂದ ಪ್ರಾರಂಭವಾಗುವ ಸಮಾರಂಭದಲ್ಲಿ ‘ರಾಮ ದರ್ಬಾರ್’ನ ಪವಿತ್ರೀಕರಣ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ರಾಮ ದರ್ಬಾರ್‌ನ ‘ಪ್ರಾಣ ಪ್ರತಿಷ್ಠೆ’ ಜೂನ್ 3ರಿಂದ 5ರವರೆಗೆ ನಡೆಯಲಿದೆ. ಜೂನ್ 5ರಂದು ನಡೆಯಲಿರುವ ಪವಿತ್ರೀಕರಣ ಸಮಾರಂಭಕ್ಕೆ ವಿವಿಧ ಧರ್ಮಗಳ ಆಧ್ಯಾತ್ಮಿಕ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಮಿಶ್ರಾ …
Read More »ಸಾಧನಾ ಸಮಾವೇಶ ನಂತರ ಸಿಎಂ ಕುರ್ಚಿ ಗಟ್ಟಿಯಾಗಿರಲ್ಲಾ : ಮಾಜಿ ಸಚಿವ ಶ್ರೀರಾಮುಲು
ಸಾಧನಾ ಸಮಾವೇಶ ನಂತರ ಸಿಎಂ ಕುರ್ಚಿ ಗಟ್ಟಿಯಾಗಿರಲ್ಲಾ : ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ 2 ವರ್ಷ ಸಾಧನಾ ಸಮಾವೇಶ ನಂತರ ಸಿಎಂ ಕುರ್ಚಿ ಗಟ್ಟಿಯಾಗಿರಲ್ಲಾ. ಕುರ್ಚಿ ಅಲ್ಲಾಡು ಸಂದರ್ಭದಲ್ಲಿ ಈ ರೀತಿ ಸಮಾವೇಶ ಮಾಡ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣ ಸುಳ್ಳುಗಳಿಂದ ಕೂಡಿತ್ತು. ಸಾಧನಾ ಸಮಾವೇಶ ಹಳೆ ರೇಡಿಯೋದಂತೆ ಅದೇ ಗಾನಾ ಬಜಾನಾ ಮಾಡಿದ್ದಾರೆ …
Read More »16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಗೆ ಸಹಕಾರ….
16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಗೆ ಸಹಕಾರ…. ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸತ್ಕರಿಸಿದ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್ ಬೆಳಗಾವಿ ಜಿಲ್ಹಾ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್ ಆಫ್ ಬೆಲಗಾಮ್’ನ ವತಿಯಿಂದ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸನ್ಮಾನಿಸಲಾಯಿತು. ಬೆಳಗಾವಿಯಲ್ಲಿ ರೋಟರಿ ಅನ್ನೋತ್ಸವದ ವೇಳೆ ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ , ಕರ್ನಾಟಕ ಸ್ಫೋರ್ಟ್ಸ್ ಅಥಾರಿಟಿಯಿಂದ ಮಾನ್ಯತೆ ಪಡೆದ ಕರ್ನಾಟಕ ಅಸೋಸಿಯೇಷನ್ …
Read More »
Laxmi News 24×7