Breaking News

ರಾಷ್ಟ್ರೀಯ

ಗೋಕಾವಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಬುಧವಾರ ರಾತ್ರಿ ಜರುಗಿತು.

ಗೋಕಾಕ – ಗೋಕಾವಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಬುಧವಾರ ರಾತ್ರಿ ಜರುಗಿತು. ಏಪ್ರಿಲ್ ೩೦ ರಿಂದ ಆರಂಭಗೊಂಡಿರುವ ಅಷ್ಠ ಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ಅಪಾರ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುಂದಾಳತ್ವದಲ್ಲಿ ಕಳೆದ ೮ ದಿನಗಳಿಂದ ಅತಿ ವಿಜೃಂಭಣೆಯಿಂದ ದೇವರುಗಳ ಮೂರ್ತಿ …

Read More »

ಖೈರವಾಡ ಗ್ರಾಮದಲ್ಲಿನ ಶ್ರೀ ನಾಗನಾಥದೇವ ಮಂದಿರ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್

ಖೈರವಾಡ ಗ್ರಾಮದಲ್ಲಿನ ಶ್ರೀ ನಾಗನಾಥದೇವ ಮಂದಿರ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಖಾನಾಪೂರ ತಾಲೂಕಿನ ಖೈರವಾಡ ಗ್ರಾಮದಲ್ಲಿನ ಶ್ರೀ ನಾಗನಾಥದೇವ ಮಂದಿರ ಉದ್ಘಾಟಿಸಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ನೇರವೇರಿಸಿ ಲೋಕಾರ್ಪಣೆ ಮಾಡಿದ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲರು ಧಾರ್ಮಿಕತೆ ಯಿಂದ ಏಕತೆ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಕಾರ್ಯವಾಗಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ …

Read More »

ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಬೆಳಗಾವಿ : ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಬೆಳಗಾವಿ ಖಾಸಬಾಗ ರಾಘವೇಂದ್ರ ಕಾಲೋನಿಯ ಶ್ರೀ ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಶ್ರೀ ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ …

Read More »

ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. :ಗೋವಿಂದ ಕಾರಜೋಳ

ಸಿಎಂ ಸಿದ್ದರಾಮಯ್ಯ ನಿನ್ನೆ ಕುಂಕುಮ ಹಚ್ಚಿಕೊಂಡು ಪ್ರೆಸ್ ಮೀಟ್ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. ಹಿಂದೆ ಕಾಶ್ಮೀರ ಮತ್ತು ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು. ಯಾಕೋ ನಿನ್ನೆ ಆಧಾರ ಕೇಳಿಲ್ಲ. ಅವರಲ್ಲಿ ದೇಶಾಭಿಮಾನವಿಲ್ಲ ಕೇವಲ ಓಟ್ ಬ್ಯಾಂಕ್ ಚಿಂತೆ ಮಾತ್ರ ಇದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಾಶ್ಮೀರನಲ್ಲಿ ಉಗ್ರರ ದಾಳಿಯಾದ 15 ದಿನದೊಳಗಾಗಿ ಪ್ರತೀಕಾರ …

Read More »

ಬೆಳಗಾವಿಯ ಶ್ರೀ ಕನಕದಾಸ ವೃತ್ತದಲ್ಲಿ ನೆಲಕಚ್ಚಿದ ಸಿಗ್ನಲ್ ಲೈಟ್ಸ್…ಸಂಚಾರ ದಟ್ಟಣೆ… ಸಂಚಾರಿ ಪೊಲೀಸರಿಲ್ಲದೇ ಪೇಚಿಗೆ ಸಿಲುಕುತ್ತಿರುವ ವಾಹನಧಾರಕ…

ಬೆಳಗಾವಿಯ ಶ್ರೀ ಕನಕದಾಸ ವೃತ್ತದಲ್ಲಿ ನೆಲಕಚ್ಚಿದ ಸಿಗ್ನಲ್ ಲೈಟ್ಸ್…ಸಂಚಾರ ದಟ್ಟಣೆ… ಸಂಚಾರಿ ಪೊಲೀಸರಿಲ್ಲದೇ ಪೇಚಿಗೆ ಸಿಲುಕುತ್ತಿರುವ ವಾಹನಧಾರಕ… ಇದು ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆದರೇ ಇಲ್ಲಿನ ಸಿಗ್ನಲ್’ಗಳ ಸ್ಥಿತಿ ದಯನೀಯವಾಗಿದ್ದು, ಮುಂದೆ ಸಾಗುವ ಜನರು ಸಂಚಾರಿ ನಿಯಮವಿಲ್ಲದೇ ವಿಚಲಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ದಿನಗಳಿಂದ ಕೆಟ್ಟು ನಿಂತಿರುವ ಸಿಗ್ನಲ್ ಲೈಟ್ಸ್’ಗಳು… ಮುರಿದು ನೆಲಕ್ಕೆ ವಾಲಿದರೂ ಹೇಳುವವರಿಲ್ಲ. ಕೇಳುವವರಿಲ್ಲ. ಯಾವಾಗಲೂ ಟ್ರಾಫಿಕ್ ಜಾಮ್. ಸಂಚಾರಿ ನಿಯಮವಂತೂ ಸುತಾರಾಂ …

Read More »

ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯಿಂದ ಸರ್ಕಾರಿ ಬಿ.ಇಡಿ ಕಾಲೇಜಿನಲ್ಲಿ ವರ್ಡ ರೆಡ್ ಕ್ರಾಸ್ ಡೆ ಆಚರಣೆ

ಬೆಳಗಾವಿ : ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯಿಂದ ಸರ್ಕಾರಿ ಬಿ.ಇಡಿ ಕಾಲೇಜಿನಲ್ಲಿ ವರ್ಡ ರೆಡ್ ಕ್ರಾಸ್ ಡೆ ಆಚರಣೆ ಬೆಳಗಾವಿಯ ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನ ಆಚರಿಸಲಾಯಿತು ಸರ್ಕಾರಿ ಬಿ.ಇಡಿ ಕಾಲೇಜ್ ಪ್ರಾಚಾರ್ಯ ಎನ್. ಶ್ರೀಕಂಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ …

Read More »

ಬಾಗಲಕೋಟೆ: ಲಾರಿ – ಬೈಕ್ ನಡುವೆ ಅಪಘಾತ ; ಮೂವರ ದಾರುಣ ಸಾವು

ಬಾಗಲಕೋಟೆ : ನಗರದ ಹೊರವಲಯದ ಸೀಮೀಕೇರಿ ಬೈಪಾಸ್ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದರಿಂದಾಗಿ ಮೂವರು ಮೃತಪಟ್ಟಿದ್ದಾರೆ. ಸಿದ್ದು (16), ಸಂತೋಷ (16) ಮತ್ತು ಕಾಮಣ್ಣ (16) ಮೃತ ದುರ್ದೈವಿಗಳು. ಮೃತರು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು. ಮೂವರು ಬೈಕ್ ಮೇಲೆ ತೆರಳುವಾಗ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಮೃತರೆಲ್ಲರೂ ಮರನಾಳ ಗ್ರಾಮದವರು ಎಂಬುದಾಗಿ ತಿಳಿದು ಬಂದಿದೆ.ಅಪಘಾತದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ …

Read More »

ಉಗ್ರ ಮಸೂದ್ ಅಜರ್​ಗೆ ಮನೆಯವರೇ ಸತ್ತರೂ ಕಣ್ಣೀರಿಲ್ಲ, ಹತಾಶೆಯಿಲ್ಲ: ಭಯೋತ್ಪಾದನೆಯೇ ಕನಸು!

ನವದೆಹಲಿ, ಮೇ 8: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್​​​ನಲ್ಲಿ (Operation Sindoor) ಕುಟುಂಬದವರು ಹಾಗೂ ಸಂಬಂಧಿಕರು ಮೃತಪಟ್ಟಿರುವುದಾಗಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ (Masood Azhar) ಹೇಳಿಕೊಂಡಿದ್ದಾನೆ. ಕುಟುಂಬದ 10 ಮಂದಿ ಸದಸ್ಯರು ಮತ್ತು ನಾಲ್ವರು ಅತ್ಯಾಪ್ತರು ಸಾವಿಗೀಡಾಗಿದ್ದಾರೆ ಎಂದು ಆತ ತಿಳಿಸಿರುವುದಾಗಿ ವರದಿಯಾಗಿದೆ. ಆದಾಗ್ಯೂ ಆತನಲ್ಲಿ ಕಣ್ಣೀರು ಕಂಡುಬಂದಿಲ್ಲ. ಅಷ್ಟೇ ಯಾಕೆ, ವಿಷಾದವಾಗಲೀ ಹತಾಶೆಯಾಗಲೀ ಇಲ್ಲ. ಇದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಇಷ್ಟೆಲ್ಲ ಆದ ಮೇಲೂ ಆತನಿಗಿರುವುದು ಭಯೋತ್ಪಾದನೆಯ ಕನಸು …

Read More »

ಬೆಳಗಾವಿ-ರಾಯಚೂರು ರಾಷ್ಟ್ರೀಯ ಎಕ್ಸ ಪ್ರೆಸ್‌ವೇ ಮುಖಾಂತರ ಹುಬ್ಬಳಿ-ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ರಾಯಚೂರದಿಂದ ಬರುವ ಜನರಿಗೆ ವಿಮಾನ ನಿಲ್ದಾಣಕ್ಕೆ ನೇರವಾಗಿ ಹೊಗಲು ಸುಮಾರು 4 ಕಿ.ಮೀ ಬೈಪಾಸ್

ಬೆಳಗಾವಿ: ಬೆಳಗಾವಿ-ರಾಯಚೂರು ರಾಷ್ಟ್ರೀಯ ಎಕ್ಸ ಪ್ರೆಸ್‌ವೇ ಮುಖಾಂತರ ಹುಬ್ಬಳಿ-ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ರಾಯಚೂರದಿಂದ ಬರುವ ಜನರಿಗೆ ವಿಮಾನ ನಿಲ್ದಾಣಕ್ಕೆ ನೇರವಾಗಿ ಹೊಗಲು ಸುಮಾರು 4 ಕಿ.ಮೀ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಸಲುವಾಗಿ ಯೋಜನೆಯಲ್ಲಿ ಬದಲಾವಣೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೂಚಿಸಿದ್ದಾರೆ. ಬುಧವಾರ ನಗರದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು …

Read More »

ಬೆಣ್ಣೆ ನಗರಿಯಲ್ಲಿ ಇತ್ತೀಚಿಗೆ ನಡೆದಿದ್ದ ರೌಡಿಶೀಟರ್​ ಕಣುಮಾ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.

ದಾವಣಗೆರೆ: ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯ ಪ್ರಮುಖ ಆರೋಪಿ ಚಾವಳಿ ಸಂತೋಷ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬುಧವಾರ ಸ್ಥಳ ಮಹಜರ್ ವೇಳೆ ಬಾಲ ಬಿಚ್ಚಿದ್ದ ಚಾವಳಿ ಸಂತೋಷ್ ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಆವರಗೆರೆ ಹೈಸ್ಕೂಲ್ ಬಳಿ ಈ ಘಟನೆ ನಡೆದಿದೆ. ಕಣುಮಾ ಸಂತೋಷ್ ನ ಮರ್ಡರ್ ಮಾಡಲು ಉಪಯೋಗಿಸಿದ್ದ ಮೊಬೈಲ್ ನ್ನು ಆವರಗೆರೆ ಬಳಿಯ ಪ್ರದೇಶವೊಂದರ ಬಳಿ ಆರೋಪಿಗಳು ಎಸೆದು ಪರಾರಿ ಆಗಿದ್ದರು. ಸಿಟಿ …

Read More »