Breaking News

ರಾಷ್ಟ್ರೀಯ

ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಚಾಲನೆ

ಬೆಳಗಾವಿ ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಗುರುವಾರ (ಏ.೨೩) ಚಾಲನೆ ನೀಡಿದರು.   ಇಲ್ಲಿನ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗೆ ಇರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ”ಯ ಆವರಣದಲ್ಲಿ ಕೋವಿಡ್-೧೯ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗಿರುತ್ತದೆ. ಸದ್ಯಕ್ಕೆ …

Read More »

ಓರ್ವ ಕೊರೊನಾ ಸೋಂಕಿತನ ಚಿಕಿತ್ಸೆಗೆ ಎಷ್ಟು ಖರ್ಚು ಆಗುತ್ತೆ? ….

ತಿರುವನಂತಪುರಂ: ಕೊರೊನಾ ರೋಗಿಗಳ ಚಿಕಿತ್ಸೆಗೆ ಎಷ್ಟು ರೂ. ಖರ್ಚಾಗಬಹುದು? ಈ ಪ್ರಶ್ನೆ ಹಲವು ಮಂದಿಗೆ ಕಾಡಿರಬಹುದು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಕೇರಳದಲ್ಲಿ ಪ್ರತಿನಿತ್ಯ ಒಬ್ಬ ಸೋಂಕಿತನಿಗೆ ಅಂದಾಜು 25 ಸಾವಿರ ರೂ. ಖರ್ಚಾಗುತ್ತದೆ. ಕೊರೊನಾ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದ್ದರೂ ಕೆಲ ಗುಣಮಟ್ಟದ ಖಾಸಗಿ ಆಸ್ಪತೆಯಲ್ಲೂ ಚಿಕಿತ್ಸೆ ನೀಡಲಾಗುತ್ತದೆ. ಸಾಧಾರಣವಾಗಿ ಕೋವಿಡ್-19 ರೋಗಿಗೆ ಪ್ರತಿನಿತ್ಯ 20 ಸಾವಿರದಿಂದ-25 ಸಾವಿರ ರೂ. ಖರ್ಚಾಗುತ್ತದೆ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ …

Read More »

ಗದಗ:ಸಚಿವರ ಅಭಿಮಾನಿಗಳಿಂದ ಸುಳ್ಳು ಸುದ್ದಿ- ಆತಂಕದಲ್ಲಿ ಜನ

ಗದಗ: ಬುಧವಾರ ಜಿಲ್ಲೆನಲ್ಲಿ ಯಾವುದೇ ಕೊರೊನಾ ಸಟಿವ್ ಪ್ರಕರಣಗಳು ಧೃಢಪಟ್ಟಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಫೇಸ್ಬುಕ್ ಫಾಲೋವರ್ಸ್ ಪಾಸಿಟಿವ್ ಕೇಸ್ ಇದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೊಳಗಾಗಿದ್ದು, ಭಯಭೀತರಾಗಿದ್ದಾರೆ. ಕೊರೊನಾ ವೈರಸ್ ಪ್ರಕರಣದ ಕುರಿತು ಇಂದಿನ ಮೀಡಿಯಾ ಬುಲೆಟಿನ್ ನಲ್ಲಿಪ್ರಕಟವಾಗಿಲ್ಲ. ಆದರೆ ಫೆಸ್ಬುಕ್‍ನಲ್ಲಿ ಹಾಕಿದ್ದಾರೆ. ಇದು ಸುಳ್ಳು ಸುದ್ದಿಯಾಗಿದ್ದು, …

Read More »

ಕೊರೋನಾ ಕುರಿತು ಮತ್ತೊಂದು ಭವಿಷ್ಯ ನುಡಿದ ಕೋಡಿ ಶ್ರೀಗಳು..!

ಹಾಸನ : ಮೇ ಅಂತ್ಯಕ್ಕೆ ಕೊರೊನಾ ಮಹಾಮಾರಿ ಕೊನೆಯಾಲಿದೆ , ಪ್ರಕೃತಿ ಜೊತೆ ಜನ ಸಹಕರಿಸಿದರೆ ವ್ಯಾಧಿ ಶೀಘ್ರ ದೂರವಾಗಲಿದೆ, ಭಾರತಕ್ಕಿಲ್ಲ ಮಹಾಮಾರಿಯ ಗಂಡಾಂತರ ಎಂದು ಕೋಡಿ ಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಬಹಳ ಎಚ್ಚರದಿಂದ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಶ್ರೀಗಳ ಮನವಿ ಮಾಡಿದ್ದಾರೆ . ‘ಸಿರಿವಂತ ಮಗನುಟ್ಟಿ …

Read More »

ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

ಮುಂಬೈ: ಕೊರೊನಾ ವೈರಸ್ ಹಾವಳಿಗೆ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಲಾಕ್‍ಡೌನ್ ಅಂತ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಮಂದಿ ಮಾತ್ರ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸೆಲೆಬ್ರಿಟಿಗಳು ಆರೋಗ್ಯ ಯೋಧರ ಸಹಾಯಕ್ಕೆ ದೇಣಿಗೆ ನೀಡಿದ್ದಾರೆ. ಹೀಗೆ ಕೊರೊನಾ ಯೋಧರಿಗೆ ನೆರವಿಗೆ ಮುಂದೆ ಬಂದವರ ಪಟ್ಟಿಗೆ ಬಾಲಿವುಡ್‍ನ …

Read More »

ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.-ಕ್ರಿಕೆಟ್ ದಿಗ್ಗಜ

ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟವನ್ನು ಮುಂದುವರಿಸಿದೆ. ಇತ್ತ ಶುಕ್ರವಾರ 47ನೇ ವಸಂತಕ್ಕೆ ಕಾಲಿಡುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದು ಆಚರಣೆಗಳ ಸಮಯವಲ್ಲ ಎಂದು ಸಚಿನ್ ಹೇಳಿದ್ದಾರೆ. ಹೀಗಾಗಿ ಅವರು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, …

Read More »

ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

ನವದೆಹಲಿ: ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಚರ್ಚೆ ಮಾಡಲಿದ್ದಾರೆ. ಈ ಹಿಂದೆ ಲಾಕ್‍ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯ ವಿಚಾರವಾಗಿ ಎರಡು ಬಾರಿ ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ …

Read More »

ಹೆಸರನ್ನೇ ಹೇಳದೆ ಆಟೋ ಚಾಲಕರಿಗೆ ವೈದ್ಯರ ತಂಡದಿಂದ ಧನಸಹಾಯ

ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ತಿಂಗಳು ಕಳೆಯುತ್ತಿದೆ. ಈ ನಡುವೆ ದುಡಿಮೆಯೂ ಇಲ್ಲದೆ ಆಟೋ ಚಾಲಕರ ಸ್ಥಿತಿಯೂ ಶೋಚನೀಯವಾಗಿದೆ. ಆಟೋಗಳನ್ನು ಬಾಡಿಗೆ ಪಡೆದು ದುಡಿಯುತ್ತಿದ್ದ ಚಾಲಕರ ಸ್ಥಿತಿಯಂತೂ ಇನ್ನೂ ಗಂಭೀರ. ಹೀಗಾಗಿಯೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಆಟೋ ಓಡಿಸಿಕೊಂಡು ಬದುಕು ನಡೆಸುತ್ತಿದ್ದ, 40 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಹೆಸರನ್ನು ಹೇಳದ ಮೂವರು ವೈದ್ಯರ ತಂಡವೊಂದು ಆರ್ಥಿಕ ನೆರವು ನೀಡಿದೆ. ಪ್ರತೀ ಚಾಲಕರಿಗೆ 1 ಸಾವಿರ …

Read More »

ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ..! ಏನಿರುತ್ತೆ ಏನಿರಲ್ಲ..? ಇಲ್ಲಿದೆ ಡೀಟೇಲ್ಸ್

ಬೆಂಗಳೂರು : ರಾಜ್ಯಾದ್ಯಂತ ಬುಧವಾರ ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯ ಅನುಸಾರ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂಲೇ ಲಾಕ್ ಡೌನ್ ಸಡಿಲಗೊಳಿಸಲಾಗುತ್ತಿದೆ. ಇದೀಗ ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಒಂದಷ್ಟು ಸಡಿಲಿಕೆಗಳನ್ನು ಮಾಡಿ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಈ ಕುರಿತಂತೆ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯ …

Read More »

ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಶನಿಂದ50 ಕುಟುಂಬಗಳಿಗೆದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.

ಬೆಳಗಾವಿ: ಕೊರೊನಾದಿಂದ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬಡ ಕುಟುಂಬಗಳ ಆಹಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಶನಿಂದ ಇಲ್ಲಿನ ಕಣಬರಗಿಯಲ್ಲಿ ವಾಸವಾಗಿರುವ ಪ್ಲಾಸ್ಟಿಕ್, ಬಾಟಲ್ ಆಯ್ದು ಜೀವನ ಸಾಗಿಸುತ್ತಿರುವ ಸುಮಾರು 50 ಕುಟುಂಬಗಳಿಗೆ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು. ಅಕ್ಕಿ, ಬೇಳೆ, ರವಾ, ಗೋಧಿಹಿಟ್ಟು, ಎಣ್ಣೆ ಇತ್ಯಾದಿ ವಸ್ತುಗಳನ್ನು ಒಳಗೊಂಡಿರುವ ಕಿಟ್ ನೀಡಿದರು. ಮಹಿಳಾ ಕಲ್ಯಾಣ …

Read More »