Breaking News

ರಾಷ್ಟ್ರೀಯ

ನಮ್ಮಗೆ ವೀರಶೈವ ಲಿಂಗಾಯತ ಜಾತಿ ಪ್ರಮಾಣ ಪತ್ರ ಬೇಡಾ ಲಿಂಗಾಯತ ಪ್ರಮಾಣ ಪತ್ರ ನೀಡಿ ಎಂದು ತಹಸೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

  ಗೊಕಾಕದಲ್ಲಿ ಲಿಂಗಾಯತ ಸಮುದಾಯಕ್ಕೆ ವೀರಶೈವ ಲಿಂಗಾಯತ ಪ್ರಮಾಣ ಪತ್ರ ನೀಡುವುದನ್ನು ವಿರೋದಿಸಿ ಶೂನ್ಯ ಸಂಪಾದನಮಠದ ಸ್ವಾಮಿಗಳಾದ ಪೀಠಾದಿಪತಿಗಳಾದ ಶ್ರೀ ಮುರುಘರಾಜೇಂದ್ರ ಇವರ ನೇತೃತ್ವದಲ್ಲಿ ಗೋಕಾಕದ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮಾಡುವ ಮೂಲಕ ತೆರಳಿ ತಹಸಿಲ್ದಾರರಿಗೆ ಮನವಿ ನೀಡಿ ಸನ್ 2002 ರವರೆಗೆ ಕಂದಾಯ ಇಲಾಖೆಯಿಂದ ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡುತಿದ್ದರು, ಆದರೆ ಕೆಲವು ಮಠಾದಿಶರ ಒತ್ತಾಯಕ್ಕೆ ಮಣಿದು ಸರಕಾರ ವೀರಶೈವ ಎಂಬ ಪದವನ್ನು ಸೇರಿಸಿ ಲಿಂಗಾಯತ ಸಮುದಾಯಕ್ಕೆ …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (18-09-2020-ಶುಕ್ರವಾರ)

ನಿತ್ಯ ನೀತಿ: ಅಂತರಂಗದಲ್ಲಿ ಜ್ಞಾನದ ಅರಿವು ಉಂಟಾದಾಗ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶುಕ್ರವಾರ, 18.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19 ಚಂದ್ರ ಉದಯ ನಾ.ಬೆ.06.50 / ಚಂದ್ರ ಅಸ್ತ ಸಂ.07.18 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪತ್ (ಮ.12.51) …

Read More »

2024ಕ್ಕೆ ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ’

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು 2024ಕ್ಕೆ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಬೇಕು ಎಂದು ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಆಶಯ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಗುರುವಾರ ಶಾಸಕ ಎಸ್‌.ಎ.ರಾಮದಾಸ್‌ ಆಯೋಜಿಸಿದ್ದ ಪ್ರಧಾನಿ ನರೇಂದ್ರಮೋದಿ ಅವರ 70ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರಮೋದಿ ಅವರು 2024ಕ್ಕೂ ಆಯ್ಕೆಯಾಗಬೇಕು. 2029ರ ವೇಳೆಗೆ ಮತ್ತೊಬ್ಬರನ್ನು ಪ್ರಧಾನಿಯನ್ನಾಗಿ …

Read More »

2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!

ನವದೆಹಲಿ : 2016 ನ.8ರಂದು ನೋಟ್‌ ಬ್ಯಾನ್‌ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, 1000 ರು. ಬದಲು 2000 ರು. ಹೊಸ ನೋಟನ್ನು ಬಿಡುಗಡೆ ಮಾಡುವ ಕುರಿತು ಒಲವನ್ನು ಹೊಂದಿರಲಿಲ್ಲ. ಆದರೆ, ಸಮಾಲೋಚನೆಯ ಬಳಿಕ ಈ ಸಲಹೆಯನ್ನು ಒಪ್ಪಿಕೊಂಡಿದ್ದರು ಎಂಬ ಸಂಗತಿಯನ್ನು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ. ಮೋದಿ ಅವರ ಜನ್ಮ ದಿನದ ನಿಮಿತ್ತ ಆಂಗ್ಲ ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು ನೋಟು ಅಪನಗದೀಕರಣದ …

Read More »

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ-ಮಗ

ಬೆಳಗಾವಿ : ತಾಯಿ, ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ತಾಯಿ ಭಾರತಿ ಗರಾಣಿ(36), ಮಗ ಪ್ರಜ್ವಲ್(15) ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಭಾರತಿ ಗರಾಣಿ ಅವರು ಹಲಗಾ ಗ್ರಾಮದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಬಿಬಿಎಂಪಿ ಕ್ಯಾಂಟೀನ್‌ನಲ್ಲಿ ತೀವ್ರ ನಷ್ಟ: ಮಾಲೀಕ ಆತ್ಮಹತ್ಯೆ ತಾಯಿ, ಮಗನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ …

Read More »

ಡ್ರಗ್ಸ್‌ ಮಾಫಿಯಾ: ಒಂದೇ ಸೆಲ್‌​ನಲ್ಲಿ ರಾಗಿಣಿ, ಸಂಜನಾ ಸ್ನೇಹ​ ಜೀವ​ನ!

ಬೆಂಗಳೂರು : ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣ ಸಂಬಂಧ ಸಿಸಿಬಿ ಬಲೆಗೆ ಬಿದ್ದ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ, ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸ್ನೇಹದಿಂದ ಒಂದೇ ಸೆಲ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಸದ್ಯ ಜೈಲಿನ ಆವರಣದ ಹೊಸ ಕಟ್ಟಡದ ಬ್ಯಾರಕ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ನಟಿಯರು, ಇತರೆ ವಿಚಾರಣಾಧೀನ ಕೈದಿಗಳ ಜತೆ ಹೆಚ್ಚು ಬೆರೆಯಲು ಅವಕಾಶ ಸಿಕ್ಕಿಲ್ಲ. ಬುಧವಾರ ರಾತ್ರಿ ಜೈಲಿ ಸೇರಿದ ಬಳಿಕ ಸಂಜನಾ …

Read More »

ಕೊರೋನಾದಿಂದ ಆರ್ಥಿಕ ಸಂಕಷ್ಟ: ತಾಯಿ, ಮಗ ನೇಣಿಗೆ ಶರಣು

ಬೆಳಗಾವಿ : ಕೊರೋನಾದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಮನನೊಂದು ತಾಯಿ ಹಾಗೂ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ. ಹಲಗಾ ಗ್ರಾಮದ ಭಾರತಿ ಶೇಖರ ದೇಸಾಯಿ (35) ಹಾಗೂ ಪ್ರಜ್ವಲ್‌ ಶೇಖರ ದೇಸಾಯಿ (14) ಆತ್ಮಹತ್ಯೆಗೆ ಶರಣಾದವರು. ಕಳೆದ ಕೆಲವು ವರ್ಷಗಳಿಂದ ಹಲಗಾ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ವಾಸಗಿದ್ದ ಕುಟುಂಬಕ್ಕೆ ಕೊರೋನಾದಿಂದ ಜಾರಿಗೊಳಿಸಿದ್ದ ಲಾಕಡೌನ್‌ನಿಂದಾಗಿ ಸರಿಯಾಗಿ ಕೂಲಿ ಸಿಗದೆ ಇರುವುದರಿಂದ ಆರ್ಥಿಕ …

Read More »

ಬೆಳಗಾವಿ: ರಾಸುಗಳಿಗೆ ಫೈಬರ್‌ ಕಿವಿಯೋಲೆ

ಬೆಳಗಾವಿ: ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ‘ರಾಸುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಟ್ಯಾಗ್‌ ಅಳವಡಿಕೆ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪುನರಾರಂಭ ಮಾಡಲಾಗಿದೆ. ಇಲ್ಲಿ ಒಟ್ಟು 13 ಲಕ್ಷ ರಾಸುಗಳಿಗೆ (ದನ, ಆಕಳು, ಎಮ್ಮೆ, ಕೋಣಗಳಿಗೆ) 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯುಳ್ಳ ಹಳದಿ ಬಣ್ಣದ ಫೈಬರ್‌ ಕಿವಿಯೋಲೆ ಹಾಕುವ ಕಾರ್ಯಕ್ರಮ ಇದಾಗಿದೆ. ಕೋವಿಡ್-19 ಕಾಣಿಸಿಕೊಳ್ಳುವುದಕ್ಕೆ ಮುನ್ನ ಇಲ್ಲಿ 6.50 ಲಕ್ಷ ರಾಸುಗಳಿಗೆ ಅಳವಡಿಸಲಾಗಿದ್ದು, ಉಳಿದವುಗಳಿಗೆ ಹಾಕುವುದಕ್ಕಾಗಿ ಟ್ಯಾಗ್‌ಗಳನ್ನು ಇತ್ತೀಚೆಗೆ ಪೂರೈಸಲಾಗಿದೆ. …

Read More »

ಶಿವಮೊಗ್ಗಕ್ಕೆ ಸೀಮಿತವಾಗಿರುವ ಮುಖ್ಯಮಂತ್ರಿ: ಕತ್ತಿ ಕಿಡಿ

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಖಂಡ ಕರ್ನಾಟಕದ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಕೊಡುತ್ತಿಲ್ಲ’ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಕಿಡಿಕಾರಿದರು. ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಇದರಿಂದ ಬಹಳ ನೋವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ನನಗೆ ಮುಖ್ಯ. ಇದೆಲ್ಲವನ್ನೂ ಕೇಳಬೇಕೋ, ಬೇಡವೋ? ಕೂಗಾಟ ಮಾಡಬೇಕೋ, ಬೇಡವೋ?’ ಎಂದು …

Read More »

ರಾಜ್ಯದಲ್ಲಿ ಭಾರೀ ಏರಿಕೆ ಕಂಡ ಕೊರೋನಾ : ನಿಜವಾಯ್ತು ಭವಿಷ್ಯ

ಬೆಂಗಳೂರು : ರಾಜ್ಯದಲ್ಲಿ ಗುರುವಾರ 9,366 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4.94 ಲಕ್ಷಕ್ಕೆ ಏರಿಕೆಯಾಗಿದೆ. ಬಹುತೇಕ ಶುಕ್ರವಾರ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ಈ ಮೂಲಕ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಬಳಿಕ 5 ಲಕ್ಷ ಸೋಂಕಿನ ಗಡಿ ದಾಟುತ್ತಿರುವ 4ನೇ ರಾಜ್ಯ ಎಂಬ ಅಪಕೀರ್ತಿಗೆ ರಾಜ್ಯ ಭಾಜನವಾಗುತ್ತಿದೆ. ಇನ್ನು ಗುರುವಾರ 93 ಮಂದಿ ಸೋಂಕಿಗೆ ಬಲಿಯಾಗಿದ್ದು …

Read More »