Breaking News

ರಾಜಕೀಯ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಜಿ.ಪಂ-ತಾ.ಪಂ ಗಳಲ್ಲಿ ಹೆಣ್ಣು ಮಕ್ಕಳಿಗೆ ಶೇ.50 ರಷ್ಟು ಸ್ಥಾನ ರಾಜೀವ್ ಗಾಂಧಿ ಚಿಂತನೆ; ಡಿಸಿಎಂ ಡಿ.ಕೆ.ಶಿವಕುಮಾರ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯನ್ನು ರಾಜಧಾನಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ …

Read More »

ಸೈನಿಕರಿಗೆ ಬೆಂಬಲ ಸೂಚಿಸಲು ಗೋಕಾಕದಲ್ಲಿ ಅದ್ದೂರಿಯ ತಿರಂಗಾ ಯಾತ್ರೆ

ಸೈನಿಕರಿಗೆ ಬೆಂಬಲ ಸೂಚಿಸಲು ಗೋಕಾಕದಲ್ಲಿ ಅದ್ದೂರಿಯ ತಿರಂಗಾ ಯಾತ್ರೆ ದೇಶದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬುವ, ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಗೋಕಾಕ ಪಟ್ಟಣದಲ್ಲಿ ಶಾಸಕ ರಮೇಶ ಜಾರಕಿಹೋಳಿ ನಿರ್ದಶನದಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಶಾಸಕ ಅವರ ನೇತೃತ್ವದಲ್ಲಿ ಸಂಗೋಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭಾರತಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.

Read More »

16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಗೆ ಸಹಕಾರ….

16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಗೆ ಸಹಕಾರ…. ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸತ್ಕರಿಸಿದ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್ ಬೆಳಗಾವಿ ಜಿಲ್ಹಾ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್ ಆಫ್ ಬೆಲಗಾಮ್’ನ ವತಿಯಿಂದ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸನ್ಮಾನಿಸಲಾಯಿತು. ಬೆಳಗಾವಿಯಲ್ಲಿ ರೋಟರಿ ಅನ್ನೋತ್ಸವದ ವೇಳೆ ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ , ಕರ್ನಾಟಕ ಸ್ಫೋರ್ಟ್ಸ್ ಅಥಾರಿಟಿಯಿಂದ ಮಾನ್ಯತೆ ಪಡೆದ ಕರ್ನಾಟಕ ಅಸೋಸಿಯೇಷನ್ …

Read More »

ಐ.ಸಿ.ಯುನಲ್ಲಿದ್ದ ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ… ಬೆಳಗಾವಿ ಬಿಮ್ಸ್’ನಲ್ಲಿ ಮಹಿಳೆ ಸಾವು!!!?

ಐ.ಸಿ.ಯುನಲ್ಲಿದ್ದ ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ… ಬೆಳಗಾವಿ ಬಿಮ್ಸ್’ನಲ್ಲಿ ಮಹಿಳೆ ಸಾವು!!!? ತುರ್ತು ಪರಿಸ್ಥಿತಿಯ ವೇಳೆ ಚಿಕಿತ್ಸೆ ನೀಡಲು ವೈದ್ಯರು ನರ್ಸಗಳಿಲ್ಲದ ಹಿನ್ನೆಲೆ ಮಹಿಳಾ ರೋಗಿಯೊಬ್ಬರು ತಡರಾತ್ರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗಾವಿಯ ವಿಶ್ವೇಶ್ವರಯ್ಯಾ ನಗರ, ಸಂಪಿಗೆ ರಸ್ತೆಯ ರಹಿವಾಸಿ ಪ್ರಭಾವತಿ ವಿಷ್ಣು ಮೀರಜ್’ಕರ ಅವರನ್ನು ಮೇ 19 ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಲಾಗಿತ್ತು. ಆದರೇ, ಮಂಗಳವಾರ …

Read More »

ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಂದು ತಾಕೀತು ನೀಡಿದ್ರೂ ಡೋಂಟ್ ಕೇರ್

ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಂದು ತಾಕೀತು ನೀಡಿದ್ರೂ ಡೋಂಟ್ ಕೇರ್ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಂಗಳ ತಲುಪಿದ ಬಾಗಲಕೋಟೆ ಬಿಜೆಪಿ ಬಣ ಬಡಿದಾಟ..!!! ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಂದು ತಾಕೀತು ನೀಡಿದ್ರೂ ಡೋಂಟ್ ಕೇರ್ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಂಗಳ ತಲುಪಿದ ಬಾಗಲಕೋಟೆ ಬಿಜೆಪಿ ಬಣ ಬಡಿದಾಟ..!!! ನಾನಾ… ನೀನಾ.. ಅಂತಿರೋ ಇಬ್ಬರು ನಾಯಕರ ಮಧ್ಯೆ ತಾರಕಕ್ಕೇರಿದ ಮುಸುಕಿನ ಗುದ್ದಾಟ ಪರಸ್ಪರ ದೂರಿನ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾಧ್ಯಕ್ಷರಿಗೆ …

Read More »

ವಿನೂತನ ಸಂಚಾರಿ ಆರೋಗ್ಯ ವಾಹನಗಳಿಗೆ ಸಚಿವ ಎಂ.ಬಿ.ಪಾಟೀಲ ಚಾಲನೆ: ಶೀಘ್ರದಲ್ಲೇ ಇನ್ನೊಂದು ವಾಹನ ಲೋಕಾರ್ಪಣೆ

ವಿನೂತನ ಸಂಚಾರಿ ಆರೋಗ್ಯ ವಾಹನಗಳಿಗೆ ಸಚಿವ ಎಂ.ಬಿ.ಪಾಟೀಲ ಚಾಲನೆ: ಶೀಘ್ರದಲ್ಲೇ ಇನ್ನೊಂದು ವಾಹನ ಲೋಕಾರ್ಪಣೆ ಕಾರ್ಮಿಕರ ಆರೋಗ್ಯ ಸೇವೆಗಾಗಿ, ಅವರಿರುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರವು ವಿನೂತನ ಸಂಚಾರಿ ಆರೋಗ್ಯ ಘಟಕವು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಎರಡು ವಾಹನಗಳಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ವಿಜಯಪುರ ಜಿಲ್ಲೆಗೆ ಮೂರು …

Read More »

ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್

ಬೆಂಗಳೂರು: ಮಹಿಳೆಯನ್ನ ವಿವಸ್ತ್ರಗೊಳಿಸಿ ಸಹಚರರಿಂದ ಆತ್ಯಾಚಾರ ಮಾಡಿಸಿದ್ದಾರೆ ಎಂಬ ಆರೋಪದಡಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆಯು ನೀಡಿದ ದೂರು ಆಧರಿಸಿ ಶಾಸಕ ಮುನಿರತ್ನ, ಸಹಚರರಾದ ವಸಂತ, ಚನ್ನಕೇಶವ ಹಾಗೂ ಕಮಲ್ ಎಂಬುವರ ವಿರುದ್ಧ ಅತ್ಯಾಚಾರ ಆರೋಪದಡಿ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ನೀಡಿರುವ ದೂರಿನಲ್ಲಿ ಏನಿದೆ?: ”40 ವರ್ಷದ ಸಂತ್ರಸ್ತೆಯಾದ ತಾನು ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದು, …

Read More »

ಜಗತ್ತಿನ ಮುಂದೆ ಪಾಕ್​ನ ಬಂಡವಾಳ ಬಯಲು ಮಾಡಲು ಇಂದಿನಿಂದ ಸಂಸದರ ವಿದೇಶ ಯಾತ್ರೆ ಶುರು

ನವದೆಹಲಿ, ಮೇ 21: ಜಗತ್ತಿನ ಮುಂದೆ ಪಾಕಿಸ್ತಾನ(Pakistan)ದ ಬಂಡವಾಳ ಬಯಲು ಮಾಡಲು ಕೇಂದ್ರ ಸರ್ಕಾರವು 59 ಸದಸ್ಯರ ನಿಯೋಗವನ್ನು ಇಂದು ಪ್ರಪಂಚದಾದ್ಯಂತ ಕಳುಹಿಸಲಿದೆ. ಸರ್ವಪಕ್ಷ ಸಂಸದರ 7 ನಿಯೋಗಗಳನ್ನು ರಚಿಸಲಾಗಿದೆ. ಇದರಲ್ಲಿ 10 ಮುಸ್ಲಿಂ ನಾಯಕರನ್ನು ಸಹ ಇರಿಸಲಾಗದೆ. ನಿಯೋಗದಲ್ಲಿ 51 ನಾಯಕರು ಮತ್ತು 8 ರಾಯಭಾರಿಗಳು ಸೇರಿದ್ದಾರೆ. ಎನ್‌ಡಿಎ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ನಿಯೋಗ ಬುಧವಾರ (ಮೇ 21) ಹೊರಡಲಿದೆ. …

Read More »

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಕಾರಣ ಅಕ್ಷಯ್ ಕುಮಾರ್?

‘ಹೇರಾ ಫೇರಿ’ ಹಾಗೂ ‘ಫಿರ್ ಹೇರಾ ಫೇರಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar), ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಅವರು ಬಹುವಾಗಿ ನಗಿಸಿದ್ದರು. ಅದರಲ್ಲೂ ಬಾಬು ಭಯ್ಯಾ ಪಾತ್ರದ ಮೂಲಕ ಪರೇಶ್ ರಾವಲ್ ಅವರು ಎಲ್ಲರ ಮೆಚ್ಚುಗೆ ಪಡೆದರು. ಆದರೆ, ಈಗ ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆದಿದ್ದಾರೆ. ಈ ಬೆನ್ನಲ್ಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್​ಗೆ ನೋಟಿಸ್ ಕಳುಹಿಸಿದ್ದು, 25 …

Read More »

ವಧುವಿನ ಕೊಠಡಿಗೆ ನುಗ್ಗಿ 3.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!:ವಾರಸುದಾರರಿಗೆ ಚಿನ್ನಾಭರಣವನ್ನು ವಾಪಸ್ ನೀಡಿದ ಪೊಲೀಸರು

ನೆಲಮಂಗಲ: ಮದುವೆ ಕಾರ್ಯದಲ್ಲಿ ಎಲ್ಲರೂ ಬ್ಯೂಸಿ ಇದ್ದ ಸಮಯದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ಕಳ್ಳನೊಬ್ಬ, ನಕಲಿ ಕೀ ಬಳಿಸಿ ವಧುವಿನ ಕೊಠಡಿ ಪ್ರವೇಶಿಸಿದ್ದಲ್ಲದೇ ಸೂಟ್ ಕೇಸ್​ನಲ್ಲಿ ಇಡಲಾಗಿದ್ದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ. ಅರೋಪಿಯನ್ನು ಬಂಧಿಸಿರುವ ನೆಲಮಂಗಲ ಟೌನ್ ಪೊಲೀಸರು, ಚಿನ್ನಾಭರಣವನ್ನ ವಾರಸುದಾರರಿಗೆ ವಾಪಸ್ ನೀಡಿದ್ದಾರೆ. ಬಂಧಿತ ಆರೋಪಿ ದಾವಣಗೆರೆ ಮೂಲದ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ (25) ಎಂದು ಗುರುತಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು …

Read More »