ತುಮಕೂರು : ಭಾರತ ಲಾಕ್ಡೌನ್ ಆಗಿ ಇಂದಿಗೆ ಹೇಳು ದಿನ ಕಳೆಯುತ್ತಿದ್ದ ಆದರೆ ಜನರು ಮಾತ್ರ ಸರ್ಕಾರಗಳ ಆದೇಶವನ್ನು ಧಿಕ್ಕರಿಸಿ ಬೈಕುಗಳಲ್ಲಿ ಕಾರುಗಳಲ್ಲಿ ಮನಸೋಇಚ್ಛೆ ಓಡುತ್ತಿರುವುದು ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಓಡಾಡುತ್ತಿರುವುದನ್ನು ಬಿಡುತ್ತಿಲ್ಲ ಇದರಿಂದ ಬೇಸತ್ತ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಹಾಗೂ ಸರ್ಕಲ್ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಪೋಲಿಸ್ ಅದಿಕಾರಿಗಳು ಸಿಬ್ಬಂದಿಗಳು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬರೆಹಗಳನ್ನು ಬರೆಸುವ ಮೂಲಕ ಜನರ …
Read More »ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು,ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ
ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ. ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ …
Read More »ಪಕ್ಕದ ಮಹಾರಾಷ್ಟ್ರದಲ್ಲಿ ರೋಗ ಹೆಚ್ಚಿರುವುದರಿಂದ ನಾವು ಎಷ್ಟೇ ಜಾಗ್ರತೆ ವಹಿಸಿದರೂ ಕಡಿಮೆ:ಗಣೇಶ ಹುಕ್ಕೇರಿ
ಚಿಕ್ಕೋಡಿ – ಕೊರೋನಾ ವೈರಸ್ ಹರಡುವುದನ್ನು ತಡೆಯಲು ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಜನಪ್ರತಿನಿಧಿಗಳು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ. ಜನರಲ್ಲಿ ಅರಿವು ಮೂಡಿಸುವುದು, ಔಷಧಗಳನ್ನು ಸಿಂಬಡಿಸುವುದು, ಅಧಿಕಾರಿಗಳೊಂದಿಗೆ ಸಭೆ ನಡೆಸುವುದು, ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತರಿಸುವುದು… ಇತ್ಯಾದಿ ಕೆಲಸಗಳನ್ನು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಗಣೇಶ ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ ಕಳೆದ ವಾರ ಚಿಕ್ಕೋಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೊರೋನಾ ವೈರಸ್ ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ …
Read More »ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್:
ನಿಪ್ಪಾಣಿ – ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್ ಕೈಗೊಳ್ಳಲಾಗಿದೆ ಎಂದು ಸಿ.ಪಿ.ಐ ಸಂತೋಷ ಸತ್ಯನಾಯಿಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ೧೪೪ ಕಲಂ ಜಾರಿಯಲ್ಲಿದ್ದು ನಗರದಲ್ಲಿ ಅನಗತ್ಯವಾಗಿ ಓಡಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಸರಕಾರದ ಆದೇಶವನ್ನು ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಸಾರ್ವಜನಿಕರು ಇದಕ್ಕೆ ಸ್ಪಂದಿಸಿದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು. ನಗರದಲ್ಲಿ ಇದುವರೆಗೆ …
Read More »ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ತಲುಪಿದ್ದು, ಶತಕದ ಗಡಿಯಲ್ಲಿದೆ.
ಬೆಂಗಳೂರು, ಮಾ.31- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ತಲುಪಿದ್ದು, ಶತಕದ ಗಡಿಯಲ್ಲಿದೆ. ಈ ನಡುವೆ ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆಯವರೆಗೆ ಹೊಸದಾಗಿ 10 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಆರೋಗ್ಯ ಇಲಾಖೆ ಹೊರಡಿಸಿರುವ ಬುಲೇಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ನಿನ್ನೆ ಸಂಜೆಯವರೆಗೆ 88 ಮಂದಿ ಸೋಂಕಿತರಿದ್ದರು, ಅಲ್ಲಿಂದ ಇಂದಿನ ವರೆಗೆ 98 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಮೂರು ಮಂದಿ ಸಾವನ್ನಪ್ಪಿದ್ದರೆ ಆರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೊಸದಾಗಿ ಪತ್ತೆಯಾದ …
Read More »ಕೊರೊನಾ ತಡೆಗೆ ರೈತನಿಂದ ಒಂದು ಲಕ್ಷ ದೇಣಿಗೆ
ಹುಬ್ಬಳ್ಳಿ: ರೈತರೇ ನಿಜವಾದ ಅನ್ನದಾತರು. ತಮ್ಮ ಕಾಯಕದಲ್ಲಿ ಸದಾ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದರಲ್ಲೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ಇದೀಗ ಅಂತಹ ರೈತನೊಬ್ಬ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಧಾರವಾಡ ನಗರದ ಗುಲಗಂಜಿಕೊಪ್ಪ ನಿವಾಸಿ ಸದಾನಂದ ಶಿವಳ್ಳಿ ಅವರು ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಕೋವಿಡ್-19 ತಡೆ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ನೌಕರರು ಹಾಗೂ ಅನೇಕರು …
Read More »ಲಾಕ್‍ಡೌನ್ ಯಶಸ್ವಿಗೊಳಿಸಲು ಮೋದಿಗೆ ಚಿಕ್ಕೋಡಿ ಗೃಹಿಣಿ ಪತ್ರ
ಚಿಕ್ಕೋಡಿ(ಬೆಳಗಾವಿ): ಲಾಕ್ ಡೌನ್ ಯಶಸ್ವಿಗೊಳಿಸಲು ಗೃಹಿಣಿಯೊಬ್ಬರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಗೃಹಿಣಿ ದೀಪಾ ಬಿ.ಕೆ, ಪ್ರಧಾನಿಗೆ ಪತ್ರ ಬರೆದು ರಾಜ್ಯದ ಎಲ್ಲ ಇಲಾಖೆಗಳನ್ನ ಲಾಕ್ ಡೌನ್ ಸೇವೆಗೆ ಬಳಸಿಕೊಳ್ಳಬೇಕು. ಕೇವಲ 5 ರಿಂದ 6 ಇಲಾಖೆಗಳು ಮಾತ್ರ ಲಾಕ್ ಡೌನ್ ಇದ್ದರೂ ಸೇವೆ ಸಲ್ಲಿಸುತ್ತಿವೆ. ಬಾಕಿ ಉಳಿದಿರುವ 50ಕ್ಕೂ ಹೆಚ್ಚು ಇಲಾಖೆಗಳ ನೌಕರರ ಸದ್ಬಳಕೆ ಮಾಡಿಕೊಂಡು ಕೊರೊನಾ ಬಗ್ಗೆ ಜಾಗೃತಿ …
Read More »ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ
ಬೆಳಗಾವಿ: ಕೊರೋನಾ ಮಹಾಮಾರಿ ಎದುರಿಸಲು ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ಬೆಳಗಾವಿ ಜಿಲ್ಲೆಯ ಪೊಲೀಸ್ ಇಲಾಖೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್ ಮಾಡಲಾಗಿದ್ದು, ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ನಿಂಬರಗಿ ತಿಳಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ …
Read More »ಆರಂಭದಲ್ಲಿ ಎಡವಿದ್ದ ಕಲಬುರಗಿ ಈಗ ರಾಜ್ಯಕ್ಕೆ ಮಾದರಿ
ಕಲಬುರಗಿ: ಭಾರತದಲ್ಲಿ ಮೊದಲು ಕೊರೊನಾ ವೈರಸ್ ಕಲಬುರಗಿ ವೃದ್ಧನೋರ್ವನನ್ನು ಬಲಿ ಪಡೆದುಕೊಂಡಿತ್ತು. ಆರಂಭದಲ್ಲಿ ಎಡವಿದ್ದ ಕಲಬುರಗಿ ಜಿಲ್ಲಾಡಳಿತ ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಲಬುರಗಿ ಅನುಸರಿಸಿದ ನಿಯಮಗಳನ್ನು ಇನ್ನುಳಿದ ಜಿಲ್ಲಾಡಳಿತ ಫಾಲೋ ಮಾಡಬೇಕೆಂಬ ಸೂಚನೆ ಸಹ ನೀಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸಿದೆ. ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ? ದೇಶದಲ್ಲಿ ಮೊದಲ ಸಾವಾದರೂ ಕಲಬುರಗಿ ಜಿಲ್ಲಾಡಳಿತ ಪರಿಸ್ಥಿತಿ ಸಮರ್ಥವಾಗಿ ನಿರ್ವಹಣೆ ಮಾಡಿತು. ಮೊದಲ ಪ್ರಕರಣವಾಗಿದ್ದರಿಂದ …
Read More »ಏಪ್ರಿಲ್ 12ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ
ಬೆಂಗಳೂರು: ಕೊರೊನಾ ಹರಡುವಿಕೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಿದೆ. ಕೊರೊನಾ ವೈರಸ್ ದೇಶದಲ್ಲಿ ಜಾಸ್ತಿಯಾದ ಕಾರಣ ಈ ಮೊದಲೇ ಶಾಲೆಗಳಿಗೆ ಏಪ್ರಿಲ್ 11ರ ವರೆಗೆ ರಜೆ ಘೋಷಣೆ ಮಾಡಲಾಗಿತ್ತು. ಈಗ ಕೊರೊನಾ ವೈರಸ್ ಹರಡುವಿಕೆ ಹೆಚ್ಚಳವಾದ ಕಾರಣ ಏಪ್ರಿಲ್ 12ರಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದರ ಜೊತೆಗೆ ಸುತ್ತೋಲೆಯಲ್ಲಿ ಶಿಕ್ಷಕರಿಗೆ ಕೆಲ ನಿಯಮಗಳನ್ನು ಸೂಚಿಸಿರುವ …
Read More »
Laxmi News 24×7