Breaking News

ಬೆಳಗಾವಿ

ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ (69) ಎಂಬುವರು ಅಮೆರಿಕ ಸಂಸತ್ತಿನ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.   ಹಲವು ವರ್ಷಗಳಿಂದ ಅಮೆರಿಕದಲ್ಲಿ ಇರುವ ಶ್ರೀನಿವಾಸ ಥಾಣೇದಾರ ಅವರು ಬೆಳಗಾವಿಯ ಚಿಂತಾಮಣರಾವ್ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಅಲ್ಲಿ ವಿಜ್ಞಾನಿ, ಉದ್ಯಮಿ ಮತ್ತು ಇಂಗ್ಲಿಷ್‌ ಸಾಹಿತಿ ಆಗಿದ್ದಾರೆ. ಶ್ರೀನಿವಾಸ ಅವರು ಮಿಷಿಗನ್ ರಾಜ್ಯದಿಂದ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್‌ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ!

ಗೋಕಾಕ : ತಾಲೂಕಿನ ಹಿರೇನಂದಿ ಗ್ರಾಮದಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿ ಕಾರ್ಯಕ್ರಮಕ್ಕೆ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಈ ಭಾಗದ ರೈತರ ಸಾರ್ವಜನಿಕರ ಕಾರ್ಮಿಕರ ಜೀವನಾಡಿಯಾಗಿದೆ.ಗೋಕಾಕ್ ತಾಲೂಕಿನ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಪ್ರಸಕ್ತ ಸಾಲಿನ 2024-25 ರ 13 ನೇ ವರ್ಷ ಕಬ್ಬು ನೂರಿಸುವ ಹಂಗಾಮ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೈತರು, …

Read More »

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಶ್ರೀಮಂತ ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿಯಾಗಿದೆ;ಮಾಜಿ ಶಾಸಕ ಆಕ್ರೋಶ ಅಥಣಿ:ರಾಜ್ಯದಲ್ಲಿ ಗ್ಯಾಂರಂಟಿ ಯೋಜನೆಗಳಿಂದ ಯಾವುದೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅವರು ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಅಥಣಿ ಸುಗರ್ಸ್ ಕಾರ್ಖಾನೆ ಕಚೇರಿಯಲ್ಲಿ ಮಾಧ್ಯಮದವರೊಡನೆ ಮಾತನಾಡುತ್ತ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿವೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ದೊರಕುತ್ತಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಯಾವುದೆ ಅಭಿವೃದ್ಧಿ ಕಾರ್ಯಗಳನ್ನ ಕಾನದೆ ಹಿನ್ನಡೆಯಗುಟ್ಟುದೆ. …

Read More »

ರಷಿಯಾದಲ್ಲಿ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಅಕ್ಕತಂಗೇರಹಾಳ ವೈಷ್ಣವಿ ನಿರ್ವಾಣಿ ಗೆ ವಿಶ್ವ ಕರಾಟೆ ವೀರಾಗ್ರಣಿ ಪಟ್ಟ

ಬೆಳಗಾವಿ – ರಷಿಯಾದ ಉಜ್ಬೇಕಿಸ್ಥಾನ ದಲ್ಲಿ ಮಂಗಳವಾರ ಜರುಗಿದ ಅಂತರ್ರಾಷ್ಟ್ರೀಯ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ ಗೋಕಾಕ ನಾಡಿನ ಅಕ್ಕತಂಗೇರಹಾಳ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ೧೬ ರ ಬಾಲಕಿ, ವೈಷ್ಣವಿ ಶಿವನಗೌಡಾ ನಿರ್ವಾಣಿ ಸ್ವರ್ಣ ಪಡೆದು ವಿಶ್ವ ವೀರಾಗ್ರಣಿ ಪಟ್ಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಇಂಟರ್ ನ್ಯಾಶನಲ್ ಜೀತ್ ಕುನೆದೊ ಫೆಡರೇಶನ್ ನಿಂದ ಮಂಗಳವಾರ ದಿನಾಂಕ ೦೫ ರಂದು ರಷಿಯಾದ ಉಜಕಿಸ್ಥಾನ ದಲ್ಲಿ …

Read More »

ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ಮಾಹಿತಿ ಸಂಗ್ರಹಿಸಿ: ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಪ್ರತಿ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮ್ಯುಲ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿಯ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಕಳೆದ ಸೋಮವಾರದಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಡೆಯುತ್ತಿರುವ ೨೧ ನೇ ರಾಷ್ಟೀಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, …

Read More »

ಕಬ್ಬಿನ ದರ ಘೋಷಿಸಿ ಕಾರ್ಖಾನೆ ಪ್ರಾರಂಭಿಸಿ’

ಕಾಗವಾಡ: ರಾಜ್ಯ ಸರ್ಕಾರ ಕಬ್ಬಿನ ಕಾರ್ಖಾನೆಗಳನ್ನು ನ.8ರ ನಂತರ ಪ್ರಾರಂಭಿಸಲು ಆದೇಶ ನೀಡಿದ್ದು, ತಾಲ್ಲೂಕಿನ ಕೆಲ ಕಾರ್ಖಾನೆಗಳು ಈಗಾಗಲೇ ಪ್ರಾರಂಭಗೊಂಡಿವೆ‌. ಕಬ್ಬಿನ ದರ ಘೋಷಣೆ ಮಾಡದೇ ಕಾರ್ಖಾನೆಗಳು ಪ್ರಾರಂಭಿಸಿಸಬಾರದೆಂದು ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರ ರೈತರು ಮಂಗಳವಾರ ತಹಶೀಲ್ದಾರ್ ರಾಜೇಶ ಬುರ್ಲಿ ಮತ್ತು ಕಾಗವಾಡ ಪಿಎಸ್‌ಐ ಜಿ.ಜಿ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.   ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ಮೊದಲು ರಾಜ್ಯ ಸರ್ಕಾರ ನ.15 ರ …

Read More »

ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಚಿಕ್ಕೋಡಿ ಲೋಕಸಭೆಯ ನೂತನ ಸಂಸದೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದರು. ಚಿಕ್ಕೋಡಿ ಲೋಕಸಭೆಯ ನೂತನ ಸಂಸದೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದರು. ಈ ವೇಳೆ ಬೆಳಗಾವಿ ನಗರದ ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ ನ ವತಿಯಿಂದ ಧರ್ಮಗುರು ರೇವರೆಂಡ್ ಫಾದರ್ ಶಾಂತಪ್ಪ ಅಂಕಲಗಿ, …

Read More »

ಕಳೆದು ಹೋದ I PHONE ಹಿಂದುರಿಗಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ,ಶ್ಲಾಘನೆಗೆ ವ್ಯಕ್ತಪಡಿಸಿದ್ ಆಯುಕ್ತ

ಕಳೆದು ಹೋದ ಐ-ಫೋನ್ ಹಿಂದುರಿಗಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ… ಸಂಚಾರ ನಿರ್ವಹಣೆ ಮಾಡುವುದರ ಐ ಫೋನ್ ಕಳೆದುಕೊಂಡಿದ್ದವರಿಗೆ ಐ ಫೋನ್ ವಿತರಿಸಿ ದಕ್ಷಿಣ ಸಂಚಾರ ಪೊಲೀಸ್ ಸಿಬ್ಬಂದಿ ಶಿವಾನಂದ ಟಪಾಲರ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಾನಂದ ಟಪಾಲದಾರ ನಿನ್ನೆ ಸಂಜೆ ಬೆಳಗಾವಿಯ ಸೆಕೆಂಡ್ ರೈಲ್ವೆ ಹತ್ತಿರ ಕರ್ತವ್ಯ ನಿರ್ವಹಿಸುವಾಗ ಸಿಕ್ಕಂತ Iphone …

Read More »

ಸವಣೂರ ವಿಧಾನಸಭಾ ಕ್ಷೇತ್ರ ಪ್ರಚಾರದಲ್ಲಿ ಭಾಗವಹಿಸಿದ ಸತೀಶ್ ಜಾರಕಿಹೊಳಿ

ಶಿಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ್ಮದ್ ಖಾನ್ ಪಠಾಣ ಪರ ಪ್ರಚಾರ ನಡೆಸುತ್ತಿರುವ ಮುಖಂಡರು, ‘ಜನಪರವಾದ ಐದು ಗ್ಯಾರಂಟಿ ಯೋಜನೆ ನೋಡಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಕೋರುತ್ತಿದ್ದಾರೆ. ಶಿಗ್ಗಾವಿ ಕ್ಷೇತ್ರದ ಚಾಕಾಪುರದಲ್ಲಿ ಭಾನುವಾರ ಪ್ರಚಾರ ನಡೆಸಿದ ಸಚಿವ ಸತೀಶ ಜಾರಕಿಹೊಳಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ …

Read More »

ರಾಜ್ಯೋತ್ಸವ ಮೆರವಣಿಗೆ ಯಶಸ್ವಿ: ‍ಪೊಲೀಸರ ಕಾರ್ಯಕ್ಕೆ ಪ್ರಶಂಸೆ

ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವೈಭವದಿಂದ ನಡೆದ ರೂಪಕ ವಾಹನಗಳ ಮೆರವಣಿಗೆ ಶುಕ್ರವಾರ ತಡರಾತ್ರಿ ಮುಕ್ತಾಯವಾಯಿತು. ಸತತ 24 ತಾಸಿಗೂ ಅಧಿಕ ಹೊತ್ತು ಪೊಲೀಸರು ಸಮರ್ಥವಾಗಿ ಕೆಲಸ ಮಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದರು. ರಾಜ್ಯೋತ್ಸವದ ಮುನ್ನಾದಿನವಾದ ಗುರುವಾರ ಮಧ್ಯರಾತ್ರಿಯೇ ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ‘ಕನ್ನಡ ಹಬ್ಬ’ದ ಆಚರಣೆಗೆ ಚಾಲನೆ ಸಿಕ್ಕಿತು. ಶುಕ್ರವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಬೆಳಗಾವಿ ಮಾತ್ರವಲ್ಲದೆ; ರಾಜ್ಯದ ವಿವಿಧ ಜಿಲ್ಲೆಗಳಿಂದ …

Read More »