Breaking News

ಬೆಳಗಾವಿ

ಕೊರೋನಾ ಭೀತಿಯ ಮಧ್ಯೆ ಉಳ್ಳವರು ಇಂಥವರ ತುತ್ತಿನ ಚೀಲಗಳ ಬಗೆಗೂ ತುಸು ಚಿಂತಿಸಬೇಕು:. . ( ಅಶೋಕ ಚಂದರಗಿ

ಕೊರೋನಾ ಭೀತಿಯ ಮಧ್ಯೆ ಉಳ್ಳವರು ಇಂಥವರ ತುತ್ತಿನ ಚೀಲಗಳ ಬಗೆಗೂ ತುಸು ಚಿಂತಿಸಬೇಕು: ಸಹಾಯ ಹಸ್ತವನ್ನು ಚಾಚಬೇಕು: ಇದು ಕೇವಲ ಸರಕಾರದ ಕರ್ತವ್ಯವಾಗಿರದೇ ನಮ್ಮ ಧರ್ಮವೂ ಹೌದು ಇಂದು ಬೆಳಗಾವಿಯಲ್ಲಿ ಲಾಕ್ ಔಟ್ .ಎಲ್ಲೆಲ್ಲೂ ಪೋಲೀಸರೇ.ಕರ್ಫ್ಯೂ ಮಾದರಿಯೇ ಸರಿ.ಕಾರ್ ತೆಗೆದುಕೊಂಡು ಶನಿವಾರ ಖೂಟದ ನನ್ನ ಬ್ಯುಜಿನೆಸ್ ಕಚೇರಿ ತಲುಪಲು ಸಾಕು ಬೇಕಾಯಿತು.ಅಷ್ಟರಲ್ಲಿ ಟಿವ್ಹಿ ಗಳಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿತ್ತು.ಬೆಳಗಾವಿಯ ಕಿಲ್ಲಾ ಕೆರೆಯ ಬದಿಗೆ ಗುಡಿಸಲು ಹಾಕಿಕೊಂಡು ಬೀಸುಕಲ್ಲು,ಒರಳು ತಯಾರಿಸುವ ರಾಜಸ್ಥಾನ,ಬಿಹಾರ ಮೂಲದ …

Read More »

ಬೆಳಗಾವಿ ನಗರದಲ್ಲಿ ಕರ್ಫ್ಯೂ ಇದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ………:

ಬೆಳಗಾವಿ- ರಾಜ್ಯ ಸರಕಾರದ ಆದೇಶದಂತೆ ಬೆಳಗಾವಿ ನಗರದಲ್ಲಿ ಕರ್ಫ್ಯೂ ಇದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಬೆಳಗಾವಿ ಪೊಲೀಸರು ನಗರಾದ್ಯಂತ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದ್ದು, ಬೆಳಗಾವಿಯಲ್ಲೂ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ವಾಹನಗಳಿಗೆ ಮೈಕ್ ಕಟ್ಟಿಕೊಂಡು ಜನರು ಮನೆಯಿಂದ ಹೊರಗೆ ಬಾರದಂತೆ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಇಂದು ಇಡೀ ನಗರ ಜನದಟ್ಟಣೆಯಿಂದ ಮುಕ್ತವಾಗಿದೆ. ಎಲ್ಲೆಡೆ ಪೊಲೀಸರು …

Read More »

ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ

ಬೆಟಗೇರಿ:ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ ಜಗತ್ತಿನಾಧ್ಯಂತ ಕರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನಮಂತ ನರಳೆ ಹೇಳಿದರು. ಕರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ …

Read More »

ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ

ಗೋಕಾಕ:ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ ಕೊರೋನಾ ವೈರಸ್ ತಡೆಗಟ್ಟುಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ)ಔಷಧಿಯನ್ನು ಸೋಮವಾರದಂದು ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಕಾಶ ಹೊಳೆಪ್ಪಗೋಳ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಜನತೆ ಒಂದೆಡೆ ಸೇರದೇ ಮನೆಯಲ್ಲಿ ಇರಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಬರಬೇಕು. ಹೊರದೇಶಗಳಿಂದ ಬಂದಂತಹ ಜನರನ್ನು ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು ಅವರಲ್ಲಿ ಅಂತಹ ಯಾವ ಲಕ್ಷಣಗಳು …

Read More »

ಮೂಡಲಗಿ : ಶ್ರೀಗಂಧ ಕದ್ದಿಯುತ್ತಿರುವ ಕದಿಮರು ಅಂಧರ

ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ(50), ಮಚ್ಚೇಂದ್ರ ದತ್ತು ಕದಮ(55), ಪಾಲಭಾಂವಿ …

Read More »

ಶಂಕರಗೌಡ ಪಾಟೀಲ ಇಂದು ಇಲ್ಲಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕೋರೋನಾ ಓಡಿಸಿ ದೇಶ ಉಳಿಸಿ ಜಾಗೃತಿ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಇಂದು ಇಲ್ಲಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕೋರೋನಾ ಓಡಿಸಿ ದೇಶ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂತ ಜಲಾರಾಂ ಫೌಂಡೇಶನ್ ಸಹಯೋಗದಲ್ಲಿ ಮಾಸ್ಕ್ ಮತ್ತು ಡೆಟಾಲ್ ಸೋಪ್ ಗಳನ್ನು ಕಾರ್ಮಿಕರಿಗೆ ಮತ್ತು ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಂತ ಜಲಾರಾಂ ಫೌಂಡೇಶನ್ ಮುಖ್ಯಸ್ಥ ಕನ್ನುಭಾಯಿ ಟಕ್ಕರ್ ಕಾರ್ಯಕ್ರಮ ಆಯಜಿಸಿದ್ದರು. ಈ ಸಂದರ್ಭದಲ್ಲಿ ಧರ್ಮ ದಾಸ್ ಏಇಓ, ಅಪ್ಪಣ್ಣವರ ಡಿವಿಜನಲ್ ಎಕ್ಸಿಕ್ಯೂಟಿವ್, ಕರೂರ, ಗದಗ …

Read More »

ಬೆಳಗಾವಿ ಜಿಲ್ಲೆ: ಐದೂ ಪ್ರಕರಣಗಳ ವರದಿ ನೆಗೆಟಿವ್:ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮಾಹಿತಿ

ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಐದೂ ವರದಿಗಳು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಟ್ಟಾರೆ ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಲಭಿಸಿರುವ ವರದಿ ಪ್ರಕಾರ ಎಲ್ಲ ಐದೂ ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿರುತ್ತದೆ. ಎರಡು ಮಾದರಿ ಬೆಂಗಳೂರು ಹಾಗೂ ಮೂರು ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು …

Read More »

ಬೆಳಗಾವಿ ಜಿಲ್ಲೆ: ಐದೂ ಪ್ರಕರಣಗಳ ವರದಿ ನೆಗೆಟಿವ್:ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮಾಹಿತಿ

ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಐದೂ ವರದಿಗಳು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಟ್ಟಾರೆ ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಲಭಿಸಿರುವ ವರದಿ ಪ್ರಕಾರ ಎಲ್ಲ ಐದೂ ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿರುತ್ತದೆ. ಎರಡು ಮಾದರಿ ಬೆಂಗಳೂರು ಹಾಗೂ ಮೂರು ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು …

Read More »

ಉದಗಟ್ಟಿ : ನಾಳೆಯಿಂದ ಗರ್ಭ ಗುಡಿ ದರ್ಶನ ಬಂದ್. ..

ಗೋಕಾಕ:ನಾಳೆ ನಡೆಯಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿ ಜಾತ್ರೆಯನ್ನು ಕೊರೋನಾ ಭೀತಿಯಿಂದ ರದ್ದುಪಡಿಸಿದ್ದು, ಜತೆಗೆ ದೇವರ ದರ್ಶನವನ್ನು ಸಹ ಭಕ್ತಾದಿಗಳಿಗೆ ಬಾಗಿಲು ಮುಚ್ಚಲಾಗಿದೆ. ನಾಳೆಯಿಂದ ದಿ. 31 ರವರೆಗೆ ದೇವಿಯ ದರ್ಶನದ ಗರ್ಭ ಗುಡಿಯನ್ನು ಮುಚ್ಚಲಾಗುತ್ತದೆ. ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಯ ಭೂತಪ್ಪ ಗೋಡೇರ (ಬಜ್ಜೇರಿ ಅಜ್ಜ) ಮತ್ತು ಹಣಮಂತ ಕೋಫ್ಪದ ಅವರು ತಿಳಿಸಿದ್ದಾರೆ.

Read More »

ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ‌ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ

ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ‌ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ. ಈ ಸಮಯದಲ್ಲಿ ಮೋದಿ ಹೇಳಿದ್ಕೆ ನಾನ್ ಚಪ್ಪಾಳೆ ತಟ್ಟಲ್ಲ, ಆವತ್ತು ಸಿದ್ದು ಕ್ಯಾಂಟೀನ್ ಮಾಡಿದ್ಕೆ ಇವತ್ತು ಊಟ ಸಿಕ್ತಿರೋದು ಅಂತ ಕೆಳಮಟ್ಟದ ರಾಜಕೀಯ ಮಾಡೋದು ಬಿಟ್ಟು ‌ಎಲ್ಲರು ಒಂದಾಗಿ. ಇವತ್ತು ನೀವು ಸೋಲಿಸಬೇಕಿರುವುದು ಮೋದಿನೊ, ಸಿದ್ದುನೊ, ಕಾಂಗ್ರೆಸ್ಸೊ, ಬಿಜೆಪಿನೊ ಅಲ್ಲ…. ಇಡೀ ದೇಶಕ್ಕೆ ಮಾರಕವಾಗಿರೊ ಕೊರೊನವನ್ನ! ?

Read More »