ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಕಬ್ಬಿನ ಬಾಕಿ ಬಿಲ್ ಹಾಗೂ ಕಾರ್ಮಿಕರ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರು ಸೋಮವಾರ ಧರಣಿ ಆರಂಭಿಸಿದ್ದಾರೆ. ‘2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ ₹ 7.8 ಕೋಟಿ, 2018-19 ಮತ್ತು 2019-20ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಬಾಕಿ ₹ 1.2 ಕೋಟಿ ಹಾಗೂ 2019-20ನೇ ಸಾಲಿನಲ್ಲಿ ಜನವರಿ ನಂತರ ಕಬ್ಬು ಪೂರೈಸಿದ ರೈತರ ₹ …
Read More »ಅನಂತಕುಮಾರ್ ಹೆಗಡೆ ನಡೆಸಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳಕರ ಅವರ ಬೆಂಬಲಿಗರ ಅಡ್ಡಿ
ಖಾನಾಪುರ: ತಾಲ್ಲೂಕಿನಲ್ಲಿ ಸಂಸದ ಅನಂತಕುಮಾರ್ ಹೆಗಡೆ ನಡೆಸಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳಕರ ಅವರ ಬೆಂಬಲಿಗರು ಅಡ್ಡಿ ಪಡೆಸಿದ್ದು, ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳಕರ ಕೊರೊನಾದಿಂದ ಕ್ವಾರಂಟೈನ್ ನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ವಿವಿಧ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಭೂಮಿ ಪೂಜೆಯನ್ನು ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಭೂಮಿ ಪೂಜೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಆಹ್ವಾನ ನೀಡಿಲ್ಲ …
Read More »ಒಂದೇ ವಾರದಲ್ಲಿ 145 ಕೆ.ಜಿ ಜಪ್ತಿ ಮಾಡಿ 14 ಆರೋಪಿಗಳನ್ನುಬಂಧಿಸಲಾಗಿದೆ
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ಗಾಂಜಾ ಮಾರಾಟ ಹಾಗೂ ಸೇವೆನೆ ಎಗ್ಗಿಲ್ಲದೆ ನಡೆಯುತ್ತಿದ್ದು, ಒಂದೇ ವಾರದಲ್ಲಿ 145 ಕೆ.ಜಿ ಜಪ್ತಿ ಮಾಡಿ 14 ಆರೋಪಿಗಳನ್ನು ಬಂಧಿಸಿದ್ಧಾರೆ. 2 ಲಕ್ಷ 25 ಸಾವಿರ ಬೆಲೆಯ 145 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 6 ದೂರು ದಾಖಲಾಗಿದ್ದು, 14 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಕಾರ್ಯಾಚರಣೆ …
Read More »ಸತೀಶ ಜಾರಕಿಹೊಳಿ ಟೈಗರ್ ಗ್ಯಾಂಗ್ ಬಗ್ಗೆ ಹೇಳಿದ್ದೇನು….
ಗೋಕಾಕ: ನಗರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಟೈಗರ್ ಗ್ಯಾಂಗ್ ನ್ನು ತಡವಾದರು ಕೂಡ ಪೊಲೀಸರು ಬಂಧಿಸಿದ್ದು, ಇದೊಂದು ಒಳ್ಳೆಯ ಬೆಳವಣಿಗೆ. ನಿಷ್ಪಕ್ಷಪಾತ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರ ಬರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*?? ಟೈಗರ್ ಗ್ಯಾಂಗ್ ಬಂಧನ ವಿಚಾರವಾಗಿ ನಗರದಲ್ಲಿ …
Read More »ಪತಿಯನ್ನು ಕೊಲೆಗೈದು ಹೂತು ಹಾಕಿದ್ದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬೆಳಗಾವಿ : ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು ಕೊಲೆ ಮಾಡಿದ ಪತ್ನಿಯು ಜೆಸಿಬಿ ಮೂಲಕ ಗುಂಡಿ ತೋಡಿಸಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಅನಿತಾ ಸಚಿನ್ ಭೋಪಳೆ (35), ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ (29), ಗಣೇಶ ರೇಡೇಕರ (21) ಬಂಧಿತ ಆರೋಪಿಗಳು. ಸೆಪ್ಟಂಬರ್ 3 ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ …
Read More »ಸುವರ್ಣಸೌಧ ಮುಂದೆ ರಾಯಣ್ಣ, ಚೆನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಸಂಕಲ್ಪ ಯಾತ್ರೆ
ಬೆಳಗಾವಿ : ಸುವರ್ಣ ಸೌಧದ ಮುಂದೆ ರಾಯಣ್ಣ ಪ್ರತಿಷ್ಠಾಪನೆ ವಿಚಾರವಾಗಿ ಬೆಳಗಾವಿಯಲ್ಲಿ ಮೂಡಲಗಿಯ ಶ್ರೀಮಂತ ಶಿವಯೋಗಿ ನೇತೃತ್ವದಲ್ಲಿ ಗೋಕಾಕ್ ತಾಲೂಕು ಮೂಡಲಗಿಯಿಂದ ನಂದಗಡದ ರಾಯಣ್ಣ ಸಮಾಧಿವರೆಗೆ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಸುವರ್ಣಸೌಧದ ಮುಂಭಾಗ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡುವಂತೆ ಸಂಕಲ್ಪ ಯಾತ್ರೆಯಲ್ಲಿ ಯಾತ್ರಾರ್ಥಿಗಳು ಆಗ್ರಹ ಮಾಡಿದ್ದಾರೆ. ಯಾತ್ರೆಯ ವೇಳೆ ಬೆಳಗಾವಿಯ ಚೆನ್ನಮ್ಮ ಪುತ್ಥಳಿ ಹಾಗೂ ಪೀರನವಾಡಿಯ ಸಂಗೊಳ್ಳಿರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.
Read More »ಮೀನುಗಾರರ ಬಲೆಗೆ ಸಿಕ್ಕಿ ಬಿದ್ದ ಮೊಸಳೆ ಮರಿ; ಅರಣ್ಯಾಧಿಕಾರಿಗಳಿಗೆ ಹಸ್ತಾಂತರ
ಚಿಕ್ಕೋಡಿ: ಮೀನುಗಾರರರು ಹಾಕಿದ್ದ ಬಲೆಗೆ ಸಿಕ್ಕಿದ್ದ ಮೋಸಳೆಮರಿಯನ್ನು ರಕ್ಷಿಸಿದ ಮೀನುಗಾರರು ಅದನ್ನು ಇಲಾಖಾ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ. ಮೀನು ಹಿಡಿಯುವ ಸಲುವಾಗಿ ಮೀನುಗಾರರು ನಿನ್ನೆ ಸಂಜೆ ದೂಧಗಂಗಾ ನದಿಗೆ ಬಲೆ ಹಾಕಿಬಂದಿದ್ದರು. ಇಂದು ಬೆಳಗ್ಗೆ ಹೋಗಿ ನೋಡಿದರೆ ಬಲೆಯಲ್ಲಿ ಮೊಸಳೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಕಂಡ ಮೀನುಗಾರರಿಗೆ ಅಚ್ಚರಿ, ಭಯ ಎರಡೂ ಆಗಿದೆ, ಅದ್ಯ ಆ ಮೊಸಳೆ ಮರಿಯನ್ನು ಅರಣ್ಯ …
Read More »ವಚನ ಪುಸ್ತಕ ಮಳಿಗೆ ಉದ್ಘಾಟನೆ
ಬೆಳಗಾವಿ: ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನ ಗೇಟ್ ನಂ.3ರ ಬಳಿಯ ವಚನ ಅಧ್ಯಯನ ಕೇಂದ್ರದಲ್ಲಿ ಆರಂಭಿಸಿರುವ ಪುಸ್ತಕ ಮಾರಾಟ ಮಳಿಗೆಯನ್ನು ಭಾನುವಾರ ಉದ್ಘಾಟಿಸಲಾಯಿತು. ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಟೇಪ್ ಕತ್ತರಿಸಿದರು. ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಜಿಬಿಐಟಿ ಪ್ರಾಂಶುಪಾಲ ಪ್ರೊ.ಸಿದ್ರಾಮಪ್ಪ ವಿ.ಇಟ್ಟಿ ಇದ್ದರು. ‘ಮಳಿಗೆಯಲ್ಲಿ ವಚನ ಸಾಹಿತ್ಯ, ಧರ್ಮ, ತತ್ತ್ವಶಾಸ್ತ್ರ, ಅಧ್ಯಾತ್ಮ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಮೌಲಿಕ ಗ್ರಂಥಗಳು, ಪೂಜಾ …
Read More »ಈ ಗ್ರಾಮಸ್ಥರಿಗೆ ಪ್ರತಿದಿನ ಶಿಕ್ಷಕರ ದಿನ:ಬೆಳಗಾವಿ ಜಿಲ್ಲೆಯ ಇಂಚಲ್ ಗ್ರಾಮದಲ್ಲಿ ಬಹುತೇಕರು ಶಿಕ್ಷಕರು!
ಬೆಳಗಾವಿ:ಈ ಗ್ರಾಮ ಪ್ರತಿದಿನ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಇದು ಬೆಳಗಾವಿ ಜಿಲ್ಲೆಯ ಇಂಚಲ್ ಗ್ರಾಮ, ಶಿಕ್ಷಕರ ಗ್ರಾಮವೆಂದೇ ಕರೆಯಬಹುದು. ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ಒಬ್ಬರು ಶಿಕ್ಷಕರಿದ್ದಾರೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲ್ಲೂಕಿನ ಇಂಚಲ್ ಗ್ರಾಮದಲ್ಲಿ ಸುಮಾರು 10 ಸಾವಿರ ಮಂದಿ ಇದ್ದಾರೆ, ಅವರಲ್ಲಿ ಸುಮಾರು 900 ಮಂದಿ ಶಿಕ್ಷಕರೇ. ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ನೂರಾರು …
Read More »ಕಿಶೋರಿಯರನ್ನು ಅಪೌಷ್ಟಿಕತೆಯಿಂದ ಹೊರತರಬೇಕು: ವೈದ್ಯಾಧಿಕಾರಿ ಡಾ.ಕೀರ್ತಿ
ಬೆಳಗಾವಿ: ‘ಕಿಶೋರಿಯರಲ್ಲಿ ಹೆಚ್ಚಿನವರು ಕುಪೋಷಣೆಗೆ ಒಳಗಾಗಿದ್ದಾರೆ. ಆಟ-ಪಾಠದೊಂದಿಗೆ ಬೆಳೆಯಬೇಕಾದ ಮಕ್ಕಳು ಹಾಸಿಗೆ ಹಿಡಿಯುತ್ತಿದ್ದಾರೆ ಎಂದರೆ ಅದಕ್ಕೆ ಅವರಲ್ಲಿರುವ ಅಪೌಷ್ಟಿಕತೆಯೇ ಕಾರಣ’ ಎಂದು ವೈದ್ಯಾಧಿಕಾರಿ ಡಾ.ಕೀರ್ತಿ ಹೇಳಿದರು. ಇಲ್ಲಿನ ಮಹಿಳಾ ಕಲ್ಯಾಣ ಸಂಸ್ಥೆಯು ಹುಕ್ಕೇರಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯರನಾಳ, ಹೊಸೂರ, ನಿರ್ವಾಣಹಟ್ಟಿ, ಬಡಕುಂದ್ರಿ ಗ್ರಾಮದ ಕಿಶೋರಿಯರಿಗಾಗಿ ಆಯೋಜಿಸಿದ್ದ ‘ಪೌಷ್ಟಿಕಾಂಶ ಅಭಿಯಾನ’ದ ಅಂಗವಾಗಿ ನಡೆದ ಆರೋಗ್ಯ ತಪಾಸಣೆ ಮತ್ತು ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು …
Read More »
Laxmi News 24×7