Breaking News

ಬೆಳಗಾವಿ

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ.

ಹುಕ್ಕೇರಿ: ಕಳೆದ ಮೂರ್ನಾಲ್ಕು ದಿನಗಳಿಂದ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ. ಮಣಗುತ್ತಿ, ಬೆನಕನಹೊಳಿ, ಬೋಳಶ್ಯಾನಟ್ಟಿ, ಸೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಸೋಮವಾರ ಸಭೆ ನಡೆಸಿ, ಮಣಗುತ್ತಿ ಗ್ರಾಮದಲ್ಲಿನ ಲಕ್ಷ್ಮಿ ಟ್ರಸ್ಟ್‌ ಜಾಗದಲ್ಲಿ ಶಿವಾಜಿ ಮೂರ್ತಿ ಸೇರಿ ಐದು ಪುತ್ಥಳಿ ನಿರ್ಮಾಣಕ್ಕೆ ತಿರ್ಮಾನ ಕೈಗೊಂಡಿದ್ದಾರೆ. ಮಣಗುತ್ತಿ ಗ್ರಾಮದಲ್ಲಿ ಅನಧಿಕೃತವಾಗಿ ಶಿವಾಜಿ ಮೂರ್ತಿ ಸ್ಥಳಾಂತರ ಮಾಡಿ, ತೆರವುಗೊಳಿಸಿದ ಹಿನ್ನೆಲೆ ಗ್ರಾಮದಲ್ಲಿ …

Read More »

ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಂಗಳವಾರ ಸೋಲಾರ್ ಲ್ಯಾಂಪ್ ಹಾಗೂ ಸೋಲಾರ್ ವಾಟರ್ ಹೀಟರ್ ವಿತರಿಸಿದರು.

ಚಿಕ್ಕೋಡಿ  – ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಂಗಳವಾರ ಸೋಲಾರ್ ಲ್ಯಾಂಪ್ ಹಾಗೂ ಸೋಲಾರ್ ವಾಟರ್ ಹೀಟರ್ ವಿತರಿಸಿದರು. ಅರಣ್ಯ ಇಲಾಖೆಯ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಅಡಿಯಲ್ಲಿ ವಿಶೇಷ ಪ್ರಯತ್ನ ಮಾಡಿ ಗಣೇಶ ಹುಕ್ಕೇರಿ ಬಡ ಜನರಿಗೆ ಈ ಸೌಲಭ್ಯ ಕೊಡಿಸಿದ್ದಾರೆ. ಸರಕಾರ ಯಾವುದೇ ಇರಲಿ, ಕ್ಷೇತ್ರದ ಜನರಿಗೆ ಎಲ್ಲ ರೀತಿಯ ಸೌಲಭ್ಯ ಕೊಡಿಸಲು ನಾನು ಮತ್ತು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ನಿರಂತರವಾಗಿ ಪ್ರಯತ್ನ …

Read More »

ಕೋವಿಡ್ ಚಿಕಿತ್ಸೆಗೆ ಮುಂದಾಗುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ತಕ್ಷಣವೇ ಅನುಮತಿ ನೀಡಬೇಕು ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಬೆಳಗಾವಿ,): ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮುಂದಾಗುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ತಕ್ಷಣವೇ ಅನುಮತಿ ನೀಡಬೇಕು ಎಂದು ಶಶಿಕಲಾ ಜೊಲ್ಲೆ ತಿಳಿಸಿದರು. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ(ಆ.11) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರ್ಯಾಪಿಡ್ ಟೆಸ್ಟ್ ಗೆ ಹೆಚ್ಚಿನ ಆದ್ಯತೆ ನೀಡಬೇಕು. ಏನಾದರೂ ಕೊರತೆ ಕಂಡುಬಂದರೆ ಉಸ್ತುವಾರಿ ಸಚಿವರು ಅಥವಾ ತಮ್ಮ ಗಮನಕ್ಕೆ ತರಬೇಕು. ಖಾಸಗಿ …

Read More »

70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ:ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ

ಬೆಳಗಾವಿ-ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ, ಈವರೆಗೂ 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬಿಮ್ಸ್ ಆಸ್ಪತ್ರೆಯಲ್ಲಿ ಈವರೆಗೂ 70 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದೆ. ಈ ಪೈಕಿ 34 ಸೀಜರಿನ್ ಹಾಗೂ 36 ನಾರ್ಮಲ್ ಡಿಲಿವರಿ ಆಗಿವೆ,ಎಂದು ದಾಸ್ತಿಕೊಪ್ಪ ಮಾಹಿತಿ ನೀಡಿದ್ದಾರೆ. ಹೆರಿಗೆಯಾದ 5 ಅಥವಾ 7ನೇ ದಿವಸಕ್ಕೆ ನವಜಾತ ಶಿಶುವಿನ ಸ್ವ್ಯಾಬ್ ಟೆಸ್ಟ್ …

Read More »

ಕಣಕುಂಬಿ ಅರಣ್ಯ ಪ್ರದೇಶದಲ್ಲಿರೈತನ ಮೇಲೆ ಕರಡಿಯೊಂದು ದಾಳಿ

ಬೆಳಗಾವಿ- ಖಾನಾಪೂರ ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದೆ. ಚಿಕಲೆ ಗ್ರಾಮದ 60 ವರ್ಷದ ಶಂಕರ ಗವಸ್ ಎಂಬ ರೈತ ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿ ಮಾಡಿ ಗಾಯಪಡಿಸಿದ್ದು ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

Read More »

ಗೋಕಾಕ ನಗರದಲ್ಲಿ ಐದು ದಿನಗಳ ಕಾಲ ಲಾಕ್ ಡೌನ್

ಗೋಕಾಕ:  ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಮಾಡಲು  ನಿರ್ಧರಿಸಲಾಗಿದೆ ಎಂದು ನಗರಸಭೆ  ಕಮಿಷನರ್ ಶಿವನಂದ ಹಿರೇಮಠ್  ತಿಳಿಸಿದ್ದಾರೆ.  ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ  ಅಂಗಡಿ, ಮುಗ್ಗಟ್ಟು ಹಾಗೂ ವ್ಯಾಪಾರಸ್ತರೊಂದಿಗೆ ಮಂಗಳವಾರ  ನಡೆದ ಸಭೆಯಲ್ಲಿ ನಾಳೆಯಿಂದ  ಆ. 15(ರವಿವಾರ)ದವರೆಗೂ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ. ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತಲಿದೆ.  ಹೀಗಾಗಿ ಬಟ್ಟೆ ಅಂಗಡಿ, …

Read More »

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

ಚಿಕ್ಕೋಡಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದುಕೊಂಡು ನಮ್ಮ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ ಅವಳ ಮುಂದಿನ ವಿದ್ಯಾಭ್ಯಾಸದ ಸಮಗ್ರ ಖರ್ಚು ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂದು ಸಿಎಲ್‍ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ ತಿಳಿಸಿದರು. ಇಲ್ಲಿನ ಸಿಎಲ್‍ಇ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ ಪಡೆದ ಎಂ.ಕೆ.ಕವಟಗಿಮಠ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ …

Read More »

ನಗರ ಅಪರಾಧ ಮತ್ತು ಸಂಚಾರ ಪೊಲೀಸ್ ದಳದ ಡಿಸಿಪಿಯಾಗಿ ಚಂದ್ರಶೇಖರ್ ನೀಲಗಾರ್ ಅಧಿಕಾರ

ಬೆಳಗಾವಿ : ನಗರ ಅಪರಾಧ ಮತ್ತು ಸಂಚಾರ ಪೊಲೀಸ್ ದಳದ ಡಿಸಿಪಿಯಾಗಿ ಚಂದ್ರಶೇಖರ್ ನೀಲಗಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಡಿಸಿಪಿ ಯಶೋಧಾ ವಂಟಗೋಡಿ ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆಯಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚಂದ್ರಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಅವರು ಅಧಿಕಾರ ಸ್ವೀಕರಿಸಿಕೊಂಡರು.

Read More »

S.S.L.C.ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ

ಹಾವೇರಿ: ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಬಂದ ಬೆನ್ನಲ್ಲೇ ಕಡಿಮೆ ಅಂಕ ಬಂದಿದೆ ಹಾಗೂ ಅನುತ್ತೀರ್ಣನಾಗಿದ್ದೇನೆ ಎಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣಿತ ವಿಷಯದಲ್ಲಿ ಫೇಲಾದ ಕಾರಣಕ್ಕೆ ಹಾವೇರಿಯ ದ್ಯಾಮವ್ವನ ಗುಡಿ ಓಣಿಯಲ್ಲಿ ವೈಷ್ಣವಿ ರಿತ್ತಿ (16) ಮನೆಯಲ್ಲಿ ವಿಷ ಸೇವಿಸಿದ್ದಾಳೆ. …

Read More »

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ

ಬೆಳಗಾವಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು,  ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಪ್ರಶಾಂತ ಅವರು ವಿರುದ್ಧ 26,78,473 ರುಪಾಯಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ವಿಚಾರಣೆ ನಡೆಸಿದೆ. ಅಲ್ಲದೆ ಅವರ ವಿರುದ್ಧ ಹಲವಾರು ಗಂಭೀರ ಆರೋಪಗಳ ಕೇಳಿ ಬಂದಿವೆ.  ಗ್ರಾಮ ಪಂಚಾಯಿತಿಯ ಕರವಸೂಲಾತಿಯಲ್ಲಿ …

Read More »