Breaking News

ಬೆಳಗಾವಿ

ಬತ್ತಿದ ಕೃಷ್ಣೆ; ನೀರಿಗಾಗಿ ಹಾಹಾಕಾರ,ರಾಶಿ, ರಾಶಿ ಮೀನುಗಳ ಮಾರಣ ಹೋಮ

ಅಡಹಳ್ಳಿ: ಮಳೆ ಕೊರತೆ ಹಾಗೂ ಬಿಸಿಲಿನ ಹೊಡೆತಕ್ಕೆ ಹಿಪ್ಪರಗಿ ಅಣೆಕಟ್ಟೆ ಕೆಳಭಾಗದ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗಿದ್ದು, ನೀರಿಲ್ಲದೇ ರಾಶಿ, ರಾಶಿ ಮೀನುಗಳ ಮಾರಣ ಹೋಮವಾಗಿದೆ. ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸವದಿ, ಶಿರಹಟ್ಟಿ, ಬಳವಾಡ, ಝುಂಜರವಾಡ ಸೇರಿದಂತೆ ತಾಲೂಕಿನ ಪೂರ್ವ ಭಾಗದ ಹಲವಾರು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ಮಳೆಗಾಲ ಆರಂಭವಾಗಲು ಎರಡೂವರೆ ತಿಂಗಳು ಬಾಕಿ ಇದ್ದು, ಈಗಲೇ ನೀರಿನ ಸಮಸ್ಯೆ ಶುರುವಾಗಿದೆ. ಜನ-ಜಾನುವಾರುಗಳ ಗತಿ …

Read More »

ಬಿಜೆಪಿ ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸಿ ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ.;ಸವದಿ

ಅಥಣಿ : ದೇಶದಲ್ಲಿ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ  ದೇಶದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಜನರ ಕಣ್ಣಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಆರೋಪಿಸಿದರು. ಅವರು ಬುಧವಾರ ಇಲ್ಲಿನ  ಪುರಸಭೆ ಕಾಂಪ್ಲೆಕ್ಸ್ ನಲ್ಲಿ  ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಅಲ್ಲಿನ ಮುಖಂಡರ …

Read More »

ರೈತರಿಗೆ ಕರೆಂಟ್ ಬರೆ

ಅಥಣಿ : ಕೃಷ್ಣಾ ನದಿ ಪಾತ್ರದಲ್ಲಿ ಸಧ್ಯ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಿಂದ ಕಬ್ಬು ಬೆಳೆ ರಕ್ಷಿಸುವ ಅವಸರದಲ್ಲಿದ್ದ ರೈತರಿಗೆ ಈಗ ಕೇವಲ ಒಂದು ಗಂಟೆ ವಿದ್ಯುತ್ ನೀಡುವ ಮೂಲಕ ಜಿಲ್ಲಾಡಳಿತ ಮತ್ತೊಂದು ಬರೆ ನೀಡಿದೆ. ಹೌದು ಕಳೆದ ನಾಲ್ಕು ದಿನಗಳಿಂದ ಕೃಷ್ಣಾ ನದಿ ಪಾತ್ರದಲ್ಲಿ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಕಾರಣ ನೀಡಿ ಸಧ್ಯ ವಿದ್ಯುತ್ ಕಡಿತ …

Read More »

ಧುಪದಾಳ ಜಲಾಶಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ

ಬೆಳಗಾವಿ: ಗೋಕಾಕ ತಾಲೂಕಿನ ಧುಪದಾಳ ಗ್ರಾಮದಲ್ಲಿ ಘಟಪ್ರಭಾ ಹಾಗೂ ಹಿರಣ್ಯಕೇಶಿ‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ನೀರಿನ‌ ಸಂಗ್ರಹದ ಸಾಮರ್ಥ್ಯವನ್ನು ಪರಿಶೀಲಿಸಿದರು.  ಇದೇ ವೇಳೆ  ನೀರಿನ ಸಂಗ್ರಹ ಹೆಚ್ಚಿಗೆ ಮಾಡಲು ಯೋಜನೆ ರೂಪಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಈ  ಜಲಾಶಯ   ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ …

Read More »

ಪ್ರಿಯಾಂಕಾ ಪರ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ

ರಾಯಭಾಗ : ಜಾರಕಿಹೊಳಿ ಕುಟುಂಬಕ್ಕೆ ರಾಜಕಾರಣ ಹೊಸದಲ್ಲ. ಪ್ರಿಯಾಂಕಾ ಜಾರಕಿಹೊಳಿ ಮುಗ್ದ ಹೆಣ್ಣುಮಗಳು, ಆದರೆ ತುಂಬಾ ಬುದ್ದಿವಂತೆ. ಈ ಯುವ ನಾಯಕಿಯನ್ನು ಗೆಲ್ಲಿಸುವ ಮೂಲಕ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಭಾಗದಲ್ಲಿ ಸೋಮವಾರ ಪ್ರಿಯಾಂಕಾ  ಜಾರಕಿಹೊಳಿ ಪರ ಪ್ರಚಾರದ ಸಭೆಯಲ್ಲಿ ಮಾತನಾಡಿದ ಸಚಿವರು,  ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಡವರ ಹಸಿವನ್ನ …

Read More »

ಬೆಳಗಾವಿ | ‘ಸ್ವೀಪ್‌’ ರಾಯಭಾರಿಗಳಿಂದ ‘ಮತ’ ಜಾಗೃತಿ

ಬೆಳಗಾವಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮೂವರನ್ನು ರಾಯಭಾರಿಗಳನ್ನಾಗಿ ನೇಮಿಸಿದೆ. ಇಲ್ಲಿನ ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌, ಲಿಂಗತ್ವ ಅಲ್ಪಸಂಖ್ಯಾತರಾದ ಚಿನ್ನು ತಳವಾರ ಮತ್ತು ರಾಷ್ಟ್ರೀಯ ಜುಡೋಪಟು ಸಹನಾ ಎಸ್‌.ಆರ್‌. ರಾಯಭಾರಿಗಳಾಗಿ ನೇಮಕ ಗೊಂಡವರು. ನಾಲ್ಕನೇ ಬಾರಿ ರಾಯಭಾರಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ …

Read More »

ಸಂಚಾರ ದಟ್ಟಣೆಯಿಂದ ಹೈರಾಣದ ಜನ

ಅಥಣಿ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣ ಜನ ಬೇಸತ್ತು ಹೋಗಿದ್ದಾರೆ. ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಜನರೂ ಹೈರಾಣಾಗಿದ್ದಾರೆ. ಸಂಚಾರ ಪೊಲೀಸರು ಇದ್ದೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಒನ್‌ ವೇಗಳಲ್ಲಿ ಓಡಿಸುವುದು, ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡುವುದು ನಡೆದೇ ಇದೆ.   ಭಾರಿ ವಾಹನಗಳ ಪ್ರವೇಶ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ಸಂಚಾರಿ ಪೊಲೀಸ್ ಸಿಬ್ಬಂದಿಯ ಕೊರತೆ, ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ ಪಟ್ಟಣದ ಸಂಚಾರ ಶಿಸ್ತನ್ನು ಹಾಳು …

Read More »

ಟೀಕೆ-ಟಿಪ್ಪಣಿಗೆ ಪ್ರತಿಕ್ರಿಯೆ ಕೊಡುವುದಿಲ್ಲ: ಜಗದೀಶ ಶೆಟ್ಟರ್

ಬೆಳಗಾವಿ: ‘ಇದು ರಾಷ್ಟ್ರೀಯ ವಿಚಾರಧಾರೆಗಳ ಆಧಾರದಲ್ಲಿ ನಡೆಯುವ ಚುನಾವಣೆ. ಇಲ್ಲಿ ರಾಷ್ಟ್ರೀಯ ವಿಚಾರಗಳೇ ಚರ್ಚೆಯಾಗಬೇಕು. ಆದರೆ, ಕಾಂಗ್ರೆಸ್‌ನವರಿಂದ ಸಣ್ಣ-ಪುಟ್ಟ ‌ವಿಷಯ ಚರ್ಚಿಸಲಾಗುತ್ತಿದೆ. ಇದಕ್ಕೆ ನಾವು ಉತ್ತರ ನೀಡುವುದಿಲ್ಲ’ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.   ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ನನ್ನ ಕರ್ಮಭೂಮಿ. ಆದರೆ, ಕಾಂಗ್ರೆಸ್‌ನವರು ನಾನು ಹೊರಗಿನವನು ಎನ್ನುತ್ತಿದ್ದಾರೆ. ಅವರಿಗೆ ಚರ್ಚಿಸಲು ಯಾವುದೇ ವಿಷಯವೇ ಇಲ್ಲ. ಟೀಕೆ-ಟಿಪ್ಪಣಿಗೆ ಯಾವುದೇ ಪ್ರತಿಕ್ರಿಯೆ …

Read More »

ಶೆಟ್ಟರ್‌ರನ್ನು ಕೀಳಾಗಿ ಕಾಣಬೇಡಿ: ಬಾಲಚಂದ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಯಾರೂ ಕೀಳಾಗಿ ಕಾಣಬಾರದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೆಟ್ಟರ್ ಅವರು ಅರಭಾವಿ ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ಮಠಾಧೀಶರ ಆಶೀರ್ವಾದ ಪಡೆದಿದ್ದಾರೆ. ನಾನು, ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ನಮ್ಮನ್ನು …

Read More »

ಸಂಕೇಶ್ವರ ಮಾರುಕಟ್ಟೆಗೆ ಮಹಾರಾಷ್ಟ್ರ ಮಾವಿನಕಾಯಿ ಲಗ್ಗೆ

ಸಂಕೇಶ್ವರ: ಸಂಕೇಶ್ವರ ಪಟ್ಟಣಕ್ಕೆ ಮಹಾರಾಷ್ಟ್ರದಿಂದ ಮಾವಿನಕಾಯಿಗಳು ಬರುತ್ತಿದ್ದು ಪಟ್ಟಣದ ತುಂಬೆಲ್ಲ ಮಾವಿನಕಾಯಿಗಳದ್ದೇ ರಾಶಿ.   ಆದರೆ ದರ ಮಾತ್ರ ಗಗನಕ್ಕೇರಿದ್ದು ದುಬಾರಿ ದರಕ್ಕೆ ಮಾವಿನಕಾಯಿಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ದೇವಗಡ ಆಪೂಸ್ ಮಾವಿನಕಾಯಿ ದರ ಒಂದು ಡಜನ್ನಿಗೆ ₹800 ರಿಂದ ₹1,000 ಗಳಿದ್ದು ರತ್ನಾಗಿರಿ ಆಪೂಸ್ ಮಾವಿನಕಾಯಿ ದರ ₹1,200 ರೂಪಾಯಿಗಳಷ್ಟಿದೆ.   ಯುಗಾದಿ ನಂತರವೇ ಮಾವಿನ ಹಣ್ಣಿನ ದರ ಇಳಿಮುಖವಾಗಲಿದೆ.

Read More »