ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಆಕಳು ಮೇಯಿಸಲು ಬಿಟ್ಟಿದ್ದಿಯಾ ಎಂದು ಜಗಳ ತೆಗೆದು ಶ್ರೀಕಾಂತ ಕಟಾಬಳಿ ಎನ್ನುವ ಯುವಕನ ಮೇಲೆ ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್ ಹಾಗೂ ರಂಜಿತ್ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಶ್ರೀಕಾಂತ ಕಟಾಬಳಿ ತಲೆಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಡ್ಡಿ …
Read More »ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ
ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಗೆ ಚುನಾವಣೆ ಮುಗಿದು, ನೂತನ ಸದಸ್ಯರು ಚುನಾಯಿತರಾಗಿ ಬರೋಬ್ಬರಿ ಐದು ತಿಂಗಳುಗಳೇ ಕಳದಿದ್ದರೂ ಅವರಿಗೆ ಅಧಿಕಾರದ ಭಾಗ್ಯ ಸಿಕ್ಕಿಲ್ಲ. ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ ಮುಂದುವರಿದಿದೆ. ಮಹಾನಗರಪಾಲಿಕೆ ಚುನಾವಣೆ ಮತದಾನ ಸೆ.3ರಂದು ನಡೆದಿತ್ತು. .6ರಂದು ಫಲಿತಾಂಶ ಪ್ರಕಟವಾಗಿತ್ತು. ಆಗಿನಿಂದಲೂ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಪ್ರಕ್ರಿಯೆಯೇ ನಡೆಯದಿರುವುದು ಅವರು ಅಧಿಕೃತವಾಗಿ ಅಧಿಕಾರ ಚಲಾಯಿಸುವುದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದಕ್ಕೆ ಅವರಿಂದ ಸಾಧ್ಯವಾಗಿಲ್ಲ. ಈಚೆಗೆ ವಾಲ್ವ್‌ಮನ್‌ಗಳ ಮುಷ್ಕರದಿಂದ …
Read More »ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ.
ಬೆಳಗಾವಿ: ಚುಚ್ಚುಮದ್ದು ಪಡೆದು ಜಿಲ್ಲೆಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖಾ ವರದಿಯನ್ನು ಸಿಎಂಗೆ ಕಳುಹಿಸಿ ಕೊಟ್ಟಿದ್ದೇವೆ. ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ಪರಿಶೀಲನೆ ನಡೆಸಿ, ವರದಿ ಕೊಟ್ಟಿದ್ದಾರೆ. ಟೆಕ್ನಿಕಲ್ ವರದಿ ಇರುವ ಕಾರಣ ಅದರಲ್ಲಿರುವ …
Read More »ಆಸ್ತಿಗೆ ಸಂಬಂಧಿಸಿದ ಕೆಲಸಕ್ಕೆ ₹ 10ಸಾವಿರದಿಂದ ₹ 15ಸಾವಿರ ಲಂಚ ಕೇಳುತ್ತಾರೆ
ತೆಲಸಂಗ: ಅರಟಾಳ ಗ್ರಾಮ ಪಂಚಾಯ್ತಿಯಿಂದ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಜನರು ಗ್ರಾಮ ಲೆಕ್ಕಾಧಿಕಾರಿ ವಿರುದ್ದ ಆರೋಪಗಳ ಸುರಿಮಳೆಗೈದರು. ಶಿವಾನಂದ ಭಂಡಾರಿ, ಅಶೋಕ ಆನಗೊಂಡಿ, ಭೀಮಪ್ಪ ಭಂಡಾರಿ ಮಾತನಾಡಿ, ‘ಗ್ರಾಮ ಲೆಕ್ಕಾಧಿಕಾರಿ ಇರ್ಫಾನ್ ಆಲಗೂರ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೆಲಸಕ್ಕೆ ₹ 10ಸಾವಿರದಿಂದ ₹ 15ಸಾವಿರ ಲಂಚ ಕೇಳುತ್ತಾರೆ. ಅವರನ್ನು ವರ್ಗಾಯಿಸಿ ದಕ್ಷ ಅಧಿಕಾರಿ ಹಾಕಬೇಕು’ ಎಂದು ಒತ್ತಾಯಿಸಿದರು. ‘ಗ್ರಾಮ ಲೆಕ್ಕಾಧಿಕಾರಿಯಿಂದ ಯಾವುದೇ ದಾಖಲಾತಿ ಪಡೆಯಲು …
Read More »ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್
ಬೆಳಗಾವಿ: ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಇನ್ಸಪೆಕ್ಟರ್ ಸೇರಿ 35, ಜಿಲ್ಲೆಯ 8 ಹಾಗೂ ಕೆಎಸ್‌ಆರ್‌ಪಿ ತುಕಡಿಯ 14 ಪೊಲೀಸ್ ಪೇದೆಗಳು ಸೇರಿ ಒಟ್ಟು 57 ಮಂದಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ ಪೈಕಿ ಇಬ್ಬರು ಗುಣಮುಖರಾಗಿದ್ದಾರೆ.ಬೆಂಗಳೂರಿನಲ್ಲಿ ಅತಿ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದರಿಂದ ಬೆಳಗಾವಿಯಲ್ಲಿಯೂ ಮುಂಜಾಗ್ರತ ಕ್ರಮವಾಗಿ ಕೋವಿಡ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಗರದ ಎಪಿಎಂಸಿ ಇನ್ಸಪೆಕ್ಟರ್, ಇಬ್ಬರು …
Read More »ಬೆಳಗಾವಿ ಇಂದಿನ ಕೊರೋನಾ
ಬೆಳಗಾವಿ- ಇಂದು ಜಿಲ್ಲೆಯಲ್ಲಿ 418 ಪ್ರಕರಣಗಳು ಕಂಡು ಬಂದಿವೆ. ಅಥಣಿ 33, ಚಿಕ್ಕೋಡಿ 29, ಸವದತ್ತಿ 33 ಪ್ರಕರಣಗಳು ಕಂಡು ಬಂದಿವೆ.
Read More »ಮಹದಾಯಿ ಹೋರಾಟ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಪಾಲಿಕೆಯಲ್ಲಿ ಅಭಯ ಪಾಟೀಲ ಮೇಯರ್, ಅನೀಲ ಬೆನಕೆ ಡೆಪ್ಯುಟಿ ಮೇಯರ್ ಸತೀಶ್ ಜಾರಕಿಹೊಳಿ ಲೇವಡಿ…. ಬೆಳಗಾವಿ: ಕೋವಿಡ್ ಕಡಿಮೆಯಾದ ಮೇಲೆ ಮುಂದಿನ ದಿನಗಳಲ್ಲಿ ಮೇಕೆದಾಟು ಹೋರಾಟದ ಮಾದರಿಯಲ್ಲಿಯೇ ಮಹದಾಯಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುವುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪರೇಷೆ ತಯಾರಿಸಿ ನಂತರ ನಿರ್ಧಾರ …
Read More »ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ನೆರೆವೇರಿಸಿದ ಸಚಿವ ಉಮೇಶ್ ಕತ್ತಿ
ಘಟಪ್ರಭಾ ಅರಣ್ಯ ವಿಭಾಗದ ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಯವರು ಸೋಮವಾರದಂದು ನಗರದಲ್ಲಿ ನೆರೆವೇರಿಸಿದರು . ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ ಸಾಲಿಮಠ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್.ಮರಿಯಪ್ಪ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಹಾಗೂ ಸಿಬ್ಬಂದಿ ಇದ್ದರು.
Read More »ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ ಸಾರ್ವಜನಿಕ ಪ್ರವೇಶ ಇಲ್ಲ.
ಸವದತ್ತಿ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ’ ಅಂಗವಾಗಿ ಸೋಮವಾರ (ಜ.17) ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ. ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ದೇವಸ್ಥಾನಕ್ಕೆ ಸೀಮಿತವಾಗಿ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ. ನಿಷೇಧದ …
Read More »ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿಯೇ ಪ್ಲ್ಯಾನ್
ಬೆಳಗಾವಿ: ರಂದು ರಮೇಶ್ ಮಾದಿಗರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಹತ್ಯೆಗೈದಿದ್ದ ಪತ್ನಿ ಶ್ರೀದೇವಿ ಮಾದಿಗರ(30) ಮತ್ತು ಪ್ರಿಯಕರ ಬಸವರಾಜ ಹರಿಜನ(20)ನನ್ನು ಬೆಳಗಾವಿ ಜಿಲ್ಲೆ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 13ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ರಮೇಶ್ ಮಾದಿಗರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಕೊಲೆಯ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ …
Read More »