ಬೆಳಗಾವಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸಿಗೂ ಹೆಚ್ಚು ಸುರಿದ ಮಳೆಯಿಂದಾಗಿ ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿ ಹಲವು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿತು. ಅದನ್ನು ಹೊರಹಾಕಲು ವ್ಯಾಪಾರಸ್ಥರು ಹಾಗೂ ನಿವಾಸಿಗಳು ಹರಸಾಹಸಪಟ್ಟರು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ವರುಣ ಅಬ್ಬರಿಸಿದ್ದರಿಂದ ಹಳೇ ಪಿ.ಬಿ. ರಸ್ತೆ ಕಾಲುವೆಯಂತಾಯಿತು. ಮೊಣಕಾಲುದ್ದ ನಿಂತಿದ್ದ ನೀರಲ್ಲೇ ಶಾಲಾ- ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಾಗಿದರು. ವಾಹನ ಸವಾರರು ಸರ್ಕಸ್ …
Read More »ಭಕ್ತಿ ಭಾವದ ಪ್ರತೀಕ ಬೂದಿಹಾಳ ಅಡಿವೆಪ್ಪ ಮಹಾರಾಜರು
ಹೂವಿನಹಿಪ್ಪರಗಿ: ಭಕ್ತಿಯಿಂದ ನಡೆದು ಗುರುವಿನ ದಾಸನಾಗಿ ದುಡಿದು ಗುರು ಮಿರಿಸಿ ತನ್ನ ಭಕ್ತ ಬಳಗಕ್ಕೆ ಬೇಡಿದ ವರವನ್ನು ನೀಡಿ ಭಕ್ತಿ ಭಾವದ ಪ್ರತೀಕವಾಗಿ ಇಂದು ಸಾವಿರಾರು ಜನರಿಗೆ ದಾರಿ ದೀಪವಾಗಿರುವ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರು ಎಂದು ಸರೂರ ರೇವಣಸಿದ್ದೇಶ್ವರ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರ ಶ್ರಾವಣ ಮಾಸದ ಜಾತ್ರೆಯಲ್ಲಿ ಮಾತನಾಡಿದ ಅವರು, ಭಕ್ತರನ್ನು …
Read More »ತ್ತೂರು ಜನತೆ ಹಾಗೂ ರಾಣಿ ಚನ್ನಮ್ಮನಿಗೆ ಸರ್ಕಾರ ಅವಮಾನ ಮಾಡಿದೆ
ಬೆಳಗಾವಿ/ಚ.ಕಿತ್ತೂರು: ಚನ್ನಮ್ಮನ ಕಿತ್ತೂರು ಕೋಟೆಯ ಪ್ರತಿರೂಪ ಅರಮನೆಯನ್ನು ಬಚ್ಚನಕೇರಿಯಲ್ಲಿ ನಿರ್ಮಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಿತ್ತೂರಿನ ಜನತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಕಿತ್ತೂರಿನಲ್ಲಿ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಂಗಡಿ ಮುಂಗಟ್ಟು ಸೇರಿದಂತೆ ವ್ಯಾಪಾರ ವಹಿವಾಟು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿತ್ತೂರು ಬಂದ್ ಯಶಸ್ವಿಯಾಯಿತು. ನಂತರ ಬೆಳಗಾವಿ …
Read More »ಮತದಾರ ಪಟ್ಟಿಗೆ ಆಧಾರ್ ಜೋಡಣೆಗೆ ಚಾಲನೆ
ಬೆಳಗಾವಿ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2023ರ ಮಾರ್ಚ್ ಅಂತ್ಯಕ್ಕೆ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ಪ್ರತಿಶತ 100 ರಷ್ಟು ಪೂರ್ಣಗೊಳಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ, ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ನಡೆದ ಮತದಾರರ ಆಧಾರ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಕಾರ್ಯ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ …
Read More »ಪೊಲೀಸರ ಸೋಗಿನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದಚಿನ್ನದ ಸರ ಎಗರಿಸಿದ
ಪೊಲೀಸರ ಸೋಗಿನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದಚಿನ್ನದ ಸರ ಎಗರಿಸಿದ ಮತ್ತು ವಿವಿಧಜ್ವೇಲರಿ ಶಾಪ್‍ಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ವಂಚಸಿದ 2 ನಯವಂಚಕ ಆರೋಪಿಗಳನ್ನು 22 ಲಕ್ಷರೂಪಾಯಿ ಮೌಲ್ಯದಚಿನ್ನದೊಂದಿಗೆ ಬಂಧಿಸಲಾಗಿದೆ. ಸುದ್ಧಿಗೋಷ್ಟಿಯಲ್ಲಿ ಬೆಳಗಾವಿ ಎಸ್‍ಪಿ ಸಂಜೀವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.ಕಳೆದ ತಿಂಗಳು ಹುಕ್ಕೇರಿ ಪಟ್ಟಣದಕೋರ್ಟ್ ಸರ್ಕಲ್ ಬಳಿ ಒಬ್ಬ ಮಹಿಳೆಗೆ ಪೊಲೀಸರೆಂದು ಪುಸಲಾಯಿಸಿ ಆಕೆಯ ಬಳಿಯಿಂದ ಚಿನ್ನದ ಮಂಗಳಸೂತ್ರವನ್ನು ಎಗರಿಸಲಾಗಿತ್ತು. ಅಲ್ಲದೇ ಬೆಳಗಾವಿ ನಗರದಲ್ಲಿ ವಿವಿಧಜ್ವೇಲರಿ ಶಾಪ್‍ಗಳಿಗೆ ಗ್ರಾಹಕರ ಸೋಗಿನಲ್ಲಿ …
Read More »ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿತ
ಆಸ್ತಿ ವಿಚಾರವಾಗಿ ಮಾತನಾಡುವುದಿದೆ ಬಾ ಎಂದು ಕರೆದು ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಬೆಳಗಾವಿಯ ಅಂಕಲಗಿ ಮದುವಾಲ್‍ನಲ್ಲಿ ನಡೆದಿದೆ. ಅಂಕಲಿಗಿಯ ಮದುವಾಲ್ ಗ್ರಾಮದಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳಲ್ಲಿ ವಿವಾದ ಉಂಟಾಗಿದೆ. ಈ ವೇಳೆ ಹಿರಿಯರು ಕೂಡಿದ್ದಾರೆ ಬಾ ಎಂದು ಕರೆದು ಸವಿತಾ ಹಾಗೂ ಬಸಣ್ಣಿ ಸುತಗಟ್ಟಿ ಎಂಬ ದಂಪತಿಗಳನ್ನು ಹಿರಿಯರ ಸಮ್ಮುಖದಲ್ಲಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಾಳು ಸವಿತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ …
Read More »ಕುಂದಾನಗರಿಯಲ್ಲಿ ಮಳೆಯ ಆರ್ಭಟ
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಸಾಯಂಕಾಲ ಮಳೆಯ ಆರ್ಭಟ ಜೋರಾಗಿದ್ದು. ಸತತ ಎರಡು ಘಂಟೆಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಹೈರಾಣಾದರು. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಏಕಾಏಕಿ ಮಳೆಯ ಆರ್ಭಟಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದರು. ಸತತ ಎರಡು ಗಂಟೆಗಳಿಂದ ನಿರಂತರ ಮಳೆ ಆದರಿಂದ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಯ್ತು. ಇನ್ನು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಡೇಬಜಾರ್‍ಗೆ ಹೋಗುವ ರಸ್ತೆ ಮೇಲೆ …
Read More »ಕಳೆದ 8 ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಆದರೆ, ಮೌಢ್ಯ, ಮೂಢನಂಬಿಕೆ ಇರುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.
ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸುವ ಮೂಲಕ ಘಟಪ್ರಭಾದ ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹೌದು ಇಂದು ಮಂಗಳವಾರ ಘಟಪ್ರಭಾದಲ್ಲಿ ನಾಗಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಘಟಪ್ರಭಾ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಹಾಲಿನ ಪಾಕೇಟ್‍ಗಳನ್ನು ವಿತರಿಸಲಾಯಿತು. …
Read More »ಕಳ್ಳತನ ಪ್ರಕರಣ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್
ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 51,000/- ರೂ ಮೊತ್ತದ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2,00,000/- ರೂ ಮೌಲ್ಯದ ಅಷೆ ಟಂಟಂ ವಾಹನವನ್ನು ಹಾಗೂ ಒಂದು ರಾಡ್ ಸೇರಿದಂತೆ ಒಟ್ಟು-2,51,000/- ರೂ ಮೌಲ್ಯದ ವಸ್ತುಗಳನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ರಾಮದುರ್ಗ ಡಿ.ಎಸ್.ಪಿ …
Read More »ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ: ಗೋಕಾಕ
ಗೋಕಾಕ :ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೋಕಾಕದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಚಿಕ್ಕ ಮಕ್ಕಳ ವೈದ್ಯರಾದ ಡಾ ಗೋಪಾಲ ಹೊಂಗಲ ಮತ್ತು ಡಾ ಸಂಜೀವಿನಿ ಉಮರಾಣಿ ಯವರು ತಾಯಂದಿರಿಗೆ ಎದೆಹಾಲಿನ ಮಹತ್ವ ಬಗ್ಗೆ ಹೇಳಿದರು. ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹುಟ್ಟಿದ ಪ್ರತಿ ಮಗುವೂ ಬದುಕಬೇಕು, ತಾಯಿಯೂ ಆರೋಗ್ಯವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು …
Read More »
Laxmi News 24×7