ಬಳ್ಳಾರಿ : ನಗರದ ರೇಡಿಯೋ ಪಾರ್ಕ್ ವೃತ್ತದಲ್ಲಿ ಅಕ್ಕಿ ವ್ಯಾಪಾರಿ ಮಟ್ಕಾ ಬುಕ್ಕಿ ಕುಂಟ ಮಂಜುನಾಥ ಎನ್ನುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ನಗರದ ಕೊಲಿಮಿ ಬಜಾರ್ ನಿವಾಸಿಯಾದ ಕುಂಟ ಮಂಜುನಾಥ್ ನನ್ನು ರೇಡಿಯೋ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಬುಧವಾರ ಬೆಳಗಿನ ಜಾವ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗಲು …
Read More »ಹೆಂಡತಿ ಹೊಟ್ಟೆಗೆ ಚೂರಿ ಹಾಕಿದ ಗಂಡ: ಭಯಗೊಂಡು ಆತ್ಮಹತ್ಯೆಗೆ ಶರಣು
ಚಿಕ್ಕೋಡಿ (ಬೆಳಗಾವಿ): ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಂಡ – ಹೆಂಡತಿ ಜಗಳ ವಿಕೋಪಕ್ಕೆ ತಿರುಗಿದ್ದು, ಹೆಂಡತಿ ಹೊಟ್ಟೆಗೆ ಗಂಡ ಚೂರಿ ಹಾಕಿದ್ದಾನೆ. ಬಳಿಕ ಇದರಿಂದ ಭಯಗೊಂಡ ಆತ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ನಿವಾಸಿ ಪ್ರಭು ರಾಮಪ್ಪ ಮೇತ್ರಿ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಪ್ರಭು ರಾಮಪ್ಪ ಮತ್ತು ಆತನ ಹೆಂಡತಿ ಪಾರ್ವತಿ ಮಧ್ಯೆ ಆಗಾಗ …
Read More »೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ*
ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃಧಿ ಪಡಿಸುತ್ತಿದ್ದಾರೆ. ಈಂತಹ ಶಾಸಕರು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ …
Read More »ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ನಿಧನರಾದವರ ಹೆಸರು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಮೈಸೂರು: ನಾಡಹಬ್ಬ ದಸರಾದ ಪ್ರಧಾನ ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ನಿಧನರಾದವರ ಹೆಸರನ್ನು ಪ್ರಕಟಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಪ್ರಧಾನ ಕವಿಗೋಷ್ಟಿಯಲ್ಲಿ ರಾಜಕೀಯ ಮುಖಂಡರು ಭಾಗವಹಿಸಲಿದ್ದು, ನಿಧನರಾದ ಆಕಾಶವಾಣಿ ನಿಲಯ ನಿರ್ದೇಶಕ ಜಿ.ಕೆ ರವೀಂದ್ರ ಕುಮಾರ್ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಅಕ್ಟೋಬರ್ 3 ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಸೆನೆಟ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಒಟ್ಟು 37 ಮಂದಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. …
Read More »ಅಜ್ಜನ ಜೊತೆ ಈಜು ಕಲಿಯಲು ಹೋಗಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವು
ಬೆಳಗಾವಿ : ಅಜ್ಜನ ಜೊತೆ ಈಜು ಕಲಿಯಲು ಹೋಗಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪೇಟೆಬಸವಣ್ಣ ಓಣಿಯ ಸಿದ್ಧಾರೂಢ ಮಂಜುನಾಥ ಗಾಣಗಿ (8) ಮೃತ ಬಾಲಕ. ಇಂದು ಬೆಳಗಿನ ಜಾವ ಅಜ್ಜನ ಜೊತೆಗೆ ಈಜು ಕಲಿಯಲು ಸಿದ್ಧಾರೂಢ ಹೋಗಿದ್ದನು. ಈ ವೇಳೆ, ಬೆನ್ನಿಗೆ ಪ್ಲಾಸ್ಟಿಕ್ ಡಬ್ಬಿ ಕಟ್ಟಿಕೊಂಡು ಬಾಲಕ ನೀರಿಗೆ ಇಳಿದಿದ್ದನು. ಆದರೆ, ಬಾವಿಯಲ್ಲಿ ಈಜುವಾಗಲೇ ಡಬ್ಬಿ ಕಳಚಿದ್ದರಿಂದ …
Read More »7 ಜನ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 110ರ ಅಡಿ ಪ್ರಕರಣ ದಾಖಲಾಗಿದ್ದು, ಹಿಂಡಲಗಾ ಜೈಲಿಗೆ
ಬೆಳಗಾವಿ: ನಗರದಲ್ಲಿ ಇಂದು ಬೆಳಗ್ಗೆ ವಶಕ್ಕೆ ಪಡೆಯಲಾದ 7 ಜನ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 110ರ ಅಡಿ ಪ್ರಕರಣ ದಾಖಲಾಗಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಆಜಂ ನಗರದ ನಿವಾಸಿ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್‌ಖಾನ್ ಸೊಸೈಟಿ ನಿವಾಸಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಸಾದ್‌ಖಾನ್ ನಿವಾಸಿ ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ …
Read More »ಮಾತಿಗೆ ತಪ್ಪಿದರೆ ನವೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾಜದಿಂದ 25 ಲಕ್ಷ ಜನಸಂಖ್ಯೆ ಸೇರಿ ವಿಧಾನಸೌಧ ಮುಂದೆ ಪ್ರತಿಭಟನೆ
ಅಥಣಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾನಸ ಪುತ್ರರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಕೂಡಲಸಂಗಮ ಪೀಠದ ಶ್ರೀಗಳು ಹಾಗೂ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಅಥಣಿ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕವಾಗಿ ಆರ್ಥಿಕವಾಗಿ, ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳುತ್ತಿದ್ದೇವೆ. …
Read More »ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ
ಸವದತ್ತಿ: ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಮನೆ ಮಾಡಿದೆ. ಮೊದಲ ದಿನವಾದ ಸೋಮವಾರದಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. ಘಟಸ್ಥಾಪನೆಯ ಮೂಲಕ ನವವೈಭವಕ್ಕೆ ವಿಧ್ಯುಕ್ತ ಚಾಲನೆಯೂ ದೊರೆಯಿತು. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಅವಮಾಸ್ಯೆ ನಂತರದ ಮೊದಲ ದಿನ ಸೋಮವಾರ ಸಂಜೆ 4.30 ರಿಂದ 6.30 ಒಳಗಾಗಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮೂಲಕ ಘಟಸ್ಥಾಪನೆ ಜರುಗಿತು. …
Read More »ನಾಡಹಬ್ಬ ಉತ್ಸವಕ್ಕೆ ಬೆಳಗಾವಿಯಲ್ಲಿ ಅದ್ಧೂರಿ ಚಾಲನೆ
ಬೆಳಗಾವಿಯಲ್ಲಿ 95ನೇ ನಾಡಹಬ್ಬ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು. ಇಂದಿನಿಂದ ಐದು ದಿನಗಳ ಕಾಲ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಎಂ.ಎಸ್.ಮುಗಳಿ ವೇದಿಕೆಯಲ್ಲಿ ಹಮ್ಮಿಕೊಂಡಿರುವ 95ನೇ ನಾಡಹಬ್ಬ ಉತ್ಸವ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮಕ್ಕೆ ನಾಗನೂರು ರುದ್ರಾಕ್ಷಿ ಮಠದ ಪರಮಪೂಜ್ಯ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ನಂತರ ಧಾರವಾಡದ ಖ್ಯಾತ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ ಅವರು …
Read More »ಟಿಕ್‍ಟಾಕ್, ಯೂಟೂಬ್ ಸ್ಟಾರ್ ರುಕ್ಮವ್ವ ಅಜ್ಜಿ ಇನ್ನಿಲ್ಲ
ತಮ್ಮ ಅಮೋಘ ಅಭಿನಯದ ಮೂಲಕ ಟಿಕ್‍ಟಾಕ್ ಮತ್ತು ಯೂಟೂಬ್ ಸ್ಟಾರ್ ಆಗಿ ಮನೆ ಮಾತಾಗಿದ್ದ ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಜ್ಜಿ ರುಕ್ಮವ್ವ ಗೋವಿಂದಪ್ಪ ಲೋಕರಿ ವಯೋಸಹಜ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಹೌದು ಟಿಕ್‍ಟಾಕ್‍ನಲ್ಲಿ ತಮ್ಮ ವಿಭಿನ್ನ ಕಾಮಿಡಿ ವಿಡಿಯೋ ಮೂಲಕ ಈ ರುಕ್ಮವ್ವ ಅಜ್ಜಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಲ್ಲದೇ ಹಲವು ವಾಹಿನಿಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಇಳಿ ವಯಸ್ಸಿಲ್ಲಿಯೂ ತಮ್ಮಲ್ಲಿನ ಕಲೆಯನ್ನು …
Read More »