Breaking News

ಬೆಳಗಾವಿ

ಉಸಿರುಗಟ್ಟಿ ‌ಜೋಡೆತ್ತು ಸಾವು: ಮುಗಿಲು ಮುಟ್ಟಿದ ಬಡ ರೈತ ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ಜಿಲ್ಲೆಯ ‌ಬೈಲಹೊಂಗಲಪಟ್ಟಣದ ಪ್ರಭುನಗರ ನಾಲ್ಕನೇ ಅಡ್ಡ ರಸ್ತೆ ನಿವಾಸಿ, ರೈತ ಮಹಿಳೆ ಸಾಬವ್ವ ಹುಡೇದ ಕುಟುಂಬಸ್ಥರಿಗೆ ಸೇರಿದ ಜೋಡೆತ್ತುಗಳು ಉಸಿರುಗಟ್ಟಿ ಸಾವಿಗೀಡಾಗಿವೆ. ದನದ ಕೊಟ್ಟಿಗೆಯಲ್ಲಿ ಬೆಲಗ (ಕಂಬ) ಮುರಿದ ಪರಿಣಾಮ ಜೋಡೆತ್ತುಗಳ ಹಗ್ಗ ಒಂದಕ್ಕೊಂದು ಸಿಲುಕಿಕೊಂಡಿವೆ. ಪರಿಣಾಮ ಅವು ಉಸಿರುಗಟ್ಟಿ ಕೊನೆಯುಸಿರೆಳೆದಿವೆ. ಮಾಲೀಕರಿಗೆ ವಿಷಯ ತಿಳಿಯುವಷ್ಟರಲ್ಲಿ ಜೋಡೆತ್ತುಗಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು ಆರು ಲಕ್ಷ ಮೌಲ್ಯದ …

Read More »

ಬೆಳಗಾವಿ: ನಿಷೇಧಿತ ‌ಪಿಎಫ್ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು ‌ಮಂಜೂರು

ಬೆಳಗಾವಿ: ಎಸ್‌ಡಿಪಿಐ‌ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ನಿಷೇಧಿತ ಪಿಎಫ್ಐನ 6 ಮಂದಿ ಕಾರ್ಯಕರ್ತರಿಗೆ ಒಂದು ವಾರದ ಬಳಿಕ ಜಾಮೀನು ಸಿಕ್ಕಿದೆ.ಒಟ್ಟು 7 ಜನರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾಡಿ ಆದೇಶ ಹೊರಡಿಸಿದ್ದಾರೆ. ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ನಿಷೇಧಿತ ‌ಪಿಎಫ್ಐ ಕಾರ್ಯಕರ್ತರಾದ ಝಕೀವುಲ್ಲಾ ಫೈಜಿ, ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಸಮೀವುಲ್ಲಾ ಪೀರ್ಜಾದೆ, ಜಹೀರ್ ಘೀವಾಲೆ ರೆಹಾನ್ …

Read More »

ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ

ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ …

Read More »

ಗೋಕಾಕ್​​​ ಶಾಸಕರಿಗೆ, ಸವದಿಗೆ ಸಚಿವ ಸಂಪುಟ ಸ್ಥಾನಮಾನ ಕೊಡಲಿ: ಮಹೇಶ್​ ಕುಮಠಳ್ಳಿ

ಅಥಣಿ: ಗೋಕಾಕ್​​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಲಿ. ನನಗೆ ಸಚಿವ ಸ್ಥಾನಕ್ಕಿಂತಲೂ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ. ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಬೇಡ ಎಂದು ಶಾಸಕ ಮಹೇಶ್ ಕುಮಠಳ್ಳಿ ಅವರು ಹೇಳಿಕೆ ನೀಡಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ. …

Read More »

ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಅವರನ್ನ ನಾನೂ ಸ್ವಾಗತಿಸುತ್ತೇನೆ ಎಂದ ಲಕ್ಷ್ಮಣ್ ಸವದಿ

ಅಥಣಿ: ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಆಗಮಿಸಿದ್ದು, ಅವರಿಗೆ ನಾನು ಸ್ವಾಗತ ಕೋರುತ್ತೇನೆ, ಅವರು ಕಾಲು ಇಟ್ಟಲೆಲ್ಲ ಬಿಜೆಪಿಯ ಕಮಲ ಅರಳುತ್ತದೆ. ಹಾಗಾಗಿ ನಾನು ಅವರನ್ನ ಸ್ವಾಗತ ಬಯಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಲಕ್ಷ್ಮಣ್ ಸವದಿ ಕೈ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನವಾಗಿ ಪೊಲೀಸ್ ಠಾಣಾ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದ್ಯ …

Read More »

ಬೆಳಗಾವಿಯಲ್ಲಿ ಭೀಕರ ಸರಣಿ ಅಪಘಾತ

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು, ಬೈಕ್ ಹಾಗೂ ಲಾರಿ ನಡುವೆ ಭೀಕರ ಸರಣಿ ಅಪಘಾತವಾಗಿದ್ದು, ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಎರಡು ಕಾರು, ಟ್ರಕ್ ಹಾಗೂ 4ಕ್ಕೂ ಹೆಚ್ಚು ಬೈಕ್​ಗಳ ನಡುವೆ ಸರಣಿ ಅಪಘಾತವಾಗಿದೆ. ಇದಕ್ಕೂ ಮೊದಲು ಮೊಲ್ಯಾಸೀಸ್ ತುಂಬಿದ್ದ ಟ್ಯಾಂಕರ್ ನಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮೊಲ್ಯಾಸೀಸ್ ಸೋರಿಕೆಯಾಗಿದೆ. ಈ …

Read More »

200 ವರ್ಷ ಇತಿಹಾಸ ಇರುವ ದೇವನಾಥ ಮಂದಿರ ಕಾಮಗಾರಿ ಶಾಸಕರಿಂದ ಪೂಜೆ

ಅಥಣಿ ಮತಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಮಹೇಶ ಕುಮಟಳ್ಳಿಯವರಿಂದ ಹಲ್ಯಾಳ ಗ್ರಾಮದಲ್ಲಿ ಸುಮಾರು 12ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ದೇವನಾಥ ದೇವಸ್ಥಾನ ಕಾಮಗಾರಿ ಭೂಮಿ ಪೂಜೆ ಹಾಗೂ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ಹನುಮಾನ ದೇವಸ್ಥಾನದ ಸಮುದಾಯ ಭವನಗಳ ಕಾಮಗಾರಿ ಪೂಜೆಯನ್ನು ನೆರವೇರಿಸಲಾಯಿತು..   ಈ ಸಂದರ್ಭದಲ್ಲಿ ಶ್ರೀ ಮ. ನಿ ಪ್ರ ಗುರುಸಿದ್ದೆಶ್ವರ ಮಹಾಸ್ವಾಮಿಗಳು …

Read More »

ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ನವರಾತ್ರಿ ಮಹೋತ್ಸವ ಅಂಗವಾಗಿ ಸಮೀಪದ ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು. ಹಲವಾರು ಮಹಿಳೆಯರು ಉಡಿ ತುಂಬುವ ಸಂಪ್ರದಾಯದಲ್ಲಿ ಪಾಲ್ಗೊಂಡರು.   ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸಕಲ ವ್ಯವಸ್ಥೆ ಕಲ್ಪಿಸಿದರು. ಪರಮೇಶ್ವರಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಹಿಳೆಯರು ಆರತಿ ತಟ್ಟೆ ಹಿಡಿದು, ಕುಂಕುಮ, …

Read More »

ದುರ್ಗಾಮಾತಾ ದೌಡ್ ಸ್ವಾಗತಿಸಿ, ಭಾವೈಕ್ಯ ಮೆರೆದ ಮುಸ್ಲಿಮರು

ಬೆಳಗಾವಿ: ನವರಾತ್ರಿ ಅಂಗವಾಗಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ 8ನೇ ದಿನವಾದ ಸೋಮವಾರ ದುರ್ಗಾಮಾತಾ ದೌಡ್‌ ನಡೆಯಿತು. ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ಮುಸ್ಲಿಮರು ಇದಕ್ಕೆ ಸ್ವಾಗತ ಕೋರಿ, ಭಾವೈಕ್ಯ ಸಂದೇಶ ಸಾರಿದರು. ದುರ್ಗಾಮಾತಾ ದೌಡ್‌ ಅಂಗವಾಗಿ ಕ್ಯಾಂಪ್‍ನ ಮಾರ್ಗಗಳಲ್ಲಿ ರಂಗೋಲಿ ಚಿತ್ತಾರ ಅರಳಿತ್ತು. ಯುವಕ-ಯುವತಿಯರು, ಮಕ್ಕಳು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನ ಸೆಳೆದರು. ಬಾಲಕಿಯೊಬ್ಬಳು ಜೀಜಾಮಾತಾ ವೇಷ ಧರಿಸಿ, ಶಿವಾಜಿ ಮಹಾರಾಜರನ್ನು ಸ್ತುತಿಸಿದಳು. ದಂಡು ಮಂಡಳಿ ಮಾಜಿ ಉಪಾಧ್ಯಕ್ಷ ಸಾಜೀದ್ ಶೇಖ್ …

Read More »

ಗಾಂಧಿ ಜಯಂತಿ ನಿಮಿತ್ತ ಶಾಂತಾಯಿ ವೃದ್ಧಾಶ್ರಮದ ಹಿರಿಜಿವಗಳಿಗೆ ಉಪಹಾರ ವ್ಯವಸ್ಥೆ ಮಾಡಿದ ಬಸವರಾಜ್ ಯಳ್ಳೂರು ಕರ

ಬೆಳಗಾವಿ : ಗಾಂಧಿ ಜಯಂತಿ ನಾಡಿನ ಪಿತಾಮಹ ಗಾಂಧಿ ಇಂದು ಇಡೀ ನಮ್ಮ ರಾಷ್ಟ್ರವೇ ಈ ಒಂದು ದಿನವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತೆ . ಇಂದು ಸುಮಾರು ಜನ ಸುಮಾರು ಕೆಲಸ ಗಳನ್ನಾ ಮಾಡುತ್ತಾರೆ ಆದ್ರೆ ಇಂದು ಸುಮಾರು ಸಮಾಜ ಸೇವೆಗಳನ್ನು ಮಾಡಿದರು ತೆರೆ ಮೇಲೆ ಬರದ ಒಬ್ಬ ವ್ಯಕ್ತಿಯ ಪರಿಚಯ ವನ್ನಾ ಮಾಡಿ ಕೊಡ್ತೇವೆ ಇಂದು ಕಣಬರಗಿ ಮೂಲದ ಬಸವರಾಜ ಯಳ್ಳೂರು ಕರ ಅವರು ಶಂತಾಯಿ …

Read More »