ಬೆಳಗಾವಿ: ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕೊಲ್ಲಾಪುರದ ಕನ್ನೇರಿಮಠ ಮಾಡುತ್ತಿದೆ. ಹೀಗಾಗಿ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ಹಣ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ಆದರ್ಶ ಮಠ: ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರೋದು ಸಂತಸದ ಸಂಗತಿಯಾಗಿದೆ. ಇಲ್ಲಿ …
Read More »ಪ್ರತಿ ಟನ್ ಕಬ್ಬಿಗೆ 5500 ಬೆಲೆ ಘೋಷಣೆ ಮಾಡುವಂತೆ ರೈತ ಸಂಘದಿoದ ಪ್ರತಿಭಟನೆ
ಪ್ರಸಕ್ತ ಸಾಲಿನಲ್ಲಿ ಕನ್ನು ಬೆಳೆದ ರೈತರಿಗೆ ಪ್ರತೀ ಟನ್ ಕಬ್ಬಿಗೆ 5500 ರೂ ನಿಗದಿ ಮಾಡುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳಿAದ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುರಿಯುವ ಮಳೆಯನ್ನೂ ಲೆಕ್ಕಿಸದೇ ರೈತರು ನಗರದ ಚೆನ್ನಮ್ಮಾ ವೃತ್ತದಲ್ಲಿ ರಸ್ತೆ ತಡೆಯನ್ನು ನಡೆಸಿ ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಪ್ರಸಕ್ತ ಸಾಲಿನಲ್ಲಿ ರೈತರು ಬೆಳೆದ ಕಬ್ಬಿಗೆ ಪ್ರತೀ ಟನ್‌ಗೆ 5500ರೂ ನೀಡುವಂತೆ ಆಗ್ರಹಿಸಿ ಇಂದು …
Read More »ತಡರಾತ್ರಿ ಆಗಮಿಸಿದ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ B.L. ಸಂತೋಷ್ ಶಾಲು ಹೊದೆಸಿ ಸ್ವಾಗತಿಸಿದ ಬಾಲಚಂದ್ರ ಜಾರಕಿಹೊಳಿ ಇಂದು ಕನ್ಹೇರಿ ಮಠದ ಸಮಾವೇಶದಲ್ಲಿ ಭಾಗಿ
ಬೆಳಗಾವಿ – ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಬೆಳಗಾವಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆ ಹೊತ್ತಿಗೆ ಅವರು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತಲುಪಿದರು. ಮಾಜಿ ಸಚಿವ, ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ಶಾಲು ಹೊದೆಸಿ ಸಂತೋಷ್ ಅವರನ್ನು ಸ್ವಾಗತಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ್, ಬಿಜೆಪಿ ಜಿಲ್ಲಾಧ್ಯಕ್ಷರಾದ …
Read More »ಸಂಕೇಶ್ವರ: ಮೂರು ಕಾರು-ದ್ವಿಚಕ್ರ ವಾಹನ ನಡುವೆ ಸರಣಿ ಅಪಘಾತ, ತಾಯಿ ಮಗು ಸಾವು, ಹಲವರಿಗೆ ಗಾಯ
ಸಂಕೇಶ್ವರ : ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ನಡೆದ ಸರಣಿ ಅಪಘಾತದಲ್ಲಿ ತಾಯಿ ಹಾಗೂ ಮಗು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಹತ್ತಿರ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡಿದಿದೆ. ಈ ಘಟನೆಯಲ್ಲಿ ಮೃತಪಟ್ಟವರನ್ನು ಬೈಲಹೊಂಗಲ ತಾಲೂಕಿನ ಬಾರತಿ (28) ಹಾಗೂ ವೇದಾಂತ ಪೂಜೇರಿ (6) ಇವರಿಬ್ಬರು ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಇವರು ದ್ವಿಚಕ್ರ ವಾಹನ ಮೇಲೆ ಸಂಚರಿಸುತ್ತಿದ್ದರು ಎನ್ನಲಾಗಿದೆ. …
Read More »ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಮರು ಮತ ಎಣಿಕೆ ನಡೆಸಲು ಕೋರ್ಟ್ ಆದೇಶ
ಚಿಕ್ಕೋಡಿ(ಬೆಳಗಾವಿ): ಪಂಚಾಯತ್ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಮರು ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶ ಹೊರಡಿಸಿದ್ದು, ಎಲ್ಲರ ಚಿತ್ತ ಕೋರ್ಟ್ನತ್ತ ನೆಟ್ಟಿದೆ. ಈ ಆದೇಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬರುವ ಅ.20 ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶ …
Read More »ವಾಲ್ಮೀಕಿ ಜಯಂತಿ ವಿಜಯೋತ್ಸವ ಮಾದರಿಯಲ್ಲಿ ಆಚರಣೆ..!!
ಬೆಳಗಾವಿಯ ನೆಹರು ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಐತಿಹಾಸಿ ನಿರ್ಧಾರ ಕೈಗೊಂಡಿದಕ್ಕೆ ಹರ್ಷ ವ್ಯಕ್ತಪಡಿಸಲಾಯಿತು. ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬೆಳಗಾವಿಯ ನೆಹರು ನಗರದ ನಿವಾಸಿಗಳು ವಿಜಯೋತ್ಸವ ರೀತಿಯಲ್ಲಿ ಆಚರಿಸಿದರು.ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ವತಿಯಿಂದ ಆಯೋಜಿಸಿದ್ದ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಗರದ ನೂರಾರು ಯುವಕರು ಪಾಲ್ಗೊಂಡು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ …
Read More »ರಾಮದುರ್ಗದಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ
ಬೆಳಗಾವಿ : ಬೈಕ್ ಪಕ್ಕಕ್ಕೆ ಇಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತವಾಗಿದ್ದು, ಓರ್ವನ ಮೇಲೆ ಹಲ್ಲೆ ಮಾಡಿರುವ ರಾಮದುರ್ಗ ಪಟ್ಟಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀರಾಮಸೇನೆ ಕಾರ್ಯಕರ್ತ ಗೋಪಾಲ್ ಬಂಡಿವಡ್ಡರ್‌ಗೆ ಚಾಕು ಇರಿತವಾಗಿದ್ದು, ರವಿ ಬಂಡಿವಡ್ಡರ್ ಎಂಬ ಯುವಕನ ತಲೆಗೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಇತ್ತ ಜಗಳ ಬಿಡಿಸಲು ಹೋದ ನಂಜುಂಡಿ ಸಾಬಣ್ಣ ಬಂಡಿವಡ್ಡರ್ ಎಂಬುವವರ ಮೇಲೆಯೂ ಹಲ್ಲೆಯಾಗಿದೆ. …
Read More »,ಕಬ್ಬು ತುಂಬಿದ ಟ್ರ‍್ಯಾಕ್ಟರಗಳ ಪ್ರವೇಶಕ್ಕೆ ಸಮಯ ನಿಗದಿ ಮಾಡಿರುವ ಎಸಿ ಸಂತೋಷ ಕಾಮಗೌಡರ
ಸದ್ಯ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದೆ.ಇದರಿಂದಾಗಿ ಟ್ರ‍್ಯಾಕ್ಟರಗಳು ಲೋಡಾಗಿ ಕಬ್ಬನ್ನು ತುಂಬಿಕೊಂಡು ಹೋಗುತ್ತಿರುವದರಿಂದ ಇದು ಜನರ ಪ್ರಾಣಕ್ಕೆ ಕುತ್ತು ತರಬಹುದು .ಇದನ್ನು ತಪ್ಪಿಸಲು ಚಿಕ್ಕೋಡಿ ಎಸಿ ಸಂತೋಷ ಕಾಮಗೌಡರ ಹೊಸ ಪ್ಲ್ಯಾನಯೊಂದನ್ನು ಹಾಕಿದ್ದಾರೆ…ಅದೇನೂ ಅಂತೀರಾ ಹಾಗಾದರೆ ಈ ವರದಿಯನ್ನು ನೋಡಿ… ಚಿಕ್ಕೋಡಿ ಉಪವಿಭಾಗದಲ್ಲಿ ಅತಿ ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಈಗಾಗಲೇ ಕೆಲ ದಿನಗಳ ಹಿಂದೆ ಕೆಲ ಸಕ್ಕರೆ ಕರ‍್ಖಾನೆಗಳು ಪ್ರಾರಂಭವಾಗಿವೆ. ಸಕ್ಕರೆ ಕರ‍್ಖಾನೆಗಳು ಮರುಪ್ರಾರಂಭ ಅಗುತ್ತಿದ್ದಂತೆ ಎಲ್ಲ ಕಡೆಗಳಲ್ಲೂ ಸಹ …
Read More »ಬೆಳಗಾವಿ ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ
ಬೆಳಗಾವಿ ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆವರಣೆ ಮಾಡಲಾಯಿತು. ಹೌದು ಬೆಳಗಾವಿ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಮಹಾನಗರ ಪಾಲಿಕೆ ಬೆಳಗಾವಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದು ರವಿವಾರ ಅತ್ಯಂತ ಅದ್ಧೂರಿಯಾಗಿ ಮಹರ್ಷಿ ಮಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ವೇಳೆ ಮಹರ್ಷಿ ವಾಲ್ಮೀಕಿರವರ ಭಾವಚಿತ್ರದ ಅದ್ದೂರಿ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೋಭಾಯಾತ್ರೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, …
Read More »ದಾರ್ಶನಿಕ ಮಹರ್ಷಿ ವಾಲ್ಮೀಕಿ: ಇಂದು ಜಯಂತಿ
ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥವಾಗಿದೆ. ಮಹರ್ಷಿ ವಾಲ್ಮೀಕಿ ಈ ಮಹಾಕಾವ್ಯದ ರಚನೆಕಾರರು. ಬೇಡ ಜನಾಂಗಕ್ಕೆ ಸೇರಿದ ಈ ಕೃತಿಕಾರ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದು ಅವರ ಜಯಂತಿಯನ್ನು ಎಲ್ಲೆಡೆ ಗೌರವಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. | ಪ್ರೇಮಾ ಕಾಟನಾಯಕ ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯ ಕೃತಿಗಳಲ್ಲೊಂದಾದ ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲೊಂದಾಗಿದೆ. ಈ ಮಹಾಕಾವ್ಯವು ಶ್ರೀ ಮಹರ್ಷಿ ವಾಲ್ಮೀಕಿ ಅವರಿಂದ ರಚಿತವಾಗಿದೆ. ಈ ಕಾವ್ಯವು …
Read More »
Laxmi News 24×7