Breaking News

ಬೆಳಗಾವಿ

ಕುಂದಾಗರಿಯಲ್ಲಿ ತೆರೆದ ವಾಹನದಲ್ಲಿ ರಾಜರತ್ನನ ಭಾವಚಿತ್ರದ ಭವ್ಯ ಮೆರವಣಿಗೆ

ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಡಾ.ಪುನೀತ್ ರಾಜಕುಮಾರ ಇಂದಿಗೆ ಅಗಲಿ ಬರೊಬ್ಬರಿ ಒಂದು ವರ್ಷವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪ್ಪು ಸಮಾಧಿ ಸೇರಿ ರಾಜ್ಯದ ಮೂಲೆ ಮೂಲೆಯಲ್ಲಿ ಮೊದಲ ವರ್ಷದ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಅರ್ಥಪೂರ್ಣವಾಗಿ ರಾಜರತ್ನನನ್ನು ನೆನೆಯಲಾಯಿತು. ಹೌದು ಅದು ಅಕ್ಟೋಬರ್ 29, 2021 ಶಿವರಾಜ್‍ಕುಮಾರ್ ನಟನೆಯ ಭಜರಂಗಿ 2 ರಿಲೀಸ್ ಆಗಿತ್ತು. ರಾಜ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇತ್ತು. ಪುನೀತ್ ರಾಜ್‍ಕುಮಾರ್ …

Read More »

ಚಲಿಸುತ್ತಿದ್ದ ಕಾರ್‍ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ ಕಾರು ಬ್ಲಾಸ್ಟ್

ಚಲಿಸುತ್ತಿದ್ದ ಕಾರ್‍ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ ಕಾರು ಬ್ಲಾಸ್ಟ್ ಆಗಿರುವ ಘಟನೆ ಬೆಳಗಾವಿ ಚೋರ್ಲಾ ಘಾಟ್ ಬಳಿ ನಡೆದಿದೆ. ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಶನಿವಾರವ ಬೆಳಗಿನ ಜಾವ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರಿಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡು ಕಾರು ಧಗಧಗನೇ ಉರಿದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿ ಇದ್ದವರು ಕಾರಿನಿಂದ ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಪ್ರಾಣ ಹಾನಿ ಆಗಲ್ಲ. ಖಾನಾಪುರ ಪೆÇಲೀಸ್ …

Read More »

ಜೀವಗಳು ಹೋಗುತ್ತಿದ್ದರು ಸ್ಥಳಕ್ಕೆ ಬಾರದ ಗೋವಿಂದ ಕಾರಜೋಳ ವರ್ತನೆಗೆ ನೆಟ್ಟಿಗರ ಆಕ್ರೋಶ

ರಾಮದುರ್ಗ (ಬೆಳಗಾವಿ ಜಿಲ್ಲೆ: ‘ಮುದೇನೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಸಮಸ್ಯೆ ತಲೆದೋರಿದೆ. ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ದಿನದಿನಕ್ಕೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿ ಆಗಲಿ ಸ್ಥಳಕ್ಕೆ ಬಂದಿಲ್ಲ. ನಮ್ಮ ಕಷ್ಟ ನೋಡಿಲ್ಲ’ ಎಂದು ಹಲವರು ಆಕ್ರೋಶ ಹೊರಹಾಕಿದರು. ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದಾಗ ಮಹಿಳೆಯರು ಸಂಕಷ್ಟ ತೋಡಿಕೊಂಡರು. ‘ಸಚಿವ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲೇ ಇದ್ದಾರೆ. ಮುದೇನೀರಿಗೆ …

Read More »

ಡಿನಾಡು ಬೆಳಗಾವಿಯ ರಾಜ್ಯೋತ್ಸವ ಈಡೀ ರಾಜ್ಯದಲ್ಲೇ ಆಕರ್ಷಕ ಮತ್ತು ಭಿನ್ನ

ಗಡಿನಾಡು ಬೆಳಗಾವಿಯ ರಾಜ್ಯೋತ್ಸವ ಈಡೀ ರಾಜ್ಯದಲ್ಲೇ ಆಕರ್ಷಕ ಮತ್ತು ಭಿನ್ನವಾಗಿರುತ್ತದೆ. ಈ ಬಾರಿಯಂತೂ ಬೆಳಗಾವಿಯ ರಾಜ್ಯೋತ್ಸವ ಅದ್ಧೂರಿ-ಮಹಾ ಅದ್ಧೂರಿಯಾಗಿ ನಡೆಯಲಿದೆ. ೧೦ ಸಾವಿರ ಅಡಿಯ ಕನ್ನಡ ಬಾವುಟದ ಮೆರವಣಿಗೆ ನಡೆಸಿ ಲಂಡನ್ ಬುಕ್ ಆಫ್ ರೆಕಾರ್ಡ್ ನಿರ್ಮಿಸಲು ಹೊರಟಿರುವ ಕನ್ನಡದ ಕುವರರು ಯಾರು ಅನ್ನುವ ಕುರಿತು ಇಲ್ಲಿದೆ ಒಂದು ಸ್ಟೋರಿ. ಹಳದಿಗೆಂಪು ಬಾವುಟ ಹಿಡಿದು ನಲಿಯುತ್ತಿರುವ ಕನ್ನಡದ ಕುವರರು.. ನಾಡದೇವಿಯ ಜಾತ್ರೆಯ ದಿನ ಮೆರವಣಿಗೆಗೆ ಸಿದ್ಧವಾಗುತ್ತಿದ್ದೆ ಈ ಬೃಹತ್ ಬಾವುಟ. …

Read More »

ರಾಷ್ಟ್ರ-ಅಂತರಾಷ್ಟ್ರದಲ್ಲಿ ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿ-ರಾಹುಲ ಜಾರಕಿಹೊಳಿ

ಬೆಳಗಾವಿಯನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ, ಸಹಕಾರ ನೀಡಲಾಗುವುದು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಕಾಕತಿ ಗ್ರಾಮದ ಹೆಮ್ಮೆಯ ಪುತ್ರ ಸಂಭಾಜಿ ಪರಮೋಜಿ ಮುಕ್ತ ರಾಷ್ಟ್ರೀಯ ನಾಗಾ ಕುಸ್ತಿ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿದ್ದು, ನಾಗಾಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಇವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ೨೫ ಸಾವಿರ ರೂ. ಆರ್ಥಿಕ ಸಹಾಯ ನೀಡಿ, ಸನ್ಮಾನಿಸಿ ಶುಭಹಾರೈಸಿದರು. ವಿದ್ಯಾರ್ಥಿಗಳ ಏಳಿಗೆಗಾಗಿ ಯಮಕನಮರಡಿ …

Read More »

ಸರ್ಕಾರ ಆದೇಶಿಸಿದರೂ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರಿ ಸೌಲಭ್ಯ

ಕಾರ್ಮಿಕ ಕಾರ್ಡ್ ಮಾಡಿಕೊಂಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಸರ್ಕಾರ ಆದೇಶಿಸಿದರೂ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಿದರು. ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿದ ಕಾರ್ಮಿಕ ಕಾರ್ಡ್ ಮಾಡಿಕೊಂಡ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವಿಷಯದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಕಟ್ಟಡ ನಿರ್ಮಾಣ …

Read More »

ಕನ್ನಡ ಸರ್ವಶ್ರೇಷ್ಠ ಭಾಷೆ : ಸರ್ವೋತ್ತಮ ಜಾರಕಿಹೊಳಿ ಅರಭಾವಿ ಬಿಜೆಪಿ ಮಂಡಲದಿ0ದ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ

ಗೋಕಾಕ : ದೇಶದಲ್ಲಿಯೇ ಕನ್ನಡ ಭಾಷೆಗೆ ತನ್ನದೇಯಾದ ವಿಶಿಷ್ಟ ಇತಿಹಾಸವಿದ್ದು, ಕನ್ನಡ ಭಾಷೆ ಇಂದು ದೇಶದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಅರಭಾವಿ ಬಿಜೆಪಿ ಮಂಡಲದಿAದ ಕನ್ನಡ ರಾಜ್ಯೋತ್ಸವದ ನಿಮಿತ್ಯ ಜರುಗಿದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಭಾಷೆ ಶ್ರೇಷ್ಠ ಭಾಷೆ ಎಂದು ತಿಳಿಸಿದರು.   ನಮ್ಮ ಕನ್ನಡ ಭಾಷೆಗೆ …

Read More »

ಬೆಳಗಾವಿಯ J.N.M.C. ಕ್ಯಾಂಪಸ್‌ನ ಉದ್ಯಾನದಲ್ಲಿ ಕೋಟಿ ಕಂಠ ಗಾಯನ

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರದಂದು ಬೆಳಗಾವಿಯ ಜೆಎನ್‌ಎಂಸಿ ಕ್ಯಾಂಪಸ್‌ನ ಉದ್ಯಾನದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಖ್ಯ ಅತಿಥಿಗಳಾಗಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಡಾ. ಕೋಠಿವಾಲೆ, ಡಾ. ವಿಡಿ ಪಾಟೀಲ, …

Read More »

ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಮಾಡುವಗೋಸ್ಕರ ೨೦೦ ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದು, ಎಲ್ಲ ಕಾಮಗಾರಿಗಳು ಭರದಿದಂದ ಸಾಗಿವೆಯೆಂದು ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಗುರುವಾರ ರಂದು ಕಾಗವಾಡ ಮತಕ್ಷೇತ್ರದ ಜಕಾರಟ್ಟಿ ಗ್ರಾಮದಲ್ಲಿ ೪ ಕೋಟಿ ರೂ. ವೆಚ್ಚದ ಮದಭಾವಿ-ಸಂಬರಗಿ ಹಾಗೂ ಜಕಾರಟ್ಟಿಯಿಂದ ಖುಟ್ಟಿ ತೋಟದವರೆಗಿನ ರಸ್ತೆಗೆ ೧.೫೦ ಕೋಟೆ ರೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕಳೆದ …

Read More »

36 ಅಂದರ್-ಬಾಹರ್ ಪ್ರಕರಣ ದಾಖಲ,310 ಜನರ ಬಂಧನ,2,75,045ರೂಪಾಯಿ ವಶ

ಬೆಳಗಾವಿ ಜಿಲ್ಲೆಯಾದ್ಯಂತ ದಾಳಿ ನಡೆಸಿದ ಪೊಲೀಸರು ಅಂದರ್ – ಬಾಹರ್ ಆಡುತ್ತಿದ್ದ 36 ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಳಗಾವಿ ಪೊಲೀಸರು ಗುರುವಾರದಂದು ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ೩೬ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬAಧಿಸಿದAತೆ 310 ಜನರನ್ನು ಬಂಧಿಸಿದ್ದು, 2,75,0455ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಸAಬAಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

Read More »