ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಈಚೆಗೆ ಜಿಲ್ಲಾ ಅಂಧತ್ವ ನಿವಾರಣಾಧಿಕಾರಿಗಳ ಕಾರ್ಯಾಲಯದ ಸಹಕಾರದೊಂದಿಗೆ ಕಾರಾಗೃಹದ 215 ಬಂದಿಗಳಿಗೆ ನೇತ್ರ ತಪಾಸನಾ ಶಿಬಿರ ನಡೆಯಿತು. ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ, ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಕೃಷ್ಣಕುಮಾರ ಮಾತನಾಡಿ, ‘ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಅತೀ ಸೂಕ್ಷ್ಮವಾದ ಅಂಗ. ಇದರ ಬಗ್ಗೆ ತಿಳಿವಳಿಕೆ ಹಾಗೂ ಕಾಳಜಿ ಅತೀ ಅವಶ್ಯಕ. ಕಾರಾಗೃಹದಲ್ಲಿ ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. …
Read More »ಬೆಳಗಾವಿ: ಅಧಿವೇಶನಕ್ಕೆ ತರಾತುರಿಯಲ್ಲೇ ಕಾಮಗಾರಿ!
ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಸಮೀಪಿಸುತ್ತಿದ್ದಂತೆ, ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ತರಾತುರಿಯಲ್ಲಿ ನಡೆಯುತ್ತಿವೆ. ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಶಾಸಕರು ವಾಸ್ತವ್ಯ ಹೂಡಲಿರುವ ಹೋಟೆಲ್‌ಗಳು ಹಾಗೂ ಪ್ರವಾಸಿ ಮಂದಿರಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಹಾನಗರ ಪಾಲಿಕೆ ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿದೆ. ಆದರೆ, ಉಳಿದ ಮಾರ್ಗದ ರಸ್ತೆಗಳತ್ತ ಅಧಿಕಾರಿಗಳು ಗಮನ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡಿಗಳನ್ನು ಮುಚ್ಚಲಾಗುತ್ತಿದೆ: ಈ ಬಾರಿ ಮಳೆಗಾಲದಲ್ಲಿ ನಗರದ ಹಲವು ಮಾರ್ಗಗಳ …
Read More »ಶರಣಮೇಳ: ಪ್ರಚಾರಕ್ಕೆ ಚಾಲನೆ
ಗೋಕಾಕ: ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ 2023ರ ಜನವರಿ 12, 13 ಮತ್ತು 14ರಂದು ನಡೆಯಲಿದೆ. ಈ 36ನೇ ಶರಣಮೇಳನದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಕೋರಿದರು. ನಗರದಲ್ಲಿ ಈಚೆಗೆ ನಡೆದ ಶರಣ ಮೇಳದ ಪ್ರಚಾರ ಸಭೆಯಲ್ಲಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥ, ಭೇದವಿಲ್ಲದೆ ಶರಣ ಮೇಳದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಬಸವಣ್ಣನವರ …
Read More »ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಡಿಸೆಂಬರ್ 23 ರಂದು ಸುವರ್ಣಸೌಧದವರೆಗೆ ಪಾದಯಾತ್ರೆ
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಡಿಸೆಂಬರ್ 23 ರಂದು ಯಡೂರ ವೀರಭದ್ರೇಶ್ವರ ದೇವಸ್ಥಾನದಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷ ಎಸ್.ವೈ.ಹಂಜಿ ಹೇಳಿದರು. ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ವೈ.ಹಂಜಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರುತ್ತಿದೇವೆ. ಆದರೆ ಇನ್ನೂವರೆಗೆ ಚಿಕ್ಕೋಡಿ ಜಿಲ್ಲೆ ಆಗದೇ ಇರುವುದು ವಿಪಯಾರ್ಪಸದ ಸಂಗತಿ. ಡಿಸೆಂಬರ್ 19 ರಿಂದ ಬೆಳಗಾವಿಯ …
Read More »ವಿದ್ಯಾರ್ಥಿನಿಯರನ್ನು ಬಾರ್ ಮುಂದೆ ಇಳಿಸಿದ ಸಾರಿಗೆ ಚಾಲಕ
ಬೆಳಗಾವಿ ತಾಲೂಕಿನ ಸುಳಗಾ ಶಾಲೆಯ ಮಕ್ಕಳು ಕುದುರೆಮನೆಯ ಮಾರ್ಗವಾಗಿ ಬರುವ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸರಿಯಾದ ಬಸ್ ನಿಲ್ದಾಣಕ್ಕೆ ನಿಲ್ಲಿಸದೆ ಚಾಲಕ ಬಾರ್ ಅಂಗಡಿ ಮುಂದೆ ನಿಲ್ಲಿಸಿದ್ದಕ್ಕೆ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಎಂದಿನಂತೆ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಮರಳಿ ಸಾರಿಗೆ ಬಸ್ ನಲ್ಲಿ ಬರುವಾಗ ಸುಮಾರು 16 ವಿದ್ಯಾರ್ಥಿನಿಯರು ಸುಳಗಾಕ್ಕೆ ಇಳಿಸದೆ ಬಾರ್ ವೊಂದರ ಮುಂದೆ …
Read More »ಬೆಳಗಾವಿ ಅಧಿವೇಶನದಲ್ಲಿ ಪೂರ್ಣ ಹಾಜರಾತಿ ಕಡ್ಡಾಯ: ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಳಗಾವಿ: ‘ಇದೇ 19ರಿಂದ 30ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಅತ್ಯಂತ ಮಹತ್ವ ಪಡೆದಿದೆ. ಇದರಲ್ಲಿ ಪೂರ್ಣ ಹಾಜರಾತಿ ಇರಬೇಕೆಂದು ಎಲ್ಲ ಶಾಸಕರಿಗೂ ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಅಧಿವೇಶನದ ಪೂರ್ವಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಕೆಲ ಸಚಿವರು, ಶಾಸಕರು ಅಧಿವೇಶನದ ವೇಳೆ ಗೋವಾ, ಮಹಾರಾಷ್ಟ್ರ ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ. ಗಂಭೀರ ವಿಷಯಗಳ ಚರ್ಚೆಯಲ್ಲಿ ಗೈರಾಗುತ್ತಾರೆ ಎಂದು ಹಲವರು ದೂರಿದ್ದಾರೆ. …
Read More »ಕಬ್ಬು ತೂಕದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ: ಕಲಕೇರಿ
ಬೆಳಗಾವಿ: ಜಿಲ್ಲೆಯ ಎಂಟು ಸಕ್ಕರೆ ಕಾರ್ಖಾನೆಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದ್ದು, ಯಾವುದೇ ಕಾರ್ಖಾನೆಯಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ತಿಳಿಸಿದ್ದಾರೆ. ‘ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ರೈತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ದಾಳಿ ಮಾಡಲಾಗಿದೆ. ಬೀದರ್‌ನಿಂದ ಕಾರವಾರವರೆಗೆ ಒಟ್ಟು 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಎಂಟು ಕಾರ್ಖಾನೆಗಳಲ್ಲಿ ಯಾವುದೇ …
Read More »ರೋಹಿತ್ ಪವಾರ್ ಗೋಪ್ಯ ಸಭೆ
ಬೆಳಗಾವಿ: ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರ ಸಹೋದರ ಸಂಬಂಧಿ, ಮಹಾರಾಷ್ಟ್ರದ ಶಾಸಕ ರೋಹಿತ್ ಪವಾರ್ ಅವರು ಮಂಗಳವಾರ ಬೆಳಗಾವಿಯ ಎಂಇಎಸ್ ಮುಖಂಡರ ಜತೆ ಗೋಪ್ಯ ಸಭೆ ನಡೆಸಿದರು. ‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಮಾಹಿತಿ ಪಡೆಯಲು, ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಅವರು ಸೋಮವಾರ ಸಂಜೆ ಬೆಳೆಗಾವಿಗೆ ಬಂದರು. ಇಲ್ಲಿನ ಮರಾಠಿಗರ ಸ್ಥಿತಿಗತಿಗಳ ಮಾಹಿತಿ ಪಡೆದರು’ ಎಂದು ಎಂಇಎಸ್‌ನ ಮುಖಂಡರು ತಿಳಿಸಿದ್ದಾರೆ. ಮಂಗಳವಾರ ಸಮೀಪದ ಹಿಂಡಲಗಾ …
Read More »ಕೆಪಿಟಿಸಿಎಲ್ ಪರೀಕ್ಷೆ ಮತ್ತೊಬ್ಬ ಪರಾರಿಯಾದ ಆರೋಪಿ ಅಂದರ್
ಗೋಕಾಕ ಶಹರ ಪೊಲೀಸ್ ಠಾಣೆ ಪ್ರಕರಣದಲ್ಲಿ ತನಿಖಾಧಿಕಾರಿ ಶ್ರೀ ವೀರೇಶ್ ತಿ ದೊಡಮನಿ DYSP DCRB ಇವರು ತನಿಖೆ ಮುಂದುವರೆಸಿ ದಿನಾಂಕ 14-12-2022 ರಂದು ಈ ಕೇಸಿನಲ್ಲಿಯ ಪರಾರಿ ಇದ್ದ ಇನ್ನೊಬ್ಬ ಪ್ರಮುಖ ಆರೋಪಿ ಸೋಮನಗೌಡ ಶಂಕರಗೌಡ ಪಾಟೀಲ ಬಂಧಿಸಿದ್ದಾರೆ ವಯಸ್ಸು 36 ವರ್ಷ ರಾಯಭಾಗ ಇವನಿಗೆ ದಸ್ತಗೀರ ಮಾಡಿದ್ದು ಈತನು ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ನಡೆದ ಪರೀಕ್ಷೆಯ ಕಾಲಕ್ಕೆ ಗದಗ …
Read More »ಕನ್ನಡದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಕಡಾಡಿ
ಬೆಳಗಾವಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ. ದೇಶದ ಜನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ವೀರ ಯೋಧರ ತ್ಯಾಗ, ಬಲಿದಾನಗಳ ಸ್ಮರಣೆಗಾಗಿ ಹಾಗೂ ಸೇನೆಯಲ್ಲಿ ಯೋಗದಾನ ನೀಡುತ್ತಿರುವ ನಮ್ಮೆಲ್ಲ ಸೈನಿಕರ ಗೌರವಾರ್ಥವಾಗಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪಿಸಲು ಆಗ್ರಹಿಸಿದರು. ಕಡಾಡಿ ಮಾತನಾಡುತ್ತಿರುವಾಗ ಸದನದವು ಗದ್ದಲ ಗೂಡಾಗಿತ್ತು.
Read More »
Laxmi News 24×7