ಬೆಂಗಳೂರು, ಮಾ.23- ಕರ್ನಾಟಕದಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಬೆಳಗ್ಗೆ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಕೊರೊನಾ ರೋಗದ ಭೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಏಕಕಾಲಕ್ಕೆ ಒಂದು ಸಾವಿರ ವೆಂಟಿಲೆಟರ್ಗಳನ್ನು ಖರೀದಿಸಲು ಮುಂದಾಗಿದೆ. ಇಂದು ಬೆಳಗ್ಗೆ ವಿಕಾಸಸೌಧದಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ಕಂಪೆನಿಗಳ ಜೊತೆ ಚರ್ಚೆ ಮಾಡಿ, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆ, ಕಟ್ಟಡ ಮಾಲೀಕರಿಗೆ ಕಾದಿದೆ ಗ್ರಹಚಾರ..
ಬೆಂಗಳೂರು, ಮಾ.23- ಬೆಂಗಳೂರು ಮಹಾನಗರದಲ್ಲಿ ಸಿಇ ಹಾಗೂ ಸಿಇಒ ನಿಂದ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳು ಮತ್ತು ಕಟ್ಟಡಗಳ ಮಾಲೀಕರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್ಸಿಂಗ್ ವಿಧಾನ ಪರಿಷತ್ನಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರದಲ್ಲಿ ಕಾನ್ಸೆಂಟ್ ಫಾರ್ ಎಸ್ಟಾಬ್ಲಿಷ್ಮೆಂಟ್ ಹಾಗೂ ಕಾನ್ಸೆಂಟ್ ಫಾರ್ ಆಪರೇಷನ್ನಿಂದ ಕಟ್ಟಡಗಳು ಮತ್ತು ಕಾರ್ಖಾನೆಗಳು ಕಡ್ಡಾಯವಾಗಿ …
Read More »ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ
ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ. ಈ ಸಮಯದಲ್ಲಿ ಮೋದಿ ಹೇಳಿದ್ಕೆ ನಾನ್ ಚಪ್ಪಾಳೆ ತಟ್ಟಲ್ಲ, ಆವತ್ತು ಸಿದ್ದು ಕ್ಯಾಂಟೀನ್ ಮಾಡಿದ್ಕೆ ಇವತ್ತು ಊಟ ಸಿಕ್ತಿರೋದು ಅಂತ ಕೆಳಮಟ್ಟದ ರಾಜಕೀಯ ಮಾಡೋದು ಬಿಟ್ಟು ಎಲ್ಲರು ಒಂದಾಗಿ. ಇವತ್ತು ನೀವು ಸೋಲಿಸಬೇಕಿರುವುದು ಮೋದಿನೊ, ಸಿದ್ದುನೊ, ಕಾಂಗ್ರೆಸ್ಸೊ, ಬಿಜೆಪಿನೊ ಅಲ್ಲ…. ಇಡೀ ದೇಶಕ್ಕೆ ಮಾರಕವಾಗಿರೊ ಕೊರೊನವನ್ನ! ?
Read More »ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ, ತಿಂಡಿ ನೀಡಲಾಗುವುದು:B.S.Y.
ಬೆಂಗಳೂರು: ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ, ತಿಂಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ. 31ರೆವರೆಗೆ ಬಂದ್ ಮುಂದುವರೆಸಲಾಗುವುದು. ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸಲು ಸರ್ಕಾರ ಸನ್ನದ್ಧವಾಗಿದೆ. ವೈದ್ಯರೊಂದಿಗೆ ಸಭೆ ನಡೆಸಿದ್ದೇವೆ. ವೈದ್ಯರು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. 30 ಫೀಮರ್ ಕ್ಲಿನಿಕ್ ತೆರೆಯಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ …
Read More »ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ:ಲಕ್ಷ್ಮಣ ಸವದಿ
ಬೆಂಗಳೂರು : ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದು …
Read More »ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ?.bsy
27 ಕ್ಕೇರಿದ ಕೊರೋನಾ ಸೊಂಕೀತರ ಸಂಖ್ಯೆ: ನಾಳೆಯಿಂದ ಇಡೀ ರಾಜ್ಯ ಸಂಪೂರ್ಣ ಲಾಕಡೌನ್ ಸಾಧ್ಯತೆ ಬೆಂಗಳೂರು: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್ ಆದೇಶ ಹೊರಡಿಸಿದೆ. ಇನ್ನು, ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ …
Read More »SHOCKING : ಬೆಂಗಳೂರಿನಲ್ಲಿ ಹೋಂ ಕ್ವಾರಂಟೆನ್ನಲ್ಲಿದ್ದಾರೆ 22 ಸಾವಿರ ಮಂದಿ..!
ಬೆಂಗಳೂರು,ಮಾ.23- ನಗರದಲ್ಲಿ 22 ಸಾವಿರ ಹೋಂ ಕ್ವಾರಂಟೆನ್ಗಳಿದ್ದು, ಇವರಲ್ಲಿ 16 ಮಂದಿ ನಗರದ ವಿವಿಧ ಆಸ್ಪತ್ರೆಗಳ ಐಸೋಲೇಷನ್ಗಳಲ್ಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ತಿಳಿಸಿದರು. ಕೊರೊನಾ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್ರೂಮ್ ಉದ್ಘಾಟಿಸಿ ಅವರು ಮಾತನಾಡಿದರು. ಹೋಂ ಕ್ವಾರಂಟೆನ್ಗಳಲ್ಲಿ ಇರಬೇಕಾದವರು ಮನೆಬಿಟ್ಟು ಹೊರಬರುತ್ತಿದ್ದಾರೆ ಇಂಥವರ ಮೇಲೆ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ. ಹೋಂ ಕ್ವಾರಂಟೆನ್ಗಳು ರಸ್ತೆಗಿಳಿದರೆ ಅವರನ್ನು ಹಿಡಿದು ಮಾಸ್ಕ್ ಕ್ವಾರಂಟೆನ್ ಸೆಂಟರ್ಗಳಿಗೆ ರವಾನಿಸಲಾಗುವುದು ಎಂದು …
Read More »ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ: ಸಚಿವ ಡಾ.ಸುಧಾಕರ್
ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ವಿಕ್ಟೋರಿಯದಲ್ಲಿ 2100 ಬೆಡ್ ಇದ್ದರೂ ಎಲ್ಲವನ್ನೂ ಬಳಕೆ ಮಾಡಲು ಆಗಲ್ಲ .ಬೇರೆ ಬೇರೆ ರೋಗಿಗಳು ಇದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳನ್ನು ಹೇಗೆ ಬೇರೆ ಕಡೆ ಶಿಫ್ಟ್ ಮಾಡಬೇಕು ಎನ್ನುವ ಬಗ್ಗೆಯೂ ತೀರ್ಮಾನ ಮಾಡ್ತೇವೆ ಎಂದು ಸುಧಾಕರ್ ತಿಳಿಸಿದರು. ಸದ್ಯ …
Read More »15 ದಿನ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ; ಇನ್ಮುಂದೆ ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಕೇಂದ್ರ; ಸಿಎಂ ಬಿಎಸ್ವೈ
ಬೆಂಗಳೂರು(ಮಾ.22): ಈ ಮಾರಣಾಂತಿಕ ಕೊರೋನಾ ವೈರಸ್ ನಿಗ್ರಹ ಮಾಡಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕದ ಜನತೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದ ನಾನು ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಇಂದಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದೇನೆ. 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ …
Read More »ಇನ್ನೂ 10 ದಿನ ಸಿಲಿಕಾನ್ ಸಿಟಿ ಸ್ತಬ್ಧ?; ನಾಳೆಯಿಂದ ಬೆಂಗಳೂರಿನಾದ್ಯಂತ ರಾಸಾಯನಿಕ ಸಿಂಪಡಣೆ
ಕೊರೋನಾ ವೈರಸ್ ಮೂರನೇ ಹಂತ ತಲುಪಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದು ಖಚಿತ. ಹೀಗಾಗಿ, ನಾಳೆಯಿಂದ ಬೆಂಗಳೂರಿನಾದ್ಯಂತ ರಾಸಾಯನಿಕ ಸಿಂಪಡಣೆ ಮಾಡಲಾಗುವುದು. ಬೆಂಗಳೂರು (ಮಾ. 22): ರಾಜ್ಯದಲ್ಲಿ ಈಗಾಗಲೇ 20 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ದುಬೈನಿಂದ ಇಂದು ಬೆಳಗ್ಗೆ ಆಗಮಿಸಿರುವ ಕನ್ನಡಿಗರ ಪೈಕಿ 6 ಜನರಿಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಮುಂದಾಗಿದೆ. ಇಂದು …
Read More »
Laxmi News 24×7