ಬೆಂಗಳೂರು: ಕಲಬುರ್ಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, ಕೊರೊನಾ ಶಂಕಿತರೇ ಹೊರತು, ಅವರಿಗೆ ಆ ಸೋಂಕು ತಗುಲಿರುವುದು ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಅವರು, ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ ಎಂದು ಕೂಡ ಮನವಿ ಮಾಡಿಕೊಂಡಿದ್ದಾರೆ.
Read More »ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ
ಬೆಂಗಳೂರು: ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಶಾಸಕಾಂಗ ನಾಯಕನ ಹುದ್ದೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಮುಂದುವರೆಯಲಿದ್ದಾರೆ. ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ನೇಮಕ ಮಾಡುವುದರ ಮೂಲಕ ಪಕ್ಷ ಬಲವರ್ಧನೆಯ ಮಹತ್ವದ ಜವಾಬ್ದಾರಿ ಎಐಸಿಸಿ ಎಲ್ಲರ ಮೇಲೂ ಹಾಕಿದೆ, ಈ ಕುರಿತು ಇಂದು ಅಧಿಕೃತ ಪ್ರಕಟಣೆ ಬಿಡುಗಡೆಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಕೊನೆಗೂ ಕೆಪಿಸಿಸಿಗೆ …
Read More »ನಾಳೆಯಿಂದಲೇ ಅಂಗನವಾಡಿಯಿಂದ 5ನೇ ತರಗತಿವರೆಗೆ ರಜೆ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 5ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಮತ್ತು ಪತ್ನಿ, ಮಗು ಹಾಗೂ ಚಾಲಕನಿಗೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣ ಸೋಂಕು ತಗುಲಿದರೆ ಬೇಗನೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮಾರ್ಚ್ 10 ರಿಂದ 17 ರವರೆಗೆ ಅಂಗನವಾಡಿ …
Read More »ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೆ ದೃಢಪಟ್ಟವರ ಸಂಖ್ಯೆ 48ಕ್ಕೇರಿದೆ
ನವದೆಹಲಿ, ಮಾ.10- ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೆ ದೃಢಪಟ್ಟವರ ಸಂಖ್ಯೆ 48ಕ್ಕೇರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.ದುಬೈನಿಂದ ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಆಗಮಿಸಿದ ದಂಪತಿಯಲ್ಲಿ ವೈರಾಣು ಸೋಂಕು ಇರುವುದು ದೃಢಪಟ್ಟಿದೆ. ನಿನ್ನೆ ಹೊಸ ಕೊರೊನಾ ವೈರಸ್ ಪ್ರಕರಣಗಳು ದೆಹಲಿ, ಉತ್ತರ ಪ್ರದೇಶ, ಕೇರಳದ ಎರ್ನಾಕುಲಂ, ಜಮ್ಮು, ಬೆಂಗಳೂರು, ಪಂಜಾಬ್ ಮತ್ತು ಪುಣೆಗಳಲ್ಲಿ ವರದಿಯಾಗಿದೆ. ಆದರೆ, ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್ …
Read More »ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ
ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಕಾಲರಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಇಂದಿನಿಂದ ಬೆಂಗಳೂರಿನಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸಬಾರದೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಖಡಕ್ ಸೂಚನೆ ಕೊಟ್ಟಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್‌ಗೆ ಸಿಎಂ …
Read More »ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ
ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ ಬೆಂಗಳೂರು: ಸದ್ಯ ನಮ್ಮ ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಪೌರತ್ವ ಕಾಯ್ದೆ(ಸಿಎಎ) ಪರ – ವಿರೋಧ ಸಂಘರ್ಷ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ಹಜ್ ಭವನಕ್ಕೆ 5 ಕೋಟಿ ರೂ ಅನುದಾನ ಘೋಷಿಸುವ ಮೂಲಕ ರಾಜ್ಯದ ಮುಸ್ಲಿಮರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಬೆಂಗಳೂರಿನ ಹೆಗ್ಡೆನಗರದಲ್ಲಿರುವ ಹಜ್ ಭವನದಲ್ಲಿ ಇಂದು ಹಜ್ ಯಾತ್ರೆ-2020ಕ್ಕೆ ಆನ್ …
Read More »ಫೋನ್ ಮಾಡಿದ ತಕ್ಷಣ ಕೆಮ್ಮುವ ಧ್ವನಿ ಕೇಳ್ತಿದ್ದೀರಾ..? ಅದು ಕೊರೊನಾ ಕಾಲರ್ಟ್ಯೂನ್..!
ನಿನ್ನೆ ಮೊನ್ನೆಯಿಂದ ಯಾರಿಗಾದ್ರೂ ಫೋನ್ ಮಾಡಿದ ತಕ್ಷಣ ಆ ಕಡೆಯಿಂದ ಕೆಮ್ಮುವ ಧ್ವನಿಯನ್ನ ಹಲವರು ಕೇಳಿರಬಹುದು. ಇದನ್ನ ಕೇಳಿದ ಅನೇಕರು ಅರೇ ಇದೇನಪ್ಪಾ ಇನ್ನೂ ರಿಂಗ್ ಆಗಿಲ್ಲ ಆಗ್ಲೇ ಯಾರೋ ಕೆಮ್ಮುತ್ತಿದ್ದಾರಲ್ಲ ಅಂತಲೂ ಅಂದುಕೊಂಡಿರಬಹುದು.? ಇದಕೆಲ್ಲಾ ಕಾರಣ ಬೇರೇನೂ ಅಲ್ಲ. ಸದ್ಯ, ವಿಶ್ವಕ್ಕೇ ತಲೆನೋವಾಗಿ ಪರಿಣಮಿಸಿರೋ ಕೊರೊನಾವೈರಸ್ ಹೌದು. ಕೊರೊನಾವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿದೆ. ಮೊಬೈಲ್ ಬಳಕೆದಾರರ …
Read More »ಕ್ರೈಸ್ತ ಸಮುದಾಯಕ್ಕೆ ಸಿಎಂ ಭರ್ಜರಿ ಗಿಫ್ಟ್ – ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ಅನುದಾನ
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಮಂಡಿಸಿದ್ದ ರಾಜ್ಯದ 2020-21ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ ಕ್ರೈಸ್ತ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ೨೦೦ ಕೋಟಿ ಅನುದಾನವನ್ನು ಒದಗಿಸುವ ಮೂಲಕ ರಾಜ್ಯದಲ್ಲಿನ ಕ್ರೈಸ್ತ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದಲ್ಲದೆ ರಾಜ್ಯದ ಎಲ್ಲ ಜಾತಿ, ಜನಾಂಗ, ಧರ್ಮದವರಿಗೂ ಅನುದಾನ ನೀಡುವ ಮೂಲಕ, ಸಮತೋಲನ, ಸೌಹಾರ್ದತೆ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕ್ರೈಸ್ತ …
Read More »ಸಂವಿಧಾನ ಕುರಿತ ಚರ್ಚೆಯಲ್ಲಿ ವಿವಾದಕ್ಕೆ ತೆರೆ ಎಳೆದ ಸಿಎಂ
ಬೆಂಗಳೂರು: ಸಂವಿಧಾನ ರಚನೆಯ ಸಕಲ ಗೌರವವೂ ಡಾ. ಬಿ.ಆರ್. ಅಂಬೇಡ್ಕರ್ ಅವರೊಬ್ಬರಿಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುವ ಮೂಲಕಮೂಲಕ ಸಂವಿಧಾನ ಮೂಲ ರಚನೆ ಯಾರು ಮಾಡಿದರು ಎಂಬ ವಿಷಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದ ಪ್ರಸಂಗ ನಡೆಯಿತು. ಸಂವಿಧಾನ ಕುರಿತ ವಿಶೇಷ ಚರ್ಚೆಯ ಅಧಿವೇಶನದ ಎರಡನೇ ದಿನವಾದ ಇಂದು, ಸಂವಿಧಾನ ರಚನೆ, ಉದ್ದೇಶ, ಧೇಯ್ಯೋದ್ದೇಶಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಆರಂಭದಲ್ಲಿ ಸಚಿವ ಮಾಧುಸ್ವಾಮಿ ಈ ವಿಚಾರವಾಗಿ ಮಾತನಾಡಿ, …
Read More »ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ಮಗಳ ಓದು ಹಾಗೂ ಭವಿಷ್ಯದ ಕುರಿತು ಇರುವ ಆತಂಕ
ಬೆಂಗಳೂರು: ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ಮಗಳ ಓದು ಹಾಗೂ ಭವಿಷ್ಯದ ಕುರಿತು ಇರುವ ಆತಂಕವನ್ನ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ರವಿ ಪೂಜಾರಿಯನ್ನ ಪೊಲೀಸರು FSL ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ವೇಳೆ ಪೊಲೀಸರು ಪ್ರಶ್ನೆಗಳಿಗೆ ಉತ್ತರಿಸಿದ ರವಿ ಪೂಜಾರಿ, ಸರ್ ಮಗಳು ನನ್ನನ್ನ ನೆನಪಿಸಿಕೊಳ್ಳುತ್ತ ಸರಿಯಾಗಿ ಓದದೇ ಪರೀಕ್ಷೆಯಲ್ಲಿ ಫೇಲ್ ಆಗುತ್ತಾಳೆನೋ..? ಅನ್ನೋ ಆತಂಕ ವ್ಯಕ್ತಪಡಿಸಿದ್ದಾನೆಂದು ತಿಳಿದು ಬಂದಿದೆ. ರವಿ ಪೂಜಾರಿ ಮಗಳು ಡಿಗ್ರಿ …
Read More »