Breaking News

ಬೆಂಗಳೂರು

ಕೊರೊನಾ ಜಾಗೃತಿಗಾಗಿ ಯೋಗರಾಜ್ ಭಟ್ಟರು ಹಾಡು …..ಒಂದಾದ ಯೋಗರಾಜ್ ಭಟ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್

ಬೆಂಗಳೂರು: ಯೋಗರಾಜ್ ಭಟ್ಟರು ತಮ್ಮ ವಿಭಿನ್ನ ಸಾಹಿತ್ಯ, ನಿರ್ದೇಶನದ ಮೂಲಕವೇ ಪ್ರಸಿದ್ಧರು. ಅವರ ಸಾಹಿತ್ಯ ಯುವ ಸಮೂಹಕ್ಕೆ ಅಪ್ಯಾಯಮಾನ. ಹಲವು ವಿಶಿಷ್ಠ ಗೀತೆಗಳ ಮೂಲಕ ಯುವ ಸಮೂಹಕ್ಕೆ ಭಟ್ಟರು ಹುಚ್ಚು ಹಿಡಿಸುತ್ತಾರೆ. ಅದೇ ರೀತಿ ಇದೀಗ ಕೊರೊನಾ ಜಾಗೃತಿ ಗೀತೆಯನ್ನು ಕಟ್ಟಿಕೊಟ್ಟಿದ್ದಾರೆ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕುರಿತು ಈಗಾಗಲೇ ಹಲವು ಗಾಯಕರು ಹಾಗೂ ಬರಹಗಾರರು ಹಾಡು ರಚಿಸಿದ್ದು, ಇದೀಗ ಯೋಗರಾಜ್ ಭಟ್ಟರು ಹಾಡು ರಚಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ …

Read More »

ಒಂದು ದಿನ ಅಥವಾ ಒಂದು ಕಡೆಗೆ ಹೋಗಲು ಪಾಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ಲಾಕ್‍ಡೌನ್3 ಘೋಷಣೆಯಾಗಿರುವುರಿಂದ ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಊರಿಗೆ ಹೋಗಲು ಪರದಾಡುತ್ತಿರುವ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಮತ್ತಿತರರಿಗೆ ಅನುಕೂಲವಾಗುವಂತೆ ಒಂದು ದಿನ ಅಥವಾ ಒಂದು ಕಡೆಗೆ ಹೋಗಲು ಪಾಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದಾರೆ. ಪಾಸ್ ಬೇಕಾದವರು ತಮ್ಮ …

Read More »

ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ…..

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ರಾಜ್ಯ ಸರ್ಕಾರ ಶನಿವಾರದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬೆನ್ನಲ್ಲೇ ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ. ಉಡುಪಿಯನ್ನು ಹೊರತುಪಡಿಸಿ ರಾಜ್ಯದ 12 ಹಸಿರು ವಲಯ ಜಿಲ್ಲೆಗಳಲ್ಲಿ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಆದರೆ ಜಿಲ್ಲೆಯ ಒಳಗೆ ಮಾತ್ರ ಬಸ್‍ಗಳು ಸಂಚರಿಸಲಿವೆ. ಅಂತರ್ ಜಿಲ್ಲೆಯ ಬಸ್ ಸಂಚಾರ ಇರುವುದಿಲ್ಲ. ಹಾವೇರಿ, ಯಾದಗಿರಿ, …

Read More »

ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ. ರೆಡ್ ಝೋನ್ ಮೈಸೂರು ಜಿಲ್ಲೆಯಲ್ಲಿ ಒಟ್ಟು 28 ಕಂಟೈನ್‍ಮೆಂಟ್ ವಲಯಗಳಿವೆ. ಇದರಲ್ಲಿ ಮೈಸೂರು ನಗರದ ಕೆಲವು ಪ್ರದೇಶ, ನಂಜನಗೂಡಿನ ಕೆಲವು ಬಡಾವಣೆ, ಮೈಸೂರು ತಾಲೂಕು ಕೆಲವು ಏರಿಯಾ ಹಾಗೂ ಟೀ ನರಸೀಪುರದ 1 ಗ್ರಾಮ ಸೇರಿವೆ. …

Read More »

ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ……..

ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು. ಬೀದರ್ ನಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ 82 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ತುಮಕೂರು 2, ವಿಜಯಪುರದಲ್ಲಿ 2, ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ಚಿಕ್ಕಬಳ್ಳಾಪುರದದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. …

Read More »

“ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯ ರಾಜ್ಯಗಳ ಕಾರ್ಮಿಕರ ಹಿತ ಕಾಯಲು ಸರ್ಕಾರ ಬದ್ಧ”

ಬೆಂಗಳೂರು,ಮೇ.2- ಸದ್ಯದಲ್ಲಿಯೆ ನಗರದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಬೃಹತ್ ನಿರ್ಮಾಣ ಚಟುವಟಿಕೆಗಳು ಆರಂಭವಾಗುವುದಿದ್ದು, ಯಾವುದೇ ಆತಂಕಕ್ಕೊಳಗಾಗದೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಾರ್ಮಿಕರಿಗೆ ಸಚಿವ ಸುರೇಶ್‍ಕುಮಾರ್ ಸಲಹೆ ನೀಡಿದರು. ಯಶವಂತಪುರದ ಎಪಿಎಂಸಿ ಹಾಗೂ ಮಾಗಡಿ ರಸ್ತೆಯ ಕಾವೇರಿಪುರ ಗುಡ್ಡದಲ್ಲಿ ಬಹುವಸತಿ ಸಮುಚ್ಛಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಅವರು, ಸರ್ಕಾರವು ತಮ್ಮೆಲ್ಲರ ಹಿತ ಕಾಯಲು ಸದಾ ಬದ್ದವಾಗಿದೆ ಎಂದು ಹೇಳಿದರು. ಎಲ್ಲಾ ಕಾರ್ಮಿಕರಿಗೆ ನೀಡಬೇಕಿರುವ ಬಾಕಿಯನ್ನು ಕೂಡಲೇ …

Read More »

ವರದಿಯಿಂದ ಎಚ್ಚೆತ್ತ ಸರ್ಕಾರ- ದುಪ್ಪಟ್ಟು ದರ ವಸೂಲಿ ಮಾಡದಂತೆ ಸಿಎಂ ಆದೇಶ

ಬೆಂಗಳೂರು: ತಮ್ಮ ಊರುಗಳಿಗೆ ಹೋಗಲು ಮುಂದಾಗಿದ್ದ ವಲಸೆ ಕಾರ್ಮಿಕರಿಂದ ದುಪ್ಪಟ್ಟು ಬಸ್ ಟಿಕೆಟ್ ದರವನ್ನು ಪಡೆಯಲಾಗುತ್ತಿರುವ ಕುರಿತು  ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ, ದುಪ್ಪಟ್ಟು ದರ ವಸೂಲಿ ಮಾಡದಂತೆ ಆದೇಶ ಹೊರಡಿಸಿದೆ. ವಲಸೆ ಕಾರ್ಮಿಕರಿಂದ ದುಪಟ್ಟು ಹಣ ಪಡೆಯಬೇಡಿ. ಒನ್ ಸೈಡ್ ಬಸ್ ಟಿಕೆಟ್ ದರವನ್ನು ಮಾತ್ರ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕರು …

Read More »

ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆ……..

ಬೆಂಗಳೂರು: ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಬೀದರ್ 1, ತುಮಕೂರಿನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ವಿಜಯಪುರದಲ್ಲಿ 2, ಬೆಳಗಾವಿಯಲ್ಲಿ 1, ಬಾಗಲಕೋಟೆಯ ಜಮಖಂಡಿಯಲ್ಲಿ 1 ಹಾಗೂ ಬೆಂಗಳೂರು ನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ರೋಗಿ ನಂಬರ್ 557, 63ವರ್ಷದ ವೃದ್ಧ ಹಾಗೂ ಬೀದರ್ ನಲ್ಲಿ 83 …

Read More »

ಬೇಕಾಬಿಟ್ಟಿ ಹಣ ವಸೂಲಿಗೆ ಕಾರ್ಮಿಕರ ಆಕ್ರೋಶ – ಎಲ್ಲಿಗೆ ಎಷ್ಟು ದರ..?……..

ಬೆಂಗಳೂರು: ಲಾಕ್‍ಡೌನ್ ಘೋಷಣೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ ವಲಸೆ ಕಾರ್ಮಿಕರು ಹಾಗೂ ಇತರರಿಗೆ ಗುಡ್‍ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ಜೊತೆಗೆ ಶಾಕ್ ಕೂಡ ನೀಡಿದೆ. ಹೌದು. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಪ್ರಯಾಣ ಆರಂಭಿಸಿದ ಬಸ್ಸುಗಳಿಗೆ ಡಬಲ್ ದರವನ್ನು ಪಡೆಯಲಾಗುತ್ತಿದೆ. ಒಂದೂವರೆ ತಿಂಗಳಿಂದ ಸಂಬಳವೂ ಇಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರಿಗೆ ಬಸ್ಸುಗಳ ಟಿಕೆಟ್ ದರ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಬಸ್ ಸಂಚಾರ ಆರಂಭದ ಸುದ್ದಿ ಕೇಳುತ್ತಿದ್ದಂತೆಯೇ ನೂರಾರು ವಲಸೆ …

Read More »

ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ ಶಿವಕುಮಾರ್………

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದ ಇದೀಗ ಮತ್ತೆ ಮೇ 17ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾತ್ರೋ ರಾತ್ರಿ ರೈತರ ಸಮಸ್ಯೆ ಆಲಿಸಿದ್ದಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮತ್ತಿತರ ಕಡೆಯ ರೈತರು ತಾವು …

Read More »