Breaking News
Home / ಜಿಲ್ಲೆ / ಬೆಂಗಳೂರು (page 407)

ಬೆಂಗಳೂರು

ಬ್ರೇಕಿಂಗ್ : ರಾಜ್ಯದಲ್ಲಿ ನಿಂತಿಲ್ಲ ಕೊರೋನಾ ಅಟ್ಟಹಾಸ, ಇಂದು 22 ಮಂದಿಯಲ್ಲಿ ಸೋಂಕು ಪತ್ತೆ..!

ಬೆಂಗಳೂರು, ಏ.30- ಮತ್ತೊಮ್ಮೆ ರಾಜ್ಯದಲ್ಲಿ ಕೊರೊನಾ ಸೋಂಕು ಅಬ್ಬರಿಸಿದೆ. ಇಂದು ಮಧ್ಯಾಹ್ನದವರೆಗೂ ನಡೆದ ಪರೀಕ್ಷೆಯಲ್ಲಿ 22 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 557ಕ್ಕೇರಿದೆ. 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 223 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈವರೆಗೂ ಹಸಿರು ವಲಯವಾಗಿದ್ದ ತುಮಕೂರಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಹಿರೇಬಾಗವಾಡಿಯಲ್ಲಿ 12, ಹುಕ್ಕೇರಿಯಲ್ಲಿ ಎರಡು, ಬೆಂಗಳೂರು ನಗರದಲ್ಲಿ ಮೂರು ಮಂದಿಗೆ, ವಿಜಯಪುರದಲ್ಲಿ ಎರಡು, ದಕ್ಷಿಣ ಕನ್ನಡ, ತುಮಕೂರು, …

Read More »

ಮದ್ಯದಂಗಡಿ ಸದ್ಯ ಓಪನ್ ಆಗಲ್ಲ : ಆರ್.ಅಶೋಕ್

ಬೆಂಗಳೂರು, ಏ.30- ಮದ್ಯದಂಗಡಿಗಳನ್ನು ಸದ್ಯಕ್ಕೆ ತೆರೆಯುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದರೂ ಸದ್ಯಕ್ಕೆ ಮದ್ಯದಂಗಡಿ ತೆರೆಯುವ ಯಾವುದೇ ಉದ್ದೇಶ ಇಲ್ಲ ಎಂದರು. ಒಂದು ವೇಳೆ ಮದ್ಯದಂಗಡಿಗಳನ್ನು ತೆರೆದರೆ ಬಡವರಿಗೆ ಮತ್ತು ಕಾರ್ಮಿಕರಿಗೆ ಹಂಚಿಕೆಯಾಗಿರುವ ಆಹಾರ ಸಾಮಗ್ರಿಗಳು, ಎಣ್ಣೆಗಾಗಿ ಖಾಲಿಯಾಗುವ ಸಾಧ್ಯತೆಯಿದ್ದು, ಕುಟುಂಬದವರು ಉಪವಾಸ ಬೀಳಲಿದ್ದಾರೆ. ಹೀಗಾಗಿ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಅವರು …

Read More »

ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ……

ಬೆಂಗಳೂರು(ಏ. 29): ಲಾಕ್​ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್​ಗಳಿವೆ. ಈಗ ಈ ಮಾಸ್ಕ್​ಗಳಿಂದಲೇ ಹೊಸದೊಂದು ಸಮಸ್ಯೆ ಎದುರಾಗಿದೆ. ಜನರು ಮಾಸ್ಕ್​ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್​ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. …

Read More »

ವಿದೇಶಗಳಲ್ಲಿ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿದೆ : ಸುರೇಶ್ ಕುಮಾರ್

ಬೆಂಗಳೂರು : ಲಾಕ್‍ಡೌನ್ ನಿಂದಾಗಿ ವಿದೇಶಗಳಲ್ಲಿರುವ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ 10,823 ಜನ ಕರ್ನಾಟಕದವರು ಇದ್ದಾರೆ. ಮೊದಲ ಹಂತದಲ್ಲಿ 6,100 ಜನ ವಿದೇಶದಿಂದ ವಾಪಸ್ ಆಗಲಿದ್ದಾರೆ. ಸೌದಿ ಅರೇಬಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕನ್ನಡಿಗರಿದ್ದಾರೆ. ಎಲ್ಲರನ್ನು ಕರೆ ತರಲು ಸರ್ಕಾರ ಮುಂದಾಗಿದ್ದು, ವಾಪಸ್ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ …

Read More »

ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು…………

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಮತ್ತೆ ತಂದೆಯನ್ನು ನೆನೆದಿದ್ದು, ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರ ಜನ್ಮದಿನ ಕಳೆದು ನಾಲ್ಕೈದು ದಿನಗಳಾದರೂ ಅಪ್ಪು ಮಾತ್ರ ಇನ್ನೂ ಅದೇ ಗುಂಗಿನಲ್ಲಿದ್ದು, ಅಣ್ಣ ಶಿವರಾಜ್‍ಕುಮಾರ್ ವಿವಾಹದ ಸಂದರ್ಭದಲ್ಲಾದ ಅಪರೂಪದ ಘಟನೆಯೊಂದನ್ನು ನೆನಪಸಿಕೊಂಡಿದ್ದಾರೆ. ತಮ್ಮ ತಂದೆಯ ಜನ್ಮ ದಿನದ ನಿಮಿತ್ತ ‘ಯಾರು ಏನು ಮಾಡುವರೂ’ ಎಂದು ಹಾಡುವ ಮೂಲಕ ಗೀತ ನಮನ ಸಲ್ಲಿಸಿದ್ದರು. ಇದೀಗ ಕೆಲವು ಫೋಟೋಗಳ ವಿಡಿಯೋ ಹಾಕಿ ಹಿಂದಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. …

Read More »

ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ?……

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು. ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು …

Read More »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್…..

ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ. ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ …

Read More »

ಐಟಿ ವೃತ್ತಿಪರರ ವರ್ಕ್‌ ಫ್ರಮ್‌ ಹೋಮ್‌ ಜು. 31ರ ವರೆಗೆ ವಿಸ್ತರಣೆ

ಬೆಂಗಳೂರು: ಕೊವಿಡ್‌ ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಲಾಕ್ ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರನ್ಸ್ ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿ ಶಂಕರ್​ ಪ್ರಸಾದ್​ ಅವರು ಈ ವಿಷಯ ಪ್ರಕಟಿಸಿದ್ದಾರೆ. ಲಾಕ್ …

Read More »

ಗ್ರೀನ್ ಮತ್ತು ಆರೆಂಜ್ ಜೋನ್‌ಗಳಲ್ಲಿ ಹೆದ್ದಾರಿ ಕಾಮಗಾರಿ ನಡೆಸಲು ಅನುಮತಿ : ಡಿಸಿಎಂ ಕಾರಜೋಳ

ಬೆಂಗಳೂರು, ಏ.29-ಕೊರೊನಾ ನಿಯಂತ್ರಣಕ್ಕೆ ಪೂರಕ ನಿರ್ದೇಶನಗಳನ್ನು ಅನುಸರಿಸಿ ಕೆಂಪು ವಲಯವನ್ನು ಹೊರತು ಪಡಿಸಿ ಉಳಿದ ವಲಯಗಳಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಎಲ್ಲಾ ರಾಜ್ಯಗಳ ಲೋಕೋಪಯೋಗಿ ಹಾಗೂ ಸಾರಿಗೆ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಡಿಸಿಎಂ, ನೀರು ಸಂಗ್ರಹಕ್ಕೆ …

Read More »

ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ……

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದೆ. ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಸಹ ಬಂದಿದ್ದರಿಂದ ವಾಹನ ಸಂಚರಕ್ಕೆ ಹಲವೆಡೆ ಅಡ್ಡಿ ಆಗಿತ್ತು. ಬೆಳಗ್ಗೆ ಸುಮಾರು 5 ಗಂಟೆಯಿಂದ ಆರಂಭವಾದ ಮಳೆ ಸುಮಾರು 2 ಗಂಟೆಗಳ ಕಾಲ ಜೋರಾಗಿಯೇ ಸುರಿದಿದೆ. ಬೆಳಗ್ಗೆ 7 ಗಂಟೆಯಾದರೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. ನಗರದ ಎಲ್ಲ ಫ್ಲೈ ಓವರ್ ಗಳನ್ನು ಮುಚ್ಚಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಕಾರು ಚಾಲಕರು ಮತ್ತು …

Read More »