Breaking News

ಬೆಂಗಳೂರು ಗ್ರಾಮಾಂತರ

ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆ : ಕೇಂದ್ರದಿಂದ ಸಮಿತಿ ರಚನೆ

ಬೆಂಗಳೂರು : ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಕ್ಲರ್ಕ್ ನೇಮಕ ಪರೀಕ್ಷೆಯನ್ನು ಸದ್ಯಕ್ಕೆ ಕೈಬಿಟ್ಟಿರುವ ಕೇಂದ್ರ ಸರ್ಕಾರ ಕನ್ನಡಿಗರ ಹೋರಾಟಕ್ಕೆ ಮಣಿದಿದ್ದು, ಗ್ರಾಮೀಣ ಬ್ಯಾಂಕುಗಳಲ್ಲಿನ ಹುದ್ದೆಗಳ ನೇಮಕಕ್ಕೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆಗೆ ತಡೆ ನೀಡಲಾಗಿದೆ. 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೇವಲ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ …

Read More »

ಕೋವಿಡ್:ರಾಜ್ಯದಲ್ಲಿಂದು 3204 ಸೋಂಕಿತರು ಗುಣಮುಖ;1386 ಹೊಸ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ( ದಿನಾಂಕ: 11.07.2021, 00:00 ರಿಂದ 23:59 ರವರೆಗೆ)ಯಲ್ಲಿ ಹೊಸದಾಗಿ 1386 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 61 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ( ಜುಲೈ 12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ಮೇಲೆ ತಿಳಿಸಿದ ಕಾಲಾವಧಿಯಲ್ಲಿ 3204 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ …

Read More »

ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಬಿಜೆಪಿ ಮಾಜಿ ಎಂ​ಎಲ್​ಸಿ ಅಶ್ವಥ್ ನಾರಾಯಣ್ 12 ಕೋಟಿ ಸಾಲ ಕಟ್ಟಿಲ್ಲ -ಠೇವಣಿದಾರರ ಅಳಲು

ಬೆಂಗಳೂರು: ನಗರದ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಡಾ ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಪತ್ರಿಕಾಗೋಷ್ಟಿ ನಡೆಸಿದ್ರು. ಈ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳಾಗ್ತಾ ಬಂತು. ಇದನ್ನ ಸಿಐಡಿ ತನಿಖೆಗೆ ವಹಿಸಲಾಗಿದೆ. ಆದರೆ ಏನು ತನಿಖೆ ಆಗ್ತಾ ಇದೆ ಅನ್ನೊದು ಗೊತ್ತಿಲ್ಲ. ವಾಸ್ತವದಲ್ಲಿ ಸಿಐಡಿಗೆ ಇಷ್ಟು ದೊಡ್ಡ ಹಗರಣ ತನಿಖೆ ಮಾಡಲು ಸಾಮರ್ಥ್ಯ ಇಲ್ಲ. ಈಗಾಗಲೇ ಸುಮಾರು ಠೇವಣಿದಾರರು ಮೃತರಾಗಿದ್ದಾರೆ ಎಂದು …

Read More »

ರಾಜ್ಯದ ಹಲವೆಡೆ ಭಾರೀ ಮಳೆ- ಎಲ್ಲೆಲ್ಲಿ ಏನೇನಾಗಿದೆ..?

ಬೆಂಗಳೂರು: ರಾಜ್ಯದ ಹಲವೆಡೆ ವರುಣರಾಯ ಅಬ್ಬರಿಸಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯ ಮುನ್ಸೂಚನೆ ಇದೆ. ಮುಂದಿನ 24 ಗಂಟೆಗಳಲ್ಲಿ 204 ಮಿಲಿ ಮೀಟರ್‍ಗೂ ಹೆಚ್ಚು ಮಳೆ ಬೀಳುವ ಸಂಭವ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆಟ್ಟ-ಗುಡ್ಡ, ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಆದೇಶಿಸಿದೆ. ಅನಾಹುತ ತಪ್ಪಿಸಲು ಎನ್‍ಡಿಆರ್‍ಎಫ್ ತಂಡ ನಿಯೋಜಿಸಲಾಗಿದೆ. …

Read More »

ಸಿಲಿಕಾನ್ ಸಿಟಿಯಲ್ಲಿ ಸೂಟುಬೂಟಿನ ಕಳ್ಳ – ಸಭ್ಯಸ್ಥನ ವೇಷದಲ್ಲಿ ಬಂದು ಕಳ್ಳತನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಹಗಲು ಹೊತ್ತಲ್ಲೇ ರಾಜಾರೋಷವಾಗಿ ಬಂದು ಕಳ್ಳತನ ಮಾಡುತ್ತಾರೆ. ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ಕದ್ದೊಯ್ದರೂ ಹೇಳೋರಿಲ್ಲ ಕೇಳೋರಿಲ್ಲ ಅನ್ನೋವಂತಾಗಿದೆ. ಹೌದು. ಹಗಲು ಹೊತ್ತಲ್ಲಿಯೇ ಮನಗೆ ನುಗ್ಗಿ ಕಳ್ಳನೊಬ್ಬ ತನ್ನ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಬಯಲಾಗಿದೆ. ಈ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯ ವೀರನಪಾಳ್ಯದಲ್ಲಿ ನಡೆದಿದೆ. ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್ ಮೆಂಟ್ ನ ಮೊದಲನೇ ಮಹಡಿಯಲ್ಲಿ ಈ ಕಳ್ಳತನ ನಡೆದಿದೆ. ಖದೀಮ …

Read More »

ಕಾರ್ಯಕರ್ತನಿಗೆ ಹೊಡೆದ ಡಿಕೆಶಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್​ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ..? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಎಂದು ರಾಜ್ಯ ಬಿಜಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಕಿಡಿಕಾರಿದೆ. ಡಿ.ಕೆ ಶಿವಕುಮಾರ್​ ಮಾದೇಗೌಡರ ಆರೋಗ್ಯ ವಿಚಾರಿಸಲು ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಗೆ ತೆರಳಿದ್ದರು, ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆದುಕೊಳ್ಳಲು …

Read More »

ಬೆಂಗಳೂರಲ್ಲಿ ಶೇ. 70ರಷ್ಟು ಸೋಂಕಿತರಿಗೆ ರೂಪಾಂತರಿ ವೈರಸ್, ಅಲರ್ಟ್​ ಆದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ದಿನೇ ದಿನೇ ರೂಪಾಂತರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗ್ತಿದೆ. ಲ್ಯಾಬ್​​​ಗೆ ಕಳುಹಿಸಿದ ಬಹುತೇಕ ಸ್ಯಾಂಪಲ್‌ಗಳೆಲ್ಲವೂ ರೂಪಾಂತರಿ ವೈರಸ್ ಅಂತ ದೃಢಪಟ್ಟಿದೆ. ನಗರದ ಶೇಕಡಾ 70ರಷ್ಟು ಸೋಂಕಿತರಿಗೆ ರೂಪಂತರಿ ವೈರಸ್ ತಗುಲಿರೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸಾಂಕ್ರಾಮಿಕ ನಿಯಂತ್ರಣಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಫುಲ್ ಆಯಕ್ಟೀವ್ ಆಗಿದ್ದು, ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಹಿಂದೆ ಪಾಸಿಟಿವ್ ಬಂದ ಶೇಕಡಾ 5ರಷ್ಟು ಸ್ಯಾಂಪಲ್ಸ್ ಮಾತ್ರ …

Read More »

ಕಾಂಗ್ರೆಸ್‌ ಸೇರಲು ಸಾ.ರಾ. ಗೋವಿಂದು ಒಲವು?

ಬೆಂಗಳೂರು: ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದು, ಪಕ್ಷದ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಶುಕ್ರವಾರ ಭೇಟಿ ಮಾಡಿ ಕೆಲಕಾಲ ಚರ್ಚೆ ನಡೆಸಿದ್ದಾರೆ. ಇದೇ 17ರಂದು ಬಸವೇಶ್ವರನಗರದಲ್ಲಿ ಪಡಿತರ ಕಿಟ್‌ ವಿತರಣೆ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಅದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲು ತೆರಳಿದ್ದ ಗೋವಿಂದು, ಪಕ್ಷ ಸೇರ್ಪಡೆ ಕುರಿತೂ ಪೂರ್ವಭಾವಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ …

Read More »

ಜಯಂತ ಕಾಯ್ಕಿಣಿ, ಆರತಿಗೆ ‘ಕಸಾಪ ದತ್ತಿ ಪ್ರಶಸ್ತಿ’

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಮನೋಹರ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಗೆ ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ‘ಎ. ಪಂಕಜ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಎಚ್‌.ಎನ್. ಆರತಿ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಶುಕ್ರವಾರ ಈ ಆಯ್ಕೆಗಳು ನಡೆದಿವೆ. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿವೆ ಎಂದು ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಕೋವಿಡ್: ಬಾಗಲಕೋಟೆಯಲ್ಲಿ ಶೂನ್ಯ ಪ್ರಕರಣ; ರಾಜ್ಯದಲ್ಲಿಂದು 3045 ಸೋಂಕಿತರು ಗುಣಮುಖ

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ ( ದಿನಾಂಕ:08.07.2021,00:00 ರಿಂದ 23:59 ರವರೆಗೆ) ಯಲ್ಲಿ 2290 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಹಾಗೂ 68 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 09) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ 3045 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ …

Read More »