ಗೋಕಾಕ:ರಸ್ತೆಗಿಳಿದವರ ಮೇಲೆ ಲಾಠಿ ಏಟು, ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ ಲಾಕ್ಡೌನ್ ಸಂದರ್ಭದಲ್ಲಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿಯಲ್ಲಿ ಹಿಗ್ಗಾಮುಗ್ಗ ಥಳಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಸಾಮಾಜಿಕ ಹೋರಾಟಗಾರರು, ಬರಹಗಾರರು ಮಾತ್ರವಲ್ಲದೆ ಸಾರ್ವಜನಿಕರು ಪೊಲೀಸರ ನಡೆಯನ್ನು ಖಂಡಿಸುತ್ತಿದ್ದಾರೆ. ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ‘ಪೊಲೀಸರಿಗೆ ಶಿಕ್ಷಿಸುವ …
Read More »ಲಾಠಿ ಪ್ರಹಾರಕ್ಕೆ ಬ್ರೇಕ್ ಹಾಕಿದ ಕಮಲ್ ಪಂತ್
ಬೆಂಗಳೂರು: ಕೊರೊನಾದಿಂದ ಲಾಕ್ಡೌನ್ ಘೋಷಿಸಿದ್ದರು ರಸ್ತೆಗಳಿದವರ ಮೇಲೆ ಬಲ ಪ್ರಯೋಗ ಮಾಡಿದ್ದರಿಂದ ಜನರು ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತ ಕಮಲ್ ಪಂತ್ರವರು ಸಾರ್ವಜನಿಕರ ಮೇಲೆ ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಸೂಚಿಸಿದ್ದಾರೆ. ಈ ಬಗ್ಗೆ ಕಮಲ್ ಪಂತ್ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಒಂದು ವೇಳೆ ಸಾರ್ವಜನಿಕರು ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು …
Read More »ಕುಂಟು ನೆಪ ಹೇಳಿ ರಸ್ತೆಗಿಳಿದವ್ರಿಗೆ ಬಿಸಿ ಮುಟ್ಟಿಸುತ್ತಿರೋ ಪೊಲೀಸ್, ಸಾಲು ಸಾಲು ವಾಹನಗಳು ಸೀಜ್
ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್ಡೌನ್ ಜಾರಿಯಾಗಿದೆ. ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಸುಖಾಸುಮ್ಮನೆ ವಾಹನಗಳಲ್ಲಿ ರಸ್ತೆಗಿಳಿಯದಂತೆ ಸೂಚಿಸಲಾಗಿದೆ. ಆದ್ರೂ ನಿಯಮ ಉಲ್ಲಂಘಿಸಿ ಕುಂಟು ನೆಪಗಳನ್ನ ಹೇಳಿಕೊಂಡು ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಜೊತೆಗೆ ವಾಹನಗಳನ್ನ ಸೀಜ್ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗಳಿದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಜನರು ಅನಾವಶ್ಯಕ ಓಡಾಡೋದಲ್ಲದೆ ಪೊಲೀಸರ ಜೊತೆ ವಾಗ್ವಾದ ಮಾಡ್ತಿದ್ದಾರೆ. …
Read More »ಆತ್ಮಹತ್ಯೆ ಮಾಡಿಕೊಂಡ ಮಗಳ ಶವವನ್ನು ಹೊತ್ತು 35 ಕಿಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಆಸ್ಪತ್ರೆ ತಲುಪಿದ ತಂದೆ; ವಿಡಿಯೋ ವೈರಲ್
ಭೋಪಾಲ್: ಆತ್ಮಹತ್ಯೆ ಮಾಡಿಕೊಂಡ ಮಗಳ ಮೃತದೇಹವನ್ನು ತಂದೆ ಮಂಚದ ಮೇಲೆ ಮಲಗಿಸಿ, ಕಟ್ಟಿಕೊಂಡು ಸುಮಾರು 35 ಕಿಮೀ ಹೊತ್ತು ನಡೆದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದೆ. ಮಗಳ ಶವವನ್ನು ಪೋಸ್ಟ್ಮಾರ್ಟಮ್ಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಶವವನ್ನು ಸಾಗಿಸಲು ಒಂದು ವಾಹನದ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಮಗಳ ಶವವನ್ನು ಹೊತ್ತು 35 ಕಿಮೀ ದೂರವನ್ನು ಏಳು ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಇವರೊಂದಿಗೆ ಹಳ್ಳಿಯ ಕೆಲವರೂ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ …
Read More »ಆಮೆರಿಕಾದಿಂದ ಭಾರತಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್ ನೆರವು; ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರವಾನೆ
ದೆಹಲಿ: ಆಮೆರಿಕಾದಿಂದ ಭಾರತಕ್ಕೆ 2200 ಆಕ್ಸಿಜನ್ ಕಾನ್ಸೆಂಟ್ರೇಟರ್ ನೆರವು ಒದಗಿಬಂದಿದೆ. ಜೊತೆಗೆ 10 ಸಾವಿರ ಆಕ್ಸಿಮೀಟರ್ ಸಹ ಭಾರತಕ್ಕೆ ರವಾನೆಯಾಗಿದೆ. ಕೇಂದ್ರ ಸರ್ಕಾರವು ಇವುಗಳನ್ನ ತಕ್ಷಣ ಕೆಲ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಕೇಂದ್ರ ನೀತಿ ಆಯೋಗ (National Institution for Transforming India-NITI Aayog) ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಕರ್ನಾಟಕಕ್ಕೆ ಹೆಚ್ಚು ಪಾಲು ಸಂದಾಯವಾಗಿದೆ ಎಂಬುದು ಸಮಧಾನಕರ ವಿಷಯ. ಕೊರೊನಾ ಸಂಕಷ್ಟ ಕಾಲದಲ್ಲಿ ಅಮರಿಕದಿಂದ ಬಂದಿಳಿದಿರುವ ವೈದ್ಯಕೀಯ …
Read More »ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಕೊವಿಡ್ ಸೋಂಕಿನಿಂದ ಸಾವು
ದೆಹಲಿಯ ಟಿಕ್ರಿ ಗಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮಬಂಗಾಳದಿಂದ ತೆರಳುತ್ತಿದ್ದ 26ವರ್ಷದ ಹೋರಾಟಗಾರ್ತಿಯೊಬ್ಬಳನ್ನು, ಅವಳ ಜತೆಗಿದ್ದ ಇಬ್ಬರು ಅತ್ಯಾಚಾರ ಮಾಡಿದ್ದರು. ಈ ಅತ್ಯಾಚಾರ ಸಂತ್ರಸ್ತೆ ಇದೀಗ ಕೊವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇದು ತುಸು ಹಳೇ ಘಟನೆಯಾಗಿದ್ದು, ಇದೀಗ ಬೆಳಕಿಗೆ ಬಂದಿದೆ. ಏಪ್ರಿಲ್ 11ರಂದು ಈ ಯುವತಿ, ಇನ್ನಿಬ್ಬರೊಂದಿಗೆ ದೆಹಲಿ ಗಡಿಗೆ ತೆರಳುತ್ತಿದ್ದರು. ಆದರೆ ದುರ್ದೈವವೆಂಬಂತೆ ಜತೆಗಿದ್ದವರಿಂದಲೇ …
Read More »ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿಗೆ ಬಲಿ; ಜನರಲ್ಲಿ ಹೆಚ್ಚಾದ ಆತಂಕ
ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 12 ಜನರನ್ನು ಕೊರೊನಾ ಸೋಂಕು ಬಲಿ ತೆಗೆದುಕೊಂಡಿದೆ. ಕಳೆದ 12 ಗಂಟೆಯಲ್ಲಿ 12 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ …
Read More »ದೂರವಾಣಿ ಮೂಲಕ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಟಾಸ್ಕ್ಪೋರ್ಸ್ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಕೊವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸೋಂಕಿತರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಸಿಗಲಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿಯ ಎನ್.ಎಸ್.ಎಫ್. ಅತಿಥಿ ಗೃಹದ ಆವರಣದಲ್ಲಿ ಕೋವಿಡ್ ಸಂಬಂಧ ಗೋಕಾಕ್ ಮತ್ತು ಮೂಡಲಗಿ ತಾಲೂಕುಗಳ ಟಾಸ್ಕ್ಫೆÇೀರ್ಸ್ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು. ಕೊರೋನಾ …
Read More »ಕೋವಿಡ್ ಸೊಂಕಿತರಿಗೆ ಉಚಿತವಾಗಿ ಕೆಎಂಎಫ್ನಿಂದ 200 ಆಕ್ಸಿಜನ್ ಬೆಡ್ಗಳ ಪೂರೈಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು : ಕೋವಿಡ್ ಎರಡನೇ ಅಲೆಯನ್ನು ಕರಾಳಗೊಳಿಸಿರುವ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿಯು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಮಂಗಳವಾರದಂದು ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಆಕ್ಸಿಜನ್ …
Read More »14 ದಿನ ಲಾಕ್ ಡೌನ್ ಹಿನ್ನೆಲೆ..ಗೋಕಾಕನಲ್ಲಿ ಮಧ್ಯಾಹ್ನವೇ ಅಂಗಡಿ-ಮುಂಗಟ್ಟು ಬಂದ್
ಸರಕಾರದ ಕೊರಾನಾ ಹೊಸ ಮಾರ್ಗಸೂಚಿ ಬೆನ್ನಲ್ಲೆ ಗೋಕಾಕದಲ್ಲಿ ಅಂಗಡಿ ಮುಗ್ಗಟುಗಳನ್ನು ಬಂದ್ ಮಾಡಿಸಲು ಮುಂದಾದ ಪೋಲಿಸ್ ಮತ್ತು ನಗರಸಭೆ ಅಧಿಕಾರಿಗಳು. ಹೌದು ಕೊರಾನಾ2ಅಲೆಯು ತನ್ನ ಅಟ್ಟಹಾಸವನ್ನು ದಿನದಿನಕ್ಕೂ ಸಾವು ಪಡೆಯಯತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾರ್ವಜನಿಕರು ಕೊರಾನಾ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಇನ್ನೊಂದು ಕಡೆ, ಹೇಗಾದರೂ ಮಾಡಿ ಕೊರಾನಾದಿಂದ ಸರಕಾರ ಸಾರ್ವಜನಿಕರನ್ನು ರಕ್ಷಿಸಲು ಹೊಸ ಮಾರ್ಗಸೂಚಿ ಸಂಜೆಯಿಂದ ಅನ್ವಯವಾಗಲೆಂದು ಬಿಡುಗಡೆ ಮಾಡಿತ್ತು, ಆದರೆ ಗೋಕಾಕ ನಗರದಲ್ಲಿ ಇವತ್ತು ಸಂಜೆ …
Read More »