ಮೂಡಲಗಿ : ಗೋಕಾಕ ಹಾಗೂ ಮೂಡಲಗಿ ತಾಲೂಕಿನ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರದಂದು ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಸಿಕೆ ಅಭಿಯಾನವನ್ನು ಈಗಾಗಲೇ ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳು ಕೈಜೋಡಿಸಿ …
Read More »ಗೋಕಾಕ: ನಗರದ ಪ್ರವಾಸಿ ಮಂದಿರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ) ಬೆಳಗಾವಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ರೈತ ಮುಖಂಡರು.
ಗೋಕಾಕ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ)ಬೆಳಗಾವಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು. ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜುಲೈ-21 ರಂದು ರಾಜ್ಯ ಮಟ್ಟದ ರೈತ ಹುತ್ಮಾತ ದಿನಾಚರಣೆಯನ್ನು ಯರಗಟ್ಟಿಯಲ್ಲಿ ನಡೆಸಲು ನಿರ್ಧರಿಸಲಾಯಿತ್ತಲ್ಲದೇ ಕೃಷಿ ಇಲಾಖೆ ನೀಡುತ್ತಿರುವ ಉಪಕರಣಗಳ ಸಹಾಯಧನವನ್ನು ರದ್ದು ಮಾಡಿದ್ದು ಅದನ್ನು ಪುನ: ಆರಂಭಿಸಬೇಕು. ನೀರಿನ ಪಂಪಸೆಟ್‍ಗಳನ್ನು ನಡೆಸಲು 3ಪೇಸ್ …
Read More »ಹೆಣ್ಣು ಮಕ್ಕಳನ್ನು ಅಪಮಾನಿಸಿ ಮಾತನಾಡುವುದೇ ಅವರ ಸಂಸ್ಕೃತಿ – ಸಂಸ್ಕಾರ : ಎಚ್ ಡಿಕೆ ಟಾಂಗ್ ನೀಡಿದ ಸಂಸದೆ ಸುಮಲತಾ
ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಅದು ಅವರ ಸಂಸ್ಕೃತಿ – ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಮಾಜಿ ಸಿಎಂ ಆಗಿ, ಇಂತಹ ಮಾತುಗಳನ್ನು ಆಡುವುದು ಶೋಭೆತರಲ್ಲ ಎಂದು ಕುಮಾರಸ್ವಾಮಿ ಗೆ ಸಂಸದೆ ಸುಮಲತಾ ಟಾಂಗ್ ನೀಡಿದರು. ವಿಧಾನ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಕೆ.ಆರ್.ಎಸ್. ಜಲಾಶಯ ರಕ್ಷಣೆ ನನ್ನ ಉದ್ದೇಶ. ನನ್ನ ಮಾಹಿತಿಯಂತೆ ಜಲಾಶಯ …
Read More »ವಿದ್ಯುತ್ ಮಗ್ಗ ನೇಕಾರರಿಗೆ 3 ಸಾವಿರ ಲಾಕ್ ಡೌನ್ ವಿಶೇಷ ದನ ಸಹಾಯಕ್ಕಾಗಿ ಅರ್ಜಿ ಅಹ್ವಾನ
ಬಾಗಲಕೋಟೆ : ಕೋವಿಡ್-19 ರ 2ನೇ ಅಲೆಯಿಂದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಾದಿತವಾದ ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರು ಹಾಗೂ ಮಗ್ಗಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರ್ನಡೈಯಿಂಗ್, ವಾರ್ಪಿಂಗ್, ಝರಿ ವೈಂಡಿಂಗ್ & ವಾರ್ಪಿಂಗ್, ವಾರ್ಪ ನಾಟಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ‘SSLC ವಿದ್ಯಾರ್ಥಿ’ಗಳೇ ಗಮನಿಸಿ : ಶಿಕ್ಷಣ ಇಲಾಖೆಯ ‘ಈ ಆಪ್’ ಹಾಕೊಳ್ಳಿ, ನಿಮ್ಮ ‘ಪರೀಕ್ಷಾ ಸಿದ್ಧತೆ’ಗೆ …
Read More »ಸಾರ್ವಜನಿಕರಿಂದ ಅತಿಕ್ರಮಣಗೊಂಡಿದ ಸರ್ಕಾರಿ ಜಾಗ ಮರು ವಶಕ್ಕೆ.
ಘಟಪ್ರಭಾ : ಕಳೆದ ಹತ್ತು ಹದಿನೈದು ವರ್ಷಗಳಿಂದ ಸಾರ್ವಜನಿಕರಿಂದ ಆಕ್ರಮಿಸಿಕೊಂಡಿದ್ದ ಸರ್ಕಾರಿ ಭೂಮಿಯನ್ನು ಮರು ವಶಪಡಿಸಿಕೊಂಡ ಘಟನೆ ಪಾಮಲದಿನ್ನಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಪಾಮಲದಿನ್ನಿ ಗ್ರಾಮದಲ್ಲಿ ಸರ್ವೆ ನಂ. 4 ರಲ್ಲಿ ಸುಮಾರು 10 ಎಕರೆ ಭೂಮಿ ಇದ್ದು, ಅದರಲ್ಲಿಯ 2 ಎಕರೆಯಷ್ಟು ಭೂಮಿಯನ್ನು ಸರಕಾರಿ ಪ್ರೌಢಶಾಲೆಗೆ ಬಿಟ್ಟು ಕೊಡಲಾಗಿದೆ. ಇನ್ನುಳಿದ ಜಾಗದಲ್ಲಿ ಸಾರ್ವಜನಿಕರ ಅಭಿವೃದ್ಧಿಯ ಹಿತ ದೃಷ್ಟಿಯಿಂದ ವಿವಿಧ ಇಲಾಖೆಗಳ ಉಪಯೋಗಕೆಂದು ಕಾಯ್ದಿರಿಸಲಾಗಿತ್ತು. ಈಗ ಈ …
Read More »ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಶ್ವಿನಿ ನಾಯಕವಾಡಿ ಅವರ ಮನೆಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೂಡಲಗಿ : ತಾಲ್ಲೂಕಿನ ಕಂಕನವಾಡಿ ಗ್ರಾಮದಲ್ಲಿ ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಶ್ವಿನಿ ನಾಯಕವಾಡಿ ಅವರ ಮನೆಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಹುಲ್ ಜಾರಕಿಹೊಳಿ ಮಾತನಾಡಿ, ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಸ್ವಿನಿ ನಾಯಕವಾಡಿ ಅವರ ಕಾಲಾವಧಿಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ಅವರ …
Read More »ಎಚ್ಚರ. ಮನೆಗಳ ಸಿಸಿಟಿವಿ ದೃಶ್ಯಗಳಿಗೂ ಹ್ಯಾಕರ್‌ಗಳ ಕನ್ನ!
ಕೊಚ್ಚಿ: ಇತ್ತೀಚೆಗೆ ಭದ್ರತೆಯ ಸಲುವಾಗಿ ಮನೆಗಳಲ್ಲಿ “ಕ್ಲೋಸ್ಡ್ ಸರ್ಕ್ನೂಟ್ ಕೆಮರಾ’ಗಳನ್ನು (ಸಿಸಿ ಕೆಮರಾ) ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ವೇಳೆ, ಹ್ಯಾಕರ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವು ಮನೆಗಳಲ್ಲಿ ಸುತ್ತಲಿನ ವಿದ್ಯಮಾನ ಗಮನಿಸಲು ಮನೆಯ ಮುಖ್ಯ ಬಾಗಿಲಿನ ಮುಂದೆ, ಗೇಟ್ ಹಾಗೂ ಇತರ ಆಯ್ದ ಕಡೆಗಳಿಗೆ ಸಿಸಿ ಕೆಮರಾ ಅಳವಡಿಸಿದರೆ, ಇನ್ನೂ ಕೆಲವರು ಮಕ್ಕಳ ಚಟುವಟಿಕೆಗಳನ್ನು ಗಮನಿಸಲು ಮನೆಯ ಒಳಾಂಗಣಗಳಲ್ಲಿ ಕೆಮರಾಗಳನ್ನು ಅಳವಡಿಸುತ್ತಾರೆ. ಬಹುತೇಕ ಕಡೆ, …
Read More »ಮೋದಿ ಸರ್ಕಾರದಿಂದ ಗುಡ್ ನ್ಯೂಸ್
ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ. ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ. ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು …
Read More »ಕನ್ನಡ ಧ್ವಜ ಮಳೆ-ಬಿಸಿಲಿನಿಂದ ಬಣ್ಣ ಕಳೆದುಕೊಂಡಿದೆ.
ಬೆಳಗಾವಿ: ಮಹಾನಗರ ಪಾಲಿಕೆ ಎದುರು ಅಳವಡಿಸಿರುವ ಕನ್ನಡ ಬಾವುಟ ಮಳೆ-ಬಿಸಿಲಿಗೆ ಮಾಸಿದ್ದರಿಂದ ಅದನ್ನು ಬದಲಾಯಿಸಿ ಹೊಸ ಬಾವುಟ ಅಳವಡಿಸಲು ಸೋಮವಾರ ಬಂದಿದ್ದ ಕನ್ನಡ ಸಂಘಟನೆ ಕಾರ್ಯಕರ್ತರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಕನ್ನಡ ಹೋರಾಟಗಾರರಾದ ಶ್ರೀನಿವಾಸ ತಾಳೂಕರ ಹಾಗೂ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ದ್ವಜ ಸ್ತಂಬದ ಕಡೆಗೆ ಹೋಗುವುದನ್ನು …
Read More »ಇಂದಿನಿಂದ ರಾಜ್ಯಾದ್ಯಂತ ಅನಲಾಕ್ 3.O ಹಿನ್ನೆಲೆ ಬಹುತೇಕ ದೇವಸ್ಥಾನಗಳು ಓಪನ್ ಆಗಿದ್ದು,
ಬೆಳಗಾವಿ: ಕಳೆದ ಎರಡೂ ವರೆ ತಿಂಗಳು ಬಳಿಕ ಇಂದಿನಿಂದ ರಾಜ್ಯಾದ್ಯಂತ ಅನಲಾಕ್ 3.O ಹಿನ್ನೆಲೆ ಗಡಿಜಿಲ್ಲೆ ಬೆಳಗಾವಿಯಲ್ಲಿ ಬಹುತೇಕ ದೇವಸ್ಥಾನಗಳು ಓಪನ್ ಆಗಿದ್ದು, ದೇವಸ್ಥಾನಗಳಲ್ಲಿ ಭಕ್ತರು ದರ್ಶನಕ್ಕೆ ಆಗಮಿಸುತ್ತಿದೆ. ಸವದತ್ತಿ ಯಲ್ಲಮ್ಮನ ದೇವಸ್ಥಾನ ಹಾಗೂ ಜೋಗುಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ ಹೊರತುಪಡಿಸಿ ಜಿಲ್ಲೆಯ ಉಳಿದ ದೇವಸ್ಥಾನಗಳು ಇಂದಿನಿಂದ ಮೊದಲಿನಂತೆ ಓಪನ್ ಆಗುತ್ತಿದ್ದು, ದಕ್ಷಿಣಕಾಶಿ ಎಂದೇ ಪ್ರಸಿದ್ಧ ಪಡೆದಿರುವ ಬೆಳಗಾವಿ ಕಪಿಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಜನರ ದಂಡು ಆಗಮಿಸುತ್ತಿದೆ. ಕೋವಿಡ್ …
Read More »
Laxmi News 24×7