ಬೆಳಗಾವಿ: ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ವಿಚಾರವಾಗಿ ರಾಜ್ಯದಲ್ಲಿ ಸದ್ಯ ಚರ್ಚೆ ಮತ್ತು ಗೊಂದಲ ಸೃಷ್ಟಿಯಾಗಿದೆ. ಅದರಂತೆ ಹಳೆ ಬೆಳಗಾವಿ ಹೊರ ವಲಯದಲ್ಲಿರುವ ಎಂಬತ್ತು ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಲು ತಿಳಿಸಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ದೇವಸ್ಥಾನ ತೆರವು ಮಾಡಲು ಆದೇಶ ನೀಡಲಾಗಿತ್ತು. ಆದರೆ ಆದೇಶವಿದ್ದರೂ ಹೋರಾಟ ಮಾಡಿ ಸ್ಥಳೀಯರು ಮತ್ತು ಹಿಂದೂಪರ ಕಾರ್ಯಕರ್ತರು ಉಳಿಸಿಕೊಂಡಿದ್ದರು. ಎಂಟು ವರ್ಷದ ಹಿಂದೆ …
Read More »ಮಹಿಳಾ ಪೇದೆ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಿಲನ…..!
ಜೈಪುರ: 6 ವರ್ಷದ ಮಗುವಿನ ಮುಂದೆಯೇ ಹಿರಿಯ ಪೊಲೀಸ್ ಅಧಿಕಾರಿ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಲೈಂಗಿಕ ಸಂಪರ್ಕ ನಡೆಸಿದ ಮಹಿಳಾ ಕಾನ್‍ಸ್ಟೇಬಲನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಮಹಿಳಾ ಪೇದೆಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದು, ಸೆಪ್ಟೆಂಬರ್ 17ರವರೆಗೆ ಆಕೆಯನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ. ಮಹಿಳಾ ಪೇದೆ ಜೊತೆ ದೈಹಿಕ ಸಂಪರ್ಕ ನಡೆಸಿದ್ದ ಹಿರಿಯ ಅಧಿಕಾರಿಯನ್ನು ಇದಕ್ಕೂ ಮುನ್ನವೇ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಬಂಧನ ಬೆನ್ನಲ್ಲೇ ವೀಡಿಯೋದಲ್ಲಿದ್ದ ಅಜ್ಮಲ್ …
Read More »ಗೋಕಾಕ ಪೊಲೀಸ್ ಇಲಾಖೆ ವತಿಯಿಂದ ಗಣೇಶೋತ್ಸವ ಪೂರ್ವಭಾವಿ ಸಭೆ,
ಗೋಕಾಕ ಪೊಲೀಸ್ ಇಲಾಖೆ ವತಿಯಿಂದ ಗಣೇಶೋತ್ಸವ ಪೂರ್ವಭಾವಿ ಸಭೆ, ಗೋಕಾಕ ಶಹರ ಪೊಲೀಸ್ ಠಾಣೆ ಹಾಗೂ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಆಡಳಿತ ಮಂಡಳಿಯ ಅಧ್ಯಕ್ಷರ ಸಭೆ ಕರೆಯಲಾಗಿದ್ದು ಕಡ್ಡಾಯವಾಗಿ ಹಾಜರಾಗಲು ವಿನಂತಿ.ಈ ಸಭೆಯಲ್ಲಿ ಅಪೇಕ್ಷಿತರು ಶಾಂತಿ ಪಾಲನಾ ಸಮಿತಿ ಸದಸ್ಯರು,ಗೋಕಾಕ ಗ್ರಾಮ ದೇವತೆ ಜಾತ್ರಾ ಕಮಿಟಿ ಹಿರಿಯರು,ಗೋಕಾಕ ನಗರ ಸಭೆ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರಿಗೆ ಆಹ್ವಾನಿಸಲಾಗಿದ್ದು ಸರಿಯಾದ ಸಮಯಕ್ಕೆ ಬಂದು ಸಭೆ ಯಶಸ್ವಿಗಾಗಿ ಸಹಕರಿಸಲು ಗೋಕಾಕ …
Read More »ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಮೂಡಲಗಿ : ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ …
Read More »ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ
ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …
Read More »ಗೋಕಾಕ ನಗರದ ಸಾರ್ವಜನಿಕಕರಿಗೆ ನಗರಸಭೆಯಿಂದ ಸೂಚನೆ?
ಗೋಕಾಕ ನಾಗರಿಕರಲ್ಲಿ ಈ ಮೂಲಕ ತಿಳಿಸುವುದೇನೆಂದರೆ ಗೋಕಾಕ ನಗರಕ್ಕೆ ನೀರು ಪೂರೈಕೆ ಮಾಡುವ ನಗರದ ನದಿಯ ದಡದಲ್ಲಿರುವ ಜಾಕವೆಲ್ ನಲ್ಲಿರುವ 200 ಎಚ್.ಪಿ ಪಂಪಸೆಟ್ ಮೋಟಾರ್ ರಿಪೇರಿ ಇದ್ದ ಕಾರಣ ಗೋಕಾಕ ನಗರದಲ್ಲಿ ಶುಕ್ರವಾರ ದಿ.3-9-2021ಮತ್ತು ಶನಿವಾರ ದಿ.4-9-2021 ರಂದು ನೀರು ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಲು ನಗರಸಭೆಯ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಶ್ಯಾಳಿ,ಪೌರಾಯುಕ್ತರಾದ ಶ್ರೀ ಶಿವಾನಂದ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ …
Read More »ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ
ಚಿಕ್ಕಮಗಳೂರು: ಮಹಿಳೆಗೆ ಚುಡಾಯಿಸಿದರೆಂದು ಆರೋಪಿಸಿ ಪರಿಸರವಾದಿ ವೈಲ್ಡ್ ಕ್ಯಾಟ್ – ಸಿ ಸಂಸ್ಥೆಯ ಡಿ.ವಿ.ಗಿರೀಶ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರ ಜೊತೆಯಲ್ಲಿದ್ದವರಿಗೂ ಥಳಿಸಿದ್ದಾರೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೂ ಕೆಲ …
Read More »ಮಹಾಮಾರಿ ಕೋವಿಡ್‌ಗೆ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಬಲಿ
ಬೆಂಗಳೂರು: ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ವರ್ಷಗಳಿಂದ ಭೂಗತನಾಗಿದ್ದ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಕೊರೊನಾಗೆ ಬಲಿಯಾಗಿದ್ದಾನೆ. ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ರವಿಗೆ ಕೋವಿಡ್ ಸೋಂಕು ತಗುಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ರೌಡಿಶೀಟರ್ ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ. ಭೂಗತನಾಗಿದ್ದುಕೊಂಡೇ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ. ಕಳೆದ …
Read More »ಯುವ ಜನತೆ ಕ್ರೀಡೆಯಲ್ಲಿ ಹೆಚ್ಚಿಗೆ ಭಾಗವಹಿಸಬೇಕು, ಶಿಕ್ಷಣ ಹಾಗೂ ಕ್ರೀಡೆಗೆ ಒತ್ತು ನೀಡಿ ನಮ್ಮ ನಾಡಿಗೆ ಕೀರ್ತಿ ತರಬೇಕು ಎಂದು ರಾಹುಲ್ ಜಾರಕಿಹೊಳಿ.ಹೇಳಿದರು
ಗೋಕಾಕ: ಅಗಸ್ಟ್ 28 ರಿಂದ 30 ರವರೆಗೆ ನವದೆಹಲಿಯಲ್ಲಿ ನಡೆದಂತಯ ಯೂತ್ ಗೇಮ್ಸ್ ಫಡೇರೆಷಣ ಆಫ್ ಇಂಡಿಯಾ ದ ಯುತ್ ಗೇಮ್ಸ್ ಆಲ್ ಇಂಡಿಯಾ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೋಕಾಕದ ಯುವಕರು ವಿಜೇತರಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾದರು. ಇಲ್ಲಿನ ಹಿಲ್ ಗಾರ್ಡನ್ ಕಛೇರಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕದ ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಮಹೇಶ್ …
Read More »ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ದಿನದಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ, ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಮಹಾನಗರ ವ್ಯಾಪ್ತಿಯ ಎಲ್ಲ ಸರ್ಕಾರಿ, ಅರೆ …
Read More »
Laxmi News 24×7