Breaking News

ಅಂತರಾಷ್ಟ್ರೀಯ

ಗೋಕಾಕ ಮುಪ್ಪಯ್ಯನ ಮಠದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ : ರಾಚೋಟಿ ಶ್ರೀಗಳಿಂದ ಚಾಲನೆ

ಗೋಕಾಕ : ನಗರದ ಸೋಮವಾರ ಪೇಟೆಯ ಅಂಗನವಾಡಿ ಕೇಂದ್ರ ಸಂಖ್ಯೆ 176 ಮತ್ತು 177 ರ ಮಕ್ಕಳಿಗೆ ರವಿವಾರದಂದು ಶ್ರೀ ಮುಪ್ಪಯ್ಯನವರ ಹಿರೇಮಠದಲ್ಲಿ ಪೂಜ್ಯ ಶ್ರೀ ರಾಚೋಟಿದೇವರು ಪೋಲಿಯೋ ಹನಿ ನೀಡುವ ಮೂಲಕ ಫಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಿರ್ಮಲಾ ಸುಭಂಜಿ, ಲಕ್ಷ್ಮೀ ದೇಶನೂರ, ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಧರೀಶ ಕಲಘಾಣ, ಬಸವರಾಜ ಶೇಗುಣಸಿ, ಸೋಮಶೇಖರ ಮಗದುಮ್ಮ, ಬಸವರಾಜ ದೇಶನೂರ, ಗಣೇಶ ಕರೋಶಿ, …

Read More »

ನ್ಯಾಯವಾದಿಯಿಂದ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಗೋಕಾಕ : ಮನೆಯಲ್ಲಿ ರಾತ್ರಿ ಮಕ್ಕಳೊಂದಿಗೆ ಮಲಗಿದ್ದಾಗ ಮಹಿಳೆ ಮೇಲೆ ಅತ್ಯಾಚಾರ ಏಸಗಿದ ಘಟನೆ ಘಟಪ್ರಭ ಪೊಲೀಸ್‌ ಠಾಣೆ ವ್ಯಾಪ್ತಿಯ ಶಿಂಗಳಾಪುರ ಗ್ರಾಮದಲ್ಲಿ ಈಚೆಗೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.   22.02.2022ರ ರಾತ್ರಿ ಸಂತ್ರಸ್ತೆ ಮಹಿಳೆ ಮಕ್ಕಳೊಂದಿಗೆ ಮಲಗಿದ್ದ ವೇಳೆ ಬಾಗಿಲು ಬಡೆದು ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಏಸಗಿದ್ದಾನೆ. ಸಂತ್ರಸ್ತೆ ಮಹಿಳೆ ಕಿರುಚಿದಾಗ ಪಕ್ಕದ ಮನೆಯವರು ಸಹಾಯಕ್ಕೆ ಬಂದಿದ್ದು, ಆರೋಪಿಯಾಗಿರುವ ವಕೀಲ ಮಹಮ್ಮದ ಶಫಿ …

Read More »

ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು.   ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಯುದ್ಧ ರಾಷ್ಟ್ರದಲ್ಲಿ …

Read More »

ಎನ್‌ಸಿಡಿಎಫ್‌ಐ ನಿರ್ದೇಶಕರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ

ಬೆಂಗಳೂರು : ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ(ಎನ್‌ಸಿಡಿಎಫ್‌ಐ) ಆನಂದ್ (ಗುಜರಾತ್ ರಾಜ್ಯ) ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಗುರುವಾರದಂದು ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳದಿoದ ಶಾಮಲ್ ಬಾಯ್ ಪಟೇಲ್, ಕರ್ನಾಟಕ ಸಹಕಾರ ಎಣ್ಣೆ ಬೀಜ …

Read More »

ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರಲು ಸಿಎಂಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮನವಿ

ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರಲು ಸಿಎಂಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮನವಿ ಉಕ್ರೇನ್‌-ರಷ್ಯಾ ನಡುವೆ ಯುದ್ಧ ಆರಂಭ ಬೆಳಗಾವಿ: ಉಕ್ರೇನ್‌-ರಷ್ಯಾ ನಡುವೆ ಯುದ್ಧ ಆರಂಭವಾಗಿದ್ದು, ಹಲವು ಸಾವು, ನೋವುಗಳು ಆಗುತ್ತಿವೆ. ಸಾಕಷ್ಟು ಜನ ಕನ್ನಡಿಗರು ಸೇರಿದಂತೆ ವಿದ್ಯಾರ್ಥಿಗಳು ಉಕ್ರೇನ್‌ ನಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆ ತರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಈ ಕುರಿತು …

Read More »

ಕ್ರೀಡೆಯಿಂದ ಉತ್ತಮ ಆರೋಗ್ಯ: ಯುವ ನಾಯಕ ರಾಹುಲ್‌

ಬೆಳಗಾವಿ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು. ಹೊಸ ವಂಟಮುರಿ ಗ್ರಾಮದಲ್ಲಿ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ನಡೆದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.7 ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟಷ್ಟುಕ್ರೀಡೆಗೂ ಮಹತ್ವ ನೀಡಬೇಕು. ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿದ್ದು, ಇಂತಹ ಕ್ರೀಡೆಗಳನ್ನು ಜೀವಂತವಾಗಿರಸಲು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ …

Read More »

ಗೋಕಾಕ : ತಾಲೂಕಾ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ದೇಶನೂರ ಅವರನ್ನು ಅಭಿನಂದಿಸುತ್ತಿವದು.

ಗೋಕಾಕ ಫೆ 16 : ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ (ರಿ) ಗೋಕಾಕ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಬುಧವಾದಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ರಶೀದ್ ಮಕಾಂದಾರ ಅವರು ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲೂಕಾಧ್ಯಕ್ಷರಾಗಿ ಬಸವರಾಜ ದೇಶನೂರ, ಉಪಾಧ್ಯಕ್ಷರಾಗಿ ಕೃಷ್ಣಾ ಖಾನಪ್ಪನವರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಖಂಡ್ರಿ, ಖಜಾಂಚಿಯಾಗಿ ಇಮ್ರಾನ್ ಗೊಟೇದ ಹಾಗೂ ಸಂಚಾಲಕರನ್ನಾಗಿ ಮುಗುಟ ಪೈಲವಾನ, ಬಸವರಾಜ ಬ್ಯಾಡರಟ್ಟಿ, ರವಿಕಾಂತ ರಾಜಾಪೂರ ನೇಮಕಮಾಡಲಾಗಿದೆ. …

Read More »

ಬಿಕಿನಿಯಾದರೂ ಧರಿಸಲಿ ಎಂದ ಪ್ರಿಯಾಂಕಾ ಗಾಂಧಿ!

ನವದೆಹಲಿ:  ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿಚಿತ್ರ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ವಿವೇಚನಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಅಲ್ಲದೇ ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ ಇಲ್ಲವೇ …

Read More »

ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ ಕೈಬಿಡಿ: ಪುರಾತನ ಆಚರಣೆಗಳು ಕೇರಳಕ್ಕೆ ಅವಮಾನಕರ -ದೇವಸ್ವಂ ಸಚಿವ ಆದೇಶ

ತಿರುವನಂತಪುರ: ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ ಮಾಡಿದ ಕುರಿತಾದ ಪತ್ರಿಕಾ ವರದಿಯನ್ನು ಆಧರಿಸಿ ಕೇರಳ ಹೈಕೋರ್ಟ್ (Kerala High Court)​ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ತ್ರಿಪುನಿತುರಾದಲ್ಲಿ (Tripunithura) ಶ್ರೀ ಪೂರ್ಣತ್ರಯೀಸಾ ದೇವಸ್ಥಾನದಲ್ಲಿ (Sree Poornathrayeesa Temple) 12 ಮಂದಿ ಬ್ರಾಹ್ಮಣರಿಗೆ ಭಕ್ತರು ತಮ್ಮ ಪಾಪಗಳನ್ನು ಕಳೆಯಲು ಕಾಲುತೊಳೆದು ಪಾದಪೂಜೆ ಮಾಡಿದ್ದರು. ಈ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಆದರೆ ಶ್ರೀ ಪೂರ್ಣತ್ರಯೀಸಾ ದೇವಸ್ಥಾನದ ಅಡಳಿತ ಮಂಡಳಿ ಪರ ವಕೀಲರು ಈ …

Read More »

ಕಡೋಲಿಯಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಬೆಳಗಾವಿ : ಹೊಲದಲ್ಲಿನ ಬಾವಿಗೆ ಅಳವಡಿಸಿದ ಪಂಪಸೇಟ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಿದ್ದು ಕಡೋಲಿ ಗ್ರಾಮದ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ನಿನ್ನೆ (ಶನಿವಾರ) ರಾತ್ರಿ ವೇಳೆ ನಡೆದಿದೆ. ಕಡೋಲಿ ಗ್ರಾಮದ ಲಕ್ಷ್ಮಿ ಗಲ್ಲಿಯ ಅನೀಲ ಕಲ್ಲಪ್ಪಾ ಉಚ್ಚುಕರ  (48 ವರ್ಷ ) ಮೃತ ವ್ಯಕ್ತಿ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಕಾಕತಿ ಪಿಎಸ್ಐ ಅವಿನಾಶ್ ಯರಗೊಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ …

Read More »