Breaking News

ರಾಜ್ಯದ ಬೈಎಲೆಕ್ಷನ್ ಮಾತ್ರವಲ್ಲ ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ.

Spread the love

ದೆಹಲಿ : ರಾಜ್ಯದ ಬೈಎಲೆಕ್ಷನ್ ಮಾತ್ರವಲ್ಲ ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಧ್ಯೆ ಮದಗಜಗಳ ಮಹಾ ಕಾಳಗ ಏರ್ಪಟ್ಟಿದ್ದು, ಇಂದಿನ ರಿಸಲ್ಟ್ ತೀವ್ರ ಕುತೂಹಲ ಕೆರಳಿಸಿದೆ. ಈ ಮಧ್ಯೆ, ಸಮೀಕ್ಷೆಗಳು ಮಹಾಘಟಬಂಧನ್ ಗೆಲ್ಲೋ ಹಾಟ್ ಫೇವರಿಟ್ ಅಂತಾ ಭವಿಷ್ಯ ನುಡಿದಿವೆ.

ರಾಜ್ಯದ 2 ಕ್ಷೇತ್ರಗಳ ಬೈಎಲೆಕ್ಷನ್ ಫಲಿತಾಂಶ ಒಂದೆಡೆಯಾದ್ರೆ, ಮತ್ತೊಂದೆಡೆ ಇಂದು ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಇಡೀ ದೇಶವೇ ಬಿಹಾರ ಚುನಾವಣಾ ಫಲಿತಾಂಶವನ್ನ ಎದುರು ನೋಡ್ತಿದೆ. ಯಾಕಂದ್ರೆ ಬಿಹಾರ ಫಲಿತಾಂಶ ರಾಷ್ಟ್ರ ರಾಜಕೀಯ ಬೆಳವಣಿಗೆಯನ್ನೇ ಬದಲಾಯಿಸೋ ಸಾಧ್ಯತೆ ಇದ್ದು 130 ಕೋಟಿ ಭಾರತೀಯರ ಚಿತ್ತ ಇಂದಿನ ರಿಸಲ್ಟ್​ನತ್ತ ನೆಟ್ಟಿದೆ.

ಬಿಹಾರದಲ್ಲಿ ಗೆದ್ದು ಬಹಾದ್ದೂರ್ ಆಗೋರು ಯಾರು?

ಈ ಬಾರಿಯ ಬಿಹಾರ ಚುನಾವಣೆ ಅಂತಿಂಥಾ ಚುನಾವಣೆಯಲ್ಲ.. ಇದು ಪ್ರತಿಷ್ಠೆ, ಸ್ವಪ್ರತಿಷ್ಠೆ, ಸೇಡು, ರಾಜಕೀಯ ಸಮರ ಎಲ್ಲವನ್ನೂ ಒಳಗೊಂಡ ಎಲೆಕ್ಷನ್. ನಿತೀಶ್ ಕುಮಾರ್​ ನೇತೃತ್ವದ ಎನ್​ಡಿಎ ಮತ್ತು ಆರ್​​ಜೆಡಿ ಯುವ ನಾಯಕ ತೇಜಸ್ವಿ ಯಾದವ್ ನೇತೃತ್ವದ ಯುಪಿಎ ನಡುವಿನ ಮಹಾ ಚುನಾವಣೆ. ನಿತೀಶ್ ಕುಮಾರ್ ಸಿಎಂ ಪಟ್ಟ ಉಳಿಸಿಕೊಳ್ಳೋ ಹೋರಾಟದಲ್ಲಿದ್ರೆ, ಅತ್ತ ತೇಜಸ್ವಿ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ದಾರೆ.

ನಿತೀಶ್ ವಿರುದ್ಧ ಸೇಡು ತೀರಿಸಿಕೊಳ್ತಾರಾ ತೇಜಸ್ವಿ?
ಬಿಹಾರ ಚುನಾವಣೆಯಲ್ಲಿ ಸೇಡಿನ ಸಮರ ನಡೀತಿರೋದು ನೂರಕ್ಕೆ ನೂರರಷ್ಟು ನಿಜ. ಯಾಕಂದ್ರೆ, ಈ ಹಿಂದೆ 2015ರ ಚುನಾವಣಾ ಫಲಿತಾಂಶದ ಬಳಿಕ ಆರ್​ಜೆಡಿ ಮತ್ತು ಜೆಡಿಯು ಜಂಟಿಯಾಗಿ ಸರ್ಕಾರ ರಚಿಸಿತ್ತು. ಆದ್ರೆ, ವರ್ಷ ಕಳೆಯುತ್ತಲೇ ಸಿಎಂ ನಿತೀಶ್ ಕುಮಾರ್ ರಾತ್ರೋ ರಾತ್ರಿ​ ಆರ್​ಜೆಡಿ ಬೆಂಬಲ ಬಿಟ್ಟು ಯಾವಾಗ ಬಿಜೆಪಿ ಕೈಹಿಡ್ಕೊಂಡ್ರೋ.. ಆಗ್ಲೇ ತೇಜಸ್ವಿ, ಸಿಎಂ ನಿತೀಶ್​ರನ್ನ ಮಣಿಸೋ ಶಪಥ ಮಾಡಿದ್ರು. ಹೀಗಾಗಿಯೇ ಈ ಎಲೆಕ್ಷನ್​ನಲ್ಲಿ ಸೇಡಿನ ಸಮರ ಏರ್ಪಟ್ಟಿದೆ.

ಬಿಹಾರದಲ್ಲಿ ಮಹಾಘಟಬಂಧನ್ ಗೆಲುವಿನ ಕೇಕೆ ಹಾಕುತ್ತಾ?
ಇಂಥದ್ದೊಂದು ಮುನ್ಸೂಚನೆ ಈಗಾಗ್ಲೇ ಸಿಕ್ಕಿದೆ. ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ಬಿಹಾರದಲ್ಲಿ ಎನ್​ಡಿಎ ಸರ್ಕಾರವನ್ನ ಮಣಿಸಿ ಮಹಾಘಟಬಂಧನ್ ಗೆಲುವಿನ ರಣಕೇಕೆ ಹಾಕೋ ಸಾಧ್ಯತೆ ಇದೆ. ಬಹುತೇಕ ಎಲ್ಲಾ ಸಮೀಕ್ಷೆಗಳ ವರದಿ ಪ್ರಕಾರ ಮಹಾಮೈತ್ರಿ ಗೆಲ್ಲೋ ಹಾಟ್ ಫೇವರಿಟ್ ಆಗಿದೆ. ಆದ್ರೂ ಎನ್​ಡಿಎ ಮತ್ತು ಮಹಾಮೈತ್ರಿ ನಡುವೆ ನೆಕ್ ಟು ನೆಕ್ ಫೈಟ್ ಬಹುತೇಕ ಫಿಕ್ಸ್. ಹಾಗಿದ್ರೆ ಚುನಾವಣೋತ್ತರ ಸಮೀಕ್ಷೆಗಳು ನುಡಿದಿರೋ ಭವಿಷ್ಯವೇನು? ಸಮೀಕ್ಷೆ ಪ್ರಕಾರ ಬಿಹಾರದ ಬಹದ್ದೂರ್ ಆಗೋದ್ಯಾರು? ಎನ್​ಡಿಎ ಮತ್ತು ಮಹಾಮೈತ್ರಿಗಳು ಸಮೀಕ್ಷೆ ಪ್ರಕಾರ ಎಷ್ಟು ಸ್ಥಾನಗಳನ್ನ ಗೆಲ್ಲುತ್ತೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ಚುನಾವಣೋತ್ತರ ಸಮೀಕ್ಷೆ:
ಟಿವಿ9 ಭಾರತ್​​ವರ್ಷ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಬಿಹಾರದಲ್ಲಿ 110 ರಿಂದ 120 ಸ್ಥಾನಗಳನ್ನ ಗೆಲ್ಲೋ ಸಾಧ್ಯತೆ ಇದೆ. ಇನ್ನು ಮಹಾಮೈತ್ರಿ 115 ರಿಂದ 125 ಸ್ಥಾನಗಳನ್ನ ಗೆಲ್ಲೋ ಸಾಧ್ಯತೆ ಇದೆ. ಚಿರಾಗ್ ಪಾಸ್ವಾನ್ ನಾಯಕತ್ವದ ಎಲ್​ಜೆಪಿಗೆ 3ರಿಂದ 5 ಸ್ಥಾನ, ಇತರರು 10 ರಿಂದ 15 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಇನ್ನು ಸಿ ವೊಟರ್ ಸಮೀಕ್ಷೆ ಪ್ರಕಾರ, ಎನ್​ಡಿಎ 116, ಯುಪಿಎ 120, ಎಲ್​ಜೆಪಿ 1, ಇತರರು 10 ರಿಂದ 15 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಪೋಲ್ ಆಫ್ ಪೋಲ್ಸ್ ಸಮೀಕ್ಷೆ ಪ್ರಕಾರ, ಎನ್​ಡಿಎ 112, ಯುಪಿಎ 123, ಎಲ್​ಜೆಪಿ 4, ಇತರರು 4 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಜನ್​ ಕಿ ಬಾತ್ ಸಮೀಕ್ಷೆ ಪ್ರಕಾರ, ಎನ್​ಡಿಎ 91 ರಿಂದ117, ಯುಪಿಎ 118 ರಿಂದ138, ಎಲ್​ಜೆಪಿ 5 ರಿಂದ8 ಸ್ಥಾನ, ಇತರರು 3 ರಿಂದ6 ಸ್ಥಾನಗಳನ್ನ ಗೆಲ್ಲೋ ಸಾಧ್ಯತೆ ಇದೆ.

ಸಮೀಕ್ಷೆಗಳು ಏನೇ ಹೇಳಿರಲಿ, ಜನರು ಯಾರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ಇಂದಿನ ರಿಸಲ್ಟ್​ನಲ್ಲಿ ಗೊತ್ತಾಗಲಿದೆ. ಇಂದು ಬಿಹಾರದಲ್ಲಿ ಯಾವುದೇ ಫಲಿತಾಂಶ ಬಂದರೂ ರಾಷ್ಟ್ರ ರಾಜಕೀಯದ ಮೇಲೆ ಅದು ಪ್ರಬಲ ಪರಿಣಾಮ ಬೀರೋದಂತೂ ಸುಳ್ಳಲ್ಲ.


Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ