Breaking News

ಶಿರಾ ಉಪಚುನಾವಣೆ: ಜೆಡಿಎಸ್​ನಿಂದ ಯಾರಾಗ್ತಾರೆ ಅಭ್ಯರ್ಥಿ?

Spread the love

ತುಮಕೂರು: ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ . ಜೆಡಿಎಸ್​ನಿಂದ ಶಾಸಕರಾಗಿದ್ದ ಬಿ. ಸತ್ಯನಾರಾಯಣ್ ಅವರು ಆಗಸ್ಟ್ 4 ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿದ್ದು, ಖಾಲಿ ಇರುವ ಶಾಸಕ ಸ್ಥಾನ ತುಂಬಲು ಜೆಡಿಎಸ್ ಪಕ್ಷದಲ್ಲಿ ಪೈಪೋಟಿ ಜೋರಾಗಿದೆ. ಸದ್ಯದ ಮಟ್ಟಿಗೆ ಶಿರಾ ಕ್ಷೇತ್ರದಲ್ಲಿ ಜೆಡಿಎಸ್​ಗೆ ಉತ್ತಮವಾದ ವಾತಾವರಣ ಇದೆ. 2018 ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾದ ಇಲ್ಲಿಂದ ಜೆಡಿಎಸ್ ಅಭ್ಯರ್ಥಿ ಬಿ. ಸತ್ಯನಾರಾಯಣ್ ಅವರು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಿದ್ದರು.

ಉಪ ಚುನಾವಣೆ ಮೇಲೆ ಕಣ್ಣು; ಬಿ.ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಪೈಪೋಟಿ ಶುರುವಾಗಿದೆ.

ಬಿ.ಸತ್ಯನಾರಾಯಣ್ ಅವರ ಪುತ್ರ ಸತ್ಯಪ್ರಕಾಶ್, ಜಿಪಂ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿ ಕುಮಾರ್, ಸಿ.ಆರ್ ಉಮೇಶ್ ಅವರು ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸ್ಯಾಂಡಲ್​​ವುಡ್​​ ಡ್ರಗ್​​ ಮಾಫಿಯಾ: 15 ಮಂದಿ ಸ್ಟಾರ್ಸ್​ಗೆ ಸದ್ಯದಲ್ಲೇ ಸಿಸಿಬಿ ಪೊಲೀಸರಿಂದ ನೋಟಿಸ್

ಸತ್ಯಪ್ರಕಾಶ್​ಗೆ ಸಿಗುವ ಸಾಧ್ಯತೆ:

ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳು ಮತ್ತು ನಡವಳಿಕೆಗಳನ್ನು ಗಮನಿಸಿದಾಗ ಉಪ ಚುನಾವಣೆಯಲ್ಲಿ ಸತ್ಯಪ್ರಕಾಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಏಕೆಂದರೆ ಶಾಸಕ ಬಿ.ಸತ್ಯನಾರಾಯಣ್ ಅವರ ಅಂತಿಮ ಸಂಸ್ಕಾರದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ದೇವೇಗೌಡ ಅವರು, ಸತ್ಯನಾರಾಯಣ್ ಅವರ ಕುಟುಂಬದ ಜೊತೆಗೆ ಕೊನೆಯವರೆಗೂ ನಿಲ್ಲುವುದಾಗಿ ಭರವಸೆ ನೀಡಿದ್ದರು. ಇದಲ್ಲದೇ ಇತ್ತೀಚೆಗೆ ತುರುವೇಕೆರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕೂಡ, ಸತ್ಯನಾರಾಯಣ್ ಅವರ ಕುಟುಂಬದ ಕೈ ಬಿಡುವುದಿಲ್ಲ ಎಂದು ಹೇಳಿ ಹೋಗಿದ್ದಾರೆ. ಇದರಿಂದಾಗಿ ಜೆಡಿಎಸ್ ವರಿಷ್ಠರ ಒಲವು ಸತ್ಯಪ್ರಕಾಶ್ ಕಡೆಗೆ ಇರುವಂತಿದೆ.

ಸತ್ಯಪ್ರಕಾಶ್ ಆಯ್ಕೆ ಏಕೆ?;ಬಿ.ಸತ್ಯನಾರಾಯಣ್ ಅವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ ಅವರ ಮನೆಯಿಂದಲೇ ಯಾರನ್ನಾದರೂ ನಿಲ್ಲಿಸುವುದರಿಂದ ಮತದಾರರ ಅನುಕಂಪದ ಲಾಭ ಪಡೆಯಬಹುದು ಎನ್ನುವುದು ಜೆಡಿಎಸ್ ಮುಖಂಡರ ಲೆಕ್ಕಾಚಾರ. ಇಲ್ಲವಾದಲ್ಲಿ ಸತ್ಯನಾರಾಯಣ್ ನಿಧನದ ನಂತರ ಅವರ ಕುಟುಂಬದವರನ್ನು ಕೈ ಬಿಟ್ಟರು ಎಂಬ ತಪ್ಪು ಸಂದೇಶ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಿಗೆ, ಅವರ ಅಭಿಮಾನಿಗಳಿಗೆ ಹೋಗುತ್ತದೆ. ಹೀಗಾಗಿ ಈ ಆರೋಪಗಳು ಬರದಂತೆ ಎಚ್ಚರಿಕೆ ವಹಿಸಲು ನಾಯಕರು ಮುಂದಾಗಿದ್ದಾರೆನ್ನಲಾಗಿದೆ.

ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಿ ; ಅಶೋಕ್ ಚಂದರಗಿ ಆಗ್ರಹ

ಸತ್ಯನಾರಾಯಣ್ ಅವರ ಮನೆಯಲ್ಲಿ ಅವರ ಪತ್ನಿ, ಅಮ್ಮ, ಅಳಿಯ ರಾಘವೇಂದ್ರ, ಮಗಳು, ಮಗ ಎಲ್ಲರೂ ಸ್ಪರ್ಧಿಸಲು ಸಮರ್ಥರಿದ್ದಾರೆ. ಇವರ ಪೈಕಿ ಪುತ್ರ ಸತ್ಯಪ್ರಕಾಶ್​ಗೆ ರಾಜಕೀಯದ ಅನುಭವವಿದೆ. ತಾಪಂ ಸದಸ್ಯ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮೇಲಾಗಿ ಕಾರ್ಯಕರ್ತರ ಜೊತೆಗೆ ಒಡನಾಟ ಉತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡರ ಮೊಮ್ಮಕ್ಕಳು, ಜೆಡಿಎಸ್​ನ ಭವಿಷ್ಯದ ವರಿಷ್ಠರುಗಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರುಗಳೊಂದಿಗೆ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಸಾಥ್ ನೀಡಲು ಯುವ ನಾಯಕರುಗಳ ಅಗತ್ಯ ಜೆಡಿಎಸ್​ಗೆ ಇದೆ. ಹೀಗಾಗಿ ಸತ್ಯಪ್ರಕಾಶ್​ಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಚಿಂತನೆ ನಡೆದಿದೆ. ಜಿಲ್ಲಾ ಮಟ್ಟದ ನಾಯಕರಲ್ಲಿ ಕೂಡ ಇದೇ ಅಭಿಪ್ರಾಯವಿದೆ. ಇದರ ಹೊರತಾಗಿ ಸತ್ಯಪ್ರಕಾಶ್​ಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನದಂತಹ ಅವಕಾಶ ನೀಡಿ , ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಆಶ್ಚರ್ಯ ಪಡಬೇಕಿಲ್ಲ .

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ